ರಕ್ಷಣಾ ಸಚಿವಾಲಯ

ರಕ್ಷಣಾ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶ್ರೀ ಅಜಯ್ ಭಟ್

Posted On: 08 JUL 2021 3:28PM by PIB Bengaluru

ಶ್ರೀ ಅಜಯ್ ಭಟ್ ಅವರು ರಕ್ಷಣಾ ಖಾತೆ ರಾಜ್ಯ ಸಚಿವರಾಗಿ 2021 ಜುಲೈ 08ರಂದು ಅಧಿಕಾರ ವಹಿಸಿಕೊಂಡರು. ಅಧಿಕಾರವಹಿಸಿಕೊಂಡ ತರುವಾಯ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರನ್ನು ದಕ್ಷಿಣ ವಿಭಾಗದ ಅವರ ಕಚೇರಿಯಲ್ಲಿ ಭೇಟಿ ಮಾಡಿದರು. ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್ ಮತ್ತು ರಕ್ಷಣಾ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಶ್ರೀ ಅಜಯ್ ಭಟ್ ಅವರನ್ನು ಅವರ ಕಚೇರಿಗೆ ಸ್ವಾಗತಿಸಿದರು. ಟ್ವೀಟ್ ನಲ್ಲಿ ಅಜಯ್ ಭಟ್ ಅವರು, ತಮಗೆ ಜವಾಬ್ದಾರಿ ನೀಡಿದ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿ21 ನೇ ಶತಮಾನದಆತ್ಮ ನಿರ್ಭರ ಭಾರತನಿರ್ಮಾಣಕ್ಕೆ ಶ್ರಮಿಸುವುದಾಗಿ ತಿಳಿಸಿದ್ದಾರೆ.

ಶ್ರೀ ಅಜಯ್ ಭಟ್ ಅವರು, ಉತ್ತರಾಖಂಡದ ನೈನಿತಾಲ್ ಉಧಾಮ್ ಸಿಂಗ್ ನಗರ ಕ್ಷೇತ್ರದ ಸಂಸತ್ ಸದಸ್ಯರಾಗಿದ್ದಾರೆ. ಅವರು ರಕ್ಷಣಾ ಸ್ಥಾಯಿ ಸಮಿತಿ; ಅಧೀನ ಶಾಸನ ಸಮಿತಿ; ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ 2019 ಜಂಟಿ ಸಮಿತಿ ಮತ್ತು ಅಂದಾಜುಗಳ ಸಮಿತಿಯ ಸದಸ್ಯರಾಗಿದ್ದಾರೆ. ಹಿಂದೆ ಅವರು ಉತ್ತರಾಖಂಡ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದ್ದರು, ಸಂಸದೀಯ ವ್ಯವಹಾರಗಳು, ಆರೋಗ್ಯ ಮತ್ತು ವಿಪತ್ತು ನಿರ್ವಹಣೆಯಂತಹ ಖಾತೆಗಳನ್ನು ನಿರ್ವಹಿಸಿದ್ದರು. ಅವರು ಉತ್ತರಾಖಂಡ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು.

***(Release ID: 1733708) Visitor Counter : 201