ಭೂವಿಜ್ಞಾನ ಸಚಿವಾಲಯ

ಜುಲೈ 9ರಿಂದ ಪಶ್ಚಿಮ ಕರಾವಳಿಯುದ್ದಕ್ಕೂ ಹೆಚ್ಚಿನ ಮಳೆ ಸಾಧ್ಯತೆ


ಮಳೆಯ ತೀವ್ರತೆಯು ಜುಲೈ 8 ರಿಂದ ಈಶಾನ್ಯಭಾಗದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ

Posted On: 06 JUL 2021 4:07PM by PIB Bengaluru

ಭಾರತದ ಹವಾಮಾನ ಇಲಾಖೆಯ (ಐಎಂಡಿ) ಹವಾಮಾನ ಮುನ್ಸೂಚನೆಯ ವರದಿಯ ಪ್ರಕಾರ, ಅರಬ್ಬಿ ಸಮುದ್ರದ ಮೇಲೆ ನೈಋತ್ಯ ಮುಂಗಾರು ಬಲಗೊಳ್ಳುವುದರಿಂದ, ಜುಲೈ 9 ರಿಂದ ಪಶ್ಚಿಮ ಕರಾವಳಿಯಲ್ಲಿ ಭಾರಿ ಮಳೆಯ  ಸಾಧ್ಯತೆ ಹೆಚ್ಚುಜುಲೈ 9 ರಿಂದ  ಕೊಂಕಣ ಮತ್ತು ಗೋವಾ, ಕರ್ನಾಟಕದ ಕರಾವಳಿ ಮತ್ತು ಕೇರಳ ಮತ್ತು ಮಾಹೇಯಲ್ಲಿ ಪ್ರತ್ಯೇಕವಾಗಿ ಹಗುರವಾಗಿ  ಮತ್ತು ಭಾರೀ  ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಅದೇ ಸಮಯದಲ್ಲಿ, ಜುಲೈ 8 ರಿಂದ ನೈಋತ್ಯ ಮುಂಗಾರು ಪುನಶ್ಚೇತನಗೊಳ್ಳುವುದರಿಂದ, ಜುಲೈ 9 ರಿಂದ ಈಶಾನ್ಯ ಭಾರತದಲ್ಲಿ (ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ) ಮಳೆಯ ತೀವ್ರತೆ ಮತ್ತು ವಿತರಣೆಯು ಕಡಿಮೆಯಾಗುವ ಸಾಧ್ಯತೆಯಿದೆ.

ಜುಲೈ 8 ರಿಂದ ಪೂರ್ವ ಭಾರತದ ಕೆಲವು ಭಾಗಗಳಲ್ಲಿ ಬಂಗಾಳಕೊಲ್ಲಿಯಿಂದ ಕೆಳಮಟ್ಟದಲ್ಲಿ ತೇವಾಂಶವುಳ್ಳ ಪೂರ್ವದ ಮಾರುತಗಳು ಕ್ರಮೇಣ ಬರುವ ಸಾಧ್ಯತೆಯಿದೆ. ಜುಲೈ 10 ರೊಳಗೆ ಇದು ಪಂಜಾಬ್ ಮತ್ತು ಉತ್ತರ ಹರಿಯಾಣವನ್ನು ಒಳಗೊಂಡಂತೆ ವಾಯುವ್ಯ ಭಾರತಕ್ಕೆ ಹರಡುವ ಸಾಧ್ಯತೆಯಿದೆ. ಅದರಂತೆ, ನೈರುತ್ಯ ಮಾನ್ಸೂನ್ ಜುಲೈ 10 ಸುಮಾರಿಗೆ ಪಶ್ಚಿಮ ಉತ್ತರ ಪ್ರದೇಶದ ಉಳಿದ ಭಾಗಗಳಲ್ಲಿ, ಪಂಜಾಬ್, ಹರಿಯಾಣ, ರಾಜಸ್ಥಾನ ದೆಹಲಿಯ ಕೆಲವು ಭಾಗಗಳಲ್ಲಿ ಸಾಗುವ ಸಾಧ್ಯತೆಯಿದೆ.

ಸ್ಥಿತಿಯ ಪ್ರಭಾವದಿಂದ ಮಧ್ಯ ಭಾರತದಲ್ಲಿ (ಮಧ್ಯಪ್ರದೇಶ, ವಿದರ್ಭ, ಛತ್ತೀಸ್ಗಢ) ಅಲ್ಲಲ್ಲಿ  ಮತ್ತು ಭಾರಿ ಮಳೆ   ಮತ್ತು ಜುಲೈ 8 ರಂದು ವಿದರ್ಭ ಮತ್ತು ಛತ್ತೀಸ್ಗಢದಲ್ಲಿ  ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಜುಲೈ 9 ರಿಂದ ವಾಯುವ್ಯ ಭಾರತದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಮತ್ತು 8 ರಿಂದ ಉತ್ತರಾಖಂಡದಲ್ಲಿ; ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ 9 ರಿಂದ ಮತ್ತು ಜುಲೈ 10 ರಿಂದ ಪೂರ್ವ ರಾಜಸ್ಥಾನದಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

***



(Release ID: 1733215) Visitor Counter : 249