ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಜಾಗತಿಕ ವಿಶ್ವವಿದ್ಯಾಲಯಗಳ ಸಮಾವೇಶ ಉದ್ದೇಶಿಸಿ ಉಪರಾಷ್ಟ್ರಪತಿ ಭಾಷಣ


ಹವಾಮಾನ ಬದಲಾವಣೆ ಮತ್ತು ಬಡತನದಂತಹ ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ವಿಶ್ವವಿದ್ಯಾಲಯಗಳು ಚಿಂತನೆಯ ನಾಯಕರಾಗಬೇಕು – ಉಪರಾಷ್ಟ್ರಪತಿ

ಬಹುಶಿಸ್ತೀಯ ಸಂಶೋಧನೆ ಉತ್ತೇಜಿಸುವ ಮೂಲಕ ಭಾರತದ ಯುವ ಸಮುದಾಯಕ್ಕೆ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನಾ ವಿಶ್ವವಿದ್ಯಾಲಯ (ಎಂಇಆರ್|ಯು-ಮೆರು) ಭಾರತದ ಯುವಕರಿಗೆ ಹೊಸ ಅವಕಾಶಗಳನ್ನು ಸೃಜಿಸಲಿದೆ – ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್

“ಭಾರತದಲ್ಲಿ ಅಧ್ಯಯನ ಮಾಡಿ-ಭಾರತದಲ್ಲೇ ಉಳಿಯಿರಿ” ಕಾರ್ಯಕ್ರಮವು ಭಾರತವನ್ನು ಶೈಕ್ಷಣಿಕ ರಂಗದ ಜಾಗತಿಕ ತಾಣವಾಗಿ ರೂಪಿಸಲಿದೆ – ಶ್ರೀ ಧರ್ಮೇಂದ್ರ ಪ್ರಧಾನ್

ಶಿಕ್ಷಣದ ಜತೆಗೆ ಕೌಶಲ್ಯಾಭಿವೃದ್ಧಿಯನ್ನು ಸಂಯೋಜಿಸುವುದರಿಂದ ಸಾಮಾಜಿಕ-ಆರ್ಥಿಕ ಸಬಲೀಕರಣದ ಹೊಸ ಅವಕಾಶಗಳನ್ನು ತೆರೆಯಲಿದೆ – ಶ್ರೀ ಧರ್ಮೇಂದ್ರ ಪ್ರಧಾನ್

Posted On: 21 JUL 2021 3:12PM by PIB Bengaluru

.ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯವು ಆಯೋಜಿಸಿದ್ದ ಜಾಗತಿಕ ವಿಶ್ವವಿದ್ಯಾಲಯಗಳ ಸಮಾವೇಶ ಉದ್ದೇಶಿಸಿ ಭಾರತದ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಮುಖ್ಯ ಅತಿಥಿಯಾಗಿ ಭಾಷಣ ಮಾಡಿದರು. ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಸಹ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದರು. ಭವಿಷ್ಯದ ವಿಶ್ವವಿದ್ಯಾಲಯಗಳು; ಸಾಂಸ್ಥಿಕ ಪರಿಸರ ನಿರ್ಮಾಣ, ಸಾಮಾಜಿಕ ಜವಾಬ್ದಾರಿಗಳು ಮತ್ತು ಸಮುದಾಯ ಪರಿಣಾಮಗಳುಎಂಬುದು ಸಮಾವೇಶದ ಚರ್ಚಾ ವಿಷಯವಾಗಿದೆ.

 

ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಮಾತನಾಡಿ, ಹವಾಮಾನ ಬದಲಾವಣೆ, ಬಡತನದಂತಹ ಜಾಗತಿಕ ಸವಾಲುಗಳಿಗೆ ಪರಿಹಾರ ಹುಡುಕಲು ವಿಶ್ವವಿದ್ಯಾಲಯಗಳು ಚಿಂತನೆಯ ನಾಯಕರಾಗಿ ಹೊರಹೊಮ್ಮಬೇಕು. ವಿಶ್ವವಿದ್ಯಾಲಯಗಳು, ಇಡೀ ಜಗತ್ತು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕು. ಸರಕಾರಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಜಾರಿ ಮಾಡಲು ಮತ್ತು ಸೂಕ್ತವಾಗಿ ಬಳಸಿಕೊಳ್ಳಲು ಅನುವಾಗುವಂತೆ ವಿವಿಗಳು ಹೊಸ ಪರಿಕಲ್ಪನೆಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ಮಾತೃಭಾಷೆಯಲ್ಲಿ ಶಿಕ್ಷಣ ಕಲಿಯುವುದರಿಂದ ಸಿಗುವ ಅಪಾರ ಪ್ರಯೋಜನಗಳ ಕುರಿತು ಮಾತನಾಡಿದ ಅವರು, ಮಾತೃಭಾಷೆಯಿಂದ ಕಲಿಕೆಯು ಗ್ರಹಿಕೆ ಮತ್ತು ಗ್ರಹಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ. ಬೇರೊಂದು ಭಾಷೆಯಲ್ಲಿ ವಿಷಯವನ್ನು ಕಲಿಯುವಾಗ ಆತ, ಭಾಷೆಯನ್ನು ಪ್ರಬುದ್ಧವಾಗಿ ಕಲಿಯಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಪ್ರಯತ್ನಗಳನ್ನು ಹಾಕಬೇಕಾಗುತ್ತದೆ. ಅದೇ ಮಾತೃಭಾಷೆಯಲ್ಲಿ ಕಲಿಯುವಾಗ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಉಪರಾಷ್ಟ್ರಪತಿ ಪ್ರತಿಪಾದಿಸಿದರು.

ಭಾರತದ ಶ್ರೀಮಂತ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯ ಮೇಲೆ ಬೆಳಕು ಚೆಲ್ಲಿದ ಅವರು, ಭಾರತವು ನೂರಾರು ಭಾಷೆಗಳ, ಸಾವಿರಾರು ಉಪಭಾಷೆಗಳ  ತವರೂರಾಗಿದೆ. ನಮ್ಮ ಭಾಷಾ ವೈವಿಧ್ಯವು ನಮ್ಮ ಸಾಂಸ್ಕೃತಿಕ ಪರಂಪರೆಯ ಮೈಲಿಗಲ್ಲಾಗಿದೆ. ಮಾತೃಭಾಷೆಯ ಮಹತ್ವಕ್ಕೆ ಒತ್ತು ನೀಡಿದ ಉಪರಾಷ್ಟ್ರಪತಿ, “ನಮ್ಮ ತಾಯಿ ಭಾಷೆ, ನಮ್ಮ ಊರಿನ ಭಾಷೆ ನಮ್ಮೆಲ್ಲರಿಗೂ ಅತ್ಯಂತ ವಿಶೇಷವಾಗಿದೆ. ಏಕೆಂದರೆ, ನಾವು ಅದರೊಂದಿಗೆ ಹೊಕ್ಕಳುಬಳ್ಳಿಯ ರಕ್ತ ಸಂಬಂಧವನ್ನು ಹಂಚಿಕೊಂಡಿದ್ದೇವೆಎಂದರು.

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮಾತನಾಡಿ, ಭಾರತ ಸರ್ಕಾರವು ದೇಶದ ಶೈಕ್ಷಣಿಕ ವಲಯವನ್ನು ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ರೂಪಿಸಲು ಹಾಗೂ ಪರಿವರ್ತಿಸಲು ಬದ್ಧವಾಗಿದೆ. ಸಂಶೋಧನೆ ಮತ್ತು ಅನುಶೋಧನೆಯನ್ನು ಉತ್ತೇಜಿಸುವ ಜತೆಗೆ, ಜವಾಬ್ದಾರಿಯುತ ನಾಗರಿಕರನ್ನು ರೂಪಿಸಿ, ವಿಶ್ವ ಮಾನವರಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಭಾರತದ ಉನ್ನತ ಶಿಕ್ಷಣ ವಲಯದಲ್ಲಿ ಹೊಸ ಪರಿಕಲ್ಪನೆಗೆ ಒತ್ತು ನೀಡಿದೆ. ಆತ್ಮನಿರ್ಭರ್ ಭಾರತ ಕಟ್ಟುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಆದ್ಯತೆ ನೀಡಲಾಗಿದೆ. ಶಿಕ್ಷಣ ಗುಣಮಟ್ಟ, ಪಾಲು, ಲಭ್ಯತೆ ಮತ್ತು ಎಲ್ಲರಿಗೂ ಕೈಗೆಟಕುವ ಶಿಕ್ಷಣ ನಾಲ್ಕು ಆಧಾರ ಸ್ತಂಭಗಳಿಗೆ ಹೊಸ ನೀತಿಯಲ್ಲಿ  ಗಮನ ನೀಡಲಾಗಿದೆ. ಇದರಿಂದ ನವಭಾರತ ಉದಯವಾಗಲಿದೆ ಎಂದು ತಿಳಿಸಿದರು.

ಭಾರತದಲ್ಲಿ ಅಧ್ಯಯನ ನಡೆಸಿ-ಭಾರತದಲ್ಲೇ ಉಳಿಯಿರಿಎಂಬ ದೃಷ್ಟಿಕೋನಕ್ಕೆ ಸರ್ಕಾರ ಒತ್ತು ನೀಡಿದೆ. ಶಿಕ್ಷಣ ರಂಗದಲ್ಲಿ ಭಾರತವು ಜಾಗತಿಕ ಆಕರ್ಷಕ ತಾಣವಾಗಿ ರೂಪುಗೊಳ್ಳಲಿದೆ. ಕೇಂದ್ರ ಸರ್ಕಾರವು ದೇಶದ ಶೈಕ್ಷಣಿಕ ವಲಯವನ್ನು ಸಮಗ್ರ, ಹೊಸತನ, ಭಾಷಾ ವೈವಿಧ್ಯ ಮತ್ತು ಬಹುಶಿಸ್ತೀಯ ಕ್ಷೇತ್ರವಾಗಿ ಪರಿವರ್ತಿಸಲು ಪ್ರಯತ್ನಗಳನ್ನು ಹಾಕಿದೆ. ಭಾಷೆಯ ಕೊರತೆ ಅಥವಾ ಪ್ರಾದೇಶಿಕ ಭಾಷೆಗಳ ಅಡೆತಡೆಗಳಿಂದ ಯಾವೊಬ್ಬ ವಿದ್ಯಾರ್ಥಿಯು ನರಳದಂತೆ ಗಮನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನಾ ವಿಶ್ವವಿದ್ಯಾಲಯ(ಎಂಇಆರ್|ಯು-ಮೆರು) ಭಾರತದ ಯುವಕರಿಗೆ ಹೊಸ ಅವಕಾಶಗಳನ್ನು ಸೃಜಿಸಲಿದೆ. ಅಂತರ್-ಶಿಸ್ತೀಯ ಸಂಶೋಧನೆ ಉತ್ತೇಜಿಸುವ ಮೂಲಕ ಮೆರು, ಭಾರತವನ್ನು ಸಂಶೋಧನೆ ಮತ್ತು ಅಭಿವೃದ್ಧಿ ರಂಗದ ಜಾಗತಿಕ ತಾಣವಾಗಿ ರೂಪಿಸಲಿದೆ ಎಂದರು.

ಶಿಕ್ಷಣವನ್ನು ಕೌಶಲ್ಯಾಭಿವೃದ್ಧಿ ಜತೆ ಸಂಯೋಜಿಸಿದರೆ ಸಾಮಾಜಿಕ-ಆರ್ಥಿಕ ಸಬಲೀಕರಣದ ಹೊಸ ಅವಕಾಶ ಮಾರ್ಗಗಳು ತೆರೆಯಲಿವೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯನ್ನು ಸಮಗ್ರಗೊಳಿಸಲು ಅನುವು ಮಾಡಿಕೊಟ್ಟಿದ. ಇದರಿಂದ  ಭಾರತದಲ್ಲಿರುವ ಅಪಾರ ಯುವ ಸಮುದಾಯ ಜನಸಂಖ್ಯೆಯ ಲಾಭ ಪಡೆಯಲು ಸಾಧ್ಯವಾಗಲಿದೆ ಎಂದರು.

ದೇಶದಲ್ಲಿ ಕಾಣಿಸಿಕೊಂಡ ಕೋವಿಡ್-19 ಸಾಂಕ್ರಾಮಿಕ ಸೋಂಕು ವಿದ್ಯಾರ್ಥಿಗಳಿಗೆ ಆನ್|ಲೈನ್ ಕಲಿಕೆಗೆ ಅನುವು ಕಲ್ಪಿಸಿದೆ. ಜತೆಗೆ, ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಮತ್ತು ಬಳಕೆಯನ್ನು ಸರಾಗ ಮಾಡಿದೆ. ಒಟ್ಟಾರೆ ನಿರಂತರ ಕಲಿಕೆಗೆ ವೇದಿಕೆ ಸೃಷ್ಟಿಸಿದೆ. ಇದೇ ಕಲಿಕೆ ಪ್ರವೃತ್ತಿ ಮುಂದುವರಿಯಲಿದ್ದು, ಕಲಿಕೆಯ ಹೈಬ್ರಿಡ್ ವಿಧಾನಗಳನ್ನು ತೋರಿಸಿಕೊಟ್ಟಿದೆ. ನಿಟ್ಟಿನಲ್ಲಿ ನಮ್ಮ ಭವಿಷ್ಯದ ಯೋಜನೆಗಳು ಡಿಜಿಟಲ್ ಕಂದಕಗಳನ್ನು ಮುಚ್ಚುವುದೇ ಆಗಿದೆ ಎಂದರು.

ಸಮಾವೇಶ ಆಯೋಜಿಸಿರುವ ಆಯೋಜಕರಿಗೆ ಅಭಿನಂದನೆಗಳು. ಅವರ ಎಲ್ಲಾ ಪ್ರಯತ್ನಗಳ ಯಶಸ್ಸಿಗೆ ಶುಭ ಕಾಮನೆಗಳು ಎಂದು ಸಚಿವರು ತಿಳಿಸಿದರು.

ಯುಜಿಸಿ ಅಧ್ಯಕ್ಷ ಪ್ರೊಫೆಸರ್ ಡಾ. ಡಿ.ಪಿ. ಸಿಂಗ್, .ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ಕುಲಾಧಿಪತಿ ನವೀನ್ ಜಿಂದಾಲ್, ಸ್ಥಾಪಕ ಕುಲಪತಿ ಡಾ. ಸಿ. ರಾಜ್ ಕುಮಾರ್, ವಿವಿ ರಿಜಿಸ್ಟ್ರಾರ್ ಪ್ರೊಫೆಸರ್ ದಬಿರು ಶ್ರೀಧರ್ ಪಟ್ನಾಯಕ್ ಹಾಗೂ ದೇಶ ವಿದೇಶಗಳ ವಿವಿ ನಾಯಕರು, ಪ್ರತಿನಿಧಿಗಳು ಮತ್ತು ನಿಯೋಗಿಗಳು ಮತ್ತು ಬೋಧಕ ವರ್ಗ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

***



(Release ID: 1737548) Visitor Counter : 239