ಗಣಿ ಸಚಿವಾಲಯ
ಭಾರತದ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು "ಸ್ವಾತಂತ್ರ್ಯದ ಅಮೃತ ಮಹೋತ್ಸವ" ಎಂದು ಆಚರಿಸುತ್ತಿರುವುದರ ಅಂಗವಾಗಿ ಉದ್ಯೋಗಿಗಳಿಗೆ 7,500 ರೂ. ಮೌಲ್ಯದ ಕೈಮಗ್ಗ ಬಟ್ಟೆಗಳನ್ನು ಒದಗಿಸುವಂತೆ ನೆಲ್ಕೋಗೆ ಆಗ್ರಹಿಸಿದ ಕೇಂದ್ರ ಗಣಿ ಸಚಿವ ಶ್ರೀ ಪ್ರಲ್ಹಾದ್ ಜೋಶಿ
Posted On:
10 AUG 2021 6:06PM by PIB Bengaluru
ಭಾರತ ತನ್ನ 75 ವರ್ಷಗಳ ಸ್ವಾತಂತ್ರ್ಯವನ್ನು "ಸ್ವಾತಂತ್ರ್ಯದ ಅಮೃತ ಮಹೋತ್ಸವ" ಎಂದು ಆಚರಿಸುತ್ತಿರುವ ಅಂಗವಾಗಿ, ತನ್ನ ಎಲ್ಲಾ ಉದ್ಯೋಗಿಗಳಿಗೆ 7,500/- ರೂ. ಮೌಲ್ಯದ ಕೈಮಗ್ಗದ ಬಟ್ಟೆಗಳನ್ನು ಒದಗಿಸುವಂತೆ ಗಣಿ ಸಚಿವಾಲಯದ ಅಡಿಯ ಸಿ.ಪಿ.ಎಸ್.ಇ. ನೆಲ್ಕೊಗೆ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರಿಂದು ಆಗ್ರಹಿಸಿದ್ದಾರೆ. ಶ್ರೀ ಜೋಶಿ ಅವರು ನಲ್ಕೊ ತಂಡದೊಂದಿಗೆ ವರ್ಚುವಲ್ ಮೂಲಕ ಮಾತನಾಡಿ, 2020-21ರ ಆರ್ಥಿಕ ವರ್ಷದಲ್ಲಿ ಅದ್ಭುತ ಪ್ರದರ್ಶನಕ್ಕಾಗಿ ಮತ್ತು 2021-22 ರ ಪ್ರಥಮ ತ್ರೈಮಾಸಿಕದಲ್ಲಿ ಯಶಸ್ಸಿನ ವೇಗವನ್ನು ಮುಂದುವರಿಸಿದ್ದಕ್ಕಾಗಿ ನವರತ್ನ ಸಿಪಿಎಸ್ಇಯನ್ನು ಅಭಿನಂದಿಸಿದರು.
"ಕೈಮಗ್ಗವನ್ನು ಪ್ರೋತ್ಸಾಹಿಸುವಂತೆ ಮಾನ್. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಗ್ರಹದ ಮೇರೆಗೆ, 75 ವರ್ಷಗಳ ಸ್ವಾತಂತ್ರ್ಯದ ನೆನಪಿಗಾಗಿ ತನ್ನ ಪ್ರತಿಯೊಬ್ಬ ಉದ್ಯೋಗಿಗೂ 7500/- ರೂ. ಮೌಲ್ಯದ ಕೈಮಗ್ಗದ ಬಟ್ಟೆಗಳನ್ನು ನೀಡುವ ಮೂಲಕ ಕೈಮಗ್ಗವನ್ನು ಉತ್ತೇಜಿಸುವ ಕಾರ್ಯದಲ್ಲಿ ಕೈಜೋಡಿಸುವಂತೆ ನಾನು ನಲ್ಕೋಗೆ ಸಲಹೆ ನೀಡುತ್ತೇನೆ" ಎಂದು ಶ್ರೀ ಜೋಶಿ ತಮ್ಮ ಭಾಷಣದಲ್ಲಿ ಹೇಳಿದರು.
ಡೈನಮಿಕ್ ವ್ಯಾಪಾರ ಪರಿಸರ ಮತ್ತು ಪ್ರಸಕ್ತ ಜಗತ್ತಿನಾದ್ಯಂತದ ಕೋವಿಡ್ ಸಾಂಕ್ರಾಮಿಕ ಒಡ್ಡಿರುವ ಸವಾಲನ್ನು ಸ್ವೀಕರಿಸಿ, 2020-21ನೇ ಹಣಕಾಸು ವರ್ಷದಲ್ಲಿ ಹೆಚ್ಚಿನ ಹುರುಪು, ಸಂಕಲ್ಪ ಮತ್ತು ದೃಢನಿಶ್ಚಯದಿಂದ ಪುಟಿದೆದ್ದಿದ್ದ, ನೆಲ್ಕೋ ಪರಿಸ್ಥಿತಿಯನ್ನು ತನ್ನ ಪರವಾಗಿ ತಿರುಗಿಸಿದೆ ಎಂದು ಶ್ರೀ ಜೋಶಿ ಹೇಳಿದರು. ಕಂಪನಿಯು 2020-21ರ ಲಾಭದಲ್ಲಿ ಒಂಬತ್ತು ಪಟ್ಟು ಹೆಚ್ಚಳವನ್ನು ಸಾಧಿಸಿ 1300 ಕೋಟಿ ರೂ. ನಿವ್ವಳ ಲಾಭಗಳಿಸಿದೆ. 2020-21ರ ಪ್ರಥಮ ತ್ರೈಮಾಸಿಕದಲ್ಲಿನ 17 ಕೋಟಿ ರೂ.ಗಳಿಗೆ ಹೋಲಿಸಿದರೆ, 2021-22ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 348 ಕೋಟಿ ರೂ.ಗಳ ನಿವ್ವಳ ಲಾಭವನ್ನು ನಲ್ಕೊ ದಾಖಲಿಸಿದೆ. ಇದು ನಿಜವಾಗಿಯೂ ಕಂಪನಿಯ ಟ್ಯಾಗ್ ಲೈನ್ "ಆರ್ಡಿನರಿ ಪೀಪಲ್ ವಿತ್ ಎಕ್ಸ್ ಟ್ರಾಡಿನರಿ ಆಟಿಟ್ಯೂಡ್" ಗೆ ಹೊಂದಿಕೆಯಾಗುತ್ತದೆ. ಎಂದು ತಿಳಿಸಿದರು.
"ಪ್ರಧಾನಮಂತ್ರಿಯವರ "ಆತ್ಮನಿರ್ಭರ ಭಾರತ"ದ ಕನಸನ್ನು ಸಾಕಾರಗೊಳಿಸಲು ನೆಲ್ಕೋದ ಎಲ್ಲಾ ಉದ್ಯೋಗಿಗಳ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮವು ದೀರ್ಘಾವಧಿಯಲ್ಲಿ ಉತ್ತಮ ಲಾಭಾಂಶವನ್ನು ನೀಡುತ್ತದೆ ಎಂಬ ವಿಶ್ವಾಸ ನನಗಿದೆ. ಜವಾಬ್ದಾರಿಯುತ ಸಾಂಸ್ಥಿಕ ಪ್ರಜೆಯಾಗಿ, ಕೋವಿಡ್ ವಿರುದ್ಧ ಹೋರಾಟದ ಸಮಯದಲ್ಲಿ ನೆಲ್ಕೋ ಬೆಂಬಲ ಮತ್ತು ನೆರವಿನಹಸ್ತ ಚಾಚುವುದು ಸಹ ರಾಷ್ಟ್ರಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತದೆ." ಎಂದು ಶ್ರೀ ಜೋಶಿ ಹೇಳಿದರು.
ನೆಲ್ಕೊ ಸಿಎಂಡಿ ಶ್ರೀ ಶ್ರೀಧರ್ ಪಾತ್ರ, ಕಂಪನಿಯ ನಿರ್ದೇಶಕರು, ಒಕ್ಕೂಟಗಳ ಪ್ರತಿನಿಧಿಗಳು ಮತ್ತು ಉದ್ಯೋಗಿಗಳು ವರ್ಚುವಲ್ ಸಭೆಯಲ್ಲಿ ಉಪಸ್ಥಿತರಿದ್ದರು.
ನೆಲ್ಕೊ ಭಾರತ ಸರ್ಕಾರದ ಗಣಿ ಸಚಿವಾಲಯದ ಅಡಿಯಲ್ಲಿನ ನವರತ್ನ ಸಿಪಿಎಸ್ಇ ಆಗಿದೆ. ಕಂಪನಿಯು ಭಾರತದ ಪ್ರಮುಖ ಅಲ್ಯುಮಿನಾ ಮತ್ತು ಅಲ್ಯೂಮಿನಿಯಂ ಉತ್ಪಾದಕ ಮತ್ತು ರಫ್ತುದಾರನಾಗಿದೆ. ಕಂಪನಿಯು ಗಣಿಗಾರಿಕೆ, ಲೋಹ ಮತ್ತು ವಿದ್ಯುತ್ ನಲ್ಲಿ ಸಮಗ್ರ ಮತ್ತು ವೈವಿಧ್ಯಮಯ ಕಾರ್ಯಾಚರಣೆಗಳನ್ನು ಹೊಂದಿದೆ.
***
(Release ID: 1744624)
Visitor Counter : 3228