ಇಂಧನ ಸಚಿವಾಲಯ

ʼಸಟ್ಲೆಜ್‌ ಜೆವಿಎನ್ʼನ ವಿದ್ಯುತ್ ಕೇಂದ್ರಗಳಿಂದ ಇದುವರೆಗಿನ ಗರಿಷ್ಠ ಮಾಸಿಕ ವಿದ್ಯುತ್ ಉತ್ಪಾದನೆ


1216.565 ಎಂ.ಯು ವಿದ್ಯುತ್ ಉತ್ಪಾದಿಸಿದ ನಾಥಪಾ ಝಾಕ್ರಿ

335.9057 ಎಂ.ಯು ವಿದ್ಯುತ್ ಉತ್ಪಾದಿಸಿದ ರಾಂಪುರ ಜಲ ವಿದ್ಯುತ್ ಕೇಂದ್ರ

Posted On: 03 AUG 2021 12:07PM by PIB Bengaluru

ಸಟ್ಲೆಜ್‌ ಜಲ ವಿದ್ಯುತ್ ನಿಗಮದ(ಎಸ್‌ಜೆವಿಎನ್) ನಾಥಪಾ ಝಾಕ್ರಿ ಜಲ ವಿದ್ಯುತ್ ಕೇಂದ್ರವು 2021 ಜುಲೈ 31ರಂದು ವಿದ್ಯುತ್‌ ಉತ್ಪಾದನೆಯಲ್ಲಿ ಇದುವರೆಗಿನ ಗರಿಷ್ಠ ದಾಖಲೆ ಸಾಧಿಸಿದ್ದು, 1216.56 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದಿಸಿದೆ. ಮೂಲಕ ಹಿಂದಿನ 1213.10 ದಶಲಕ್ಷ ಯುನಿಟ್‌ಗಳ ಗರಿಷ್ಠ ದಾಖಲೆಯನ್ನು ಮೀರಿಸಿದೆ.

ಅದೇ ರೀತಿ, ರಾಂಪುರ ಜಲ ವಿದ್ಯುತ್ ಕೇಂದ್ರವು 2021 ಜುಲೈ ತಿಂಗಳಲ್ಲಿ 335.90 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿದ್ದು, 2020 ಜುಲೈನಲ್ಲಿ ಉತ್ಪಾದಿಸಲಾದ 333.69 ದಶಲಕ್ಷ ಯೂನಿಟ್‌ಗಳ ಗರಿಷ್ಠ ದಾಖಲೆಯನ್ನು ಮುರಿದಿದೆ.

1500 ಮೆಗಾವ್ಯಾಟ್‌ನ ನಾಥಪಾ ಝಾಕ್ರಿಯ ಸಾಮರ್ಥ್ಯವು 6612 ದಶಲಕ್ಷ ಯೂನಿಟ್‌ಗಳು ಮತ್ತು 412 ಮೆಗಾವ್ಯಾಟ್‌ನ  ʻರಾಂಪುರ ಎಚ್‌ಪಿಎಸ್‌ʼ ಉತ್ಪಾದನಾ ಸಾಮರ್ಥ್ಯವು 1878 ದಶಲಕ್ಷ ಯುನಿಟ್‌ಗಳು. ಎರಡೂ ಕೇಂದ್ರಗಳು ಕ್ರಮವಾಗಿ 7445 ದಶಲಕ್ಷ ಯೂನಿಟ್ ಮತ್ತು 2098 ದಶಲಕ್ಷ ಯುನಿಟ್‌ಗಳನ್ನು ಉತ್ಪಾದಿಸಿವೆ.

ಎಸ್‌ಜೆವಿಎನ್ 1988ರಲ್ಲಿ ಒಂದು ಜಲ ವಿದ್ಯುತ್‌ ಯೋಜನೆಯೊಂದಿಗೆ ಕಾರ್ಯಾರಂಭ ಮಾಡಿತು. ಇಂದು ಕಂಪನಿಯು 9000 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ. ಪೈಕಿ ಈಗಾಗಲೇ 2016.5 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದನೆ ನಡೆಯುತ್ತಿದ್ದು, 3156 ಮೆಗಾವ್ಯಾಟ್ ಉತ್ಪಾದನಾ ಘಟಕಗಳು ನಿರ್ಮಾಣ ಹಂತದಲ್ಲಿವೆ. 4046 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದನಾ ಯೋಜನೆಗಳು ಯೋಜನಾ ಸಿದ್ಧತೆ ಹಂತದಲ್ಲಿವೆ. ಇಂದು ಎಸ್‌ಜೆವಿಎನ್ ಭಾರತದ 9 ರಾಜ್ಯಗಳು ಮತ್ತು 2 ಹೊರ ದೇಶಗಳಲ್ಲಿ ಹೆಜ್ಜೆಗುರುತು ಹೊಂದಿದೆ. ಕಂಪನಿಯು ವಿದ್ಯುತ್‌ ಉತ್ಪಾದನೆ ಮತ್ತು ಪ್ರಸರಣದ ಇತರ ಕ್ಷೇತ್ರಗಳಲ್ಲಿಯೂ ವೈವಿಧ್ಯಮಯವಾಗಿ ತೊಡಗಿಸಿಕೊಂಡಿದೆ. 2023 ವೇಳೆಗೆ 5000 ಮೆಗಾವ್ಯಾಟ್, 2030 ವೇಳೆಗೆ 12000 ಮೆಗಾವ್ಯಾಟ್ ಮತ್ತು 2040 ವೇಳೆಗೆ 25000 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಎಸ್‌ಜೆವಿಎನ್ ಕಾರ್ಯೋನ್ಮುಖವಾಗಿದೆ.

***



(Release ID: 1741856) Visitor Counter : 240