ಪ್ರವಾಸೋದ್ಯಮ ಸಚಿವಾಲಯ
ಭಾರತವನ್ನು ವೈದ್ಯಕೀಯ ಮತ್ತು ಆರೋಗ್ಯ ಪ್ರವಾಸೋದ್ಯಮ ಅಭಿವೃದ್ಧಿಯ ತಾಣವಾಗಿ ಅಭಿವೃದ್ಧಿಪಡಿಸಲು ಹಲವಾರು ಕ್ರಮ ಕೈಗೊಳ್ಳಲಾಗಿದೆ: ಶ್ರೀ ಜಿ. ಕಿಶನ್ ರೆಡ್ಡಿ
Posted On:
20 JUL 2021 4:45PM by PIB Bengaluru
ಪ್ರಮುಖ ಮುಖ್ಯಾಂಶಗಳು
- ವೈದ್ಯಕೀಯ ಕ್ಷೇಮ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಆಯುಷ್ ನಿಂದ ರಾಷ್ಟ್ರೀಯ ವೈದ್ಯಕೀಯ ಮತ್ತು ಕ್ಷೇಮ ಪ್ರವಾಸೋದ್ಯಮ ಮಂಡಳಿ ರಚನೆ
- ವೈದ್ಯಕೀಯ ಮತ್ತು ಕ್ಷೇಮ ಪ್ರವಾಸೋದ್ಯಮ ರಚನೆಗಾಗಿ ರಾಷ್ಟ್ರೀಯ ಕಾರ್ಯತಂತ್ರ ಮತ್ತು ನೀಲ ನಕ್ಷೆಯ ಕರಡು ರಚನೆ
- 166 ದೇಶಗಳಿಗೆ ಇ – ವೈದ್ಯಕೀಯ ವೀಸಾ ಪರಿಚಯಿಸಲಾಗಿದೆ
- ವೈದ್ಯಕೀಯ/ ಕ್ಷೇಮ ಪ್ರವಾಸೋದ್ಯಮ ಸೇವಾ ಪೂರೈಕೆದಾರರು ಮತ್ತು ಕೇಂದ್ರಗಳಿಗೆ ಮಾರುಕಟ್ಟೆ ಅಭಿವೃದ್ಧಿ ನೆರವು [ಎಂ.ಡಿ.ಎ] ಯೋಜನೆಯಡಿ ನೆರವು ಕಲ್ಪಿಸಲಾಗುತ್ತಿದೆ.
- ವರ್ಲ್ಡ್ ಟ್ರಾವಲ್ ಮಾರ್ಟ್ [ಲಂಡನ್]. ಐಟಿಬಿ, ಬರ್ಲಿನ್, ಅರಬಿಯನ್ ಟ್ರಾವಲ್ ಮಾರ್ಟ್ ಮತ್ತಿತರ ಜಾಗತಿಕ ವಲಯಗಳಲ್ಲಿ ವೈದ್ಯಕೀಯ ಮತ್ತು ಸಾಸ್ಥ್ಯ ಪ್ರವಾಸೋದ್ಯಮ ಉತ್ತೇಜನ
ಭಾರತವನ್ನು ವೈದ್ಯಕೀಯ ಮತ್ತು ಕ್ಷೇಮ ಪ್ರವಾಸೋದ್ಯಮ ತಾಣವನ್ನಾಗಿ ಉತ್ತೇಜಿಸಲು ಪ್ರವಾಸೋದ್ಯಮ ಸಚಿವಾಲಯ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕ್ಷೇಮ ಪ್ರವಾಸೋದ್ಯಮ, ಮತ್ತು ಯೋಗ, ಆಯುರ್ವೇದ ಪ್ರವಾಸೋದ್ಯಮಕ್ಕಾಗಿಯೇ ಮೀಸಲಾದ ಸಾಂಸ್ಥಿಕ ಚೌಕಟ್ಟನ್ನು ಒದಗಿಸಲು ಮತ್ತು ಭಾರತೀಯ ವೈದ್ಯ ಪದ್ಧತಿಗಳನ್ನು ಒಳಗೊಂಡಿರುವ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ [ಆಯುಷ್] ಪ್ರೋತ್ಸಾಹಕ್ಕಾಗಿ ಸಚಿವಾಲಯ ರಾಷ್ಟ್ರೀಯ ವೈದ್ಯಕೀಯ ಮತ್ತು ಕ್ಷೇಮ ಪ್ರವಾಸೋದ್ಯಮ ಮಂಡಳಿಯನ್ನು ರಚಿಸಿದ್ದು, [ಪ್ರವಾಸೋದ್ಯಮ] ಸಚಿವರು ಇದರ ಅಧ್ಯಕ್ಷರಾಗಿರುತ್ತಾರೆ. ಪ್ರವಾಸೋದ್ಯಮದ ಈ ವಿಭಾಗವನ್ನು ಸಂಘಟಿತ ರೀತಿಯಲ್ಲಿ ಉತ್ತೇಜಿಸಲು ಸಂಘಟನಾ ಸಂಸ್ಥೆಯಾಗಿ ಮಂಡಳಿ ಕಾರ್ಯನಿರ್ವಹಿಸುತ್ತದೆ.
ವೈದ್ಯಕೀಯ ಮತ್ತು ಕ್ಷೇಮ ಪ್ರವಾಸೋದ್ಯಮ ಅನುಷ್ಠಾನಕ್ಕಾಗಿ ಪ್ರವಾಸೋದ್ಯಮ ಸಚಿವಾಲಯ ರಾಷ್ಟ್ರೀಯ ಕಾರ್ಯತಂತ್ರ ಮತ್ತು ನೀಲ ನಕ್ಷೆ ರಚಿಸಿದೆ. ರಾಷ್ಟ್ರೀಯ ಕಾರ್ಯತಂತ್ರ ಮತ್ತು ನೀಲ ನಕ್ಷೆ ಕುರಿತಂತೆ ಗುರುತಿಸಲಾದ ಕೇಂದ್ರ ಸಚಿವಾಲಯಗಳು, ಎಲ್ಲಾ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೈಗಾರಿಕಾ ಪಾಲುದಾರರಿಂದ ಪ್ರತಿಕ್ರಿಯೆ, ಸಲಹೆ/ ಸೂಚನೆಗಳನ್ನು ಆಹ್ವಾನಿಸಿದೆ.
ವೈದ್ಯಕೀಯ ಮತ್ತು ಕ್ಷೇಮ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಕರಪತ್ರ, ಸಿಡಿ ಮತ್ತು ಇತರೆ ಪ್ರಚಾರ ಸಾಮಗ್ರಿಗಳನ್ನು ಒದಗಿಸಲಾಗಿದೆ ಮತ್ತು ಗುರಿ ನಿಗದಿಪಡಿಸಿರುವ ಮಾರುಕಟ್ಟೆಗಳಿಗೆ ಪ್ರಚಾರಕ್ಕಾಗಿ ಇವುಗಳನ್ನು ವ್ಯಾಪಕವಾಗಿ ವಿತರಿಸಲಾಗುತ್ತಿದೆ ಹಾಗೂ ಪ್ರಸಾರ ಮಾಡಲಾಗುತ್ತಿದೆ.
ವೈದ್ಯಕೀಯ ಮತ್ತು ಕ್ಷೇಮ ಪ್ರವಾಸೋದ್ಯಮವನ್ನು ವಿಶೇಷವಾಗಿ ವರ್ಲ್ಡ್ ಟ್ರಾವಲ್ ಮಾರ್ಟ್ [ಲಂಡನ್]. ಐಟಿಬಿ, ಬರ್ಲಿನ್, ಅರಬಿಯನ್ ಟ್ರಾವಲ್ ಮಾರ್ಟ್ ಮತ್ತಿತರ ಜಾಗತಿಕ ವಲಯಗಳಲ್ಲಿ ಉತ್ತೇಜಿಸಲಾಗುತ್ತಿದೆ. ವೈದ್ಯಕೀಯ ವೀಸಾ ಪರಿಚಯಿಸಲಾಗಿದ್ದು, ಇದರಿಂದ ವಿದೇಶಿ ಪ್ರವಾಸಿಗರು ನಿರ್ದಿಷ್ಟವಾಗಿ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಲು ಅವಕಾಶ ಕಲ್ಪಿಸಲಾಗಿದೆ. ಇ – ವೈದ್ಯಕೀಯ ವೀಸಾವನ್ನು 166 ರಾಷ್ಟ್ರಗಳಲ್ಲಿ ಪರಿಚಯಿಸಲಾಗಿದೆ. ವೈದ್ಯಕೀಯ/ ಕ್ಷೇಮ ಪ್ರವಾಸೋದ್ಯಮ ಸೇವಾ ಪೂರೈಕೆದಾರರು ಮತ್ತು ಕೇಂದ್ರಗಳಿಗೆ ಕೇಂದ್ರದ ಎನ್.ಎ..ಬಿ.ಎಚ್ ಮಾನ್ಯತೆ ಪಡೆದವರಿಗೆ ಮಾರುಕಟ್ಟೆ ಅಭಿವೃದ್ಧಿ ನೆರವು [ಎಂ.ಡಿ.ಎ] ಯೋಜನೆಯಡಿ ನೆರವು ಕಲ್ಪಿಸಲಾಗುತ್ತಿದೆ. ವೈದ್ಯಕೀಯ/ ಪ್ರವಾಸೋದ್ಯಮ ಮೇಳಗಳು, ವೈದ್ಯಕೀಯ ಸಮ್ಮೇಳನಗಳು, ಕ್ಷೇಮ ಸಮ್ಮೇಳನಗಳು, ಕ್ಷೇಮ ಮೇಳಗಳು, ಸಂಬಂಧಿತ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವವರಿಗೆ ಸೌಲಭ್ಯ ದೊರೆಯಲಿದೆ.
ಈ ಮಾಹಿತಿಯನ್ನು ಪ್ರವಾಸೋದ್ಯಮ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
***
(Release ID: 1737506)
Visitor Counter : 214