ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವಿಶ್ವದರ್ಜೆಯ ಭಾರತದ ಮೊದಲ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ವಿಶ್ವವಿದ್ಯಾಲಯ ಸ್ಥಾಪನೆಗೆ ಡಿಎಸ್ ಟಿಗೆ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಕರೆ

Posted On: 10 JUL 2021 9:09PM by PIB Bengaluru

ಕೇಂದ್ರ  ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ (ಸ್ವತಂತ್ರ ಹೊಣೆಗಾರಿಕೆ), ಭೂ ವಿಜ್ಞಾನಗಳ ಖಾತೆ ಸಚಿವ (ಸ್ವತಂತ್ರ ಹೊಣೆಗಾರಿಕೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆಗಳು, ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್ ಇಂದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದರ ವಿವಿಧ ಸ್ವಾಯತ್ತ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ  ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ ಟಿ) ವಿಶ್ವದರ್ಜೆಯ ಭಾರತದ ಮೊದಲ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ವಿಶ್ವವಿದ್ಯಾಲಯ ಸ್ಥಾಪನೆಗೆ  ಪ್ರಯತ್ನಗಳನ್ನು ನಡೆಸಬೇಕು ಎಂದು ಕರೆ ನೀಡಿದರು.

ತಂತ್ರಜ್ಞಾನ ಭವನದಲ್ಲಿ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ.ಜಿತೇಂದ್ರ ಸಿಂಗ್ ಅವರು ವಿಶ್ವದ ಪ್ರಸಿದ್ಧ ಮತ್ತು ಮಾನ್ಯತೆ ಪಡೆದ ಎಸ್ ಸಿಐ ಜರ್ನಲ್ ಗಳಲ್ಲಿ ಸಂಶೋಧನಾ ಪ್ರಕಟಣೆಗಳಲ್ಲಿ ಜಾಗತಿಕವಾಗಿ 3ನೇ ಶ್ರೇಯಾಂಕದಲ್ಲಿ ಮತ್ತು  ಗುಣಮಟ್ಟದಲ್ಲಿ ಸಂಶೋಧನಾ ಪ್ರಕಟಣೆಯಲ್ಲಿ   ಭಾರತ 9ನೇ ಜಾಗತಿಕ ಶ್ರೇಯಾಂಕವನ್ನು ಗಳಿಸಿದೆ. ಆದಾಗ್ಯೂ ಸಂಶೋಧನಾ ಪ್ರಬಂಧಗಳ ಗುಣಮಟ್ಟದಲ್ಲಿ ಭಾರತದ ಜಾಗತಿಕ ಶ್ರೇಯಾಂಕ 14ನೇ ಕ್ರಮಾಂಕದಿಂದ ಸುಧಾರಿಸಿ 9ನೇ ಕ್ರಮಾಂಕಕ್ಕೆ ಏರಿಕೆಯಾಗಿದೆ, ಭಾರತ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ವೇಳೆಗೆ ಗುಣಮಟ್ಟದ ಸಂಶೋಧನಾ ಪ್ರಬಂಧಗಳ ಮಂಡನೆಯಲ್ಲಿ ಭಾರತ ಮೊದಲ ಐದು ಜಾಗತಿಕ ರಾಷ್ಟ್ರಗಳ ಸಾಲಿಗೆ ಏರುವ ನಿಟ್ಟಿನಲ್ಲಿ ನಮ್ಮ ನಿರಂತರ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ವಿಶೇಷ ಒತ್ತು ನೀಡಿದ್ದಾರೆ ಎಂದು ಉಲ್ಲೇಖಿಸಿದ ಸಚಿವರು, 2016ರಲ್ಲಿ ಪ್ರಧಾನಮಂತ್ರಿಗಳ ಮಧ್ಯಪ್ರವೇಶದಿಂದಾಗಿ ಪೇಟೆಂಟ್ ಕಾನೂನು, ಕಡಿಮೆ ನಿಯಂತ್ರಣ ಮತ್ತು ಹೆಚ್ಚು ಪ್ರೋತ್ಸಾಹಕ ಆಧರಿತವಾಗಿಸಲಾಗಿದೆ. ಇದರಿಂದ ಕೆಲಸ ಮಾಡುವುದು ಸುಲಭವಾಗಿರುವುದೇ ಅಲ್ಲದೆ ಪೇಟೆಂಟ್ ಗಳ ಸುಧಾರಣೆಗೆ ಪಡೆಯುವ ಅವಧಿಯೂ ಸಹ ತಗ್ಗಿದೆ. ಅಷ್ಟೇ ಅಲ್ಲದೆ ಕಳೆದ 7 ವರ್ಷಗಳಲ್ಲಿ ಸ್ಥಾನಿಕ ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸುವಲ್ಲಿ, ಫುಲ್ ಟೈಮ್ ಇಕ್ವಲೆಂಟ್  (ಎಫ್ ಟಿಇ) ಸಂಶೋಧಕರು ಮತ್ತು ಮಹಿಳಾ ಸಂಶೋಧಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಹೇಳಿದರು.   ಮಾನವ ಸಂಪನ್ಮೂಲ ಸಂಬಂಧಿ ಯೋಜನೆಗಳಾದ ಮನಕ್, ಇನ್ ಸ್ಪೈರ್, ಡಾಕ್ಟರಲ್ ಮತ್ತು ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಮತ್ತು ಇತರೆ ಯೋಜನೆಗಳ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯಕ್ಕೆ ಒತ್ತು ನೀಡಬೇಕು ಎಂದು ಸಚಿವರು ಪ್ರತಿಪಾದಿಸಿದರು.

ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ಅಂದರೆ ಭಾರತ್ ಕಾ ಅಮೃತ್ ಮಹೋತ್ಸವದ ಸಮಯಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಯಶೋಗಾಥೆಗಳನ್ನು ಬಿಂಬಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ನಿಟ್ಟಿನಲ್ಲಿ ಡಿಎಸ್ ಟಿ ಮುಂದೆ ಬಂದು ದೊಡ್ಡ ಗುರಿಗಳನ್ನು ಮತ್ತು 2022ಕ್ಕೆ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದರು. 2022ಕ್ಕೆ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಗುವುದು. ವೇಳೆಗೆ ಡಿಎಸ್ ಟಿ 7500 ಎಸ್ ಟಿಐ ಆಧರಿತ ನವೋದ್ಯಮಗಳನ್ನು ಆರಂಭಿಸುವ ಗುರಿಯನ್ನು ಡಿಎಸ್ ಟಿ ಹೊಂದಬೇಕು. 6 ರಿಂದ 10ನೇ ತರಗತಿಯ 750,000 ವಿದ್ಯಾರ್ಥಿಗಳು ಮಾನಕ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಗಬೇಕು. ಅಲ್ಲದೆ ವಿಜ್ಞಾನ ಜ್ಯೋತಿ ಯೋಜನೆ ಅಡಿ ಜಿಎಸ್ ಟಿ 2022 ವೇಳೆಗೆ 75,000 ಬಾಲಕಿಯರಿಗೆ ಪ್ರಯೋಜನ ಪಡೆಯುವಂತಹ ಗುರಿಯನ್ನು ಹೊಂದಬೇಕು. ಭಾರತದ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಎಲ್ಲ ವಿಜ್ಞಾನಿಗಳು ಮತ್ತು ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದ ಡಾ. ಜಿತೇಂದ್ರ ಸಿಂಗ್, ಮೂಲಕ ವಿಜ್ಞಾನ ಮತ್ತು ವಿಜ್ಞಾನಿಗಳು ಇಷ್ಟು ವರ್ಷಗಳ  ಭಾರತಕ್ಕೆ ಏನೇನು ಕೊಡುಗೆ ನೀಡಿದ್ದಾರೆ ಎಂಬುದನ್ನು ಸಂಭ್ರಮಿಸಬೇಕು ಎಂದಿದ್ದಾರೆ.

ಇದಕ್ಕೂ ಮುನ್ನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮಾ ಹಾಗೂ ಎಸ್ ಇಆರ್ ಬಿಯ ಕಾರ್ಯದರ್ಶಿ ಪ್ರೊಫೆಸರ್ ಸಂದೀಪ್ ವರ್ಮಾ, ಎಎಸ್ಎಫ್ಎ ವಿಶ್ವಜಿತ್ ಸಹಾಯ್, ಜೆಎಸ್(ಆಡಳಿತ) ಅಂಜು ಭಲ್ಲಾ, ಜೆಎಸ್(ಎಸ್ ಎಂಪಿ) ಸುನಿಲ್ ಕುಮಾರ್ ಮತ್ತು ಪಿಸಿಪಿಎಂ ಮುಖ್ಯಸ್ಥರಾದ ಡಾ. ಅಖಿಲೇಶ್ ಗುಪ್ತಾ ಮತ್ತಿತರರು ಸಚಿವರನ್ನು ಸ್ವಾಗತಿಸಿದರು. ಅಲ್ಲದೆ ಲೆಕ್ಕಪತ್ರಗಳ ಮುಖ್ಯ ನಿಯಂತ್ರಕರು, ವೈಜ್ಞಾನಿಕ ವಿಭಾಗಗಳ ಮುಖ್ಯಸ್ಥರು ಮತ್ತು ಇಲಾಖೆಯ ಆಡಳಿತ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

(ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಗುರುವಾರ ನವದೆಹಲಿಯ ತಂತ್ರಜ್ಞಾನ ಭವನದಲ್ಲಿ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು)

***


(Release ID: 1734616) Visitor Counter : 263