ನಾಗರೀಕ ವಿಮಾನಯಾನ ಸಚಿವಾಲಯ
ನಾಗರಿಕ ವಿಮಾನಯಾನ ಸಚಿವಾಲಯದಿಂದ ಡ್ರೋನ್ ನಿಯಮಾವಳಿಗಳು, 2021 ಕರಡು ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ
Posted On:
15 JUL 2021 11:27AM by PIB Bengaluru
ನಾಗರಿಕ ವಿಮಾನಯಾನ ಸಚಿವಾಲಯವು ಸಾರ್ವಜನಿಕ ಸಮಾಲೋಚನೆಗಾಗಿ ನವೀಕರಿಸಿದ - ಡ್ರೋನ್ ನಿಯಮಾವಳಿಗಳು, 2021 ಅನ್ನು ಬಿಡುಗಡೆ ಮಾಡಿದೆ. ವಿಶ್ವಾಸ, ಸ್ವಯಂ-ಪ್ರಮಾಣೀಕರಣ ಮತ್ತು ಆಕ್ರಮಣಕಾರಿಯಲ್ಲದ ಮೇಲ್ವಿಚಾರಣೆಯ ಆಧಾರದಲ್ಲಿ ರೂಪಿಸಲಾಗಿರುವ ಡ್ರೋನ್ ನಿಯಮಾವಳಿಗಳು, 2021, ಯುಎಎಸ್ ನಿಯಮಾವಳಿಗಳು 2021 (ಮಾರ್ಚ್ 12, 2021 ರಂದು ಬಿಡುಗಡೆಯಾಗಿದ್ದ) ಬದಲಿಗೆ ಜಾರಿಯಾಗುತ್ತವೆ. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು 5 ಆಗಸ್ಟ್ 2021 ರೊಳಗೆ ಸಲ್ಲಿಸಬಹುದು.
ಡ್ರೋನ್ ನಿಯಮಾವಳಿಗಳು, 2021 ಕರಡಿನ ಪ್ರಮುಖ ಅಂಶಗಳು:
- ಅನುಮೋದನೆಗಳನ್ನು ರದ್ದುಪಡಿಸಲಾಗಿದೆ: ವಿಶಿಷ್ಟ ದೃಢೀಕರಣ ಸಂಖ್ಯೆ, ವಿಶಿಷ್ಟ ಮೂಲಮಾದರಿ ಗುರುತಿನ ಸಂಖ್ಯೆ, ಗುಣಮಟ್ಟ ಪ್ರಮಾಣಪತ್ರ, ನಿರ್ವಹಣೆಯ ಪ್ರಮಾಣಪತ್ರ, ಆಮದು ಪ್ರಮಾಣಪತ್ರ, ಅಸ್ತಿತ್ವದಲ್ಲಿರುವ ಡ್ರೋನ್‌ಗಳ ಸ್ವೀಕಾರ, ಆಪರೇಟರ್ ಪರವಾನಗಿ, ಆರ್ & ಡಿ ಸಂಘಟನೆಯ ದೃಢೀಕರಣ, ವಿದ್ಯಾರ್ಥಿ ರಿಮೋಟ್ ಪೈಲಟ್ ಪರವಾನಗಿ, ರಿಮೋಟ್ ಪೈಲಟ್ ಬೋಧಕರ ದೃಢೀಕರಣ, ಡ್ರೋನ್ ಪೋರ್ಟ್ ದೃಢೀಕರಣ ಇತ್ಯಾದಿ.
- ಫಾರ್ಮ್‌ಗಳ ಸಂಖ್ಯೆಯನ್ನು 25 ರಿಂದ 6 ಕ್ಕೆ ಇಳಿಸಲಾಗಿದೆ.
- ಶುಲ್ಕವನ್ನು ಅತ್ಯಂತ ಕಡಿಮೆ ಮಾಡಲಾಗಿದೆ. ಡ್ರೋನ್ ಗಾತ್ರಕ್ಕೂ ಶುಲಕ್ಕ್ಕೂ ಸಂಬಂಧವಿರುವುದಿಲ್ಲ.
- ಸುರಕ್ಷತಾ ವೈಶಿಷ್ಟ್ಯಗಳಾದ ‘ಅನುಮತಿ ಇಲ್ಲದಿದ್ದರೆ - ಹಾರಾಟವಿಲ್ಲ’ (ಎನ್‌ಪಿಎನ್‌ಟಿ), ನೈಜ-ಸಮಯದ ಟ್ರ್ಯಾಕಿಂಗ್ ಬೀಕನ್, ಜಿಯೋ-ಫೆನ್ಸಿಂಗ್ ಇತ್ಯಾದಿಗಳನ್ನು ನಂತರ ಪ್ರಕಟಿಸಲಾಗುವುದು. ಅನುಸರಣೆಗಾಗಿ ಆರು ತಿಂಗಳ ಸಮಯವನ್ನು ಒದಗಿಸಲಾಗುವುದು.
- ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್ ಅನ್ನು ವ್ಯಾಪಾರ-ಸ್ನೇಹಿ ಸಿಂಗಲ್ ವಿಂಡೋ ಆನ್‌ಲೈನ್ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಲಾಗುತ್ತದೆ.
- ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಲ್ಲಿ ಕನಿಷ್ಠ ಮಾನವ ಹಸ್ತಕ್ಷೇಪ ಇರುತ್ತದೆ ಮತ್ತು ಹೆಚ್ಚಿನ ಅನುಮತಿಗಳು ಸ್ವಯಂ- ಸೃಷ್ಟಿಯಾಗುತ್ತವೆ.
- ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಲ್ಲಿ ಹಸಿರು, ಹಳದಿ ಮತ್ತು ಕೆಂಪು ವಲಯಗಳೊಂದಿಗೆ ವಾಯುಪ್ರದೇಶದ ನಕ್ಷೆಯನ್ನು ಪ್ರದರ್ಶಿಸಲಾಗುತ್ತದೆ.
- ಹಳದಿ ವಲಯವನ್ನು ವಿಮಾನ ನಿಲ್ದಾಣದ ಪರಿಧಿಯಿಂದ 45 ಕಿ.ಮೀ ನಿಂದ 12 ಕಿ.ಮೀ.ಗೆ ಇಳಿಸಲಾಗಿದೆ.
- ವಿಮಾನ ನಿಲ್ದಾಣದ ಪರಿಧಿಯಿಂದ 8 ರಿಂದ 12 ಕಿ.ಮೀ ನಡುವಿನ ಪ್ರದೇಶದಲ್ಲಿ 200 ಅಡಿಗಳವರೆಗೆ ಮತ್ತು ಹಸಿರು ವಲಯಗಳಲ್ಲಿ 400 ಅಡಿಗಳವರೆಗೆ ಯಾವುದೇ ಹಾರಾಟ ಅನುಮತಿ ಅಗತ್ಯವಿಲ್ಲ.
- ಮೈಕ್ರೋ ಡ್ರೋನ್‌ಗಳಿಗೆ (ವಾಣಿಜ್ಯೇತರ ಬಳಕೆಗಾಗಿ), ನ್ಯಾನೊ ಡ್ರೋನ್ ಮತ್ತು ಆರ್ & ಡಿ ಸಂಸ್ಥೆಗಳಿಗೆ ಯಾವುದೇ ಪೈಲಟ್ ಪರವಾನಗಿ ಅಗತ್ಯವಿಲ್ಲ.
- ಭಾರತದಲ್ಲಿ ನೋಂದಾಯಿತ ವಿದೇಶಿ ಒಡೆತನದ ಕಂಪನಿಗಳಿಂದ ಡ್ರೋನ್ ಕಾರ್ಯಾಚರಣೆಗೆ ಯಾವುದೇ ನಿರ್ಬಂಧವಿಲ್ಲ.
- ಡಿಜಿಎಫ್‌ಟಿಯಿಂದ ಡ್ರೋನ್‌ಗಳು ಮತ್ತು ಡ್ರೋನ್ ಘಟಕಗಳ ಆಮದು.ನಿಯಂತ್ರಣ
- ಯಾವುದೇ ನೋಂದಣಿ ಅಥವಾ ಪರವಾನಗಿ ನೀಡುವ ಮೊದಲು ಯಾವುದೇ ಭದ್ರತಾ ಅನುಮತಿ ಅಗತ್ಯವಿಲ್ಲ.
- ಆರ್ & ಡಿ ಘಟಕಗಳಿಗೆ ಹಾರಾಟ ಯೋಗ್ಯ ಪ್ರಮಾಣಪತ್ರ, ವಿಶಿಷ್ಟ ಗುರುತಿನ ಸಂಖ್ಯೆ, ಪೂರ್ವ ಅನುಮತಿ ಮತ್ತು ರಿಮೋಟ್ ಪೈಲಟ್ ಪರವಾನಗಿ ಅಗತ್ಯವಿಲ್ಲ.
- 2021 ರ ಡ್ರೋನ್ ನಿಯಮಾವಳಿಗಳ ಅಡಿಯಲ್ಲಿ ಡ್ರೋನ್‌ಗಳ ವ್ಯಾಪ್ತಿಯು 300 ಕೆಜಿಯಿಂದ 500 ಕೆಜಿಗೆ ಹೆಚ್ಚಾಗಿದೆ. ಇದು ಡ್ರೋನ್ ಟ್ಯಾಕ್ಸಿಗಳನ್ನೂ ಒಳಗೊಂಡಿರುತ್ತದೆ.
- ಎಲ್ಲಾ ಡ್ರೋನ್ ತರಬೇತಿ ಮತ್ತು ಪರೀಕ್ಷೆಯನ್ನು ಅಧಿಕೃತ ಡ್ರೋನ್ ಶಾಲೆಯಿಂದ ನಡೆಸಬೇಕು. ಡಿಜಿಸಿಎ ತರಬೇತಿ ಅವಶ್ಯಕತೆಗಳನ್ನು ಸೂಚಿಸುತ್ತದೆ, ಡ್ರೋನ್ ಶಾಲೆಗಳ ಮೇಲ್ವಿಚಾರಣೆ ಮತ್ತು ಪೈಲಟ್ ಪರವಾನಗಿಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲಾಗುತ್ತದೆ.
- ಭಾರತದ ಗುಣಮಟ್ಟ ಮಂಡಳಿ ಮತ್ತು ಅದರಿಂದ ಮಾನ್ಯತೆ ಪಡೆದ ಪ್ರಮಾಣೀಕರಣ ಘಟಕಗಳಿಂದ ಹಾರಾಟ ಯೋಗ್ಯ ಪ್ರಮಾಣಪತ್ರದ ವಿತರಣೆ.
- ತಯಾರಕರು ತಮ್ಮ ಡ್ರೋನ್‌ನ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಲ್ಲಿ ಸ್ವಯಂ-ಪ್ರಮಾಣೀಕರಣ ಮಾರ್ಗದ ಮೂಲಕ ಸೃಷ್ಟಿಸಬಹುದು.
- ಡ್ರೋನ್‌ಗಳ ವರ್ಗಾವಣೆ ಮತ್ತು ನೋಂದಣಿಗಾಗಿ ಸುಲಭ ಪ್ರಕ್ರಿಯೆ.
- ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳು (ಎಸ್‌ಒಪಿ) ಮತ್ತು ತರಬೇತಿ ಕಾರ್ಯವಿಧಾನದ ಕೈಪಿಡಿಗಳನ್ನು (ಟಿಪಿಎಂ) ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ಸ್ವಯಂ ಮೇಲ್ವಿಚಾರಣೆಗಾಗಿ ಡಿಜಿಸಿಎ ನೀಡುತ್ತದೆ. ನಿಗದಿತ ಕಾರ್ಯವಿಧಾನಗಳಿಗೆ ಹೊರತಾದ ಯಾವುದೇ ಗಮನಾರ್ಹ ಅಂಶಗಳಿಲ್ಲದಿದ್ದರೆ ಅನುಮೋದನೆಗಳ ಅಗತ್ಯವಿಲ್ಲ.
***
(Release ID: 1735816)
Visitor Counter : 351