ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾಗಿ ಶ್ರೀ ಪಶು ಪತಿ ಕುಮಾರ್  ಪಾರಸ್ ಅಧಿಕಾರ ವಹಿಸಿಕೊಂಡರು


ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರಾಗಿ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅಧಿಕಾರ ವಹಿಸಿಕೊಂಡರು

Posted On: 08 JUL 2021 6:06PM by PIB Bengaluru

ಶ್ರೀ ಪಶು ಪತಿ ಕುಮಾರ್ ಪಾರಾಸ್ ಅವರು ನವದೆಹಲಿಯ ಪಂಚಶೀಲ್ ಭವನದಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾಗಿ ಇಂದು ಅಧಿಕಾರ ವಹಿಸಿಕೊಂಡರು.

WhatsApp Image 2021-07-08 at 16.18.56.jpeg

ಕಾರ್ಯದರ್ಶಿ ಗಳಾದ ಶ್ರೀಮತಿ  ಪುಷ್ಪಾ ಸುಬ್ರಹ್ಮಣ್ಯಂರವರು ಹಿರಿಯ ಅಧಿಕಾರಿಗಳೊಂದಿಗೆ ಸಚಿವರನ್ನು ಸ್ವಾಗತಿಸಿದರು. ಅಧಿಕಾರ ವಹಿಸಿಕೊಂಡ ನಂತರ ಶ್ರೀ ಪಶುಪತಿ ಕುಮಾರ್ ಪಾರಾಸ್ ಅವರು ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಸಚಿವಾಲಯದ ಯೋಜನೆಗಳನ್ನು ಪರಿಶೀಲಿಸಿದರು.   ಆಹಾರ ಸಂಸ್ಕರಣಾ ಸಚಿವಾಲಯದ ಜವಾಬ್ದಾರಿಯನ್ನು ನೀಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಸಚಿವರು ಧನ್ಯವಾದ ಅರ್ಪಿಸಿದರು. ಸಚಿವಾಲಯದ ಯೋಜನೆಗಳನ್ನು ಮುಂದೆ ತೆಗೆದುಕೊಂಡು ಹೋಗಲು ತಮ್ಮ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿದರು.

ಶ್ರೀ ಪಶು ಪತಿ ಕುಮಾರ್ ಪಾರಸ್ ಅವರು ಬಿಹಾರದ ಹಾಜಿಪುರದ ಸಂಸತ್ ಸದಸ್ಯರಾಗಿದ್ದಾರೆಅವರು ಬಿಹಾರದಲ್ಲಿ 7 ಬಾರಿ ಶಾಸಕರು ಮತ್ತು 1 ಬಾರಿ ಎಂಎಲ್ ಸಿ ಆಗಿದ್ದಾರೆ. ಅವರು ಬಿಹಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಇಂದು ನವದೆಹಲಿಯ ಪಂಚಶೀಲ್ ಭವನದಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಐದು ಬಾರಿ ಸಂಸದರಾದ ಶ್ರೀ ಪ್ರಹಲಾದ್ ಸಿಂಗ್ ಪಟೇಲ್ ಮಧ್ಯಪ್ರದೇಶದ ದಾಮೋ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹಿಂದೆ ಅವರು 16 ನೇ ಲೋಕಸಭೆಯಲ್ಲಿ ಅನೇಕ ಸಂಸದೀಯ ಸಮಿತಿಗಳಲ್ಲಿ ಸದಸ್ಯರಾಗಿದ್ದರು.

WhatsApp Image 2021-07-08 at 16.18.37.jpeg

***


(Release ID: 1734004) Visitor Counter : 213


Read this release in: English , Urdu , Hindi , Tamil