ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿ ಭೂಪೇಂದ್ರ ಯಾದವ್ ಮತ್ತು ರಾಜ್ಯ ಸಚಿವರಾಗಿ ರಾಮೇಶ್ವರ ತೇಲಿ ಅಧಿಕಾರ ಸ್ವೀಕಾರ

Posted On: 08 JUL 2021 2:30PM by PIB Bengaluru

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗು ಅರಣ್ಯ ಸಚಿವರಾಗಿ ಶೀ ಭೂಪೇಂದ್ರ ಯಾದವ್ ಅವರು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಇಂದು ಅಧಿಕಾರ ಸ್ವೀಕರಿಸಿದರು. ಶ್ರೀ ಯಾದವ್ ಅವರು ರಾಜ್ಯ ಸಭಾ ಸದಸ್ಯರಾಗಿದ್ದಾರೆ ಮತ್ತು ಅವರು ರಾಜಸ್ಥಾನ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಸಂಸದೀಯ ಆಯ್ಕೆ ಸಮಿತಿಗಳ ತಜ್ಞರಾಗಿರುವ ಅವರು ಸಾಲ ಬಾಕಿ ಮತ್ತು ದಿವಾಳಿ ಸಂಹಿತೆ 2015 ಕ್ಕೆ ಸಂಬಂಧಿಸಿದ ಜಂಟಿ ಸಮಿತಿಯ ಅಧ್ಯಕ್ಷರಾಗಿದ್ದರು. ಪ್ರಸ್ತುತ ಅವರು ಬಾಡಿಗೆ ತಾಯ್ತನ (ನಿಯಂತ್ರಣ) ವಿಧೇಯಕ , 2019 ಕ್ಕೆ ಸಂಬಂಧಿಸಿದ ರಾಜ್ಯ ಸಭಾ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ಕೇಂದ್ರ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ಮತ್ತು ಎಂ..ಎಸ್. ಶ್ರೀ ರಾಮೇಶ್ವರ್ ತೇಲಿ ಅವರನ್ನು ಸ್ವಾಗತಿಸುತ್ತಿರುವುದು

ಸಚಿವರು ಸಚಿವಾಲಯದಲ್ಲಿಯ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ, ಪ್ರಸ್ತುತ ನಡೆಯುತ್ತಿರುವ, ಬಾಕಿ ಇರುವ ಮತ್ತು ಸಚಿವಾಲಯದ ಗಂಭೀರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಯಾವುದಾದರೂ ಹೊಸ ಚಿಂತನೆ ಅಧಿಕಾರಿಗಳ ಮನಸ್ಸಿನಲ್ಲಿ ಮೂಡಿದರೆ ಅದನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ಮತ್ತು ತಮ್ಮೊಂದಿಗೆ ಚರ್ಚಿಸಬೇಕು ಎಂದವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದರಿಂದ ದೇಶದ ಸಂಘಟಿತ ಮತ್ತು ಅಸಂಘಟಿತ ವಲಯದ ಕೋಟ್ಯಂತರ ಕಾರ್ಮಿಕರಿಗೆ ಸೂಕ್ತ ನೀತಿಗಳನ್ನು ಮತ್ತು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಅನುಕೂಲವಾಗುತ್ತದೆ ಎಂದವರು ಹೇಳಿದರು.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ಮತ್ತು ಎಂ..ಎಸ್. ಶ್ರೀ ರಾಮೇಶ್ವರ್ ತೇಲಿ ಅವರು ಸಚಿವಾಲಯದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವುದು

ಕಾರ್ಮಿಕ ಮತ್ತು ಉದ್ಯೋಗ ಹಾಗು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಗಳ ಸಹಾಯಕ ಸಚಿವರಾದ ಶ್ರೀ ರಾಮೇಶ್ವರ ತೇಲಿ ಅವರೂ ಇಂದು ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯಸಚಿವರಾಗಿ  ಅಧಿಕಾರ ವಹಿಸಿಕೊಂಡರು. ಮೊದಲು ಅವರು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಹಾಯಕ ಸಚಿವರಾಗಿದ್ದರು. ಅವರು ಅಸ್ಸಾಂನ ಧೀಬ್ರುಘರ್ ಸಂಸತ್ ಸದಸ್ಯರು.

***



(Release ID: 1733746) Visitor Counter : 128