ಸಂಸ್ಕೃತಿ ಸಚಿವಾಲಯ
ಏಳು ವರ್ಷಗಳ ಸರ್ಕಾರದ ಅವಧಿಯಲ್ಲಿ ಕಳುವಾದ 75% ಪಾರಂಪರಿಕ ವಸ್ತುಗಳು ಮರಳಿವೆ: ಶ್ರೀ ಜಿ. ಕಿಶನ್ ರೆಡ್ಡಿ
ಈ ಐತಿಹಾಸಿಕ ವಸ್ತುಗಳನ್ನು ಮರಳಿ ತರುವುದು ಭಾರತದ ಹೆಮ್ಮೆಯನ್ನು ಪುನಃ ಸ್ಥಾಪಿಸುವ ಪ್ರಕ್ರಿಯೆ ಮತ್ತು ದೇಶದ ಐತಿಹಾಸಿಕ ಕಾಲವನ್ನು ಶ್ಲಾಘಿಸಲು ಹಾಗೂ ಒಪ್ಪಿಕೊಳ್ಳಲು ಇದೊಂದು ಸಕ್ರಿಯ ಹೆಜ್ಜೆ: ಸಂಸ್ಕೃತಿ ಸಚಿವರು
Posted On:
05 AUG 2021 4:06PM by PIB Bengaluru
ಪ್ರಮುಖ ಅಂಶಗಳು :
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅವಿರತ ಪ್ರಯತ್ನಗಳಿಂದ ವಿದೇಶದಿಂದ ಪುರಾತನ ವಸ್ತುಗಳನ್ನು ಹಿಂಪಡೆಯಲು ಸಹಕಾರಿಯಾಯಿತು: ಶ‍್ರೀ ಜಿ. ಕಿಶನ್ ರೆಡ್ಡಿ
- 1976 ರಿಂದ ಈ ವರೆಗೆ 54 ಪುರಾತನ ವಸ್ತುಗಳನ್ನು ವಿದೇಶಗಳಿಂದ ಹಿಂಪಡೆಯಲಾಗಿದೆ.
- 2014 ರಿಂದ ಈ ವರೆಗೆ 41 ಪಾರಂಪರಿಕ ವಸ್ತುಗಳನ್ನು ಭಾರತಕ್ಕೆ ಮರಳಿ ತರಲಾಗಿದೆ.
- ಈ ಪ್ರಯತ್ನಕ್ಕೆ ಎಂ.ಇ.ಎ, ಎ.ಎಸ್.ಐ, ಸಿಬಿಐ ಸಹ ಹೆಚ್ಚಿನ ಕೊಡುಗೆ ನೀಡಿವೆ.
1976 ರಿಂದ ಈ ವರೆಗೆ ಒಟ್ಟು 54 ಪಾರಂಪರಿಕ ವಸ್ತುಗಳನ್ನು ವಿದೇಶಗಳಿಂದ ವಾಪಸ್ ಪಡೆಯಲಾಗಿದೆ ಎಂದು ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ರಾಜ್ಯಗಳ ವಲಯದ ಅಭಿವೃದ್ಧಿ [ಡಿ.ಒ.ಎನ್.ಇ.ಆರ್] ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ನಂತರ ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಶ್ರೀ ಜಿ. ಕಿಶನ್ ರೆಡ್ಡಿ, “ಕಳುವಾದ ಅತಿ ಹೆಚ್ಚು ಪಾರಂಪರಿಕ ವಸ್ತುಗಳನ್ನು ಕಳೆದ ಏಳು ವರ್ಷಗಳ ಸರ್ಕಾರದ ಅವಧಿಯಲ್ಲಿ ವಶಕ್ಕೆ ಪಡೆಯಲಾಗಿದ್ದು, ಇದು ಹೆಮ್ಮೆಯ ಸಂಗತಿಯಾಗಿದೆ. 2014 ರಿಂದ ಈ ವರೆಗೆ ಪತ್ತೆಯಾದ ಪುರಾತನ ವಸ್ತುಗಳ ಸಂಖ್ಯೆ ಅತ್ಯಧಿಕವಾಗಿವೆ. 41 ಪಾರಂಪರಿಕ ವಸ್ತುಗಳು ಭಾರತಕ್ಕೆ ತಂದಿದ್ದು, ಒಟ್ಟಾರೆ 75% ವಸ್ತುಗಳು ಮರಳಿವೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅವಿರತ ಪ್ರಯತ್ನಗಳಿಂದಾಗಿ ಈ ಪುರಾತನ ವಸ್ತುಗಳನ್ನು ವಿದೇಶಗಳಿಂದ ಹಿಂಪಡೆಯಲು ಸಾಧ್ಯವಾಯಿತು ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. “ ಈ ಯಶಸ್ಸಿಗೆ ನಮ್ಮ ಈಚಿನ ಸಾಂಸ್ಕೃತಿಕ ಸಂಬಂಧಗಳ ಸುಧಾರಣೆಯೇ ಕಾರಣವಾಗಿದೆ ಎಂದು ನಂಬುತ್ತೇನೆ. ನಮ್ಮ ಪ್ರಧಾನಮಂತ್ರಿ ಅವರು ವಿವಿಧ ವಲಯಗಳ ಮುಖ್ಯಸ್ಥರೊಂದಿಗೆ ಹಂಚಿಕೊಂಡ ವೈಯಕ್ತಿಕ ಸಂಬಂಧಗಳ ಕಾರಣದಿಂದಾಗಿ ಈ ವಸ್ತುಗಳ ತ್ವರಿತ ವಾಪಸ್ಸಾತಿ ಸಾಧ್ಯವಾಯಿತು” ಎಂದು ಹೇಳಿದ್ದಾರೆ.
ಎ.ಎಸ್.ಐ, ಸಿಬಿಐ ಮತ್ತಿತರ ಸರ್ಕಾರದ ವಿವಿಧ ಸಂಸ್ಥೆಗಳ ದಣಿವರಿಯದ ಪ್ರಯತ್ನಗಳನ್ನು ಶ್ರೀ ಕಿಶನ್ ರೆಡ್ಡಿ ಶ್ಲಾಘಿಸಿದರು. “ಭಾರತೀಯ ಕಲಾಕೃತಿಗಳು, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ರಕ್ಷಣೆ ಭಾರತದ ವಿದೇಶಾಂಗ ನೀತಿಯ ಅವಿಭಾಜ್ಯ ಅಂಗವಾಗಿದೆ. ಈ ಐತಿಹಾಸಿಕ ವಸ್ತುಗಳನ್ನು ಮರಳಿ ತಂದಿರುವುದು ಮತ್ತು ಹಿಂತಿರುಗಿಸಿರುವುದು ಭಾರತದ ಹೆಮ್ಮೆಯನ್ನು ಪುನಃ ಸ್ಥಾಪಿಸುವ ಪ್ರಕ್ರಿಯೆಯಾಗಿದೆ ಮತ್ತು ನಮ್ಮ ದೇಶದ ಐತಿಹಾಸಿಕ ಕಾಲವನ್ನು ಒಪ್ಪಿಕೊಳ್ಳಲು, ಶ್ಲಾಘಿಸಲು ಇದೊಂದು ಸಕ್ರಿಯ ಹೆಜ್ಜೆಯಾಗಿದೆ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಾವು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಹಾಗೂ ತ್ವರಿತವಾಗಿ ಪಾರಂಪರಿಕ ವಸ್ತುಗಳನ್ನು ವಾಪಸ್ ಪಡೆಯಲು ಅಗತ್ಯವಾದ ಕಾಗದ ಪತ್ರಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಸಚಿವರು ಹೇಳಿದರು.
***
(Release ID: 1743057)
Visitor Counter : 273