ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ತಿಂಗಳೊಳಗಾಗಿ 2.27 ಲಕ್ಷ ಗರ್ಭೀಣಿಯರಿಗೆ ಕೋವಿಡ್ – 19 ಲಸಿಕೆ


ಎನ್.ಟಿ.ಎ.ಜಿ.ಐ ನ ಶಿಫಾರಸ್ಸಿನನ್ವಯ ಜುಲೈ 2 ರಿಂದ ಗರ್ಭೀಣಿಯರು ಕೋವಿಡ್ – 19 ಲಸಿಕೆ ಪಡೆಯಲು ಅರ್ಹರು

ಗರ್ಭೀಣಿಯರಿಗೆ ಲಸಿಕೆ ಹಾಕಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ಕಾರ್ಯ ಪೂರ್ಣ

Posted On: 30 JUL 2021 5:44PM by PIB Bengaluru

ಮಹತ್ವದ ಬೆಳವಣಿಗೆಯಲ್ಲಿ 2.27 ಲಕ್ಷ ಗರ್ಭೀಣಿಯರು ಹಾಲಿ ನಡೆಯುತ್ತಿರುವ ರಾಷ್ಟ್ರೀಯ ಕೋವಿಡ್ ಲಸಿಕಾ ಕಾರ್ಯಕ್ರಮದಡಿ ಲಸಿಕೆ ಪಡೆದುಕೊಂಡಿದ್ದಾರೆ.

ಗರ್ಭೀಣಿಯರಿಗೆ ಕೋವಿಡ್ – 19 ಸೋಂಕಿನ ಅಪಾಯಗಳ ಬಗ್ಗೆ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ಅಧಿಕಾರಿಗಳು ಗರ್ಭೀಣಿಯರನ್ನು ನಿಯಮಿತವಾಗಿ ತಪಾಸಣೆ ಮಾಡಿದ ನಂತರ ಕೊವಿಡ್ – 19 ಲಸಿಕೆಯ  ಲಾಭ ಇವರಿಗೆ ದೊರೆಯುತ್ತಿದೆ. ನಿರಂತರ ಅಭಿಯಾನ ಗರ್ಭೀಣಿಯರಿಗೆ ಕೋವಿಡ್ ಲಸಿಕೆ ತೆಗೆದುಕೊಳ್ಳುವ ಬಗ್ಗೆ ತಿಳಿವಳಿಕೆಯ ಆಯ್ಕೆ ನೀಡುವ ಅಧಿಕಾರ ಒದಗಿಸಿದೆ.

ತಮಿಳುನಾಡಿನಲ್ಲಿ 78,838ಕ್ಕೂ ಹೆಚ್ಚು ಗರ್ಭೀಣಿಯರು ಲಸಿಕೆ ಪಡೆದುಕೊಂಡಿದ್ದಾರೆ. ನಂತರ ಆಂಧ್ರಪ್ರದೇಶದಲ್ಲಿ 34,228, ಒಡಿಶಾ 29,821, ಮಧ್ಯಪ್ರದೇಶ 21,842, ಕೇರಳ 18,423 ಮತ್ತು ಕರ್ನಾಟಕದಲ್ಲಿ 16,673 ಮಂದಿ ಗರ್ಭೀಣಿಯರು ಲಸಿಕೆ ಪಡೆದುಕೊಂಡಿದ್ದಾರೆ.

ಆತಂಕ, ತಪ್ಪು ಮಾಹಿತಿಯುಳ್ಳ ವದಂತಿಗಳು ಮತ್ತು ಕೆಲವು ಸಾಮಾಜಿಕ ನಿಷೇಧಗಳು ಮತ್ತು ಸಮಸ್ಯೆಗಳನ್ನು ನಿವಾರಿಸುವ ಭಾಗವಾಗಿ ಗರ್ಭೀಣಿಯರಿಗೆ ಕೋವಿಡ್ – 19 ಲಸಿಕೆ ಕಾರ್ಯಕ್ರಮ ಜಾರಿಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ಮಾಡುವ ಮಾರ್ಗದರ್ಶನದ ಟಿಪ್ಪಣಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ 2021 ಜುಲೈ 2 ರಂದು ಹಂಚಿಕೊಂಡಿದೆ. ಗರ್ಭಾವಸ್ಥೆಯಲ್ಲಿ ಕೋವಿಡ್ – 19 ಲಸಿಕೆ ಪ್ರಾಮುಖ್ಯತೆ, ಪ್ರಸವ ಪೂರ್ವ ಆರೈಕೆ ಸಮಯದಲ್ಲಿ ಗರ್ಭೀಣಿಯರು ಮತ್ತು ಅವರ ಕುಟುಂಬಕ್ಕೆ ಸಲಹೆ ನೀಡಲು ಕಾರ್ಯಕ್ರಮ ವ್ಯವಸ್ಥಾಪಕರು ಮತ್ತು ಮಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡುವ ಮೂಲಕ ಇದನ್ನು ಜಾರಿಗೆ ತರಲಾಗಿದೆರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಸರ್ಕಾರದ ಮಟ್ಟದಲ್ಲಿ ಗರ್ಭೀಣಿಯರಿಗೆ ಲಸಿಕೆ ಹಾಕುವಾಗ ಮತ್ತು ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳು [ಸಿವಿಸಿಗಳು] ಲಸಿಕಾ ಕಾರ್ಯಕ್ರಮದಲ್ಲಿ ಸೂಕ್ಷ್ಮತೆ ಹೊಂದಿರಬೇಕು

ರಾಜ್ಯಗಳು ಗರ್ಭೀಣಿಯರಿಗೆ ಲಸಿಕೆ ಹಾಕಿಸುವುದನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಅದರಲ್ಲಿ ಗರ್ಭೀಣಿಯರಿಗಾಗಿಯೇ ವಿಶೇಷ ಲಸಿಕಾ ಕಾರ್ಯಕ್ರಮಗಳು ಸಹ ಸೇರಿವೆ. ಅರ್ಹ ಮಂಚೂಣಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರಿಗೆ ಸಮಾಲೋಚನೆ, ಗರ್ಭೀಣಿಯರಿಗೆ ಜಿಲ್ಲಾಧಿಕಾರಿಗಳಿಂದ ಪ್ರಮಾಣಪತ್ರ, ಹಾಲುಣಿಸುವ ತಾಯಂದಿರಿಗೆ ಮೊದಲು ಲಸಿಕೆ ಹಾಕಿಸುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸುವ ಮತ್ತು ಸಮುದಾಯ ಇದನ್ನು ಸ್ವೀಕರಿಸುವ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ

ಗರ್ಭಾವಸ್ಥೆಯಲ್ಲಿ ಕೋವಿಡ್ – 19 ಸೋಂಕು ಗರ್ಭಿಣಿಯರಿಗೆ ಆರೋಗ್ಯ ಕ್ಷಿಪ್ರವಾಗಿ ಕ್ಷೀಣಿಸಲು ಕಾರಣವಾಗಬಹುದು ಎಂಬುದನ್ನು ಅಧ್ಯಯನಗಳು ಬಹಿರಂಗಪಡಿಸಿವೆ. ಇದು  ಕಾಯಿಲೆಯ ತೀವ್ರತೆ ಹೆಚ್ಚಿಸುತ್ತದೆ ಮತ್ತು ಇದು ಭ್ರೂಣದ ಮೇಲೂ ಪರಿಣಾಮ ಬೀರಬಹುದು. ಕೋವಿಡ್ – 19 ಸೋಂಕಿನ ಗರ್ಭಿಣಿಯರಿಗೆ ಪ್ರಸವಪೂರ್ವ ಜನನ ಮತ್ತು ನವಜಾತ ಶಿಶುವಿನ ಕಾಯಿಲೆಯು ಹೆಚ್ಚಾಗುವ ಸಾಧ್ಯತೆಗಳು ಸೇರಿದಂತೆ ಇತರೆ ಪ್ರತಿಕೂಲ ಪರಿಣಾಮಗಳಿವೆಹೆಚ್ಚುವರಿಯಾಗಿ ಗರ್ಭಾವಸ್ಥೆಯಲ್ಲಿ ತೀವ್ರವಾದ ಕೋವಿಡ್ – 19 ಸೋಂಕಿನ ಕುರಿತು ಮಾಹಿತಿ ನೀಡಿದ್ದು, ಇದರಲ್ಲಿ ಸಹ ಅಸ್ವಸ್ಥತೆ, ತಾಯಿಯ ವಯಸ್ಸು ಹೆಚ್ಚಿರುವುದು ಮತ್ತಿತರ ಅಂಶಗಳನ್ನು ಸಹ ಪಟ್ಟಿ ಮಾಡಲಾಗಿದೆ.

ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು [ಎನ್.ಟಿ..ಜಿ.] ಗರ್ಭಿಣಿಯರಿಗೆ ಲಸಿಕೆ ಹಾಕುವಂತೆ ಶಿಫಾರಸ್ಸು ಮಾಡಿದೆ. ಇದು ದೇಶದ ಕೋವಿಡ್ – 19 ಲಸಿಕಾ ಅಭಿಯಾನದಲ್ಲಿ ಗರ್ಭಿಣಿಯರನ್ನು ಸೇರಿಸಲು ಕಾರಣವಾಗಿದೆ. ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು [ಎನ್.ಟಿ..ಜಿ.] ಇದಕ್ಕೂ ಮುನ್ನ ಅವಿರೋಧವಾಗಿ ಲಸಿಕೆ ಹಾಕುವಂತೆ ಶಿಫಾರಸ್ಸು ಮಾಡಿದೆ. ಹೆಚ್ಚುವರಿಯಾಗಿ ಕೋವಿಡ್ – 19 ಲಸಿಕೆ ಕುರಿತ ರಾಷ್ಟ್ರಮಟ್ಟದ ಸಲಹಾ ಸಮಿತಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಗರ್ಭಿಣಿಯರಿಗೆ ಲಸಿಕೆ ಹಾಕಿಸುವಂತೆ ಒಮ್ಮತ ಮೂಡಿಸಿತ್ತುವೃತ್ತಿಪರ ಸಂಸ್ಥೆಗಳಾದ ಎಫ್..ಜಿ.ಎಸ್., ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ಸಿ.ಎಸ್.ಓಗಳು, ಎನ್.ಜಿ.ಓಗಳು, ಅಭಿವೃದ್ಧಿ ಪಾಲುದಾರ ಸಂಸ್ಥೆಗಳು, ತಾಂತ್ರಿಕ ತಜ್ಞರು ಮತ್ತಿತರು ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದರು ಶಿಫಾರಸ್ಸನ್ನು ಎನ್.ಟಿ..ಜಿ. ಅವಿರೋಧವಾಗಿ ಸ್ವಾಗತಿಸಿತು. ಕೇಂದ್ರ ಸರ್ಕಾರ, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರೆ ಪಾಲುದಾರರು ಗರ್ಭಿಣಿಯರಲ್ಲಿ ವಿಶ್ವಾಸ ಮೂಡಿಸಿದವು. ಅವರ ಕುಟುಂಬಗಳು ಕೋವಿಡ್ – 19 ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದಿದ್ದು, ಇದರಿಂದ ಕೋವಿಡ್ – 19 ಸೋಂಕಿನ ಅಪಾಯದಿಂದ ಎರಡೂ ಜೀವಗಳನ್ನು ರಕ್ಷಿಸಲು ಸಹಕಾರಿಯಾಗಿದೆ

***


(Release ID: 1741114) Visitor Counter : 233