ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್ ಲಸಿಕೆ ಪರೀಕ್ಷೆಗಾಗಿ ಪುಣೆ ಮತ್ತು ಹೈದರಾಬಾದ್‌ ನಲ್ಲಿ ಇನ್ನೂ ಎರಡು ಕೇಂದ್ರೀಯ ಔಷಧ ಪ್ರಯೋಗಾಲಯಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧಾರ


ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪೂರಕ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು
ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಗಳು
ಬೆಂಬಲವನ್ನು ಮುಂದುವರಿಸಿದೆ

Posted On: 04 JUL 2021 6:51PM by PIB Bengaluru

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಮತ್ತು ಕೋವಿಡ್ ಲಸಿಕೆಗಳ ವರ್ಧಿತ ಉತ್ಪಾದನೆಯನ್ನು ಪರಿಗಣಿಸಿ, ಲಸಿಕೆಗಳ ತ್ವರಿತ ಪರೀಕ್ಷೆ / ಬಿಡುಗಡೆ ಪೂರ್ವ ಪ್ರಮಾಣೀಕರಣಕ್ಕೆ ಅನುಕೂಲವಾಗುವಂತೆ, ಪೂರ್ವಭಾವಿಯಾಗಿ ಹೆಚ್ಚುವರಿ ಪ್ರಯೋಗಾಲಯಗಳನ್ನು ಕೇಂದ್ರ ಸರ್ಕಾರ ಸ್ಥಾಪಿಸಲಿದೆ.
 
ದೇಶದಲ್ಲೀಗ ಪ್ರಸ್ತುತ ಕಸೌಲಿಯಲ್ಲಿರುವ ಕೇಂದ್ರ ಡ್ರಗ್ಸ್ ಲ್ಯಾಬೊರೇಟರಿ (ಸಿ.ಡಿ.ಎಲ್) ಯನ್ನು ಹೊಂದಿದೆ. ಇದು ಭಾರತದಲ್ಲಿ ಮಾನವ ಬಳಕೆಗಾಗಿ ಉದ್ದೇಶಿಸಲಾದ ಇಮ್ಯುನೊ ಬಯಾಲಾಜಿಕಲ್ಸ್ (ಲಸಿಕೆಗಳು ಮತ್ತು ಆಂಟಿಸೆರಾ) ಗಳ ಪರೀಕ್ಷೆ ಮತ್ತು ಪೂರ್ವ-ಬಿಡುಗಡೆ ಪ್ರಮಾಣೀಕರಣದ ಏಕೈಕ ರಾಷ್ಟ್ರೀಯ ನಿಯಂತ್ರಣ ಪ್ರಯೋಗಾಲಯವಾಗಿದೆ. 
 
ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಗಳು ತನ್ನ ಸ್ವಾಯತ್ತ ಸಂಶೋಧನಾ ಸಂಸ್ಥೆಯಾದಗಳಲ್ಲಿ ಒಂದಾಗಿರುವ ಪುಣೆಯ ಸ್ವನಿಯಂತ್ರಿತ ಸಂಶೋಧನಾ ಸಂಸ್ಥೆಯಾದ ರಾಷ್ಟ್ರೀಯ ಕೇಂದ್ರ (ಎನ್‌.ಸಿ.ಸಿ.ಎಸ್.) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಬಯೋಟೆಕ್ನಾಲಜಿ (ಎನ್‌.ಐ.ಎ.ಬಿ.) ಹೈದರಾಬಾದ್‌ನಲ್ಲಿ ಲಸಿಕೆ ಬ್ಯಾಚ್ ಪರೀಕ್ಷೆ ಮತ್ತು ಲಸಿಕೆಗಳ ಗುಣಮಟ್ಟ ನಿಯಂತ್ರಣಕ್ಕಾಗಿ ಪ್ರಯೋಗಾಲಯ (ಸಿ.ಡಿ.ಎಲ್.) ಎರಡು ನೂತನ ಲಸಿಕೆ ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸಲಿದೆ. ಅದರಂತೆ ಪಿಎಂ-ಕೇರ್ಸ್ ಫಂಡ್ಸ್ ಟ್ರಸ್ಟ್ ಒದಗಿಸಿದ ಧನಸಹಾಯದೊಂದಿಗೆ, ಎರಡು ಹೊಸ ಲಸಿಕೆ ಪರೀಕ್ಷಾ ಸೌಲಭ್ಯಗಳನ್ನು ಡಿ.ಬಿ.ಟಿ- ಎನ್‌.ಸಿ.ಸಿ.ಎಸ್ ಮತ್ತು ಡಿ.ಬಿ.ಟಿ-ಎನ್‌.ಐ.ಎ.ಬಿ.ಗಳಲ್ಲಿ ಕೇಂದ್ರ ಔಷಧ ಪ್ರಯೋಗಾಲಯಗಳಾಗಿ ಸ್ಥಾಪಿಸಲಾಗಿದೆ.  
 
ಕೋವಿಡ್-19 ಸಾಂಕ್ರಾಮಿಕ ರೋಗದಿಂದ, ಲಸಿಕೆ ಅಭಿವೃದ್ಧಿ, ರೋಗನಿರ್ಣಯ ಮತ್ತು ಪರೀಕ್ಷೆ, ಬಯೋ-ಬ್ಯಾಂಕಿಂಗ್ ಮತ್ತು ಜೀನೋಮಿಕ್ ನಿರೀಕ್ಷಣೆ (ಕಣ್ಗಾವಲು) ಸೇರಿದಂತೆ ಮೂಲಭೂತ ಸಂಶೋಧನೆಯ ಜೊತೆಗೆ , ಅವುಗಳ ಸಂಶೋಧನಾ ಅನುವಾದ ಮತ್ತು ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತದೆ, ಹಾಗೂ ವಿವಿಧ ಕೋವಿಡ್-19 ಸಂಬಂಧಿತ ಚಟುವಟಿಕೆಗಳಿಗೆ ಜೈವಿಕ ತಂತ್ರಜ್ಞಾನ ವಿಭಾಗವು ಈ ಕಾರ್ಯಯೋಜನೆಯಲ್ಲಿ ಮುಂಚೂಣಿಯಲ್ಲಿರುತ್ತದೆ,
 
ಭಾರತದಲ್ಲಿ ಸಾಂಕ್ರಾಮಿಕ ರೋಗ ಸಂಬಂಧಿತ ಕೆಲಸದ ಹಲವು ಅಂಶಗಳಿಗೆ ಡಿ.ಬಿ.ಟಿ-ಎನ್‌.ಸಿ.ಸಿ.ಎಸ್ ಮತ್ತು ಡಿ.ಬಿ.ಟಿ-ಎನ್‌.ಐ.ಎ.ಬಿ. ಸಂಸ್ಥೇಗಳು ಆಧಾರಸ್ತಂಭಗಳಾಗಿವೆ ಮತ್ತು ಮಾನವನ ಆರೋಗ್ಯ ಮತ್ತು ಕಾಯಿಲೆಗಳಿಗೆ ಸಂಬಂಧಿಸಿದ ಜೈವಿಕ ತಂತ್ರಜ್ಞಾನದ ಗಡಿನಾಡಿನ ಪ್ರದೇಶಗಳಲ್ಲಿ ಅತ್ಯಾಧುನಿಕ ಸಂಶೋಧನಾ ಉತ್ಪಾದನೆಯ ಪ್ರಗತಿಗೆ ಸಹಕಾರಿಯಾಗಿದೆ.  
 
ಪುಣೆಯ ಎನ್‌.ಸಿ.ಸಿ.ಎಸ್‌.ನಲ್ಲಿರುವ ಸೌಲಭ್ಯವನ್ನು ಈಗ ಕೋವಿಡ್-19 ಪರೀಕ್ಷಿಸಲು ಮತ್ತು ಕೋವಿಡ್-19 ಲಸಿಕೆಗಳನ್ನು ಬಿಡುಗಡೆ ಮಾಡಲು ಇರುವ ಕೇಂದ್ರ ಡ್ರಗ್ಸ್ ಲ್ಯಾಬೊರೇಟರಿ ಎಂದು ಗುರುತಿಸಿ ಇದೇ ಜೂನ್ 28, 2021 ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಸುತ್ತೋಲೆ ಹೊರಡಿಸಲಾಗಿದೆ. ಹೈದರಾಬಾದ್‌ನ ಎನ್‌.ಐ.ಎ.ಬಿ. ಯಲ್ಲಿರುವ ಸೌಲಭ್ಯವು ಕೂಡಾ ಅತಿ ಶೀಘ್ರದಲ್ಲೇ ಅಗತ್ಯ ಅಧಿಸೂಚನೆಯನ್ನು ಸ್ವೀಕರಿಸುವ ಸಾಧ್ಯತೆಯಿದೆ. 
 
ಬಹಳ ಕಡಿಮೆ ಅವಧಿಯಲ್ಲಿ ಪಿಎಂ ಕೇರ್ಸ್ ಫಂಡ್ ಟ್ರಸ್ಟ್‌ ಇದರ ಉದಾರವಾದ ಬೆಂಬಲದೊಂದಿಗೆ, ಎರಡೂ ಸಂಸ್ಥೆಗಳು ಪಟ್ಟುಹಿಡಿದ ಪ್ರಯತ್ನಗಳ ಮೂಲಕ ಈ ಉದ್ದೇಶಕ್ಕಾಗಿ ಅತ್ಯಾಧುನಿಕ ಆಧುನಿಕ ಸೌಲಭ್ಯಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ. ಈ ನೂತನ ಸೌಲಭ್ಯಗಳು ತಿಂಗಳಿಗೆ ಸುಮಾರು 60 ಬ್ಯಾಚ್ ಲಸಿಕೆಗಳನ್ನು ಪರೀಕ್ಷಿಸುವ ನಿರೀಕ್ಷೆಯಿದೆ. ರಾಷ್ಟ್ರದ ಬೇಡಿಕೆಗೆ ಅನುಗುಣವಾಗಿ ಅಸ್ತಿತ್ವದಲ್ಲಿರುವ ಕೋವಿಡ್-19 ಲಸಿಕೆಗಳು ಮತ್ತು ಇತರ ಹೊಸ ಕೋವಿಡ್-19 ಲಸಿಕೆಗಳನ್ನು ಪರೀಕ್ಷಿಸಲು ಈ ಸೌಲಭ್ಯಗಳನ್ನು ಸಜ್ಜುಗೊಳಿಸಲಾಗಿದೆ. ಇದು ಲಸಿಕೆ ತಯಾರಿಕೆ ಮತ್ತು ಸರಬರಾಜನ್ನು ಚುರುಕುಗೊಳಿಸುವುದಲ್ಲದೆ, ಪುಣೆ ಮತ್ತು ಹೈದರಾಬಾದ್ ಗಳು ದೇಶದ ಎರಡು ಲಸಿಕೆ ಉತ್ಪಾದನಾ ಕೇಂದ್ರಗಳಾಗಿವೆ ಎಂದು ಪರಿಗಣಿಸಿ ವ್ಯವಸ್ಥಿತಗೊಳಿಸಲು ಅನುಕೂಲವಾಗಲಿದೆ.

 

image image image

image image

ಪಿಎಂ ಕೇರ್ಸ್  ಫಂಡ್ ಟ್ರಸ್ಟ್‌ನ ಬೆಂಬಲದೊಂದಿಗೆ ಕೋವಿಡ್ -19 ಲಸಿಕೆ ಪರೀಕ್ಷೆಗಾಗಿ ಹೊಸದಾಗಿ ನಿರ್ಮಿಸಲಾದ ಡಿ.ಬಿ.ಟಿ-ಎನ್‌.ಸಿ.ಸಿ.ಎಸ್ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ
 
 

 

ಪಿಎಂ ಕೇರ್ಸ್  ಫಂಡ್ ಟ್ರಸ್ಟ್‌ನ ಬೆಂಬಲದೊಂದಿಗೆ ಕೋವಿಡ್-19 ಲಸಿಕೆ ಪರೀಕ್ಷೆಗಾಗಿ  ನಿರ್ಮಿಸಲಾದ ಡಿ.ಬಿ.ಟಿ-ಎನ್.ಐ.ಎ.ಬಿ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ
 
 
****



(Release ID: 1732749) Visitor Counter : 297