ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 16 ರಾಜ್ಯಗಳ ಎಲ್ಲಾ ಜನವಸತಿ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸುವ ಭಾರತ್‌ನೆಟ್ ಅನುಷ್ಠಾನಕ್ಕೆ ಸಂಪುಟದ ಅನುಮೋದನೆ


ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಪಿಪಿಪಿ ಮಾದರಿಯಲ್ಲಿ ಭಾರತ್‌ನೆಟ್ ಅನುಷ್ಠಾನಕ್ಕೆ 19,041 ಕೋಟಿ ರೂ. ಕಾರ್ಯಸಾಧ್ಯತೆಯ ಅಂತರ ನಿಧಿಯ ನೆರವಿಗೆ ಅಂಗೀಕಾರ

ದೇಶದ ಉಳಿದ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತ್‌ನೆಟ್ ಸಂಪರ್ಕ ವಿಸ್ತರಿಸಲೂ ಅನುಮೋದನೆ

Posted On: 30 JUN 2021 4:13PM by PIB Bengaluru

ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಭಾರತ್‌ನೆಟ್ ಪರಿಷ್ಕೃತ ಅನುಷ್ಠಾನ ಕಾರ್ಯತಂತ್ರ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ರಾಜ್ಯಗಳಲ್ಲಿ ಭಾರತ್‌ನೆಟ್ ಈಗ ಗ್ರಾಮ ಪಂಚಾಯಿತಿಗಳನ್ನು (ಜಿಪಿ) ಮೀರಿ ಎಲ್ಲಾ ಜನವಸತಿ ಗ್ರಾಮಗಳಿಗೂ ವಿಸ್ತರಿಸಲಿದೆ. ಪರಿಷ್ಕೃತ ಕಾರ್ಯತಂತ್ರವು ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಬಿಡ್ಡಿಂಗ್ ಪ್ರಕ್ರಿಯೆಯಿಂದ ಆಯ್ಕೆಯಾಗುವ ಗುತ್ತಿಗೆದಾರರಿಂದ ಭಾರತ್‌ನೆಟ್ ರಚನೆ, ಉನ್ನತೀಕರಣ, ಕಾರ್ಯಾಚರಣೆ, ನಿರ್ವಹಣೆ ಮತ್ತು ಬಳಕೆಯನ್ನು ಒಳಗೊಂಡಿದೆ. ಪಿಪಿಪಿ ಮಾದರಿಗೆ ಅನುಮೋದಿಸಲಾದ ಅಂದಾಜು ಗರಿಷ್ಠ ಕಾರ್ಯಸಾಧ್ಯತೆಯ ಅಂತರ ನಿಧಿ 19,041 ಕೋಟಿ ರೂ.ಗಳು.

ಇಂದು ಸಂಪುಟ ಸಭೆಯಲ್ಲಿ ಅನುಮೋದನೆಗೆ ಒಳಪಟ್ಟ ರಾಜ್ಯಗಳೆಂದರೆ ಕರ್ನಾಟಕ, ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ತ್ರಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ. ರಾಜ್ಯಗಳ ಗ್ರಾಮ ಪಂಚಾಯ್ತಿಗಳು ಸೇರಿದಂತೆ ಅಂದಾಜು 3.61 ಲಕ್ಷ ಗ್ರಾಮಗಳನ್ನು ಯೋಜನೆ ಒಳಗೊಳ್ಳುತ್ತದೆ.

ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ಜನವಸತಿ ಗ್ರಾಮಗಳನ್ನು ಒಳಗೊಳ್ಳಲು ಭಾರತ್‌ನೆಟ್ ವಿಸ್ತರಿಸಲು ಸಂಪುಟ ತಾತ್ವಿಕ ಅನುಮೋದನೆ ನೀಡಿತು. ದೂರಸಂಪರ್ಕ ಇಲಾಖೆಯು ಉಳಿದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಪ್ರತ್ಯೇಕವಾಗಿ ಕಾರ್ಯವಿಧಾನಗಳನ್ನು ರೂಪಿಸುತ್ತದೆ.

ಪಿಪಿಪಿ ಮಾದರಿಯು ಕಾರ್ಯಾಚರಣೆ, ನಿರ್ವಹಣೆ, ಬಳಕೆ ಮತ್ತು ಆದಾಯ ಗಳಿಕೆಗಾಗಿ ಖಾಸಗಿ ವಲಯದ ದಕ್ಷತೆಯನ್ನು ಬಳಸಿಕೊಳ್ಳುತ್ತದೆ ಮತ್ತು ಭಾರತ್‌ನೆಟ್ ಅನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿರೀಕ್ಷೆಯಿದೆ. ಆಯ್ದ ಗುತ್ತಿಗೆದಾರ (ಖಾಸಗಿ ವಲಯದ ಪಾಲುದಾರ) ಪೂರ್ವ ನಿರ್ಧಾರಿತ ಸೇವೆಗಳ ಮಟ್ಟದ ಒಪ್ಪಂದದ (ಎಸ್‌ಎಲ್‌ಎ) ಪ್ರಕಾರ ವಿಶ್ವಾಸಾರ್ಹವಾದ, ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುತ್ತಾರೆ. ಎಲ್ಲಾ ಜನವಸತಿ ಗ್ರಾಮಗಳಿಗೆ ವಿಶ್ವಾಸಾರ್ಹ, ಗುಣಮಟ್ಟದ, ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಹೊಂದಿರುವ ಭಾರತ್‌ನೆಟ್ ವಿಸ್ತರಣೆಯು ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು ನೀಡುವ -ಸೇವೆಗಳನ್ನು ಉತ್ತಮವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಇದು ಆನ್‌ಲೈನ್ ಶಿಕ್ಷಣ, ಟೆಲಿಮೆಡಿಸಿನ್, ಕೌಶಲ್ಯ ಅಭಿವೃದ್ಧಿ, -ಕಾಮರ್ಸ್ ಮತ್ತು ಬ್ರಾಡ್‌ಬ್ಯಾಂಡ್‌ನ ಇತರ ಅಪ್ಲಿಕೇಶನ್‌ಗಳನ್ನು ಸಹ ಸಕ್ರಿಯಗೊಳಿಸುತ್ತದೆ. ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕಗಳು, ಡಾರ್ಕ್ ಫೈಬರ್ ಮಾರಾಟ, ಮೊಬೈಲ್ ಟವರ್‌ಗಳ ಫೈಬರೈಸೇಶನ್, -ಕಾಮರ್ಸ್ ಇತ್ಯಾದಿ ಮೂಲಗಳಿಂದ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಡ್‌ಬ್ಯಾಂಡ್‌ನ ಪ್ರಸರಣವು ಡಿಜಿಟಲ್ ಲಭ್ಯತೆಯಲ್ಲಿ ಗ್ರಾಮೀಣ-ನಗರ ವಿಭಜನೆಯನ್ನು ನಿವಾರಿಸುತ್ತದೆ ಮತ್ತು ಡಿಜಿಟಲ್ ಇಂಡಿಯಾದ ಸಾಧನೆಯನ್ನು ವೇಗಗೊಳಿಸುತ್ತದೆ. ಬ್ರಾಡ್‌ಬ್ಯಾಂಡ್‌ನ ಲಭ್ಯತೆ ಮತ್ತು ಪ್ರಸರಣವು ನೇರ ಮತ್ತು ಪರೋಕ್ಷ ಉದ್ಯೋಗ ಮತ್ತು ಆದಾಯವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಪಿಪಿಪಿ ಮಾದರಿ ಅನುಷ್ಠಾನದ ರಾಜ್ಯಗಳು ಉಚಿತವಾಗಿ ಮಾರ್ಗಗಳ ಅಳವಡಿಕೆಗೆ ಸಹಕರಿಸಲಿವೆ

ಭಾರತ್‌ನೆಟ್ ಪಿಪಿಪಿ ಮಾದರಿ ಕೆಳಗಿನ ಗ್ರಾಹಕ ಸ್ನೇಹಿ ಅನುಕೂಲಗಳನ್ನು ಒದಗಿಸುತ್ತದೆ :

()       ಗ್ರಾಹಕರಿಗೆ ಖಾಸಗಿ ವಲಯದ ಪೂರೈಕೆದಾರರಿಂದ ನವೀನ ತಂತ್ರಜ್ಞಾನ

(ಬಿ)       ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಮತ್ತು ಸೇವಾ ಮಟ್ಟ

(ಸಿ)       ವೇಗವಾಗಿ ನೆಟ್‌ವರ್ಕ್ ನಿಯೋಜನೆ ಮತ್ತು ಗ್ರಾಹಕರಿಗೆ ತ್ವರಿತ ಸಂಪರ್ಕ

(ಡಿ)       ಸೇವೆಗಳಿಗೆ ಸ್ಪರ್ಧಾತ್ಮಕ ದರಗಳು

()       ಗ್ರಾಹಕರಿಗೆ ನೀಡುವ ಪ್ಯಾಕೇಜ್‌ಗಳ ಭಾಗವಾಗಿ ಓವರ್ ದಿ ಟಾಪ್ (ಒಟಿಟಿ) ಸೇವೆಗಳು ಮತ್ತು ಬಹು-ಮಾಧ್ಯಮ ಸೇವೆಗಳು ಸೇರಿದಂತೆ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್‌ನಲ್ಲಿನ ವಿವಿಧ ಸೇವೆಗಳು, ಮತ್ತು

(ಎಫ್)   ಎಲ್ಲಾ ಆನ್‌ಲೈನ್ ಸೇವೆಗಳಿಗೆ ಪ್ರವೇಶ

ದೂರಸಂಪರ್ಕ ಕ್ಷೇತ್ರದ ಮೂಲಸೌಕರ್ಯದಲ್ಲಿ ಪಿಪಿಪಿ ಮಾದರಿಯು ಒಂದು ಹೊಸ ಉಪಕ್ರಮವಾಗಿದೆ. ಖಾಸಗಿ ವಲಯದ ಪಾಲುದಾರನು ಈಕ್ವಿಟಿ ಹೂಡಿಕೆಯನ್ನು ತಂದು ಬಂಡವಾಳ ವೆಚ್ಚದ ಕಡೆಗೆ ಮತ್ತು ನೆಟ್‌ವರ್ಕ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಸಂಪನ್ಮೂಲಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ಆದ್ದರಿಂದ, ಭಾರತ್‌ನೆಟ್ ಪಿಪಿಪಿ ಮಾದರಿಯು ಡಿಜಿಟಲ್ ಇಂಡಿಯಾದ ಸಾಧನೆಯನ್ನು ವೇಗಗೊಳಿಸಲು ದಕ್ಷತೆ, ಸೇವೆಯ ಗುಣಮಟ್ಟ, ಗ್ರಾಹಕರ ಅನುಭವ ಮತ್ತು ಖಾಸಗಿ ವಲಯದ ಪರಿಣತಿ, ಉದ್ಯಮಶೀಲತೆ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಇದು ಸಾರ್ವಜನಿಕ ಹಣದ ಗಣನೀಯ ಉಳಿತಾಯಕ್ಕೂ ಕಾರಣವಾಗುತ್ತದೆ.

***


(Release ID: 1731581) Visitor Counter : 228