ಉಪರಾಷ್ಟ್ರಪತಿಗಳ ಕಾರ್ಯಾಲಯ

ನದಿಗಳು  ಮತ್ತು ಜಲ ಮೂಲಗಳ ಪರಿಸರ ಮಹತ್ವ ಕುರಿತು ಜನರಿಗೆ ಶಿಕ್ಷಣ ದೊರಕಿಸಲು ಒತ್ತು ನೀಡುವ ಅಗತ್ಯವಿದೆ ; ಉಪರಾಷ್ಟ್ರಪತಿ


ಜಲ ಮೂಲಗಳನ್ನು ಕಲುಷಿತಗೊಳಿಸದಂತೆ ಜನರಿಗೆ ಆಗ್ರಹ

ರೈತರಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸುವಂತೆ ಕರೆ

ತಮ್ಮ ಪತ್ನಿ ಶ್ರೀಮತಿ ಉಷಾ ನಾಯ್ಡು ಜತೆ  ತುಂಗಭದ್ರಾ ಅಣೆಕಟ್ಟೆ ವೀಕ್ಷಿಸಿದ ಉಪರಾಷ್ಟ್ರಪತಿ

Posted On: 20 AUG 2021 8:06PM by PIB Bengaluru

ನದಿಗಳು ಮತ್ತು ಜಲ ಮೂಲಗಳ ಪರಿಸರ ಮಹತ್ವ ಕುರಿತು ಜನರಿಗೆ ಶಿಕ್ಷಣ ದೊರಕಿಸುವ ಅಗತ್ಯವಿದ್ದು, ಇವುಗಳನ್ನು ಕಲುಷಿತಗೊಳಿಸಬೇಡಿ ಅಥವಾ ಅಧೋಗತಿಗಿಳಿಸಬೇಡಿ ಎಂದು ಉಪ ರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಒತ್ತಿ ಹೇಳಿದ್ದಾರೆ.

ಕರ್ನಾಟದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಗೆ ಭೇಟಿ ನೀಡಿದ ನಂತರ ತಮ್ಮ ಫೇಸ್ ಬುಕ್ ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ಭವಿಷ್ಯದ ಪೀಳಿಗೆಗಳಿಗೆ ನಮ್ಮ ಸೀಮಿತ ಜಲ ಸಂಪನ್ಮೂಲಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. “ಒಂದು ನದಿಯು ಒಂದು ಜೀವಂತ ವಸ್ತುವಿದ್ದಂತೆ ಮತ್ತು ಅದರ ಶುದ್ಧತೆ ಹಾಗೂ ಪಾವಿತ್ರ್ಯವನ್ನು ಹಾಗೆಯೇ ಉಳಿಸಿಕೊಳ್ಳಲು ನಾವು ಪ್ರತಿಜ್ಞೆ ಮಾಡೋಣ” ಎಂದಿದ್ದಾರೆ.

ಎಲ್ಲಾ ರೈತರಿಗೂ ನೀರಾವರಿ ಸೌಲಭ್ಯಗಳನ್ನು ಒದಗಿಸುವ ಅಗತ್ಯವನ್ನು ಪುನರುಚ್ಚರಿಸಿರುವ ಶ್ರೀ ವೆಂಕಯ್ಯ ನಾಯ್ಡು, ರೈತರ ಮಕ್ಕಳಾಗಿ ಕೃ಼ಷಿಗೆ ಇರುವ ನೀರಿನ ಮಹತ್ವವನ್ನು ಇವರೆಲ್ಲರೂ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ತುಂಗಭದ್ರಾ ಅಣೆಕಟ್ಟೆ ಮತ್ತು ಇಲ್ಲಿ ಆವರಿಸಿಕೊಂಡಿರುವ ನೈಸರ್ಗಿಕ ಪ್ರದೇಶ ಕುರಿತು ಉಲ್ಲೇಖಿಸಿರುವ ಶ್ರೀ ವೆಂಕಯ್ಯ ನಾಯ್ಡು ಇಲ್ಲಿನ ಭವ್ಯತೆ ಮತ್ತು ವಿಶಾಲ ಪ್ರಕೃತಿಯ ವಿರಾಟ್ ಸ್ಪರೂಪದಲ್ಲಿ ಮುಳುಗಿಹೋಗಿರುವುದಾಗಿ ಹೇಳಿದ್ದಾರೆ.

ಈ ವಲಯದಲ್ಲಿ ತುಂಗಭದ್ರಾ ಅಣೆಕಟ್ಟೆ ವಿವಿದೋದ್ದೇಶದ ಅಭಿವೃದ್ಧಿಯಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ವಿಶೇಷವಾಗಿ ಪ್ರಸ್ತಾಪಿಸಿರುವ ಅವರು, ವಿಶಾಲವಾದ ಕೃಷಿ ಭೂಮಿಗೆ ನೀರುಣಿಸುವ ಮೂಲಕ ವಿದ್ಯುತ್ ಉತ್ಪಾದಿಸುವ ಮತ್ತು ಪ್ರವಾಸೋದ್ಯಮದ ಚಾಲನಾ ಶಕ್ತಿಯಾಗಿ ರಾಷ್ಟ್ರಕ್ಕೆ ಅನೇಕ ರೀತಿಯಲ್ಲಿ ಇದು ಸೇವೆ ಸಲ್ಲಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ಅಣೆಕಟ್ಟೆಯ ಇತಿಹಾಸವನ್ನು ಪುನರಾವಲೋಕನ ಮಾಡಿಕೊಂಡಿರುವ ಉಪರಾಷ್ಟ್ರಪತಿ ಅವರು, ಬರಗಾಲ ರಾಯಲಸೀಮೆ ಪ್ರದೇಶಕ್ಕೆ ನೀರಾವರಿ ಸೌಲಭ‍್ಯ ಒದಗಿಸಲು 1860 ರಲ್ಲಿ ಆಣೆಕಟ್ಟೆ ನಿರ್ಮಿಸಲು ಕಲ್ಪನೆ ರೂಪುಗೊಂಡಿತ್ತು. ನಂತರ 1944 ರಲ್ಲಿ ಮದ್ರಾಸ್ ಮತ್ತು ಹೈದರಾಬಾದ್ ಸರ್ಕಾರಗಳು ಜಂಟಿಯಾಗಿ ಈ ಯೋಜನೆಯನ್ನು ಜಾರಿಗೊಳಿಸುವ ನಿರ್ಧಾರಕ್ಕೆ ಬಂದವು. ದೂರದೃಷ್ಟಿಯ ಇಂಜಿನಿಯರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಈ ಅಣೆಕಟ್ಟೆಯ ವಿನ್ಯಾಸ ಮತ್ತು ನಿರ್ಮಾಣದ ವಿಧಾನಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾಗಿ ಸ್ಮರಿಸಿಕೊಂಡಿದ್ದಾರೆ.

ಉಪರಾಷ್ಟ್ರಪತಿ ಅವರು ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿದ್ದು, ಅವರಿಗೆ ತುಂಗಭದ್ರಾ ಬಹು ಉದ್ದೇಶಿತ ಯೋಜನೆ ಕುರಿತು ಮಾಹಿತಿ ನೀಡಲಾಯಿತು., ನಾಳೆ ಅವರು ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಹಂಪಿಗೆ ಭೇಟಿ ನೀಡಲಿದ್ದು, ಇದು ಇಲ್ಲಿಂದ ಕೆಲವು ಕಿಲೋಮೀಟರ್ ದೂರದಲ್ಲಿದೆ.

ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡುವ ಪಟ್ಟಿಯಲ್ಲಿ ಹಂಪಿ ಮತ್ತು ತುಂಗಭದ್ರಾ ಅಣೆಕಟ್ಟೆಗೆ ಹೆಚ್ಚಿನ ಆದ್ಯತೆ ಇರಬೇಕು. “ಈ ಎರಡು ಅವಳಿ ತಾಣಗಳು ಪ್ರಕೃತಿಯ ಆನಂದವನ್ನು ಅನುಭವಿಸಲು ಬಯಸುವ ಪ್ರತಿಯೊಬ್ಬರೂ ಭೇಟಿ ನೀಡಬೇಕಾದ ಪ್ರದೇಶಗಳಾಗಿವೆ” ಎಂದು ಅವರು ಹೇಳಿದ್ದಾರೆ.

***



(Release ID: 1747728) Visitor Counter : 220