ಹಣಕಾಸು ಸಚಿವಾಲಯ

ಜಿಎಸ್ಟಿ ಪರಿಹಾರಕ್ಕೆ ಬದಲಾಗಿ ಮತ್ತೆ ಮತ್ತೆ ಸಾಲ ಸೌಲಭ್ಯ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ  ಭಾರತ ಸರ್ಕಾರದ 75 ಸಾವಿರ ಕೋಟಿ ರೂ. ಬಿಡುಗಡೆಯು 2021-22ರ ಸಾಲಿನ ಪ್ರಥಮಾರ್ಧದಲ್ಲಿ ಭಾರತ ಸರ್ಕಾರದ ಸಾಲ ಪಡೆಯುವ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡುವುದಿಲ್ಲ 

Posted On: 15 JUL 2021 7:06PM by PIB Bengaluru

ಜಿಎಸ್ಟಿ ಪರಿಹಾರಕ್ಕೆ ಬದಲಾಗಿ ಮತ್ತೆ ಮತ್ತೆ ಸಾಲ ಪಡೆಯುವ ಸೌಲಭ್ಯದ ಅಡಿಯಲ್ಲಿ ರಾಜ್ಯಗಳು ಮತ್ತು ಶಾಸನ ಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳಿಗೆ 75,000 ಕೋಟಿ ರೂ.ಗಳನ್ನು ಕೇಂದ್ರ ಹಣಕಾಸು ಸಚಿವಾಲಯ ಇಂದು ಬಿಡುಗಡೆ ಮಾಡಿದೆ.

ಆದಾಗ್ಯೂ, ಭಾರತ ಸರ್ಕಾರದ ಸಾಲ ಪಡೆಯುವ ಕಾರ್ಯಕ್ರಮವು ಪ್ರಸಕ್ತ ಹಣಕಾಸು ವರ್ಷದ ಪ್ರಥಮಾರ್ಧದ ಅವಧಿಯಲ್ಲಿ, 2021 ಮಾರ್ಚ್ 31ರಂದು ಪ್ರಕಟಿಸಲಾದಂತೆ ಏಪ್ರಿಲ್ 2021 - ಸೆಪ್ಟೆಂಬರ್ 2021 ನಡುವಿನ ಮಾರುಕಟ್ಟೆಯಾಗುವ ದಿನಾಂಕದ ಭದ್ರತೆಗಳಿಗಾಗಿ ವಿತರಣಾ ಕ್ಯಾಲೆಂಡರ್ನಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ.

***


(Release ID: 1736028) Visitor Counter : 232


Read this release in: English , Urdu , Hindi , Tamil