ಹಣಕಾಸು ಸಚಿವಾಲಯ

ಒಇಸಿಡಿ/ಜಿ20 ತೆರಿಗೆ ಒಪ್ಪಂದದ ಸಮಗ್ರ ಚೌಕಟ್ಟು ಸೇರಿದ ಭಾರತ

Posted On: 02 JUL 2021 10:23AM by PIB Bengaluru

ಆರ್ಥಿಕತೆಯ ಡಿಜಿಟಲೀಕರಣದಿಂದ ಉದ್ಭವಿಸುವ ತೆರಿಗೆ ಸವಾಲುಗಳನ್ನು ಪರಿಹರಿಸಲು ಒಮ್ಮತದ ಪರಿಹಾರದ ರೂಪರೇಖೆಯನ್ನು ಒಳಗೊಂಡಿರುವ ಮೂಲ ಸವಕಳಿ ಮತ್ತು ಲಾಭ ವರ್ಗಾವಣೆಯ ಒಇಸಿಡಿ / ಜಿ 20 ಸಮಗ್ರ ಚೌಕಟ್ಟಿನ ಬಹುಪಾಲು ಸದಸ್ಯರು(ಭಾರತವನ್ನು ಒಳಗೊಂಡಂತೆ)  ಒಪ್ಪಿಕೊಂಡಿದ್ದಾರೆ.

ಪ್ರಸ್ತಾವಿತ ಪರಿಹಾರವು ಎರಡು ಅಂಶಗಳನ್ನು ಒಳಗೊಂಡಿದೆ- ಸ್ತಂಭ ಒಂದು ಇದು ಮಾರುಕಟ್ಟೆ ವ್ಯಾಪ್ತಿಗೆ ಲಾಭದ ಹೆಚ್ಚುವರಿ ಪಾಲನ್ನು ಮರುಹಂಚಿಕೆ ಮಾಡುವುದಾಗಿದೆ ಮತ್ತು ಎರಡನೇ ಸ್ತಂಭ ಕನಿಷ್ಠ ತೆರಿಗೆಯನ್ನು ಒಳಗೊಂಡಿರುತ್ತದೆ ಮತ್ತು ತೆರಿಗೆ ನಿಯಮಗಳಿಗೆ ಒಳಪಟ್ಟಿರುತ್ತದೆ.

ಲಾಭ ಹಂಚಿಕೆಯ ಪಾಲು ಮತ್ತು ತೆರಿಗೆ ನಿಯಮಗಳಿಗೆ ಒಳಪಟ್ಟಿರುವ ವ್ಯಾಪ್ತಿ ಸೇರಿದಂತೆ ಕೆಲವು ಮಹತ್ವದ ವಿಷಯಗಳು ಮುಕ್ತವಾಗಿದ್ದು ಗಮನಾರ್ಹವಾಗಿವೆ. ಇದಲ್ಲದೆ, ಮುಂದಿನ ತಿಂಗಳುಗಳಲ್ಲಿ ಪ್ರಸ್ತಾವನೆಯ ತಾಂತ್ರಿಕ ವಿವರಗಳನ್ನು ರೂಪಿಸಲಾಗುವುದು ಮತ್ತು ಅಕ್ಟೋಬರ್ ವೇಳೆಗೆ ಒಮ್ಮತದ ಒಪ್ಪಂದವನ್ನು ನಿರೀಕ್ಷಿಸಲಾಗಿದೆ.

ಪರಿಹಾರಗಳಿಗೆ ಆಧಾರವಾಗಿರುವ ತತ್ವಗಳು ಮಾರುಕಟ್ಟೆಗಳಿಗೆ ಹೆಚ್ಚಿನ ಲಾಭ ಕುರಿತ ಭಾರತದ ನಿಲುವು, ಲಾಭ ಹಂಚಿಕೆಯಲ್ಲಿ ಬೇಡಿಕೆಯ ಕಡೆಯ ಅಂಶಗಳ ಪರಿಗಣನೆ, ಗಡಿಯಾಚೆಗಿನ ಲಾಭ ವರ್ಗಾವಣೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಹರಿಸುವ ಅಗತ್ಯ ಮತ್ತು ಒಪ್ಪಂದದ ಮಾರಾಟ ನಿಲ್ಲಿಸಲು ತೆರಿಗೆ ನಿಯಮಕ್ಕೆ ಒಳಪಡುವ ಅಗತ್ಯವನ್ನು ಸಮರ್ಥಿಸುತ್ತದೆ .

ಭಾರತವು ಒಮ್ಮತದ ಪರಿಹಾರದ ಪರವಾಗಿದ್ದು, ಅದು ಕಾರ್ಯಗತಗೊಳಿಸಲೂ ಸರಳವಾಗಿದೆ ಮತ್ತು ಅನುಸರಿಸಲೂ ಸರಳವಾಗಿದೆ. ಅದೇ ವೇಳೆ, ಪರಿಹಾರವು ಮಾರುಕಟ್ಟೆ ನ್ಯಾಯವ್ಯಾಪ್ತಿಗಳಿಗೆ, ವಿಶೇಷವಾಗಿ ಅಭಿವೃದ್ಧಿಶೀಲ ಮತ್ತು ಹೊರಹೊಮ್ಮುವ ಆರ್ಥಿಕತೆಗಳಿಗೆ ಅರ್ಥಪೂರ್ಣ ಮತ್ತು ಸುಸ್ಥಿರ ಆದಾಯದ ಹಂಚಿಕೆಗೆ ಕಾರಣವಾಗುತ್ತದೆ. ಅಕ್ಟೋಬರ್ ವೇಳೆಗೆ ಸ್ತಂಭ ಒಂದು ಮತ್ತು ಸ್ತಂಭ ಎರಡನ್ನು ಪ್ಯಾಕೇಜ್‌ ನಂತೆ ಕಾರ್ಯಗತಗೊಳಿಸಲು ಸಿದ್ಧವಾಗಿರುವ ಒಮ್ಮತದ ಆಧಾರದ ಮೇಲೆ ಭಾರತವು ರಚನಾತ್ಮಕವಾಗಿ ತೊಡಗಿಸಿಕೊಳ್ಳುತ್ತದೆ ಮತ್ತು ಅಂತಾರಾಷ್ಟ್ರೀಯ ತೆರಿಗೆ ಕಾರ್ಯಸೂಚಿಯ ಪ್ರಗತಿಗೆ ಸಕಾರಾತ್ಮಕ ಕೊಡುಗೆ ನೀಡುತ್ತದೆ.

****(Release ID: 1732414) Visitor Counter : 194