ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ತಾಜಾ ಮಾಹಿತಿ
Posted On:
05 JUL 2021 9:10AM by PIB Bengaluru
ರಾಷ್ಟ್ರೀಯ ಕೋವಿಡ್ ಲಸಿಕಾ ಅಭಿಯಾನದಲ್ಲಿ ಈವರೆಗೆ 35.28 ಕೋಟಿ ಕೋವಿಡ್ ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 39,796 ಕೋವಿಡ್ ಹೊಸ ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, 4,82,071 ರಷ್ಟಿದೆ. ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.58 ರಷ್ಟಿದೆ.
ದೇಶಾದ್ಯಂತ ಈ ವರೆಗೆ 2,97,00,430 ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 42,352 ಸೋಂಕಿತರು ಗುಣಮುಖರಾಗಿದ್ದಾರೆ. ಸತತ 53 ನೇ ದಿನವಾದ ಇಂದು ಸಹ ಸೋಂಕು ಸಂಖ್ಯೆಗಿಂತ ಚೇತರಿಕೆ ಪ್ರಮಾಣ ಹೆಚ್ಚು ದಾಖಲಾಗಿದೆ. ಒಟ್ಟು ಚೇತರಿಕೆ ದರ ಶೇ 97.11 ರಷ್ಟು ದಾಖಲಾಗಿದೆ. ವಾರದ ಪಾಸಿಟಿವಿಟಿ ದರ ಶೇ 5 ಕ್ಕೂ ಕಡಿಮೆ ಇದ್ದು, ಪ್ರಸ್ತುತ ಈ ಪ್ರಮಾಣ ಶೇ 2.40 ರಷ್ಟಿದೆ.
ಒಟ್ಟಾರೆ ಪಾಸಿಟಿವಿಟಿ ದರ ಶೇ 2.61 ರಷ್ಟಿದ್ದು, ನಿರಂತರ 28 ದಿನಗಳಲ್ಲಿ ಈ ಪ್ರಮಾಣ ಶೇ 5 ಕ್ಕಿಂತ ಕಡಿಮೆ ದಾಖಲಾಗಿದೆ. ಈ ತನಕ ಒಟ್ಟು 41.97 ಕೋಟಿ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ.
***
(Release ID: 1732807)
Visitor Counter : 256
Read this release in:
English
,
Urdu
,
Marathi
,
Hindi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam