ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಒಲಿಂಪಿಕ್ಸ್ ಮತ್ತು ಏಷ್ಯನ್ ಕ್ರೀಡಾಕೂಟದಂತಹ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾರತದ ಪ್ರದರ್ಶನವನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ: ಶ್ರೀ ಅನುರಾಗ್ ಠಾಕೂರ್

Posted On: 29 JUL 2021 4:25PM by PIB Bengaluru

ಪ್ರಮುಖ ಮುಖ್ಯಾಂಶಗಳು:

  • 24 ಖೇಲೋ ಇಂಡಿಯಾ ರಾಜ್ಯ ಶ್ರೇಷ್ಠತಾ ಕೇಂದ್ರ(ಎಸ್.ಎಲ್.ಕೆ..ಎಸ್.ಸಿ..) ಗಳನ್ನು ಈಗಾಗಲೇ ದೇಶಾದ್ಯಂತ ಆರಂಭಿಸಲಾಗಿದೆ.
  • ರಾಷ್ಟ್ರೀಯ ಕ್ರೀಡಾ ಒಕ್ಕೂಟದ ನೆರವಿನ ಯೋಜನೆಯು ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಕ್ರೀಡಾಪಟುಗಳಿಗೆ ಸ್ಪರ್ಧಾತ್ಮಕತೆ ಮತ್ತು ತರಬೇತಿ ಒದಗಿಸುತ್ತಿದೆ.
  • ಒಲಿಂಪಿಕ್ ಕ್ರೀಡಾಕೂಟ ಮತ್ತು ಏಷ್ಯನ್ ಕ್ರೀಡಾಕೂಟಗಳು ಸೇರಿದಂತೆ ಪದಕ ಗೆಲ್ಲುವ ಸಂಭವನೀಯರಿಗೆ ಸೂಕ್ತ ಗುರಿಯ ತರಬೇತಿಯನ್ನು ಒಲಿಂಪಿಕ್ ಪೋಡಿಯಂ ಯೋಜನೆ (ಟಿ..ಪಿ.ಎಸ್) ಅಡಿಯಲ್ಲಿ ಒದಗಿಸಲಾಗುತ್ತಿದೆ.
  • ಪಂಡಿತ್ ದೀನ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿಯಡಿಯಲ್ಲಿ 5 ಲಕ್ಷ ರೂ.ಗಳವರೆಗಿನ ಆರ್ಥಿಕ ನೆರವನ್ನು ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಕ್ರೀಡಾಪಟುಗಳಿಗೆ ಮತ್ತು ಮೃತ ಕ್ರೀಡಾಪಟುಗಳ ಕುಟುಂಬಕ್ಕೆ ಒದಗಿಸಲಾಗುತ್ತಿದೆ.

ಒಲಿಂಪಿಕ್ಸ್ ಮತ್ತು ಏಷ್ಯನ್ ಕ್ರೀಡಾಕೂಟ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಸಿದ್ಧತೆಗಳು ನಿರಂತರ ಪ್ರಕ್ರಿಯೆಯಾಗಿದೆ. ಕ್ರೀಡಾಪಟುಗಳಿಗೆ ತರಬೇತಿ ಮತ್ತು ಸ್ಪರ್ಧಾತ್ಮಕತೆಯ ಮನ್ನಣೆಗೆ, ಒಲಿಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಿಗೆ ಸಜ್ಜುಗೊಳಿಸಲು ರಾಷ್ಟ್ರೀಯ ಕ್ರೀಡಾ ಒಕ್ಕೂಟದ ನೆರವಿನ ಯೋಜನೆಯಡಿ ಕಾಳಜಿ ವಹಿಸಲಾಗಿದೆ.

ಯೋಜನೆ ವಿಸ್ತೃತವಾಗಿ ಕೆಳಗಿನವುಗಳಿಗೆ ಬೆಂಬಲ  ನೀಡುತ್ತದೆ:

ಭಾರತ ಮತ್ತು ವಿದೇಶದಲ್ಲಿ ತರಬೇತಿ ಶಿಬಿರಗಳು

- ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಮನ್ನಣೆ ದೊರಕಿಸುವುದು

- ಭಾರತೀಯ ಮತ್ತು ವಿದೇಶೀ ತರಬೇತುದಾರರ ನೇಮಕ ಮತ್ತು ಬೆಂಬಲ ಸಿಬ್ಬಂದಿ ನೆರವು.

- ತರಬೇತಿ ಸಾಧನಗಳು

- ಭಾರತದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಾಂಪಿಯನ್ ಷಿಪ್ ಗಳ ಆಯೋಜನೆ

- ಗಾಯಗೊಂಡರೆ ವೈದ್ಯಕೀಯ ವಿಮೆ

ಇದಲ್ಲದೆ, ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಯಡಿ ಒಲಿಂಪಿಕ್ ಕ್ರೀಡಾಕೂಟ ಮತ್ತು ಏಷ್ಯನ್ ಕ್ರೀಡಾಕೂಟಗಳು ಸೇರಿದಂತೆ ಕ್ರೀಡಾ ಕೂಟಗಳಲ್ಲಿ ಪದಕ ಪಡೆಯುವ ಸಂಭಾವ್ಯರಿಗೆ ಸೂಕ್ತ ತರಬೇತಿ ಬೆಂಬಲವನ್ನು ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಯೋಜನೆ (ಟಿ..ಪಿ.ಎಸ್) ಅಡಿಯಲ್ಲಿ ಒದಗಿಸಲಾಗುತ್ತಿದೆ.

ಟೋಕಿಯೋ 2020 ಒಲಿಂಪಿಕ್ಸ್ ಗೆ ತೆರಳಲಿದ್ದ ಕ್ರೀಡಾಪಟುಗಳ ಸಿದ್ಧತೆಯ ಮೇಲ್ವಿಚಾರಣೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು. ಕೋವಿಡ್ -19 ಎರಡನೇ ಅಲೆಯ ವೇಳೆ, ಹಲವು ಅಥ್ಲೀಟ್ ಗಳನ್ನು ತರಬೇತಿಗಾಗಿ ವಿದೇಶಕ್ಕೆ ಕಳುಹಿಸಲಾಯಿತು, ಇದರಿಂದಾಗಿ ಅವರು ದೇಶದಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ರೋಗದಿಂದ ಬಾಧಿತರಾಗಲಿಲ್ಲ. ಇತರ ಟೋಕಿಯೊ ಸಂಭವನೀಯರುಗಳಿಗೆ ತರಬೇತಿ ಶಿಬಿರಗಳಲ್ಲಿ ವ್ಯಕ್ತಿಗತ ಅಂತರದೊಂದಿಗೆ ತರಬೇತಿ ನೀಡಲಾಯಿತು.

 ‘ಕ್ರೀಡೆಒಂದು ರಾಜ್ಯದ ವಿಚಾರ. ಕ್ರೀಡೆಗಳ ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲಸೌಕರ್ಯಗಳನ್ನು ಒದಗಿಸುವುದು ರಾಜ್ಯ ಸರ್ಕಾರಗಳ ಪ್ರಾಥಮಿಕ ಕರ್ತವ್ಯಗಳಲ್ಲಿ ಒಂದಾಗಿದೆ. ಆದಾಗ್ಯೂ ಕೇಂದ್ರ ಸರ್ಕಾರ ಎಲ್ಲೆಲ್ಲಿ ಕಂದಕ ಇದೆಯೋ ಅಲ್ಲಿ ಮಹತ್ವದ ಕ್ರೀಡಾ ಮೂಲಸೌಕರ್ಯ ಮತ್ತು ಇತರ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಮತ್ತು ಅವುಗಳಿಂದ ಬರುವ ಕಾರ್ಯಸಾಧ್ಯ ಪ್ರಸ್ತಾಪಗಳ ಆಧಾರದ ಮೇಲೆ ಕ್ರೀಡಾ ಸಾಧನ ಸಲಕರಣೆಗಳನ್ನು ಖೇಲೋ ಇಂಡಿಯಾಯೋಜನೆ ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ನೆರವು ಒದಗಿಸುತ್ತಿದೆ

ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿರುವ ಕ್ರೀಡಾಪಟುಗಳಿಗೆ ತರಬೇತಿ ಮುಖ್ಯವಾಗಿ ಕ್ರೀಡಾ ಪ್ರಾಧಿಕಾರದ ಕೇಂದ್ರಗಳಲ್ಲಿ ನಡೆಯುತ್ತದೆ, ಇದು ಸಾಕಷ್ಟು ಸೌಲಭ್ಯಗಳನ್ನು ಹೊಂದಿದೆ. ಇದಲ್ಲದೆ, ರಾಜ್ಯ ಸರ್ಕಾರಗಳ ಒಡೆತನದ ಸೌಲಭ್ಯಗಳನ್ನು ಸುಧಾರಿಸಲು, ಖೇಲೋ ಇಂಡಿಯಾ ರಾಜ್ಯ ಶ್ರೇಷ್ಠತೆ ಕೇಂದ್ರಗಳು (ಎಸ್‌.ಎಲ್‌.ಕೆ..ಸಿ.) ಎಂದು ಘೋಷಿಸಲು ಅಸ್ತಿತ್ವದಲ್ಲಿರುವ ಒಂದು ಕ್ರೀಡಾ ಸೌಲಭ್ಯಗಳನ್ನು ಗುರುತಿಸಲು ಪ್ರತಿ ರಾಜ್ಯಕ್ಕೆ ಅನುಮತಿಸಲಾಗಿದೆ, ಇದರಲ್ಲಿ ಮಾನವಶಕ್ತಿ ಮತ್ತು ಕ್ರೀಡಾ ಮೂಲಸೌಕರ್ಯ ಸೌಲಭ್ಯಗಳ ಉನ್ನತೀಕರಣಕ್ಕೆ ಹಣಕಾಸಿನ ನೆರವು ನೀಡಲಾಗುತ್ತದೆ ಅಂತರ ವಿಶ್ಲೇಷಣೆ ನಡೆಸುವ ಮೂಲಕ. ಇಂತಹ 24 ಎಸ್‌.ಎಲ್‌.ಕೆ..ಸಿ..ಗಳು ಈಗಾಗಲೇ ದೇಶಾದ್ಯಂತ ಪ್ರಾರಂಭವಾಗಿವೆ.

ಆರ್ಥಿಕ ಭದ್ರತೆ ಒದಗಿಸಲು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು, ಪ್ರತಿಭಾವಂತ ಕ್ರೀಡಾಪಟುಗಳಿಗೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದ್ದು, ಒಲಿಂಪಿಕ್ಸ್ ಕ್ರೀಡೆ ಮತ್ತು ಏಷ್ಯನ್ ಕ್ರೀಡಾಕೂಟದ ಶಿಸ್ತೀಯ ಕ್ರೀಡೆಗಳಡಿ, ಒಲಿಂಪಿಕ್ ಕ್ರೀಡಾಕೂಟ, ಪ್ಯಾರಾ-ಒಲಿಂಪಿಕ್ ಕ್ರೀಡಾಕೂಟ, ಏಷ್ಯನ್ ಕ್ರೀಡಾಕೂಟ, ಪ್ಯಾರಾ ಏಷ್ಯನ್ ಕ್ರೀಡಾಕೂಟ, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ವಿಶ್ವಕಪ್ / ವಿಶ್ವ ಚಾಂಪಿಯನ್ಶಿಪ್ಗಳ ಪದಕ ವಿಜೇತರು ಸಕ್ರಿಯ ಕ್ರೀಡೆಯಿಂದ ನಿವೃತ್ತರಾದರೆ ಅಥವಾ ಅವರು 30 ವರ್ಷ ವಯಸ್ಸಿನವರಾದರೆ, ಯಾವುದು ಮೊದಲೋ ಅಲ್ಲಿಂದ ಆಜೀವ ಮಾಸಿಕ ರೂ. 12,000ದಿಂದ ರೂ. 20,000ವರೆಗೆ ಪಿಂಚಣಿಗೆ ಅರ್ಹರಾಗುತ್ತಾರೆ.

ಇದಲ್ಲದೆ, ಕ್ರೀಡಾಪಟುಗಳಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿಯ ಯೋಜನೆಯನ್ನು ಸಹ ಸಚಿವಾಲಯ ಜಾರಿಗೊಳಿಸುತ್ತಿದ್ದು, ಇದರ ಅಡಿಯಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವಿಸುತ್ತಿರುವ ಕ್ರೀಡಾಪಟುಗಳಿಗೆ  ಕುಟುಂಬದವರಿಗೆ 5 ಲಕ್ಷ ರೂ.ವರೆಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ಜೊತೆಗೆ, ಕ್ರೀಡಾಪಟುಗಳು ಅಥವಾ ಕುಟುಂಬ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆಗಾಗಿ 10 ಲಕ್ಷ ರೂ.ವರೆಗೆ ಸಹಾಯಧನ, ತರಬೇತಿ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಉಂಟಾದ ಗಾಯಗಳಿಗೆ 10 ಲಕ್ಷ ರೂ.ವರೆಗೆ ನೆರವುರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ತರಬೇತಿ, ಸಲಕರಣೆಗಳ ಸಂಗ್ರಹಕ್ಕಾಗಿ 2.5 ಲಕ್ಷ ರೂ. ವರೆಗೆ ನೆರವು, ತರಬೇತುದಾರು ಮತ್ತು ಸಹಾಯಕ ಸಿಬ್ಬಂದಿಗೆ 2 ಲಕ್ಷ ರೂ. ವರೆಗೆ ಸಹಾಯ. ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗಳ ವೈದ್ಯಕೀಯ ಚಿಕಿತ್ಸೆಗಾಗಿ 4 ಲಕ್ಷ ರೂ. ನೆರವನ್ನು ಮೇಲೆ ತಿಳಿಸಲಾದ ಸದರಿ ನಿಧಿಯಿಂದ ಒದಗಸಲಾಗುತ್ತದೆ.

ಮಾಹಿತಿಯನ್ನು ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಲೋಕಸಭೆಗಿಂದು ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.  

***



(Release ID: 1740498) Visitor Counter : 226