ಹಣಕಾಸು ಸಚಿವಾಲಯ

ಅಮೆರಿಕ – ಭಾರತ ಉದ್ಯಮ ಮಂಡಳಿಯ ದುಂಡು ಮೇಜಿನ ಸಭೆ (ಯುಎಸ್ಐಬಿಸಿ) ಉದ್ದೇಶಿಸಿ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಭಾಷಣ


‘ಭಾರತದ ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿಯನ್ನು ಗರಿಷ್ಠಗೊಳಿಸುವ ಮೂಲಕ ಅಮೆರಿಕ ಹೂಡಿಕೆಯ ಜಾಗತಿಕ ಗಮ್ಯತಾಣ’ವಾಗಿಸಲು ಒತ್ತು

Posted On: 16 JUL 2021 9:58PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ಶ್ರೀ ನಿರ್ಮಲಾ ಸೀತಾರಾಮನ್ ಅವರು ಅಮೆರಿಕ ಭಾರತ ಉದ್ಯಮ ಮಂಡಳಿಯ ದುಂಡು ಮೇಜಿನ ಸಭೆ ಉದ್ದೇಶಿಸಿ ಭಾಷಣ ಮಾಡಿದರು. ವೀಡಿಯೊ ಕಾನ್ಫರೆನ್ಸ್ ಉದ್ದೇಶಿಸಿ ಮಾತನಾಡಿದ ಅವರು, ‘ಭಾರತದ ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿಯನ್ನು ಗರಿಷ್ಠಗೊಳಿಸುವ ಮೂಲಕ ಭಾರತವನ್ನು ಅಮೆರಿಕ ಹೂಡಿಕೆಯ ಜಾಗತಿಕ ಆಕರ್ಷಕ ತಾಣವಾಗಿಸುವ ವಿಷಯಕ್ಕೆ ಅವರು ಒತ್ತು ನೀಡಿದರು. ಉದ್ಯಮ ಮಂಡಳಿಯ ದುಂಡು ಮೇಜಿನ ಸಭೆಯಲ್ಲಿ ಜನರಲ್ ಎಲೆಕ್ಟ್ರಿಕ್, ಬಕ್ಸ್ ಟರ್ ಹೆಲ್ತ್ ಕೇರ್ ಯುಎಸ್ಎ, ಬ್ರಾಂಬಲ್ಸ್ & ಮೆಕ್ ಲೆನನ್ ಕಂಪನೀಸ್, ಪೆಪ್ಸಿಕೊ ಸೇರಿದಂತೆ ಹಲವು ಅಮೆರಿಕ ಕಂಪನಿಗಳ ಬೃಹತ್ ಹೂಡಿಕೆದಾರರು ಪಾಲ್ಗೊಂಡಿದ್ದರು.

ಹಣಕಾಸು ಸಚಿವರು ಮತ್ತು ಭಾರತ ಸರ್ಕಾರದ ಉನ್ನತಾಧಿಕಾರಿಗಳ ಜತೆ ಮಾತುಕತೆ, ಸಂವಾದದಲ್ಲಿ ತೊಡಗಿಸಿಕೊಳ್ಳಲು ದುಂಡು ಮೇಜಿನ ಸಭೆಯಲ್ಲಿ ಹೂಡಿಕೆದಾರರಿಗೆ ಅವಕಾಶ ಕಲ್ಪಿಸಲಾಗಿತ್ತು. ಜೀವ ವಿಜ್ಞಾನ, ಹಸಿರು ಇಂಧನ, ಮೂಲಸೌಕರ್ಯ, ವಿಮೆ, ರಕ್ಷಣಾ ವಲಯ, ಭದ್ರತೆ, ಉತ್ಪಾದನೆ, ನವೀಕರಿಸಬಹುದಾದ ಇಂಧನ, ವಿದ್ಯುತ್, ಔಷಧ ವಲಯ, ಜವಳಿ, ಆತಿಥ್ಯ ಮತ್ತು ಡಿಜಿಟಲ್ ಆರ್ಥಿಕತೆ ವಲಯಗಳ ಮೇಲೆ ಚರ್ಚೆ ಮತ್ತು ಸಂವಾದ ನಡೆಯಿತು.

ಭಾರತದಲ್ಲಿ ಕೋವಿಡ್-19 2ನೇ ಅಲೆ ಕಾಣಿಸಿಕೊಂಡಾಗ ಜಾಗತಿಕ ಕಾರ್ಯಪಡೆ ಸೃಜಿಸಿ ಭಾರತಕ್ಕೆ ಸಂಪನ್ಮೂಲ ಕ್ರೋಡೀಕರಿಸಲು ಅಮೆರಿಕದ ಪ್ರಮುಖ 40 ಕಂಪನಿಗಳ ಸಿಇಒಗಳು ಮತ್ತು ಉನ್ನತಾಧಿಕಾರಿಗಳು ನಡೆಸಿದ ಪ್ರಯತ್ನಗಳು ಮತ್ತು ಹೋರಾಟಗಳನ್ನು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಭೆಯಲ್ಲಿ ಕೃತಜ್ಞತೆಯಿಂದ ಸ್ಮರಿಸಿದರು. ಭಾರತ ಮತ್ತು ಅಮೆರಿಕ 500 ಶತಕೋಟಿ ಡಾಲರ್ ದ್ವಿಮುಖ ವ್ಯಾಪಾರ ವಹಿವಾಟು ನಡೆಸುವ ಮಹತ್ವಾಕಾಂಕ್ಷಿ ಗುರಿ ಹಾಕಿಕೊಂಡಿವೆ ಎಂದು ಅವರು ಸಭೆಗೆ ತಿಳಿಸಿದರು.

ಭಾರತ ಸರ್ಕಾರ ಇತ್ತೀಚೆಗೆ ಘೋಷಿಸಿರುವ ಉತ್ತೇಜನಾ ಪ್ಯಾಕೇಜ್ ನಲ್ಲಿ ಬೃಹತ್ ಜಾಗತಿಕ ಹೂಡಿಕೆದಾರರ ಮೂಲ ಅಗತ್ಯಗಳಿಗೆ ಸ್ಪಂದಿಸಲು ಒತ್ತು ನೀಡಲಾಗಿದೆ. ಭಾರತವನ್ನು ಜಾಗತಿಕ ಹೂಡಿಕೆಯ ಗಮ್ಯತಾಣವಾಗಿ ರೂಪಿಸಲು ಭಾರತ ಸರ್ಕಾರವು ಸ್ಥಿರವಾಗಿ ಮತ್ತು ನಿರಂತರವಾಗಿ ವ್ಯಾಪಕ ಸುಧಾರಣೆಗಳನ್ನು ತರುತ್ತಾ ಬಂದಿದೆ. ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಯಾಗಿ ರೂಪಿಸಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಾ ಬಂದಿದೆ ಎಂದು ಅವರು ಹೂಡಿಕೆದಾರರಿಗೆ ಮನವರಿಕೆ ಮಾಡಿದರು. ಗುಜರಾತಿನ ಗಿಫ್ಟ್ ಸಿಟಿಯಲ್ಲಿ ಸ್ಥಾಪಿಸಿರುವ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ(ಐಎಫ್ಎಸ್ ಸಿ)ವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ವರ್ಷದ ಬಜೆಟ್ ನಲ್ಲಿ ಆದ್ಯತೆಯ ಗಮನ ನೀಡಲಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ(ಐಎಫ್ಎಸ್ ಸಿ)ವನ್ನು ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಕೇಂದ್ರವಾಗಿ ರೂಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಭಾರತದ ಅರ್ಥ ವ್ಯವಸ್ಥೆ ಮತ್ತು ಭಾಗದ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗಿ ಹಣಕಾಸು ಚಟುವಟಿಕೆಗಳು ಗರಿಗೆದರುವಂತೆ ಕೇಂದ್ರವನ್ನು ಸ್ಪರ್ಧಾತ್ಮಕ ತಾಣವಾಗಿಸಲು ಬಜೆಟ್|ನಲ್ಲಿ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೂಡಿಕೆದಾರರ ಗಮನಕ್ಕೆ ತಂದರು.

ನಿರ್ಮಲಾ ಸೀತಾರಾಮನ್ ಅವರು ಹೂಡಿಕೆದಾರರಿಗೆ ನೀಡಿದ ಪ್ರಮುಖ ಸಂದೇಶಗಳು ಇಂತಿವೆ:

  • ಕೋವಿಡ್ ಸಂಕಷ್ಟ ಸಮಯದಲ್ಲಿ ಕೈಗೊಂಡ ಬಲಿಷ್ಠ ಮತ್ತು ಗುಣಮಟ್ಟದ ಸುಧಾರಣೆಗಳು ಮತ್ತು ಪರಿಹಾರ ಕ್ರಮಗಳು ಮತ್ತು ದೇಶವ್ಯಾಪಿ ಬೃಹತ್ ಲಸಿಕಾ ಅಭಿಯಾನದಿಂದ ಹೊಸ ಕೋವಿಡ್ ಸೋಂಕು ತೀವ್ರ ಕುಸಿತ ಕಂಡಿದೆ.
  • ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಬೃಹತ್ ಅರ್ಥ ವ್ಯವಸ್ಥೆಯಲ್ಲಿ ಸ್ಥಿರತೆ ಮತ್ತು ತ್ವರಿತ ಆರ್ಥಿಕ ಚೇತರಿಕೆ ಮುಂದುವರಿದಿದೆ.
  • ಹೂಡಿಕೆಯ ಗಮ್ಯತಾಣವಾಗಿ ಭಾರತದ ಸಾಮರ್ಥ್ಯ ಮತ್ತು ಅನುಕೂಲಗಳು ಬಲಗೊಂಡಿವೆ.
  • ಆತ್ಮನಿರ್ಭರ್ ಭಾರತ ನಿರ್ಮಾಣದ ದೃಷ್ಟಿಕೋನ ಬಲವಾಗಿದೆ.
  • ಮೂಲಸೌಕರ್ಯ ಅಭಿವೃದ್ಧಿ ಕೇಂದ್ರಿತ ಆರ್ಥಿಕ ಪ್ರಗತಿಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
  • ಹೂಡಿಕೆದಾರರಿಗೆ ನಾನಾ ವಲಯಗಳಲ್ಲಿ ಹೂಡಿಕೆ ಅವಕಾಶಗಳನ್ನು ಸೃಜಿಸಲಾಗಿದೆ.
  • ಕಳೆದ 6 ವರ್ಷಗಳಿಂದ ದೇಶವು ಸುಧಾರಣೆಗಳ ಜಾರಿಯ ಪಥದಲ್ಲಿ ಮುನ್ನಡೆದಿದೆ.

ಸಮಾಪನ ಭಾಷಣದಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಆಧುನಿಕ ಸ್ವಾವಲಂಬಿ ಭಾರತ ನಿರ್ಮಾಣದ ಒಟ್ಟಾರೆ ಮುನ್ನೋಟಕ್ಕೆ ಒತ್ತು ನೀಡಿದರು. ಭಾರತವು ಅಮೆರಿಕ ಹೂಡಿಕೆದಾರರ ಜತೆ ದೀರ್ಘಕಾಲೀನ ಸಂಬಂಧ ಹೊಂದಲು ಬಯಸುತ್ತಿದೆ ಮತ್ತು ಬದ್ಧವಾಗಿದೆ ಎಂದರು.

ನಿರ್ಮಲಾ ಸೀತಾರಾಮನ್ ಅವರು ಒತ್ತು ನೀಡಿರುವ ಪ್ರಮುಖಾಂಶಗಳು ಇಂತಿವೆ.

  • ಭಾರತವನ್ನು ಹೂಡಿಕೆದಾರ-ಸ್ನೇಹಿ ಆಕರ್ಷಕ ತಾಣವಾಗಿ ರೂಪಿಸಲು ಸ್ಥಿರ ಮತ್ತು ನಿರಂತರ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ.
  • ರೋಮಾಂಚಕ ಮತ್ತು ಸ್ಪಂದನಾಶೀಲ ಹಣಕಾಸು ಮಾರುಕಟ್ಟೆ ರೂಪಿಸಲು ಒತ್ತು
  • ಮೂಲಸೌಕರ್ಯ ವಲಯಕ್ಕೆ ಬೃಹತ್ ಹೂಡಿಕೆ ಹರಿದು ಬರುತ್ತಿದೆ.
  • ಕೋವಿಡ್-19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ನಂತರ ಭಾರತ ಅರ್ಥ ವ್ಯವಸ್ಥೆಯ ತ್ವರಿತ ಚೇತರಿಕೆ
  • ಭಾರತದಲ್ಲಿ ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿಗೆ ಅದ್ಭುತ ಸಾಮರ್ಥ್ಯವಿದೆ.

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶ್ರೀ ಅಜಯ್ ಸೇಥ್ ಮಾತನಾಡಿ, ಭಾರತವು ನೀತಿ ನಿರೂಪಣೆ ಮತ್ತು ತೆರಿಗೆ ವ್ಯವಸ್ಥೆಯಲ್ಲಿ ಪ್ರಗತಿ ಕಾಣುತ್ತಿದೆ. -ವೇ ಬಿಲ್ ವ್ಯವಸ್ಥೆ ರೂಪಿಸಿರುವುದರಿಂದ ರಾಜ್ಯಗಳೊಳಗೆ ಮತ್ತು ರಾಜ್ಯಗಳ ನಡುವೆ ಸರಕುಗಳ ತ್ವರಿತ ಮತ್ತು ತಡೆರಹಿತ ಸಾಗಣೆಗೆ ಉತ್ತೇಜನ ಸಿಕ್ಕಿದೆ ಎಂದರು. ವರ್ಷದ ಜವಾಬ್ದಾರಿಯುತ ಮತ್ತು ಸ್ಪಂದನಾಶೀಲ ಬಜೆಟ್|ನಲ್ಲಿ ಹೂಡಿಕೆ ಮತ್ತು ತೆರಿಗೆ ಮೌಲ್ಯಮಾಪನ ಸಮಸ್ಯೆ ಮತ್ತು ವಿವಾದಗಳನ್ನು ಪರಿಹರಿಸಲಾಗಿದೆ. ಬಹುತೇಕ ವಲಯಗಳ ಸಾರ್ವಜನಿಕ ಸ್ವತ್ತುಗಳ ಮಾರಾಟ ಮತ್ತು ಖಾಸಗೀಕರಣಕ್ಕೆ ಗಮನ ಹರಿಸಲಾಗಿದೆ ಎಂದರು.

ಯುಎಸ್ಐಬಿಸಿ ಕುರಿತು

ಅಮೆರಿಕ ಭಾರತ ಉದ್ಯಮ ಮಂಡಳಿಯನ್ನು 1975ರಲ್ಲಿ ಸ್ಥಾಪಿಸಲಾಗಿದ್ದು, ಉಭಯ ರಾಷ್ಟ್ರಗಳ ಖಾಸಗಿ ಕಂಪನಿಗಳ ಬೃಹತ್ ಹೂಡಿಕೆ ಆಕರ್ಷಿಸಲು ಮತ್ತು ಉದ್ಯಮ ವ್ಯವಹಾರಗಳನ್ನು ಹೆಚ್ಚಿಸುವ, ಉತ್ತೇಜಿಸುವ ಉದ್ಯಮ ಸಂಘಟನೆ ಇದಾಗಿದೆ.

ಎರಡೂ ರಾಷ್ಟ್ರಗಳ ಉದ್ಯಮ ವ್ಯವಹಾರಗಳು ಸುಲಭವಾಗಿ ನಡೆಯುವಂತೆ ಮಾಡುವುದು, ಹೆಚ್ಚಿನ ದಕ್ಷತೆ ತರುವುದು ಮತ್ತು ಲಾಭದಾಯಕವಾಗಿಸುವುದು ಸಂಘಟನೆಯ ಉದ್ದೇಶವಾಗಿದೆ. ಇದು ವಿಶ್ವದ 2 ಬೃಹತ್ ಪ್ರಜಾಸತ್ತಾತ್ಮಕ ರಾಷ್ಟ್ರಗಳನ್ನು ಬೆಸೆಯುವ ಸೂಕ್ತ ವೇದಿಕೆಯಾಗಿದೆ. ಉದ್ಯಮ ವ್ಯವಹಾರಗಳಿಗೆ ಎದುರಾಗುವ ಸವಾಲುಗಳಿಗೆ ಸ್ಥಳೀಯವಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಸುಸ್ಥಿರ ಪರಿಹಾರ ನೀಡಲು ಸಂಘಟನೆ ಸ್ಫೂರ್ತಿ ನೀಡುತ್ತಿದೆ.

***



(Release ID: 1736436) Visitor Counter : 192