ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆ ನೀಡಿಕೆಯ ಇಂದಿನ ವರದಿ
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ 57.88 ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ನೀಡಿಕೆ
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 94 ಲಕ್ಷಕ್ಕಿಂತ ಹೆಚ್ಚಿನ ಡೋಸ್ ಲಸಿಕೆ ಲಭ್ಯ
Posted On:
18 AUG 2021 10:30AM by PIB Bengaluru
ದೇಶಾದ್ಯಂತ ಭರದಿಂದ ಸಾಗಿರುವ ಕೋವಿಡ್-19 ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಈ ಕಾರ್ಯಕ್ರಮದ ಗತಿಗೆ ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕೋವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯತೆ ಖಾತ್ರಿಪಡಿಸುವ ಮೂಲಕ, ಲಸಿಕೆ ಲಭ್ಯತೆಯ ಮುಂಗಡ ಗೋಚರತೆ ಖಚಿತಪಡಿಸುವ ಮೂಲಕ ಮತ್ತು ಲಸಿಕೆ ಸರಪಳಿ ಪೂರೈಕೆ ಸುಗಮಗೊಳಿಸುವ ಮೂಲಕ ಕೇಂದ್ರ ಸರ್ಕಾರ, ಬೃಹತ್ ಅಭಿಯಾನಕ್ಕೆ ವೇಗ ನೀಡಿದೆ.
ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್-19 ಲಸಿಕೆ ಪೂರೈಸುತ್ತಿದೆ. ಅಭಿಯಾನದ ಹೊಸ ಹಂತದಲ್ಲಿ,ಕೇಂದ್ರ ಸರ್ಕಾರವು ದೇಶೀಯ ಲಸಿಕೆ ಉತ್ಪಾದನಾ ಕಂಪನಿಗಳಿಂದ 75% ಲಸಿಕೆಯನ್ನು ನೇರ ಖರೀದಿಸಿ, ಉಚಿತವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸುತ್ತಿದೆ.
ಲಸಿಕೆ ಡೋಸ್ ಗಳಲ್ಲಿ
|
18 ಆಗಸ್ಟ್ 2021
|
ಪೂರೈಕೆಯಾದ ಲಸಿಕೆ ಪ್ರಮಾಣ
|
57,88,90,150
|
ಸದ್ಯದಲ್ಲೇ ಲಭ್ಯವಾಗುವ ಲಸಿಕೆ ಪ್ರಮಾಣ
|
18,62,530
|
ಬಳಕೆಯಾದ ಲಸಿಕೆ
|
55,11,64,635
|
ಲಭ್ಯವಿರುವ ಬಳಕೆಯಾಗದೆ ಉಳಿದಿರುವ ಲಸಿಕೆ
|
94,03,637
|
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲಾ ಮೂಲಗಳಿಂದ 57.88 ಕೋಟಿಗಿಂತ ಹೆಚ್ಚಿನ ಅಂದರೆ ಒಟ್ಟು 57,8,90,150 ಡೋಸ್ ಲಸಿಕೆ ಪೂರೈಸಲಾಗಿದ್ದು, ಇನ್ನೂ ಹೆಚ್ಚಿನ 18,62,530 ಡೋಸ್ ಲಸಿಕೆ ಸದ್ಯದಲ್ಲೇ ಲಭ್ಯವಾಗಲಿದೆ.
57.88 ಕೋಟಿ ಡೋಸ್ ಲಸಿಕೆ ಪೈಕಿ, ಸವಕಳಿ ಸೇರಿದಂತೆ 55,11,64,635 ಡೋಸ್ ಲಸಿಕೆ ಬಳಕೆಯಾಗಿದೆ ಎಂಬ ವಿಚಾರ ಇಂದು ಬೆಳಗ್ಗೆ 8 ಗಂಟೆಗೆ ಬಿಡುಗಡೆ ಆಗಿರುವ ದತ್ತಾಂಶದಿಂದ ತಿಳಿದುಬಂದಿದೆ.
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಲಭ್ಯವಿರುವ 94 ಲಕ್ಷಕ್ಕಿಂತ ಹೆಚ್ಚಿನ ಅಂದರೆ 94,03,637 ಡೋಸ್ ಲಸಿಕೆ ಬಳಕೆಗೆ ಲಭ್ಯವಿದೆ.
***
(Release ID: 1746891)
Visitor Counter : 270
Read this release in:
Malayalam
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Tamil
,
Telugu