ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಈ ಸಾಂಕ್ರಾಮಿಕ ಕಾಲದಲ್ಲಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವ ಸುದೀರ್ಘ ಕಾರ್ಯವನ್ನು ಕೇಂದ್ರ ನಡೆಸುತ್ತಿದೆ: ಕಾರ್ಯದರ್ಶಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ


ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ 3 ಮತ್ತು 4 ಗಾಗಿ 278.25 ಎಲ್ಎಂಟಿಯಷ್ಟು ಆಹಾರ ಧಾನ್ಯಗಳನ್ನು ಹೆಚ್ಚು ದುರ್ಬಲರ ಅನುಕೂಲಕ್ಕಾಗಿ ನಿಗದಿಪಡಿಸಲಾಗಿದೆ

ರಬಿ ಮಾರ್ಕೆಟ್ ಅವಧಿ 2021-22ರಲ್ಲಿ ಕೈಗೊಂಡ 433.24 ಎಲ್ಎಂಟಿಯ ಗೋಧಿ ಖರೀದಿಯ ದಾಖಲೆಯು ಹಿಂದಿನ 389.93 ಎಲ್ಎಂಟಿಯನ್ನು ಮೀರಿಸಿದೆ

ಭಾರತದಾದ್ಯಂತ 84,369.19 ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗಿದೆ: ಶ್ರೀ ಪಾಂಡೆ

ಒಎನ್ಒಆರ್ ಸಿ ಅಡಿಯಲ್ಲಿ 1.5 ಕೋಟಿ ಮಾಸಿಕ ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸಲಾಗುತ್ತಿದೆ: ಶ್ರೀ ಪಾಂಡೆ

ಫಲಾನುಭವಿಗಳನ್ನು ಪಡಿತರ ಚೀಟಿಯಲ್ಲಿ ಸೇರಿಸಲು ಅಥವಾ ತೆಗೆಯಲು ಸಾಮಾನ್ಯ ಅಂಶಗಳ ಪಟ್ಟಿಯನ್ನು ಸಿದ್ಧಪಡಿಸುವುದಕ್ಕಾಗಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಸಲಹೆಗಳ ಆಧಾರದ ಮೇಲೆ ಒಂದು ಮಾದರಿ ಮಾರ್ಗಸೂಚಿಯನ್ನು ಕೇಂದ್ರವು ಶೀಘ್ರದಲ್ಲೇ ಅಂತಿಮಗೊಳಿಸುತ್ತದೆ: ಶ್ರೀ ಪಾಂಡೆ

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿಯವರು ಇಲಾಖೆಯ ಉಪಕ್ರಮಗಳು ಮತ್ತು ಸಾಧನೆಗಳ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದರು

Posted On: 05 JUL 2021 5:48PM by PIB Bengaluru

ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎ) ಅನುಷ್ಠಾನ ಮತ್ತು ಪ್ರಸಕ್ತ ಋತುವಿನಲ್ಲಿ ಆಹಾರ ಧಾನ್ಯಗಳ ಸಂಗ್ರಹದಲ್ಲಿ ಇಲಾಖೆಯ ಉಪಕ್ರಮಗಳು ಮತ್ತು ಸಾಧನೆಗಳ ಬಗ್ಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಶ್ರೀ ಸುಧಾಂಶು ಪಾಂಡೆ ಇಂದು ಮಾಧ್ಯಮಗಳಿಗೆ ವಿವರಿಸಿದರು.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಶ್ರೀ ಪಾಂಡೆ, ಈ ಸಾಂಕ್ರಾಮಿಕ ಕಾಲದಲ್ಲಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವ ಸುದೀರ್ಘ ಕಾರ್ಯವನ್ನು ಮಾಡುತ್ತಿದೆ. ಆಹಾರ ಧಾನ್ಯಗಳ ಸಂಗ್ರಹದಲ್ಲಿ ಈ ವರ್ಷ ದಾಖಲೆ ಮಾಡಲಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ, ಪ್ರಸಕ್ತ ಮಾರುಕಟ್ಟೆ ಋತುವಿನಲ್ಲಿ ಗೋಧಿ ಮತ್ತು ಅಕ್ಕಿ ಖರೀದಿಯ ಸ್ಥಿತಿಗತಿಗಳ ಬಗ್ಗೆ ಪ್ರಸ್ತುತಿಯನ್ನು ಸಿಎಂಡಿ, ಎಫ್ಸಿಐ ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ ಎಂದು ಹೇಳಿದರು.

ಪ್ರಸ್ತುತಿಯ ಸಮಯದಲ್ಲಿ, ಶ್ರೀ ಪಾಂಡೆ ಆರ್ ಎಂಎಸ್ 2021-22ರಲ್ಲಿ ದಾಖಲೆ ಮಟ್ಟದ 433.24 ಎಲ್ಎಂಟಿಯ ಗೋಧಿ ಸಂಗ್ರಹವನ್ನು ಖರೀದಿಸಲಾಗಿದ್ದು, ಹಿಂದಿನ 389.93 ಎಲ್ಎಮ್ಟಿ (ಆರ್ಎಂಎಸ್ 20-21) ಅನ್ನು ಮೀರಿಸಿದೆ ಎಂದು ತಿಳಿಸಿದರು. ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ತಮ್ಮ ಅತ್ಯುತ್ತಮ ಗೋಧಿ ಖರೀದಿ ಅಂಕಿಅಂಶಗಳನ್ನು ದಾಖಲಿಸಿದೆ ಎಂದು ಅವರು ಮಾಹಿತಿ ನೀಡಿದರು. ಕಳೆದ ವರ್ಷ 43.35 ಲಕ್ಷ ರೈತರಿಗೆ ಹೋಲಿಸಿದರೆ ಈ ವರ್ಷದ ದಾಖಲೆಯ 49.16 ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು. ಒನ್ ನೇಷನ್, ಒನ್ ಎಂಎಸ್ ಪಿ , ಒನ್ ಡಿಬಿಟಿ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ ಮತ್ತು ಸಾರ್ವಕಾಲಿಕ ಹೆಚ್ಚಿನ ಮೊತ್ತದ 84,369.19 ಕೋಟಿ ರೂ.ಗಳನ್ನು ನೇರವಾಗಿ ಭಾರತದಾದ್ಯಂತ ರೈತರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು.

ಎಫ್ಸಿಐ ನ ಸಿಎಂಡಿಯವರು ಅಕ್ಕಿ ಖರೀದಿಯ ಬಗ್ಗೆ ವಿವರಿಸುತ್ತಾ, ಶ್ರೀ ಪಾಂಡೆ ಅವರು ಕೆಎಂಎಸ್ 2020-21ರಲ್ಲಿ 4 ನೇ ಜುಲೈ, 2021 ರವರೆಗೆ ದಾಖಲೆಯ ಪ್ರಮಾಣದ 862.01 ಎಲ್ಎಂಟಿ ಭತ್ತವನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು, ಇದು ಕಳೆದ ವರ್ಷದ ಒಟ್ಟು 770.93 ಎಲ್ಎಂಟಿ ಭತ್ತದ ಸಂಗ್ರಹವನ್ನು ಮೀರಿದೆ ಮತ್ತು ಖರೀದಿ ಮುಂದುವರಿದರೆ ಅದು ಸುಮಾರು 900 ಎಲ್ಎಂಟಿ ತಲುಪಬಹುದು. ಈ ವರ್ಷ ಪಂಜಾಬ್, ಬಿಹಾರ, ಗುಜರಾತ್, ತೆಲಂಗಾಣ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳು ತಮ್ಮ ಅತ್ಯುತ್ತಮ ಖರೀದಿ ಅಂಕಿಅಂಶಗಳನ್ನು ಮೀರಿಸಿದೆ ಎಂದು ಅವರು ಹೇಳಿದರು. ಕಳೆದ ವರ್ಷ 124.59 ಲಕ್ಷ ರೈತರಿಗೆ ಹೋಲಿಸಿದರೆ ಇದುವರೆಗೆ 127.15 ಲಕ್ಷ ರೈತರು ಲಾಭ ಪಡೆದಿದ್ದಾರೆ ಎಂದು ಅವರು ಹೇಳಿದರು. ಸಾರ್ವಕಾಲಿಕ ಗರಿಷ್ಠ, 1,52,169.30 ಕೋಟಿ ರೂ. ಎಂಎಸ್ ಪಿ ಯನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.

ಪಿಎಂಜಿಕೆಎ-ಐ ಮತ್ತು II (ಎಪ್ರಿಲ್ 2020 - ನವೆಂಬರ್ 2020) ಅವಧಿಯಲ್ಲಿ ಪಿಎಂಜಿಕೆಎ ಯೋಜನೆಯಡಿ ಒಟ್ಟು 305 ಎಲ್ಎಂಟಿ ಆಹಾರ ಧಾನ್ಯಗಳನ್ನು ಪಡೆಯಲಾಗಿದೆ ಎಂದು ಶ್ರೀ ಪಾಂಡೆ ಮಾಹಿತಿ ನೀಡಿದರು. ಪಿಎಂಜಿಕೆ -3 ಗಾಗಿ, ಒಟ್ಟು 78.26 ಎಲ್ಎಂಟಿ ಆಹಾರ ಧಾನ್ಯಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮೇ - ಜೂನ್ 2021 ಕ್ಕೆ ಎರಡು ತಿಂಗಳು ಪಡೆದಿವೆ ಎಂದು ಅವರು ಹೇಳಿದರು. ಪಿಎಂಜಿಕೆಎವೈ-IV ಅಡಿಯಲ್ಲಿ ಒಟ್ಟು 198.78 ಎಲ್ಎಂಟಿ ಆಹಾರ ಧಾನ್ಯಗಳನ್ನು ಮುಂದಿನ ಐದು ತಿಂಗಳಿಗಾಗಿ ಅಂದರೆ ಜುಲೈ ನಿಂದ ನವೆಂಬರ್ 2021 ರವರೆಗೆ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ . ಇದರಲ್ಲಿ 3.99 ಎಲ್ಎಮ್ಟಿ ಆಹಾರ ಧಾನ್ಯಗಳನ್ನು ಇದುವರೆಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪಡೆದುಕೊಂಡಿವೆ ಎಂದು ಅವರು ಹೇಳಿದರು.

ಎಫ್ಸಿಐ, 2019-20ರ ಅವಧಿಯಲ್ಲಿ 389 ಎಲ್ಎಂಟಿ ಧಾನ್ಯಗಳನ್ನು ಸಾಗಿಸಿದಕ್ಕೆ ಹೋಲಿಸಿದಾಗ 2020-21ರ ಅವಧಿಯಲ್ಲಿ 594 ಎಲ್ಎಮ್ಟಿ ಆಹಾರದ ಧಾನ್ಯಗಳನ್ನು ಸಾಗಿಸಿದೆ. ಎಫ್ಸಿಐ 25 ಮಾರ್ಚ್ 2020 ರಿಂದ ಮಾರ್ಚ್ 31, 2021 ರವರೆಗೆ 945.92 ಎಲ್ಎಂಟಿ ಆಹಾರ ಧಾನ್ಯಗಳನ್ನು ದಾಖಲೆಯ ಪ್ರಮಾಣದಲ್ಲಿ ನೀಡಲಾಗಿದೆ ಮತ್ತು 2021 ರ ಏಪ್ರಿಲ್ 01 ರಿಂದ 2021 ಜೂನ್ 30 ರವರೆಗೆ 208.05 ಎಲ್ಎಂಟಿ ಆಹಾರ ಧಾನ್ಯಗಳನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸಾಮಾನ್ಯ ಅವಧಿಯಲ್ಲಿ, ಸೆಂಟ್ರಲ್ ಪೂಲ್ ನಿಂದ ಪಡೆಯುವ ಮಾಸಿಕ ಸರಾಸರಿ ಆಹಾರ ಧಾನ್ಯಗಳು 50 ಎಲ್ಎಂಟಿಯಾಗಿದ್ದು, 2020-21ರ ಅವಧಿಯಲ್ಲಿ ತಿಂಗಳಿಗೆ 77.40 ಎಲ್ಎಂಟಿಗೆ ಏರಿದೆ ಎಂದು ಅವರು ಮಾಹಿತಿ ನೀಡಿದರು.

 ಪಿಎಂಜಿಕೆ 3-4 ಮತ್ತು ಒಎನ್ಒಆರ್ ಸಿ ಯೋಜನೆಯ ಅನುಷ್ಠಾನ ಮತ್ತು ಪ್ರಗತಿಯ ಬಗ್ಗೆ ಮಾಧ್ಯಮಗಳಿಗೆ ಕಾರ್ಯದರ್ಶಿ ವಿವರಿಸಿದರು. ಪಿಎಂಜಿಕೆ 3 ಮತ್ತು 4 ರ ಅಡಿಯಲ್ಲಿ ಸುಮಾರು 80 ಕೋಟಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಫಲಾನುಭವಿಗಳಿಗೆ ಮೇ 2021 ರಿಂದ ನವೆಂಬರ್ 2021 ರವರೆಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ.ಯನ್ನು ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಸಾಂಕ್ರಾಮಿಕದಿಂದಾಗಿ ಉಂಟಾದ ಹಿಂದೆಂದೂ ಕಾಣದ ಆರ್ಥಿಕ ಅಡೆತಡೆಗಳಿಂದಾಗಿ ಬಡವರ ಮತ್ತು ನಿರ್ಗತಿಕರ ಆಹಾರ ಭದ್ರತಾ ತೊಂದರೆಗಳನ್ನು ತಗ್ಗಿಸಲು ಮೇ ಮತ್ತು ಜೂನ್ 2021 ಅವಧಿಯ ಒಟ್ಟು 79.39 ಎಲ್ಎಂಟಿ (41.85 ಎಲ್ಎಂಟಿ ಅಕ್ಕಿ ಮತ್ತು 37.54 ಎಲ್ಎಂಟಿ ಗೋಧಿ) ಯನ್ನು ಪಿಎಂಜಿಕೆ -3 ಅಡಿಯಲ್ಲಿ ಫಲಾನುಭವಿಗಳಿಗೆ ಒದಗಿಸಲಾಗಿದೆ ಎಂದು ಹೇಳಿದರು. ಪಿಎಂಜಿಕೆ ಹಂತ -4ರಲ್ಲಿ ಒಟ್ಟು 198.78 ಎಲ್ಎಂಟಿ (107.58 ಎಲ್ಎಂಟಿ ಅಕ್ಕಿ + 91.20 ಎಲ್ಎಂಟಿ ಗೋಧಿ) ಅನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈನಿಂದ ನವೆಂಬರ್ 2021 ಅವಧಿಗೆ ಹಂಚಿಕೆ ಮಾಡಲಾಗಿದೆ, ಇದು ಮಾಸಿಕ ಸಬ್ಸಿಡಿ ಪಡೆಯುವ ಎನ್ ಎಫ್ ಎಸ್ ಎ ಆಹಾರ ಧಾನ್ಯಗಳು ಪ್ರತಿ ಎಎವೈ ಮನೆಯೊಂದಕ್ಕೆ 35 Kg ತಿಂಗಳು ಮತ್ತು ಪ್ರತಿ ಪಿಎಚ್ಹೆಚ್ ವ್ಯಕ್ತಿಗೆ 5 ಕೆ.ಜಿ. ನೀಡುವ ಪ್ರಮಾಣಗಳ ಹೊರತಾಗಿದೆ. 

ಜುಲೈ 5 ರ ಹೊತ್ತಿಗೆ, ಪಿಎಂಜಿಕೆ -3 ನಲ್ಲಿ, ಒಟ್ಟು 88.9% ಅಂದರೆ 70.6 ಎಲ್ಎಂಟಿ ಆಹಾರ ಧಾನ್ಯಗಳನ್ನು ಈಗಾಗಲೇ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು

ಪಿಎಂಜಿಕೆಎಯ ಹಂತ -4 (ಜುಲೈನಿಂದ ನವೆಂಬರ್ 2021) ಕುರಿತು ವಿವರಿಸುತ್ತಾ, ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಜೂನ್ 24 ರೊಳಗೆ 5 ತಿಂಗಳವರೆಗೆ 198.78 ಎಲ್ಎಂಟಿ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು. ಎಫ್ಸಿಐ / ಸೆಂಟ್ರಲ್ ಪೂಲ್ (ಕೇಂದ್ರ ಉಗ್ರಾಣ) ನಿಂದ 16 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಧಾನ್ಯಗಳನ್ನು ಪಡೆಯುವುದನ್ನು ಪ್ರಾರಂಭಿಸಲಾಗಿದೆ ಮತ್ತು ಸುಮಾರು 4 ಎಲ್ಎಮ್ಟಿ ಆಹಾರ ಧಾನ್ಯಗಳನ್ನು 2021 ರ ಜುಲೈ 05 ರವರೆಗೆ ಪಡೆಯಲಾಗಿದೆ ಎಂದು ಅವರು ಹೇಳಿದರು. 7 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂತ- IVರ ಆಹಾರ ಧಾನ್ಯಗಳ ವಿತರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಇಲ್ಲಿಯವರೆಗೆ (5 ನೇ ಜುಲೈ), ಸುಮಾರು 14,700 ಮೆ.ಟನ್ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪಿಎಂಜಿಕೆಎ ಆಹಾರ ಧಾನ್ಯಗಳನ್ನು ಪಡೆಯುವಿಕೆ ಮತ್ತು ವಿತರಣೆಯನ್ನು ಕೇಂದ್ರವು ಪ್ರತಿದಿನ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಪರಿಶೀಲಿಸುತ್ತಿದೆ ಎಂದು ಅವರು ಹೇಳಿದರು.

ಸಾಮಾನ್ಯ ಎನ್ಎಫ್ಎಸ್ಎ ಆಹಾರ ಧಾನ್ಯಗಳ ಮೇಲೆ ಮತ್ತು ಅದಕ್ಕಿಂತ ಹೆಚ್ಚಾಗಿ ಪಿಎಂಜಿಕೆಎ ಅಡಿಯಲ್ಲಿ ಉಚಿತ ಆಹಾರ ಧಾನ್ಯದ ಅರ್ಹತೆಯ ಬಗ್ಗೆ ಫಲಾನುಭವಿಗಳನ್ನು ಸಂವೇದನಾಶೀಲಗೊಳಿಸಲು ಜಾಗೃತಿ ಮತ್ತು ಜನಸಂಪರ್ಕ ಸಭೆಗಳನ್ನು ಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಮ್ಮೇಳನದಲ್ಲಿ ತಿಳಿಸಲಾಯಿತು . ಹಿಂದಿ ಮತ್ತು 10 ಪ್ರಾದೇಶಿಕ ಭಾಷೆಗಳಲ್ಲಿ ಇದನ್ನು ಪೋಸ್ಟರ್ಗಳು / ಬ್ಯಾನರ್ಗಳು / ಹೋರ್ಡಿಂಗ್ಸ್ ಗಾಗಿ ಸೃಜನಶೀಲರ ಮೂಲಕ ಮಾಡಲಾಗಿದೆ. ಎಲ್ಲಾ ಎಫ್ಪಿಎಸ್, ಗೋದಾಮುಗಳು ಮತ್ತು ಇತರ ಪಿಡಿಎಸ್ / ಸರ್ಕಾರಿ ಕಚೇರಿಗಳ ಮೂಲಕ ಪಿಎಂಜಿಕೆ ಮತ್ತು ಒಎನ್ ಒ ಆರ್ ಸಿ ಜಾಗೃತಿ ಚಟುವಟಿಕೆಗಳನ್ನು ಪ್ರಾರಂಭಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಲಾಗಿದೆ. ಇತರ ಕೇಂದ್ರ ಸಚಿವಾಲಯಗಳು / ಇಲಾಖೆಗಳನ್ನು ಸಹ ಇದೇ ಮಾದರಿಯಲ್ಲಿ ವಿನಂತಿಸಲಾಗಿದೆ.

ಒಎನ್ ಒ ಆರ್ ಸಿ ಯೋಜನೆಯ ಬಗ್ಗೆ ವಿವರಿಸುತ್ತಾ, ಶ್ರೀ ಪಾಂಡೆ ಅವರು ಒಎನ್ ಒ ಆರ್ ಸಿ ಅನ್ನು ಈಗ 32 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಸಕ್ರಿಯಗೊಳಿಸಲಾಗಿದೆ ಮತ್ತು ಉಳಿದ ರಾಜ್ಯಗಳು ಮುಂದಿನ ದಿನಗಳಲ್ಲಿ ಒಎನ್ ಒ ಆರ್ ಸಿ ಅನ್ನು ಸಕ್ರಿಯಗೊಳಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಒಎನ್ ಒಆರ್ಸಿ ಅಡಿಯಲ್ಲಿ ಸರಾಸರಿ 1.5 ಕೋಟಿ ಮಾಸಿಕ ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಅಂದಾಜು 3,500 ಕೋಟಿ ರೂ.ನಷ್ಟು ಆಹಾರ ಸಹಾಯಧನದಲ್ಲಿ ಏಪ್ರಿಲ್, ಮೇ ಮತ್ತು ಜೂನ್ 2021 ರಲ್ಲಿ ಕ್ರಮವಾಗಿ ಸುಮಾರು 1.4 ಕೋಟಿ, 1.5 ಕೋಟಿ ಮತ್ತು 1.35 ಕೋಟಿ ಪೋರ್ಟಬಿಲಿಟಿ ವಹಿವಾಟುಗಳನ್ನು ಎನ್ಎಫ್ಎಸ್ಎ ಮತ್ತು ಪಿಎಂಜಿಕೆಎ ಆಹಾರ ಧಾನ್ಯಗಳನ್ನು ವಿತರಿಸಿದವು. 

ಆಗಸ್ಟ್ 2019 ರಲ್ಲಿ ಒಎನ್ಒಆರ್ಸಿ ಪ್ರಾರಂಭವಾದಾಗಿನಿಂದ ಈ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 29.3 ಕೋಟಿಗೂ ಹೆಚ್ಚು ಪೋರ್ಟಬಿಲಿಟಿ ವಹಿವಾಟುಗಳು ನಡೆದಿವೆ ಎಂದು ಶ್ರೀ ಪಾಂಡೆ ಮಾಹಿತಿ ನೀಡಿದರು. ಈ ಪೈಕಿ ಸುಮಾರು 21.25 ಕೋಟಿ ಪೋರ್ಟಬಿಲಿಟಿ ವಹಿವಾಟುಗಳು ಏಪ್ರಿಲ್ನ 2020 ರಿಂದ ಜೂನ್ 2021 ರವರೆಗಿನ ಕೋವಿಡ್ -19 ಅವಧಿಯಲ್ಲಿ ದಾಖಲಾಗಿದೆ. ಒಎನ್ಒಆರ್ಸಿ ಮೂಲಕ 20,000 ಕೋಟಿ ರೂ.ಗಳಷ್ಟು ಆಹಾರ ಸಬ್ಸಿಡಿ ನೀಡಲಾಗಿದೆ. 

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ನಕಲಿ ಪಡಿತರ ಚೀಟಿಗಳನ್ನು ತೆಗೆದುಹಾಕುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವಾಗ, ಪಡಿತರ ಚೀಟಿಗಳನ್ನು ತೆಗೆದುಹಾಕುವುದು ಮತ್ತು ಸೇರಿಸುವುದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯವಾಗಿದ್ದು ಮತ್ತು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಕಲಿ ಪಡಿತರ ಚೀಟಿ ಹೊಂದಿರುವವರನ್ನು ಎನ್ಎಫ್ಎಸ್ಎ ಫಲಾನುಭವಿಗಳ ಪಟ್ಟಿಯಿಂದ ತೆಗೆದು ಹಾಕುವ ಮೂಲಕ ಉತ್ತಮ ಕೆಲಸ ಮಾಡುತ್ತಿವೆ ಎಂದು ಶ್ರೀ ಪಾಂಡೆ ಹೇಳಿದರು. ಅರ್ಹ ಫಲಾನುಭವಿಗಳು ಆಹಾರ ಧಾನ್ಯಗಳ ಯೋಜನೆಯ ಲಾಭವನ್ನು ಪಡೆಯುವುದನ್ನು ಇದು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು. ರಾಜ್ಯಗಳು ಮತ್ತು ಇತರ ಸಚಿವಾಲಯಗಳು ಮತ್ತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸರಿಯಾದ ಚರ್ಚೆಯ ನಂತರ ಪಡಿತರ ಚೀಟಿ ಫಲಾನುಭವಿಗಳನ್ನು ಸೇರಿಸಲು ಮತ್ತು ತೆಗೆದುಹಾಕಲು ಸಾಮಾನ್ಯ ಅಂಶಗಳ ಪಟ್ಟಿಗಾಗಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಸಲಹೆಗಳ ಆಧಾರದ ಮೇಲೆ ಇಲಾಖೆಯು ಶೀಘ್ರದಲ್ಲೇ ಒಂದು ಮಾರ್ಗಸೂಚಿಯನ್ನು ಅಂತಿಮಗೊಳಿಸುತ್ತದೆ ಎಂದು ಅವರು ಹೇಳಿದರು.

***



(Release ID: 1732982) Visitor Counter : 242