ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ತಾಜಾ ಮಾಹಿತಿ


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 43.25 ಕೋಟಿಗೂ ಹೆಚ್ಚು ಲಸಿಕೆ ಡೋಸ್ ಗಳ ಪೂರೈಕೆ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 2.88 ಕೋಟಿಗೂ ಹೆಚ್ಚು ಲಸಿಕೆ ಡೋಸ್ ಗಳು ಬಾಕಿ ಇವೆ

Posted On: 21 JUL 2021 10:14AM by PIB Bengaluru

ದೇಶಾದ್ಯಂತ ಕೋವಿಡ್ – 19 ಲಸಿಕೆ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಮತ್ತು ಲಸಿಕಾ ಅಭಿಯಾನದ ವೇಗ ತ್ವರಿತಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. 2021 ಜೂನ್ 21 ರಿಂದ ಹೊಸ ಸಾರ್ವತ್ರಿಕ ಕೋವಿಡ್ – 19 ಲಸಿಕೆ ಅಭಿಯಾನ ಪ್ರಾರಂಭವಾಗಿದೆ. ಹೆಚ್ಚು ಡೋಸ್ ಗಳ ಲಭ್ಯತೆಯಿಂದಾಗಿ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗಿದ್ದು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಂದಾಗಿಯೇ ಲಸಿಕೆ ಲಭ್ಯತೆಯನ್ನು ಗೋಚರಿಸುವಂತೆ ಮಾಡಲಾಗಿದೆ. ಇದರಿಂದ ಉತ್ತಮವಾಗಿ ಯೋಜನೆ ರೂಪಿಸಲು ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸಲು ಸಾಧ್ಯವಾಗಿದೆ.

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ ಭಾರತ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬೆಂಬಲ ನೀಡುತ್ತಿದ್ದು, ಉಚಿತವಾಗಿ ಕೋವಿಡ್ – 19 ಲಸಿಕೆ ಒದಗಿಸುತ್ತಿದೆ. ಹೊಸ ಸಾರ್ವತ್ರಿಕರಣದ ಕೋವಿಡ್ – 19 ಲಸಿಕೆ ಅಭಿಯಾನದಡಿ ಲಸಿಕೆ ಉತ್ಪಾದಕರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಖರೀದಿಸಲು ನೆರವಾಗುವ ಮತ್ತು ಶೇ 75 ರಷ್ಟು [ಉಚಿತವಾಗಿ] ಪೂರೈಸುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ.

ಲಸಿಕೆ ಡೋಸ್ ಗಳು

(2021, ಜುಲೈ 21 ವರೆಗೆ)

 

ಪೂರೈಕೆ

 

43,25,17,330

 

ಪೂರೈಕೆ ಹಂತದಲ್ಲಿ

 

53,38,210

 

ಬಳಕೆ

 

40,36,44,231

 

ಬಾಕಿ ಲಭ್ಯತೆ

 

 

2,88,73,099

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 43.25 ಕೋಟಿ (43,25,17,330) ಲಸಿಕೆ ಡೋಸ್ ಗಳನ್ನು ಎಲ್ಲಾ ಮೂಲಗಳಿಂದ ವರೆಗೆ ಪೂರೈಸಲಾಗಿದೆ ಮತ್ತು 53,38,210 ಲಸಿಕೆ ಡೋಸ್ ಗಳು ಪೂರೈಕೆ ಹಂತದಲ್ಲಿದೆ.

ಪೈಕಿ [ಇಂದು ಬೆಳಿಗ್ಗೆ 8 ಗಂಟೆವರೆಗೆ ದೊರೆತ ದತ್ತಾಂಶದಂತೆ] ವ್ಯರ್ಥವಾದದ್ದು ಸೇರಿ 40,36,44,231 ಡೋಸ್ ಲಸಿಕೆ ಬಳಕೆಯಾಗಿದೆ.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 2.88 ಕೋಟಿ (2,88,73,099) ಗೂ ಹೆಚ್ಚು ಬಾಕಿ ಮತ್ತು ಬಳಕೆಯಾಗದ ಕೋವಿಡ್ ಲಸಿಕೆ ಡೋಸ್ ಗಳು ಲಭ್ಯವಿದೆ.

***


(Release ID: 1737478) Visitor Counter : 283