ಇಂಧನ ಸಚಿವಾಲಯ

ಇಂಧನ ಸಚಿವರಿಂದ “ಇಂಧನ ವಲಯದ ಸುಧಾರಣೆ ಮತ್ತು ನಿಯಂತ್ರಣ ಅರಿವು ತಳಹದಿ” ಕಾರ್ಯಾರಂಭ


ಹಸಿರು ಜಲಜನಕ, ಸ್ಮಾರ್ಟ್ ಮೀಟರಿಂಗ್, ಕೃತಕ ಬುದ್ಧಿಮತ್ತೆ ಆಧಾರಿತ ಇಂಧನ ಲೆಕ್ಕಪತ್ರ ಮತ್ತು ಸೈಬರ್ ಭದ್ರತೆ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದ ಇಂಧನ ಸಚಿವರು

ಇಂಧನ ವಲಯದ ಸುಸ್ಥಿರತೆಗೆ ದೃಢವಾದ ನಿಯಂತ್ರಣ ಚೌಕಟ್ಟು ಅವಶ್ಯ: ಶ್ರೀ ಆರ್.ಕೆ.ಸಿಂಗ್

“ಬದಲಾವಣೆ ಜಾಗತಿಕವಾಗಿ ಬರುತ್ತಿದೆ ಮತ್ತು ನಾವು ಅದನ್ನು ಅನುಸರಿಸುವುದಕ್ಕೆ ಬದಲು ಬದಲಾವಣೆಯ ನಾಯಕತ್ವ ವಹಿಸಬೇಕು” ಎಂದಿದ್ದಾರೆ ಇಂಧನ ಸಚಿವರು

Posted On: 06 AUG 2021 2:52PM by PIB Bengaluru

ಕೇಂದ್ರ ಇಂಧನ ಮತ್ತು ಪುನರ್ನವೀಕರಣ ಇಂಧನ ಸಚಿವರಾದ ಶ್ರೀ ಆರ್.ಕೆ.ಸಿಂಗ್ ಅವರುಇಂಧನ ವಲಯಕ್ಕಾಗಿರುವ ಸುಧಾರಣೆ ಮತ್ತು ನಿಯಂತ್ರಣ ಅರಿವಿನ ತಳಹದಿಯನ್ನು ಕುರಿತ -ಪ್ರಮಾಣ ಪತ್ರ ಕಾರ್ಯಕ್ರಮವನ್ನು ವರ್ಚುವಲ್ ಮಾದರಿಯಲ್ಲಿ ಇಂದಿಲ್ಲಿ ಕಾರ್ಯಾರಂಭ ಮಾಡಿದರು. ವೈವಿಧ್ಯಮಯ ಹಿನ್ನೆಲೆಯ ಪ್ರಾಕ್ಟೀಶನರ್ ಗಳಿಗೆ ನಿಯಂತ್ರಣ ನಿಯಮಾವಳಿಗಳ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ. ರಾಜ್ಯವಾರು ದರಗಳು ಮತ್ತು ಡಿಸ್ಕಾಂಗಳ ಸಾಧನೆಯ ದತ್ತಾಂಶಗಳನ್ನು ಒಳಗೊಂಡ ನಿಯಂತ್ರಣ ದತ್ತಾಂಶ ಡ್ಯಾಶ್ ಬೋರ್ಡನ್ನು ಕೂಡಾ ಅವರು ಕಾರ್ಯಾರಂಭಗೊಳಿಸಿದರು. ಅವುಗಳನ್ನು ..ಟಿ. ಕಾನ್ಪುರ ಅಭಿವೃದ್ಧಿ ಮಾಡಿದೆ.

ನಿಯಂತ್ರಣ ಡ್ಯಾಶ್ ಬೋರ್ಡ್ ಇಂಧನ ವಲಯದ ಸಾಧನೆಗೆ ಅಳತೆಗೋಲಾಗಿ ನೆರವೀಯುತ್ತದೆ ಮತ್ತು ಇಂಧನ ವಲಯದ ಸವಲತ್ತುಗಳನ್ನು ಒಳಗೊಂಡಿರುತ್ತದೆ. ಇದರಿಂದ ನಿಯಂತ್ರಕ ಸಂಸ್ಥೆಗಳಿಗೆ ಮತ್ತು ನೀತಿ ನಿರೂಪಕರಿಗೆ ಮತ್ತು ಸಂಸ್ಥೆಗಳಿಗೆ ಸುಧಾರಣೆಯಾಗಬೇಕಾದ ಕ್ಷೇತ್ರವನ್ನು ಗುರುತಿಸಲು ಸಹಾಯ ಮಾಡುತ್ತದೆ.

ಇಂಧನ ಖಾತೆ ಸಹಾಯಕ ಸಚಿವರಾದ ಶ್ರೀ ಕೃಷ್ಣ ಪಾಲ್ ಗುರ್ಜರ್, ಇಂಧನ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್, ಎಂ.ಎನ್.ಆರ್.. ಕಾರ್ಯದರ್ಶಿ ಶ್ರೀ ಇಂದು ಶೇಖರ್ ಚತುರ್ವೇದಿ, ಉಭಯ ಸಚಿವಾಲಯಗಳ ಹಿರಿಯ ಅಧಿಕಾರಿಗಳು, ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರು, ..ಟಿ. ಕಾನ್ಪುರದ ನಿರ್ದೇಶಕ ಶ್ರೀ ಅಭಯ್ ಕರಂಡೀಕರ್, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು, ಇಂಧನಕ್ಕೆ ಸಂಬಂಧಿಸಿದ ಸಾರ್ವಜನಿಕ ರಂಗದ ಉದ್ಯಮಗಳ ಮತ್ತು ಡಿಸ್ಕಾಂಗಳ ಸಿ.ಎಂ.ಡಿ.ಗಳು, ಉದ್ಯಮದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಮಾತನಾಡಿದ ಇಂಧನ ಸಚಿವರು ಉಪಕ್ರಮಕ್ಕಾಗಿ ಕಾನ್ಪುರ ..ಟಿ.ಯನ್ನು ಶ್ಲಾಘಿಸಿದರು. ಭಾರತವು ಆಧುನೀಕರಣದ ಮೂಲಕ ತನ್ನನ್ನು ತಾನು ಮುಂದಿನ ತಲೆಮಾರಿಗಾಗಿ ತಯಾರು ಮಾಡಿಕೊಳ್ಳುತ್ತಿದೆ, ಆದರೆ ನಮ್ಮ ವ್ಯವಸ್ಥೆಯನ್ನು ಸುಸ್ಥಿರಗೊಳಿಸುವ ಪ್ರಕ್ರಿಯೆಯ ನಿಟ್ಟಿನಲ್ಲಿ ಕಾರ್ಯ ಪ್ರಗತಿಯಲ್ಲಿದೆ. ಇಂಧನ ಲಭ್ಯತೆ ಮತ್ತು ಪೂರೈಕೆಯ ಸವಾಲುಗಳನ್ನು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ನಿಭಾಯಿಸಲಾಗಿದೆ. ಇದರಿಂದ ನಾವು ಇಂಧನ ಉಳಿಕೆ ರಾಷ್ಟ್ರವಾಗಿ ಮೂಡಿ ಬರುತ್ತಿದ್ದೇವೆ ಎಂದೂ ಅವರು ಹೇಳಿದರು.

ದೇಶಕ್ಕೆ ಒಂದು ಗ್ರಿಡ್ ಸ್ಥಾಪಿಸಲಾಗಿದೆ ಮತ್ತು ಧೀರ್ಘಾವಧಿ ಪಿ.ಪಿ..ಗಳ ಮೂಲಕ ಇಂಧನಕ್ಕೆ ಮುಕ್ತ ಏಕೀಕೃತ ಮಾರುಕಟ್ಟೆಯನ್ನು ಸ್ಥಾಪಿಸಲಾಗಿದೆ ಎಂದೂ ಶ್ರೀ ಸಿಂಗ್ ಹೇಳಿದರು. ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು ದರ ಪಟ್ಟಿಯಲ್ಲಿ ಪೂರ್ಣ ಖರ್ಚನ್ನು ಪ್ರತಿಬಿಂಬಿಸುವಂತಾಗಬೇಕು ಮತ್ತು ಬಳಿಕ ಚುನಾಯಿತ ಸರಕಾರಗಳು ಅದನ್ನಾಧರಿಸಿ ಸಹಾಯಧನವನ್ನು ನೀಡಬೇಕು ಎಂದೂ ಸಲಹೆ ಮಾಡಿದರು.

ಇಂಧನ ವಲಯದಲ್ಲಿ ನಿಯಂತ್ರಣ ಚೌಕಟ್ಟು ಎಂಬುದು ಸುಸ್ಥಿರತೆಗೆ ಬಹಳ ಮುಖ್ಯ. ನಿಯಂತ್ರಕರು ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸಲು ಇರುತ್ತಾರೆ ಮತ್ತು ಅದೇ ವೇಳೆ ಅವರು ಬಳಕೆದಾರರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯಲ್ಲೂ ಇರುತ್ತಾರೆ ಎಂಬುದನ್ನವರು ಒತ್ತಿ ಹೇಳಿದರು. ಸಂಶೋಧನೆಯ ಮೂಲಕ ನಿಯಂತ್ರಣ ಚೌಕಟ್ಟನ್ನು ಪ್ರಮಾಣೀಕರಿಸಲು ಬಹಳ ದೊಡ್ಡ ಅವಕಾಶಗಳಿವೆ ಎಂದವರು ಹೇಳಿದರು.

ನಿಯಂತ್ರಕರು ಮತ್ತು ರಾಜ್ಯಗಳ ಜೊತೆ ..ಟಿ. ಕಾನ್ಪುರದ ಸಮಾಲೋಚನೆಯನ್ನು ಪ್ರಸ್ತಾಪಿಸಿದ ಇಂಧನ ಸಚಿವರು ನಿಯಂತ್ರಕರ ವೇದಿಕೆಗೆ ಶಿಷ್ಟಾಚಾರ ರೂಪಿಸುವುದು ಇಂಧನ ವಲಯಕ್ಕೆ ಬಹಳ ದೊಡ್ಡ ಸೇವೆಯಾಗಲಿದೆ ಎಂದರು. ಸ್ಮಾರ್ಟ್ ಮೀಟರಿಂಗ್, ಕೃತಕ ಬುದ್ಧಿಮತ್ತೆ ಆಧಾರಿತ ಇಂಧನ ಲೆಕ್ಕಪತ್ರ ಮತ್ತು ಸೈಬರ್ ಭದ್ರತೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನಡೆಯಬೇಕು ಎಂದರು. ಕೃತಕ ಬುದ್ಧಿಮತ್ತೆ ಆಧಾರಿತ ಇಂಧನ ಲೆಕ್ಕಪತ್ರವನ್ನು ನಾವು ಕಡ್ಡಾಯ ಮಾಡಿದ್ದೇವೆ ಮತ್ತು ಇದರಿಂದ ಲಭಿಸುವ ಬೃಹತ್ ದತ್ತಾಂಶವನ್ನು ತಂತ್ರಜ್ಞಾನಗಳು ಸೂಕ್ಷ್ಮವಾಗಿ ಗ್ರಹಿಸಬೇಕಾದ ಅಗತ್ಯವಿದೆ ಎಂದೂ ಅವರು ಹೇಳಿದರು.

ಹಸಿರು ಜಲಜನಕವನ್ನು ಶುದ್ದೀಕರಣ ಮತ್ತು ರಸಗೊಬ್ಬರ ಕೈಗಾರಿಕೆಗಳಲ್ಲಿ ಮಾತ್ರವಲ್ಲ ಇತರ ಉದ್ಯಮಗಳಾದ ಉಕ್ಕು, ಗಾಜು, ಸಿರಾಮಿಕ್ಸ್ ಮತ್ತು ಭಾರೀ ಸಾಗಾಟ ಕೈಗಾರಿಕೆಗಳಲ್ಲಿ ಬಳಸುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಧ್ಯಯನ ನಡೆಯಬೇಕು ಎಂದೂ ಶ್ರೀ ಸಿಂಗ್ ಹೇಳಿದರು. ಪಳೆಯುಳಿಕೆ ಇಂಧನಗಳಿಂದ ಹಸಿರು ಜಲಜನಕದತ್ತ ಪರಿವರ್ತನೆ ಹೊತ್ತಿನ ಅವಶ್ಯಕತೆಯಾಗಿದೆ ಮತ್ತು ಉದ್ಯಮ ವಲಯದಲ್ಲಿ ಹಸಿರು ಪ್ರಜ್ಞೆ ಈಗಾಗಲೇ ಉದ್ಭವವಾಗಿದೆ ಆದರೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆ ಪರಿಹಾರವಾಗಬೇಕಾಗಿದೆ ಎಂದರು.

ಆಧುನೀಕರಣ ಅಳವಡಿಸಿಕೊಳ್ಳುವಲ್ಲಿ ಮತ್ತು ಪರಿವರ್ತನೆಯನ್ನು ತರುವಲ್ಲಿ ಇಂಧನ ವಲಯ ಮುಂಚೂಣಿಯಲ್ಲಿದೆ; ಜಗತ್ತು ಈಗ ಬದಲಾಗುತ್ತಿದೆ ಮತ್ತು ನಾವು ಬದಲಾವಣೆಯನ್ನು ಅನುಸರಿಸುವುದಕ್ಕೆ ಬದಲು ಬದಲಾವಣೆಯ ನಾಯಕತ್ವ ವಹಿಸಬೇಕು ಎಂದವರು ನುಡಿದರು.

ಸಮಾರಂಭದಲ್ಲಿ ಮಾತನಾಡಿದ ಇಂಧನ ಖಾತೆ ಸಹಾಯಕ ಸಚಿವರಾದ ಶ್ರೀ ಕೃಷ್ಣ ಪಾಲ್ ಗುರ್ಜರ್ ಅವರು ದೇಶದಲ್ಲಿ ವಿದ್ಯುತ್ ಅಪೇಕ್ಷಿಸುವ ಶೇಖಡಾ 100ರಷ್ಟು ಮನೆಗಳ ವಿದ್ಯುದ್ದೀಕರಣವನ್ನು ಮಾಡಲಾಗಿದೆ, ಗ್ರಾಮೀಣ ಪ್ರದೇಶಗಳಲ್ಲಾದರೆ ಸರಾಸರಿ 22 ತಾಸುಗಳಿಗೂ ಅಧಿಕ ಮತ್ತು ನಗರಗಳಲ್ಲಿ 23 ತಾಸು 36 ನಿಮಿಷಗಳಷ್ಟು ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದರು.

***



(Release ID: 1743333) Visitor Counter : 232


Read this release in: English , Urdu , Hindi