ಹಣಕಾಸು ಸಚಿವಾಲಯ
ಸಿಬಿಡಿಟಿ ಯು ಆದಾಯ ತೆರಿಗೆ ನಮೂನೆ 15 ಸಿಎ/ 15 ಸಿಬಿ ಯ ವಿದ್ಯುನ್ಮಾನವಾಗಿ ಸಲ್ಲಿಸುವುದರಲ್ಲಿ ಮತ್ತಷ್ಟು ಸಡಿಲಿಕೆಯನ್ನು ಮಾಡಿದೆ
Posted On:
20 JUL 2021 4:40PM by PIB Bengaluru
ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ನಮೂನೆ 15 ಸಿಎ/ 15 ಸಿಬಿಯನ್ನು ವಿದ್ಯುನ್ಮಾನವಾಗಿ ಸಲ್ಲಿಸುವ ಅವಶ್ಯಕತೆಯಿದೆ. ಈಗ ತೆರಿಗೆದಾರರು ಯಾವುದೇ ವಿದೇಶಿ ಪಾವತಿಗಾಗಿ ಅಧಿಕೃತ ವ್ಯಾಪಾರಿಗಳಿಗೆ ನಕಲನ್ನು ಸಲ್ಲಿಸುವ ಮೊದಲು, ಇ-ಫೈಲಿಂಗ್ ಪೋರ್ಟಲ್ನಲ್ಲಿ, ಅನ್ವಯವಾಗುವಲ್ಲಿ, ಫಾರ್ಮ್ 15 ಸಿಬಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪ್ರಮಾಣಪತ್ರದೊಂದಿಗೆ ಫಾರ್ಮ್ 15 ಸಿಎ ಅನ್ನು ಅಪ್ಲೋಡ್ ಮಾಡುತ್ತಿದ್ದಾರೆ.
www.incometax.gov.in ಪೋರ್ಟಲ್ನಲ್ಲಿ ಆದಾಯ ತೆರಿಗೆ ನಮೂನೆ 15 ಸಿಎ / 15 ಸಿಬಿಯನ್ನು ವಿದ್ಯುನ್ಮಾನವಾಗಿ ಸಲ್ಲಿಸುವಲ್ಲಿ ತೆರಿಗೆದಾರರು ವರದಿ ಮಾಡಿದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ತೆರಿಗೆದಾರರು 15 ಸಿಎ / 15 ಸಿಬಿ ನಮೂನೆಗಳನ್ನು ಜುಲೈ 15 ರವರೆಗೆ ಭೌತಿಕ ಸ್ವರೂಪದಲ್ಲಿ ಅಧಿಕೃತ ವ್ಯಾಪಾರಿಗಳಿಗೆ ಸಲ್ಲಿಸಬಹುದು ಎಂದು ಸಿಬಿಡಿಟಿಯಿಂದ ಮೊದಲೇ ನಿರ್ಧರಿಸಲಾಗಿತ್ತು.
ಈ ಮೇಲಿನ ದಿನಾಂಕವನ್ನು ಆಗಸ್ಟ್ 15,2021ರವರೆಗೆ ವಿಸ್ತರಿಸಲು ಈಗ ನಿರ್ಧರಿಸಲಾಗಿದೆ. ಹಾಗಾಗಿ, ತೆರಿಗೆದಾರರು ಈಗ ಆಗಸ್ಟ್ 15, 2021 ರವರೆಗೆ ಅಧಿಕೃತ ವ್ಯಾಪಾರಿಗಳಿಗೆ ನಮೂನೆಗಳನ್ನು ಭೌತಿಕವಾಗಿ ಸಲ್ಲಿಸಬಹುದು. ವಿದೇಶಿ ಪಾವತಿಯ ಉದ್ದೇಶಕ್ಕಾಗಿ ಅಧಿಕೃತ ವ್ಯಾಪಾರಿಗಳಿಗೆ ಅಂತಹ ನಮೂನೆಗಳನ್ನು ಆಗಸ್ಟ್ 15 ರವರೆಗೆ ಸ್ವೀಕರಿಸುವಂತೆ ಸೂಚಿಸಲಾಗಿದೆ.. ಡಾಕ್ಯುಮೆಂಟ್ ಗುರುತಿನ ಸಂಖ್ಯೆಯ ಉತ್ಪಾದನೆಯ ಉದ್ದೇಶಕ್ಕಾಗಿ ಈ ನಮೂನೆ ಗಳನ್ನು ನಂತರದ ದಿನಾಂಕದಂದು ಅಪ್ಲೋಡ್ ಮಾಡಲು ಹೊಸ ಇ-ಫೈಲಿಂಗ್ ಪೋರ್ಟಲ್ನಲ್ಲಿ ಸೌಲಭ್ಯವನ್ನು ಒದಗಿಸಲಾಗುವುದು.
***
(Release ID: 1737509)
Visitor Counter : 281