ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಕ್ರೀಡೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮದಡಿ ಕ್ರೀಡಾ ನಿರ್ವಹಣೆಯಲ್ಲಿ ಕಾರ್ಯಕಾರಿ ಸ್ನಾತಕೋತ್ತರ ಡಿಪ್ಲೊಮ [ಇ.ಪಿ.ಜಿ.ಡಿ.ಎಸ್.ಎಂ]ಗೆ ನಾಮನಿರ್ದೇಶನ ಆಹ್ವಾನಿಸಿದ ಕ್ರೀಡಾ ಇಲಾಖೆ
Posted On:
22 JUL 2021 8:07PM by PIB Bengaluru
ಪ್ರಮುಖ ಅಂಶಗಳು :
- ಇ.ಪಿ.ಜಿ.ಡಿ.ಎಸ್.ಎಂ ಕಾರ್ಯಕ್ರಮವನ್ನು ರೊಹ್ಟಕ್ ಐಐಎಂ ನಡೆಸಲಿದೆ
- ಇದರಲ್ಲಿ ಪ್ರವೇಶ ಪಡೆಯುವವರು ಪ್ರಸಂಶನೀಯ ಕ್ರೀಡಾ ವ್ಯಕ್ತಿಗಳಾಗಿರಬೇಕು ಮತ್ತು ಅವರು ಏಷ್ಯಾ, ಕಾಮನ್ ವೆಲ್ತ್ ಅಥವಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರಬೇಕು
- ಪ್ರತಿಯೊಬ್ಬ ಅಭ್ಯರ್ಥಿಗಳಿಗೆ 5 ಲಕ್ಷ ರೂಪಾಯಿವರೆಗೆ ಆರ್ಥಿಕ ನೆರವು ದೊರೆಯಲಿದೆ
ರೊಹ್ಟಕ್ ನ ಐಐಎಂ ನಡೆಸುವ ಕಾರ್ಯಕಾರಿ ಸ್ನಾತಕೋತ್ತರ ಕ್ರೀಡಾ ನಿರ್ವಹಣೆ ಕುರಿತ ಡಿಪ್ಲೊಮ - ಇ.ಪಿ.ಜಿ.ಡಿ.ಎಸ್.ಎಂ ಗೆ ಏಷ್ಯಾ, ಕಾಮನ್ ವೆಲ್ತ್ ಅಥವಾ ಒಲಿಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪ್ರಸಂಶನೀಯ ಕ್ರೀಡಾ ಪಟುಗಳಿಂದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆ ಅರ್ಜಿ ಆಹ್ವಾನಿಸಿದೆ.
ರೋಹ್ಟಕ್ ನ ಐಐಎಂ ನಡೆಸುವ ಇ.ಪಿ.ಜಿ.ಡಿ.ಎಸ್.ಎಂ ಕೋರ್ಸ್ ಗೆ ಕ್ರೀಡಾ ಸಚಿವಾಲಯ ಬೆಂಬಲ ನೀಡುತ್ತಿದ್ದು, 2021 ರ ಸೆಪ್ಟೆಂಬರ್ ನಿಂದ 2026 ರ ಸೆಪ್ಟೆಂಬರ್ ವರೆಗೆ ಐದು ವರ್ಷಗಳ ವರೆಗೆ ಈ ಕಾರ್ಯಕ್ರಮ ಇರಲಿದೆ ಮತ್ತು ಪ್ರತಿಯೊಬ್ಬ ಅಭ್ಯರ್ಥಿಗೆ ಐದು ಲಕ್ಷ ರೂಪಾಯಿವರೆಗೆ ಆರ್ಥಿಕ ನೆರವು ದೊರೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವ ಅಭ್ಯರ್ಥಿಗಳೇ ಪ್ರಾಸಂಗಿಕ ವೆಚ್ಚ, ಪ್ರಯಾಣ ಭತ್ಯೆ, ಜೇಬಿನ ಹೊರಗಿನ ಇತರೆ ವೆಚ್ಚಗಳನ್ನು ಭರಿಸಬೇಕಾಗುತ್ತದೆ.
ರೋಹ್ಟಕ್ ನ ಐಐಎಂ ನ ಆಯ್ಕೆ ಮಾನದಂಡಗಳ ಅನ್ವಯ ಅಭ್ಯರ್ಥಿಗಳಿಗೆ ಪ್ರವೇಶ ದೊರೆಯಲಿದೆ ಮತ್ತು ನಂತರ ಐಐಎಂ ರೋಹ್ಟಕ್ ನಡೆಸುವ ಇ.ಪಿ.ಜಿ.ಡಿ.ಎಸ್.ಎಂ ಕೋರ್ಸ್ ಗಾಗಿ ತಮ್ಮನ್ನು ಅಭ್ಯರ್ಥಿಗಳಾಗಿ ಪರಿಗಣಿಸುವಂತೆ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಬೇಕಾಗುತ್ತದೆ.
ನಂತರ ಎಚ್ಚರಿಕೆಯ ಪರಿಶೀಲನೆ ಬಳಿಕ ಅಭ್ಯರ್ಥಿಗಳು ನಾಮನಿರ್ದೇಶವನ್ನು ಸೂಕ್ತ ರೀತಿಯಲ್ಲಿ ಪರಿಣಿಸಲಿದೆ. ಈ ನಿಟ್ಟಿನಲ್ಲಿ ಕ್ರೀಡಾ ಇಲಾಖೆಯ ತೀರ್ಮಾನ ಅಂತಿಮವಾಗಲಿದ್ದು, ಇದಕ್ಕೆ ಬದ್ಧವಾಗಿರಬೇಕಾಗುತ್ತದೆ. ಕ್ರೀಡಾ ಇಲಾಖೆಯ ಹಾಜರಾತಿ ವೆಚ್ಚವನ್ನು ರೊಹ್ಟಕ್ ನ ಐಐಎಂ ಗೆ ನೇರವಾಗಿ ಮೊದಲೇ ನಿರ್ಧರಿಸಿದಂತೆ ಬಿಡುಗಡೆ ಮಾಡಲಾಗುತ್ತದೆ. ಅಂತಹ ನಾಮನಿರ್ದೇಶನಗೊಂಡವರು ಅಂತಿಮವಾಗಿ ಕಾರ್ಯಕ್ರಮಕ್ಕೆ ಸೇರಿಕೊಳ್ಳುತ್ತಾರೆ ಮತ್ತು ಹಾಜರಾಗುತ್ತಾರೆ. ಅಭ್ಯರ್ಥಿಯು ರೋಹ್ಟಕ್ ಐಐಎಂ ಅಥವಾ ಬೇರೆ ಯಾವುದೇ ಮೂಲದಿಂದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದರೆ ಈ ಕುರಿತು ಕ್ರೀಡಾ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ ಮತ್ತು ವಿದ್ಯಾರ್ಥಿ ವೇತನದಲ್ಲಿ ಅದನ್ನು ಕ್ರೀಡಾ ಇಲಾಖೆ ಸೂಕ್ತ ರೀತಿಯಲ್ಲಿ ಹೊಂದಿಸಿಕೊಳ್ಳಲಿದೆ.
***
(Release ID: 1737957)
Visitor Counter : 206