ಪ್ರವಾಸೋದ್ಯಮ ಸಚಿವಾಲಯ
ಪ್ರವಾಸೋದ್ಯಮ ಸಚಿವಾಲಯವು ಗುಜರಾತ್‌ಗೆ ʻಸ್ವದೇಶ್ ದರ್ಶನʼ ಯೋಜನೆಯಡಿ ಒಟ್ಟು 179.68 ಕೋಟಿ ರೂ. ಮೊತ್ತದ 3 ಯೋಜನೆಗಳನ್ನು ಮಂಜೂರು ಮಾಡಿದೆ: ಶ್ರೀ ಜಿ. ಕಿಶನ್ ರೆಡ್ಡಿ
Posted On:
02 AUG 2021 2:56PM by PIB Bengaluru
ಪ್ರಮುಖ ಮುಖ್ಯಾಂಶಗಳು:
- 'ತೀರ್ಥಯಾತ್ರೆ ಪುನಶ್ಚೇತನ ಮತ್ತು ಆಧ್ಯಾತ್ಮಿಕ, ಪರಂಪರೆ ವರ್ಧನೆ ಅಭಿಯಾನʼದ (ಪಿ.ಆರ್.ಎಚ್.ಎ.ಡಿ.)' ಅಡಿಯಲ್ಲಿ ಗುಜರಾತ್‌ಗೆ ಒಟ್ಟು 105.56 ಕೋಟಿ ರೂ.ಗಳ 3 ಯೋಜನೆಗಳನ್ನು ಮಂಜೂರು ಮಾಡಲಾಗಿದೆ.
ಪ್ರವಾಸೋದ್ಯಮ ತಾಣಗಳ ಗುರುತಿಸುವಿಕೆ, ಉತ್ತೇಜನ ಮತ್ತು ಅಭಿವೃದ್ಧಿಯು ಪ್ರಾಥಮಿಕವಾಗಿ ರಾಜ್ಯ ಸರಕಾರ/ ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ಜವಾಬ್ದಾರಿಯಾಗಿದೆ. ಪ್ರವಾಸೋದ್ಯಮ ಸಚಿವಾಲಯವು ತನ್ನ 'ಸ್ವದೇಶ್ ದರ್ಶನ' ಯೋಜನೆಯಡಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಾಧಾರಿತ ಯೋಜನೆಗಳನ್ನು ಮಂಜೂರು ಮಾಡುತ್ತದೆ. ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳೊಂದಿಗೆ ಸಮಾಲೋಚಿಸಿ ಅಭಿವೃದ್ಧಿಗಾಗಿ ಯೋಜನೆಗಳನ್ನು ಗುರುತಿಸಲಾಗುತ್ತದೆ. ಹಣದ ಲಭ್ಯತೆ, ಸೂಕ್ತ ಹಾಗೂ ವಿವರವಾದ ಯೋಜನಾ ವರದಿಗಳ ಸಲ್ಲಿಕೆ, ಯೋಜನೆಯ ಮಾರ್ಗಸೂಚಿಗಳಿಗೆ ಬದ್ಧತೆ ಮತ್ತು ಈ ಹಿಂದೆ ಬಿಡುಗಡೆಯಾದ ನಿಧಿಯ ಬಳಕೆ ಇತ್ಯಾದಿ ಷರತ್ತುಗಳಿಗೆ ಒಳಪಟ್ಟು ನಿಧಿಯನ್ನು ಮಂಜೂರು ಮಾಡಲಾಗುತ್ತದೆ.
ಪ್ರವಾಸೋದ್ಯಮ ಸಚಿವಾಲಯವು ಗುಜರಾತ್‌ಗೆ ʻಸ್ವದೇಶದರ್ಶನ ಯೋಜನೆʼಯಡಿ ಒಟ್ಟು 179.68 ಕೋಟಿ ರೂ.ಗಳ ಮೊತ್ತದ 03 ಯೋಜನೆಗಳನ್ನು ಹಾಗೂ 'ತೀರ್ಥಯಾತ್ರೆ ಪುನಶ್ಚೇತನ ಮತ್ತು ಆಧ್ಯಾತ್ಮಿಕ, ಪರಂಪರೆ ವರ್ಧನೆ ಅಭಿಯಾನʼದ (ಪಿ.ಆರ್.ಎಚ್.ಎ.ಡಿ.) ಅಡಿಯಲ್ಲಿ ಒಟ್ಟು 105.56 ಕೋಟಿ ರೂ.ಮೊತ್ತದ 03 ಯೋಜನೆಗಳನ್ನು ಮಂಜೂರು ಮಾಡಿದೆ.
ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದ ರೂಪದಲ್ಲಿ ಈ ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ.
***
(Release ID: 1741518)
Visitor Counter : 198