ಆಯುಷ್

ಭಾರೀ ಉತ್ಸಾಹದಿಂದ ಜಗತ್ತಿನಾದ್ಯಂತ 7ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

Posted On: 21 JUN 2021 7:53PM by PIB Bengaluru

ಆರೋಗ್ಯ ಮತ್ತು ದೈಹಿಕ ಕ್ಷಮತೆ ಕಾಯ್ದುಕೊಳ್ಳುವ ವಾರ್ಷಿಕ ಉತ್ಸವಅಂತಾರಾಷ್ಟ್ರೀಯ ಯೋಗ ದಿನ’(ಐಡಿವೈ)ಅನ್ನು ಜಗತ್ತಿನಾದ್ಯಂತ ಇಂದು ಅತ್ಯುತ್ಸಾಹದಿಂದ ಆಚರಿಸಲಾಯಿತು. ಕೋವಿಡ್-19 ಸಾಂಕ್ರಾಮಿಕ ಸೃಷ್ಟಿಸಿರುವ ಪ್ರತಿಕೂಲ ಪರಿಸ್ಥಿತಿ ಯೋಗ ಉತ್ಸಾಹಿಗಳ ಮನೋಭಾವವನ್ನು ಕುಂದಿಸುವಲ್ಲಿ ವಿಫಲವಾಗಿದೆ, ಏಕೆಂದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಅವರುಗಳ ನೇತೃತ್ವದಲ್ಲಿ ಲಕ್ಷಾಂತರ ಪುರುಷರು, ಮಹಿಳೆಯರು ಮತ್ತು ಮಕ್ಕಳು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಯೋಗಾಭ್ಯಾಸ ಮಾಡಿದರು.

ಪ್ರಮುಖ ಗಣ್ಯರು ಐಡಿವೈ ಆಚರಣೆಯಲ್ಲಿ ಭಾಗವಹಿಸಿದ್ದರು. ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು, ರಾಷ್ಟ್ರಪತಿ ಭವನದ ಉದ್ಯಾನವನದಲ್ಲಿ ಯೋಗಾಭ್ಯಾಸ ಮಾಡಿದರು. ಅವರು ತಮ್ಮ ಟ್ವೀಟ್ ನಲ್ಲಿ ಸಮಗ್ರ ಆರೋಗ್ಯ ಮತ್ತು ಸಂತೋಷ ಸಾಧಿಸಲು ಮನಸ್ಸು ಮತ್ತು ದೇಹವನ್ನು ಒಗ್ಗೂಡಿಸುವ ನಮ್ಮ ಪೂರ್ವಜರ ದೃಷ್ಟಿ ಯೋಗ, ಇದು ಸಹಸ್ರಾರು ವರ್ಷಗಳಿಂದ ಲಕ್ಷಾಂತರ ಮಂದಿಗೆ ಪ್ರಯೋಜನವನ್ನು ನೀಡಿದೆ ಎಂದು ಹೇಳಿದ್ದಾರೆ.

ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರು ತಮ್ಮ ಪತ್ನಿಯ ಜೊತೆಗೂಡಿ ಯೋಗ ಮಾಡುವ ಮೂಲಕ  ಯೋಗ ದಿನ - 2021 ಆಚರಿಸಿದರು. ಸಾಂಕ್ರಾಮಿಕ ಒಟ್ಟಾರೆ ಯೋಗಕ್ಷೇಮದ ಮಹತ್ವವನ್ನು ಇಡೀ ಜಗತ್ತು ಅರ್ಥಮಾಡಿಕೊಳ್ಳುವಂತೆ ಮಾಡಿದೆ ಮತ್ತು ಯೋಗ ಅತ್ಯಂತ ಸರಳವಾದ, ಆದರೆ ಶಕ್ತಿಯುತವಾದ ಅಭ್ಯಾಸವಾಗಿದ್ದು, ಅದು ಸ್ಥಿತಿ ಸ್ಥಾಪಕತ್ವ ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮ ಆರೋಗ್ಯವನ್ನು ಸಮಗ್ರವಾಗಿ ಸುಧಾರಿಸುತ್ತದೆ ಎಂದು ಹೇಳಿದ್ದಾರೆ.

ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಾಂಕ್ರಾಮಿಕದ ನಡುವೆಯೂ ವರ್ಷದ ಅಂತಾರಾಷ್ಟ್ರೀಯ ದಿನದ ಘೋಷವಾಕ್ಯ – “ಸೌಖ್ಯಕ್ಕಾಗಿ ಯೋಗದೇಶದ ಜನರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ ಎಂದರು. ಪ್ರತಿಯೊಂದು ದೇಶ, ಸಮಾಜ ಮತ್ತು ಸಾರ್ವಜನಿಕರು ಆರೋಗ್ಯದಿಂದಿರಲಿ ಎಂದು ಆಶಿಸಿದ ಅವರು, ನಾವೆಲ್ಲರೂ ಒಗ್ಗೂಡುತ್ತೇವೆ ಮತ್ತು ಪರಸ್ಪರ ಬಲವರ್ಧನೆಯಾಗುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಅವರು ಸಾಂಕ್ರಾಮಿಕದ ಸಮಯದಲ್ಲಿ ಯೋಗದ ಪಾತ್ರದ ಕುರಿತು ಮಾತನಾಡಿದರು. ಯೋಗ ಶಕ್ತಿಯ ಮೂಲವೆಂಬುದು ಸಾಬೀತಾಗಿದೆ ಮತ್ತು ಅದು ಕಷ್ಟಕರ ಸಂದರ್ಭದಲ್ಲಿ ಜನರಿಗೆ ಸಮತೋಲನ ಕಾಯ್ದುಕೊಳ್ಳಲು ನೆರವಾಗಲಿದೆ ಎಂದರು. ಸಾಂಕ್ರಾಮಿಕದ ಸಮಯದಲ್ಲಿ ಹಲವು ರಾಷ್ಟ್ರಗಳು ಯೋಗ ದಿನವನ್ನು ಮರೆಯಬಹುದಾಗಿತ್ತು, ಏಕೆಂದರೆ ಅದು ಅವರ ಅಂತರ್ಗತವಾದ ಸಂಸ್ಕೃತಿಯಾಗಿರಲಿಲ್ಲ, ಆದರೆ ಅದರ ಬದಲಿಗೆ ಜಾಗತಿಕವಾಗಿ ಯೋಗ ಕುರಿತು ಇನ್ನೂ ಅತ್ಯುತ್ಸಾಹ ಹೆಚ್ಚಾಗಿದೆ ಎಂದರು. ಯೋಗ ಜನರಲ್ಲಿ ವಿಶ್ವಾಸವೃದ್ಧಿಗೆ ಸಹಕಾರಿಯಾಗಿದೆ ಮತ್ತು ಜಗತ್ತಿನಾದ್ಯಂತ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬಿದೆ ಎಂದರು.

ಕೊರೊನಾ ಮುಂಚೂಣಿ ಯೋಧರು ಯೋಗವನ್ನು ತಮ್ಮ ರಕ್ಷಾ ಕವಚವನ್ನಾಗಿ ಮಾಡಿಕೊಂಡರು, ಯೋಗದ ಮೂಲಕ ತಮ್ಮನ್ನು ತಾವು ಸದೃಢಗೊಳಿಸಿಕೊಂಡರು ಮತ್ತು ಹೇಗೆ ಜನರು, ವೈದ್ಯರು, ನರ್ಸ್ ಗಳು, ಸೋಂಕಿನ ಪರಿಣಾಮಗಳನ್ನು ಎದುರಿಸಲು ಯೋಗವನ್ನು ಕರೆದೊಯ್ದರು ಎಂದು ಪ್ರಧಾನಮಂತ್ರಿ ಅವರು  ಸ್ಮರಿಸಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ದೆಹಲಿಯ ತಮ್ಮ ನಿವಾಸದಲ್ಲಿ ಯೋಗಾಭ್ಯಾಸ ಮಾಡಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ  ಡಾ. ಹರ್ಷವರ್ಧನ್, ತಮ್ಮ ಕ್ಷೇತ್ರದ ವ್ಯಾಪ್ತಿಯ ಜನರೊಂದಿಗೆ ದೆಹಲಿಯ ಕಾಶ್ಮೇರೆ ಗೇಟ್ ಮಹಾರಾಜ ಅಗ್ರಸೇನ ಪಾರ್ಕ್ ನಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಯೋಗದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು ಮತ್ತು ಕಡಿಮೆ ಜನರಿದ್ದರು. ಯೋಗಾಭ್ಯಾಸದ ಮೂಲಕಸೌಖ್ಯಕ್ಕಾಗಿ ಯೋಗಸಂದೇಶವನ್ನು ಪುನರುಚ್ಚರಿಸಲಾಯಿತು. ಆರೋಗ್ಯ ಸಚಿವರು ಕೋವಿಡ್ ಶಿಷ್ಟಾಚಾರದ ಕಾರಣದಿಂದಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆಚರಣೆಗಳ ಅಬ್ಬರ ಅಡಗಿದೆ. ಆದರೆ ಸಮಗ್ರ ಆರೋಗ್ಯ ಉತ್ತೇಜಿಸುವ ಪಾತ್ರಕ್ಕಾಗಿ ಸಾರ್ವಜನಿಕ ಯೋಗದ ಮಹತ್ವವು ಹಲವು ಪಟ್ಟು ಹೆಚ್ಚಾಗಿದೆ ಎಂದರು.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ(ಸ್ವತಂತ್ರ ಹೊಣೆಗಾರಿಕೆ) ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಯೋಗ ಮಾಡಿದರು. ಕೇಂದ್ರ ಸಚಿವರುಆಜಾ಼ದಿ ಕಾ ಅಮೃತ ಮಹೋತ್ಸವಅಭಿಯಾನದ ಭಾಗವಾಗಿಯೋಗಭಾರತೀಯ ಪರಂಪರೆಅಭಿಯಾನವನ್ನು ಮುನ್ನಡೆಸಿದರು. ಕಾರ್ಯಕ್ರಮವನ್ನು 75 ಸಾಂಸ್ಕೃತಿಕ ಪಾರಂಪರಿಕ ತಾಣಗಳಲ್ಲಿ ಆಯೋಜಿಸಲಾಗಿತ್ತು. 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಅಂಗವಾಗಿ ಸಚಿವಾಲಯ ಎಲ್ಲ ಸಂಸ್ಥೆಗಳು ಮತ್ತು ಸಂಘಟನೆಗಳ ಸಹಭಾಗಿತ್ವದೊಂದಿಗೆ ಆಚರಿಸಿತು. ಸದ್ಯದ ಸಾಂಕ್ರಾಮಿಕ ಸ್ಥಿತಿಗತಿಯನ್ನು ಗಮನದಲ್ಲಿರಿಸಿಕೊಂಡು ಪ್ರತಿಯೊಂದು ತಾಣದಲ್ಲೂ ಯೋಗಪಟುಗಳ ಸಂಖ್ಯೆಯನ್ನು 20ಕ್ಕೆ ಮಿತಿಗೊಳಿಸಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕೂಡ 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿತು. ಶ್ರೀಮತಿ ಸ್ಮೃತಿ ಜುಬೆನ್ ಇರಾನಿ ತಮ್ಮ ಟ್ವೀಟ್ ಸಂದೇಶದಲ್ಲಿಭಾರತದ ಶ್ರೀಮಂತ ವೈಭವ ಹೊಂದಿರುವ ಸಮಗ್ರ ಯೋಗಕ್ಷೇಮದ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಜಾಗತಿಕ ಮನ್ನಣೆ ಸಿಕ್ಕಿ 7 ವರ್ಷವಾಗಿದೆ. ವರ್ಷದ ಘೋಷವಾಕ್ಯಸೌಖ್ಯಕ್ಕಾಗಿ ಯೋಗಇದು ಮೊದಲಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದೆ. ಸಮಗ್ರ ಮಾನಸಿಕ ಮತ್ತು ದೈಹಿಕ ಕ್ಷಮತೆಗಾಗಿ ನಮ್ಮ ದಿನ ನಿತ್ಯದ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳೋಣಎಂದು ಹೇಳಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಾಮಾಜಿಕ ವ್ಯಕ್ತಿಗತ ಅಂತರವನ್ನು ಕಾಯ್ದುಕೊಂಡು ಸಚಿವಾಲಯದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ದೂರದರ್ಶನ ವಾಹಿನಿಯಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ 7.45 ವರೆಗೆ ಪ್ರಸಾರವಾದ ಯೋಗ ಕಾರ್ಯಕ್ರಮವನ್ನು ವೀಕ್ಷಿಸುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯಲ್ಲಿ ಭಾಗವಹಿಸಿದ್ದರು

ಸಂದರ್ಭದಲ್ಲಿ ಆಯುಷ್ ಖಾತೆ ರಾಜ್ಯ ಸಚಿವ ಶ್ರೀ ಕಿರಣ್ ರಿಜಿಜು, 7ನೇ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರನ್ನೂ ಅಭಿನಂದಿಸಿದರು ಮತ್ತು 2014ರಲ್ಲಿ ಜಾಗತಿಕ ಮಾನ್ಯತೆ ದೊರೆತ ನಂತರ ಅದರಿಂದಾಗುವ ಲಾಭಗಳ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿದರು. ಯೋಗ ಕೇವಲ ಭಾರತದಲ್ಲಿ ಚಾಲ್ತಿಯಲ್ಲಿರುವ ಪದ್ಧತಿಯಲ್ಲ, ಅದು ಜಗತ್ತಿಗೆ ಭಾರತದ ಉಡುಗೊರೆಯಾಗಿದೆ. ಅದನ್ನು ಪ್ರತಿಯೊಬ್ಬರೂ ತಮ್ಮದೇ ಎಂದು ಸ್ವೀಕರಿಸಿದ್ದಾರೆ ಎಂದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ, ನಾಗ್ಪುರದಲ್ಲಿ ನಡೆದಯೋಗಭಾರತೀಯ ಪರಂಪರೆಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೆ ಅವರು ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಆಯೋಜಿಸಲಾಗಿದ್ದ ವೆಬಿನಾರ್ ಉದ್ದೇಶಿಸಿ ಮಾತನಾಡಿದರು ಮತ್ತು ಯೋಗ ಎಲ್ಲ ರೋಗಗಳನ್ನು ನಿರ್ಮೂಲನೆ ಮಾಡುತ್ತದೆ ಮತ್ತು ಜನರ ಜೀವನದಿಂದ  ಅಸ್ವಸ್ಥತೆಗಳನ್ನು ದೂರ ಮಾಡುತ್ತದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ವೆಬಿನಾರ್ ನಲ್ಲಿ ಹೃದಯದ ಆರೋಗ್ಯದ ಸುಧಾರಣೆಯಲ್ಲಿ ಯೋಗದ ಪ್ರಾಮುಖ್ಯ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಜವಳಿ ಸಚಿವಾಲಯ ಕೂಡ 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿತು. ಜವಳಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಉಪೇಂದ್ರ ಪ್ರಸಾದ್ ಸಿಂಗ್ ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಸಚಿವಾಲಯದ ಅಧಿಕಾರಿಗಳು ಯೋಗಾಭ್ಯಾಸ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು

ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ ಇಂದು ಯೋಗ ವಿಜ್ಞಾನ ಕುರಿತ ಎನ್ಐಒಎಸ್ ಡಿಪ್ಲೊಮಾ ಕೋರ್ಸ್ ಗೆ ಚಾಲನೆ ನೀಡಿದರು. ಸಚಿವರು ಕೋರ್ಸ್ ಗೆ ಸಂಬಂಧಿಸಿದ ಸ್ವಯಂ ನಿರ್ದೇಶನಗಳ ಸಾಮಗ್ರಿಗಳನ್ನು ಬಿಡುಗಡೆ ಮಾಡಿದರು. ಯೋಗದ ಪ್ರಾಮುಖ್ಯ ಕುರಿತು ಪ್ರಸ್ತಾಪಿಸಿದ ಶ್ರೀ ಧೋತ್ರೆ ಅವರು ಇದು ಹಲವು ಉದ್ಯೋಗಗಳನ್ನು ಸೃಷ್ಟಿಸಿದೆ ಎಂದರು. ಯೋಗ ವಿಜ್ಞಾನ ಕೋರ್ಸ್ ಗಳನ್ನು ತೇರ್ಗಡೆಯಾದವರು ಉದ್ಯೋಗ ಬಯಸುವವರಿಗಿಂತ ಉದ್ಯೋಗದಾತರಾಗುತ್ತಾರೆ.

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಶ್ರೀ ಮುಖ್ತಾರ್ ಅಬ್ಬಾಸ್ ನಖ್ವಿ, ಉತ್ತರ ಪ್ರದೇಶದ ತಮ್ಮ ಸ್ವಂತನಗರಿ ರಾಮ್ಪುರದಲ್ಲಿ ಯೋಗ ಪ್ರದರ್ಶಿಸಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಟಣಾ ವಿಭಾಗದ ನಿರ್ದೇಶನಾಲಯ 7ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ಸಚಿತ್ರ ಆವೃತ್ತಿಯ ಪರಿಷ್ಕೃತ ಪುಸ್ತಕವನ್ನು ಮರು ಮುದ್ರಣ ಮಾಡಿದೆ.

ಇಂಧನ ಸಚಿವಾಲಯದಡಿ ಬರುವ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳಾದ ರಾಷ್ಟ್ರೀಯ ಅಣು ವಿದ್ಯುತ್ ನಿಗಮ ಮತ್ತು ಎನ್ ಎಚ್ ಪಿಸಿ ನಿಯಮಿತ ತನ್ನೆಲ್ಲಾ ವಿದ್ಯುತ್ ಕೇಂದ್ರಗಳು, ಯೋಜನೆಗಳು ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ ಅತ್ಯುತ್ಸಾಹದಿಂದ ನಿರ್ದೇಶನಾಲಯ 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದವು.

ಇಂಧನ ಸಚಿವಾಲಯದಡಿ ಬರುವ ಸಿಪಿಎಸ್ ಯು ಇಂಡಿಯನ್ ಗ್ರಿಡ್ ಆಪರೇಟರ್ ಪಿಒಎಸ್ಒಸಿಒ ನಲ್ಲೂ  7ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಸುಮಾರು 600 ಸಿಬ್ಬಂದಿ ಹಾಗೂ ಅವರ ಕುಟುಂಬದವರು ಆನ್ ಲೈನ್ ಮೂಲಕ ಪಾಲ್ಗೊಂಡಿದ್ದರುಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಷನ್ ಆರ್ಟ್ ಆಫ್ ಲಿವಿಂಗ್ ಸಹಭಾಗಿತ್ವದಲ್ಲಿ ಯೋಗ ಶಿಬಿರವನ್ನು ನಡೆಸಿತು.

ಪಾರಾದೀಪ್ ಬಂದರು ಟ್ರಸ್ಟ್ ಕೂಡ ಭಾರೀ ಉತ್ಸಾಹದೊಂದಿಗೆ  7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ವರ್ಚುವಲ್ ರೂಪದಲ್ಲಿ ಆಚರಿಸಿತು. ಪಿಪಿಟಿಯ ಉಪಾಧ್ಯಕ್ಷ ಶ್ರೀ .ಕೆ. ಬೋಸ್ ಕಾರ್ಯಕ್ರಮ ಉದ್ಘಾಟಿಸಿದರು.

***(Release ID: 1729327) Visitor Counter : 39


Read this release in: English , Hindi , Urdu