ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಮಂಡಳಿ ಪರೀಕ್ಷೆ ಕುರಿತು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಭಾಗೀದಾರರನ್ನು ಉದ್ದೇಶಿಸಿ ಕೇಂದ್ರ ಶಿಕ್ಷಣ ಸಚಿವರ ಭಾಷಣ
ಪ್ರಕಟಣಾ ದಿನಾಂಕ:
25 JUN 2021 6:30PM by PIB Bengaluru
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ’ನಿಶಾಂಕ್” ಅವರಿಂದು ಮಂಡಳಿ ಪರೀಕ್ಷೆಗಳ ಕುರಿತಂತೆ ವರ್ಚುವಲ್ ಮಾದ್ಯಮದ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಭಾಗೀದಾರರನ್ನುದ್ದೇಶಿಸಿ ಮಾತನಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು 12 ನೇ ತರಗತಿಯ ಸಿ.ಬಿ.ಎಸ್.ಇ. ಮಂಡಳಿ ಪರೀಕ್ಷೆಯನ್ನು ರದ್ದು ಮಾಡುವ ನಿರ್ಧಾರ ಕೈಗೊಂಡುದಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಶ್ರೀ ಪೋಖ್ರಿಯಾಲ್ ಕೃತಜ್ಞತೆ ವ್ಯಕ್ತಪಡಿಸಿ ಧನ್ಯವಾದ ಸಲ್ಲಿಸಿದರು.
ತಮ್ಮ ಭಾಷಣದಲ್ಲಿ ಶ್ರೀ ಪೋಖ್ರಿಯಾಲ್ ಅವರು ಸಿ.ಬಿ.ಎಸ್.ಇ. ಈಗಾಗಲೇ 12 ನೇ ತರಗತಿಯ ಮಂಡಳಿ ಪರೀಕ್ಷೆಗಳ ಮೌಲ್ಯಮಾಪನಕ್ಕೆ ಸಂಬಂಧಿಸಿ ಸಮಗ್ರ ಮಾರ್ಗದರ್ಶಿಗಳನ್ನು ಹೊರಡಿಸಿದೆ ಎಂದು ಹೇಳಿದರು. ಈ ಮೌಲ್ಯಮಾಪನದಿಂದ ತೃಪ್ತಿಯಾಗದಿದ್ದರೆ, ಆ ವಿದ್ಯಾರ್ಥಿಗಳಿಗೆ ಅವರಿಗೆ ಪರಿಸ್ಥಿತಿ ಅನುಕೂಲಕರವಾದಾಗ ಆಗಸ್ಟ್ ನಲ್ಲಿ ಪರೀಕ್ಷೆ ಬರೆಯುವ ಅವಕಾಶ ಒದಗಿಸಿಕೊಡಲಾಗುವುದು ಎಂದವರು ಭರವಸೆ ನೀಡಿದರು.
ವಿದ್ಯಾರ್ಥಿಗಳ ಸುರಕ್ಷೆ, ಆರೋಗ್ಯ ಮತ್ತು ಭವಿಷ್ಯ ಸರಕಾರದ ಅತ್ಯಂತ ಗರಿಷ್ಟ ಆದ್ಯತೆಗಳು ಎಂದೂ ಸಚಿವರು ಪುನರುಚ್ಚರಿಸಿದರು.
***
(ಪ್ರಕಟಣೆ ಐ.ಡಿ.: 1730492)
ವಿಸಿಟರ್ ಕೌಂಟರ್ : 227