ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಅಹಮದಾಬಾದ್ ನ ಲಸಿಕೆ ಉತ್ಪಾದನಾ ಘಟಕಕ್ಕೆ ಇಂದು ಭೇಟಿ ನೀಡಿದ ಕೇಂದ್ರ ಸಚಿವ ಶ್ರೀ ಮನ್ಸುಖ್ ಮಾಂಡವೀಯ

Posted On: 04 JUL 2021 7:04PM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ, ಬಂದರು ಮತ್ತು ಶಿಪ್ಪಿಂಗ್ ಹಾಗೂ ಜಲಮಾರ್ಗಗಳ ಸಚಿವ(ಸ್ವತಂತ್ರ ಹೊಣೆಗಾರಿಕೆ) ಶ್ರೀ ಮನ್ಸುಖ್ ಮಾಂಡವೀಯ ಅವರು ಅಹಮದಾಬಾದ್ ನ ಝೈಡಸ್ ಬಯೋಟೆಕ್ ಪಾರ್ಕ್ ಗೆ ಇಂದು ಭೇಟಿ ನೀಡಿದ್ದರು.

 


ಸಚಿವರು ತಮ್ಮ ಟ್ವೀಟ್ ನಲ್ಲಿ, ಝೈಡಸ್ ಕ್ಯಾಡಿಲಾ ‘ಝೈಕೋವ್-ಡಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಅದು ವಿಶ್ವದ ಮೊದಲ ಡಿಎನ್ ಎ ಆಧಾರಿತ ಕೋವಿಡ್-19 ಲಸಿಕೆಯಾಗಿದೆ ಎಂದು ಹೇಳಿದ್ದಾರೆ.

 


ಶ್ರೀ ಮಾಂಡವೀಯ ಅವರು ಹೆಸ್ಟರ್ ಬಯೋಸೈನ್ಸ್ ಲಿಮಿಟೆಡ್ ಗೆ ಇಂದು ಭೇಟಿ ನೀಡಿದ್ದರು. ಅವರು ತಮ್ಮ ಟ್ವೀಟರ್ ನಲ್ಲಿ, ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗಾಗಿ ಹೆಸ್ಟರ್, ಭಾರತ್ ಬಯೋಟೆಕ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಸಚಿವರು ಲಸಿಕೆ ಉತ್ಪಾದಕರ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಎಲ್ಲರಿಗೂ ಉಚಿತ ಲಸಿಕೆ ಲಭ್ಯತೆಯನ್ನು ಖಾತ್ರಿಪಡಿಸಲು ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

***8



(Release ID: 1732700) Visitor Counter : 259