ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೋವಿಡ್ ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಪರಸ್ಪರ ಲಾಭದಾಯಕವಾದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯನ್ನು ಬಲಪಡಿಸಿದೆ: ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್


ಎರಡನೇ ಸಾರ್ವಜನಿಕ ಆರೋಗ್ಯ ಶೃಂಗಸಭೆ 2021 ರ ಉದ್ಘಾಟನಾ ಭಾಷಣವನ್ನು ಮಾಡಿದರು

Posted On: 28 JUN 2021 5:50PM by PIB Bengaluru

ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಕೋವಿಡ್ ಪರಸ್ಪರ ಲಾಭದಾಯಕವಾದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯನ್ನು ಬಲಪಡಿಸಿದೆ ಎಂದು ಕೇಂದ್ರ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) (ಈಶಾನ್ಯ ಪ್ರದೇಶದ ಅಭಿವೃದ್ಧಿ (ಡೊನರ್), ಎಂಒಎಸ್ ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ) ಡಾ.ಜಿತೇಂದ್ರ ಸಿಂಗ್ ಹೇಳಿದರು.

ಸಿಐಐ ಆಯೋಜಿಸಿದ್ದ 2 ನೇ ಸಾರ್ವಜನಿಕ ಆರೋಗ್ಯ ಶೃಂಗಸಭೆ 2021 ರಲ್ಲಿ ಮಾತನಾಡಿದ ಅವರು, ಕೈಗಾರಿಕೆ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ನಡುವಿನ ಸಹಭಾಗಿತ್ವವು ಆರೋಗ್ಯ ರಕ್ಷಣೆ ಮತ್ತು ರೋಗನಿರ್ಣಯ ವಿತರಣೆ, ಲಸಿಕೆ ಅಭಿವೃದ್ಧಿ, ಆರ್ & ಡಿ, ಗ್ರಾಮೀಣ ಪ್ರದೇಶಗಳಿಗೆ ಟೆಲಿಮೆಡಿಸಿನ್ ಸೌಲಭ್ಯಗಳು ಮತ್ತು ಔಷಧಿಗಳ ಡಿಜಿಟಲ್ ವಿತರಣೆಯಂತಹ ವಿವಿಧ ಮಾದರಿಗಳಲ್ಲಿ ಕೆಲಸ ಮಾಡಬಹುದು ಎಂದು ಹೇಳಿದರು.   ಸಹಭಾಗಿತ್ವವು ಭಾರತದ ಆರೋಗ್ಯ ಕ್ಷೇತ್ರವನ್ನು ನಿಜವಾಗಿಯೂ ಪರಿವರ್ತಿಸುತ್ತದೆ ಎಂದು ಸಚಿವರು ಹೇಳಿದರು.

ಪ್ರಧಾನ ಮಂತ್ರಿಯವರು  ಚಾಲನೆ ನೀಡಿದ ವಿಶ್ವದ ಅತಿದೊಡ್ಡ ಉಚಿತ ಲಸಿಕಾ ಅಭಿಯಾನವನ್ನು   ಉಲ್ಲೇಖಿಸಿದ ಡಾ.ಜಿತೇಂದ್ರ ಸಿಂಗ್, 32 ಕೋಟಿಗಿಂತ ಹೆಚ್ಚಿನ ಡೋಸ್ ಗಳನ್ನು ವಿತರಿಸುವುದರೊಂದಿಗೆ, ಲಸಿಕೆಗಳನ್ನು ನೀಡುವ ವಿಶ್ವದ ಅತಿ ವೇಗದ ಲಸಿಕೆ ನೀಡಿದ ದೇಶ ಭಾರತವಾಗಿದೆ. ಇದು ವಿಶ್ವದ ಅತಿ ವೇಗದ ಲಸಿಕಾ ಅಭಿಯಾನವಾಗಿರುವುದಲ್ಲದೆ, ದೇಶದ ವೈವಿಧ್ಯಮಯ ಸ್ವರೂಪ ಮತ್ತು 135 ಕೋಟಿ ಜನಸಂಖ್ಯೆಯ ಹೊರತಾಗಿಯೂ ಇದು ಸುಗಮವಾಗಿ ಮುಂದುವರಿದಿದೆ ಎನ್ನುವ ಕಾರಣದಿಂದಾಗಿ ಇದು ವಿಭಿನ್ನವಾಗಿದೆ ಎಂದು ಹೇಳಿದರು.

ಟೆಲಿಮೆಡಿಸಿನ್ ಸೌಲಭ್ಯದ ಅಗತ್ಯದ ಬಗ್ಗೆ ಮಾತನಾಡುತ್ತಾ  ಡಾ.ಜಿತೇಂದ್ರ ಸಿಂಗ್ ಅವರು ದೇಶದಲ್ಲಿ ಅಂಶಕ್ಕೆ ಸಾಕಷ್ಟು ಗಮನವನ್ನು ನೀಡಲಾಗಿಲ್ಲ ಎಂದು ವಿಷಾದಿಸಿದರು ಮತ್ತು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮನೆಯಿಂದ ಉಚಿತ ಸಮಾಲೋಚನೆಗಾಗಿ ಅದನ್ನು ದೊಡ್ಡ ರೀತಿಯಲ್ಲಿ ಪುನರುಜ್ಜೀವಗೊಳಿಸುವ ಸಮಯ ಬಂದಿದೆ ಎಂದು ಹೇಳಿದರು. ಶಿಫ್ಟ್ ಆಧಾರದ ಮೇಲೆ ರೋಗಿಗಳ ದೂರಸಂಪರ್ಕಕ್ಕಾಗಿ ಭಾರತದಾದ್ಯಂತ ಮಾನ್ಯತೆ ಪಡೆದ ವೈದ್ಯರ ನೇಮಕಾತಿಗಾಗಿ ಈಗಾಗಲೇ ಮಾರ್ಗಸೂಚಿಗಳು ಅಸ್ತಿತ್ವದಲ್ಲಿವೆ ಎಂದು ಅವರು ಹೇಳಿದರು. ಉಧಂಪುರ್-ಕಥುವಾ-ದೋಡಾದ ತಮ್ಮ ಲೋಕಸಭಾ ಕ್ಷೇತ್ರದಲ್ಲಿ, ಕಥುವಾ ಜಿಲ್ಲಾ ಆಸ್ಪತ್ರೆಯಲ್ಲಿ ಟೆಲಿ-ಕನ್ಸಲ್ಟೇಶನ್ ಸೌಲಭ್ಯವನ್ನು ಸ್ಥಾಪಿಸಲಾಗಿದೆ ಮತ್ತು ಅದರೊಂದಿಗೆ ಎಲ್ಲಾ ಪಂಚಾಯಿತಿಗಳನ್ನು ಜೋಡಿಸಲಾಗಿದೆ ಮತ್ತು ಅದನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

2018 ರಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು  ಪ್ರಾರಂಭಿಸಿದ ಆಯುಷ್ಮಾನ್ ಭಾರತ್ ಯೋಜನೆಯು ಒಂದು ವಿಶಿಷ್ಟ ಮತ್ತು ಯಶಸ್ವಿ ಆರೋಗ್ಯ ವಿಮಾ ಯೋಜನೆ ಎಂದು ಶ್ಲಾಘಿಸಿದ ಡಾ.ಜಿತೇಂದ್ರ ಸಿಂಗ್, ಯೋಜನೆ ನಿರ್ಣಾಯಕ ಹಂತಕ್ಕೆ ಬಂದಿದೆ ಮತ್ತು ಕೋವಿಡ್ ಚಿಕಿತ್ಸೆಯನ್ನು ಸಹ ಯೋಜನೆಯಡಿಯಲ್ಲಿ ಸೇರಿಸಲಾಗಿದೆ. ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಯೊಂದಿಗೆ ಆಯುಷ್ಮಾನ್ ಯೋಜನೆ 50 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಗುರಿಯಾಗಿಸಿಕೊಂಡು ವಿಶ್ವದ ಅತಿದೊಡ್ಡ ಸರ್ಕಾರಿ ಅನುದಾನಿತ ಆರೋಗ್ಯ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಕೆಂಪು ಕೋಟೆಯಿಂದ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ (ಎನ್ಡಿಎಚ್ಎಂ ) ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯನ್ನು ಉಲ್ಲೇಖಿಸಿದ ಡಾ.ಜಿತೇಂದ್ರ ಸಿಂಗ್, ಇದು ದೇಶದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ ಎಂದು ಹೇಳಿದರು. ಎನ್ಡಿಎಚ್ಎಂ ಸಂಪೂರ್ಣ ತಂತ್ರಜ್ಞಾನ ಆಧಾರಿತ ಉಪಕ್ರಮವಾಗಲಿದೆ ಮತ್ತು ಪ್ರತಿಯೊಬ್ಬ ಭಾರತೀಯನು ಆರೋಗ್ಯ ಗುರುತಿನ ಚೀಟಿಯನ್ನು ಪಡೆಯುತ್ತಾನೆ, ಅದು ವ್ಯಕ್ತಿಯ ಬಗ್ಗೆ ಎಲ್ಲಾ ವೈದ್ಯಕೀಯ   ಸಂಬಂಧಿತ ಮಾಹಿತಿಯನ್ನು ಒಳಗೊಂಡಿರುತ್ತದೆ. ಪರಿಣಾಮಕಾರಿ ಕಣ್ಗಾವಲು ಮತ್ತು ರೋಗಗಳ ಮೇಲ್ವಿಚಾರಣೆ ಮತ್ತು ಅದರ ಯಶಸ್ವಿ ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯವನ್ನು ತಂತ್ರಜ್ಞಾನ ಮತ್ತು ದತ್ತಾಂಶಗಳಿಂದ ನಡೆಸಬೇಕು ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು.

ಸಾಂಕ್ರಾಮಿಕ ರೋಗದ  ಮೂರನೆಯ  ಅಲೆಯ ಬಗ್ಗೆ ಭಯವನ್ನು ಹೋಗಲಾಡಿಸಲು ಆರೋಗ್ಯ ವೃತ್ತಿಪರರೊಂದಿಗೆ ಕೆಲಸ ಮಾಡಲು ಡಾ. ಜಿತೇಂದ್ರ ಸಿಂಗ್ ತಮ್ಮ ಮುಕ್ತಾಯದ ಮಾತುಗಳಲ್ಲಿ ಕೇಳಿದರು ಮತ್ತು ಎಲ್ಲರೂ ಕೋವಿಡ್ನ  ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ನಿವಾರಿಸುವತ್ತ ಗಮನಹರಿಸಬೇಕು. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಮುಖ್ಯ ಮಂತ್ರವೆಂದರೆ ಮುನ್ನೆಚ್ಚರಿಕೆಗಾಭರಿ ಅಲ್ಲಎಂದು ಅವರು ಪುನರುಚ್ಚರಿಸಿದರು.

ದೆಹಲಿಯ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು ತಮ್ಮ ಭಾಷಣದಲ್ಲಿ ಭಾರತದಲ್ಲಿ ಜಿಡಿಪಿಯ ಶೇಕಡಾ 2.5 ರಷ್ಟು ಆರೋಗ್ಯ ಬಜೆಟ್ ಇರುವ ದೃಢ ವಾದ ಆರೋಗ್ಯ ರಕ್ಷಣಾ ವ್ಯವಸ್ಥೆಯ ಅಗತ್ಯವಿದೆ ಎಂದು ಹೇಳಿದರು. ಆರೋಗ್ಯವು ರಾಜ್ಯದ ವಿಷಯವಾಗಿದ್ದರೂ ಆರೋಗ್ಯ ವಿಷಯಗಳ ಬಗ್ಗೆ ಕೇಂದ್ರ ಮತ್ತು ರಾಜ್ಯಗಳ ನಡುವೆ ನಿಕಟ ಸಹಯೋಗದ ಅಗತ್ಯವನ್ನು ಅವರು ಒತ್ತಿಹೇಳಿದರು. ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಗೆ ಸಮನಾದ ಪ್ರವೇಶಕ್ಕಾಗಿ, ವಿಶೇಷ ಮಾನವಶಕ್ತಿಯ ವರ್ಧನೆ ಮತ್ತು ದೇಶದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಉನ್ನತೀಕರಿಸುವ ಅವಶ್ಯಕತೆಯಿದೆ ಎಂದು ಡಾ. ಗುಲೇರಿಯಾ ಹೇಳಿದರು.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ.ಆರ್.ಎಸ್.ಶರ್ಮಾ ತಮ್ಮ ಭಾಷಣದಲ್ಲಿ, ಲಸಿಕೆಗಾಗಿ ಕೋವಿನ್ ಪೋರ್ಟಲ್ ಒಯ್ಯಬಲ್ಲ, ಗಾತ್ರದಲ್ಲಿ ಬದಲಾಯಿಸುವ ಸಾಮರ್ಥ್ಯ, ಮತ್ತು ಒಳಗೊಳ್ಳುವಿಕೆಯ ದೃಷ್ಟಿಯಿಂದ ಜಗತ್ತಿನಲ್ಲಿ ವಿಶಿಷ್ಟವಾಗಿದೆ ಮತ್ತು ಇದು ನಾಗರಿಕ ಕೇಂದ್ರಿತ ವೇದಿಕೆಯಾಗಿದೆ ಎಂದು ಹೇಳಿದರು. 300 ಮಿಲಿಯನ್ ಗಿಂತಲೂ ಹೆಚ್ಚು ನೋಂದಣಿ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಎಲ್ಲಾ ವಿವರಗಳೊಂದಿಗೆ  ಪೋರ್ಟಲ್ ನಲ್ಲಿ ಬಹಳ ಸರಳವಾದ ನೋಂದಣಿ ಪ್ರಕ್ರಿಯೆಯೊಂದಿಗೆ ಲಭ್ಯವಿದೆ ಎಂದು ಅವರು ಹೇಳಿದರು. ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಏಷ್ಯಾದ 50 ಕ್ಕೂ ಹೆಚ್ಚು ದೇಶಗಳು ನಮ್ಮ ಲಸಿಕಾ ವ್ಯವಸ್ಥೆಯಲ್ಲಿ ಆಸಕ್ತಿ ತೋರಿಸಿವೆ ಮತ್ತು ನಾವು ಅವರೊಂದಿಗೆ ತಂತ್ರಜ್ಞಾನವನ್ನು ಉಚಿತವಾಗಿ ಹಂಚಿಕೊಳ್ಳುತ್ತೇವೆ ಎಂದು ಡಾ.ಶರ್ಮಾ ಮಾಹಿತಿ ನೀಡಿದರು.

***



(Release ID: 1731033) Visitor Counter : 227