ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ದೇಶದ ವಿವಿಧ ಭಾಗಗಳಲ್ಲಿ ಐದು “ದಿವ್ಯಾಂಗ ಖೇಲ್ ಕೇಂದ್ರಗಳ” ಸ್ಥಾಪನೆ, ಶ್ರೀ ತಾವರಚಂದ್ ಗೆಹ್ಲೋಟ್ ಘೋಷಣೆ.


ಭಾರತದ ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ನೆನಪಿನಲ್ಲಿ ಆಯೋಜಿಸಲಾದ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ದಿವ್ಯಾಂಗರಿಗೆ ನೆರವು ಮತ್ತು ಅವಶ್ಯ ಸಲಕರಣೆಗಳ ವಿತರಣೆ

Posted On: 20 JUN 2021 5:05PM by PIB Bengaluru

ದೇಶದ ದಿವ್ಯಾಂಗರಲ್ಲಿ ಕ್ರೀಡಾ ಕ್ಷೇತ್ರದತ್ತ ಇರುವ ಒಲವನ್ನು ಗಮನಿಸಿ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ  ಅವರ ಉತ್ತಮ ಸಾಧನೆಯನ್ನು ಪರಿಗಣಿಸಿ ಸಚಿವಾಲಯವು ಐದು ದಿವ್ಯಾಂಗ ಖೇಲ್ ಕೇಂದ್ರಗಳನ್ನುದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಲು ನಿರ್ಧರಿಸಿದೆ, ಇವುಗಳಲ್ಲಿ ಅಹ್ಮದಾಬಾದ್ ನಗರವನ್ನು ಗುರುತಿಸಲಾಗಿದ್ದು, ಅಲ್ಲಿ ಒಂದು ಕೇಂದ್ರವನ್ನು ತೆರೆಯಲಾಗುವುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವರಾದ ಶ್ರೀ ತಾವರಚಂದ್ ಗೆಹ್ಲೋಟ್ ಅವರು ಹೇಳಿದ್ದಾರೆ.

ಗುಜರಾತಿನ ಜಾಮ್ ನಗರದಲ್ಲಿಂದು ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಉದ್ಯೋಗ ಸಚಿವಾಲಯದ  .ಡಿ..ಪಿ. ಯೋಜನೆ ಅಡಿಯಲ್ಲಿ ದಿವ್ಯಾಂಗರಿಗೆ ಸಲಕರಣೆ ಮತ್ತು ನೆರವು ವಿತರಿಸುವ  ಸಾಮಾಜಿಕ್ ಅಧಿಕಾರಿತ ಶಿವಿರ್ನ್ನು ಉದ್ದೇಶಿಸಿ ವರ್ಚುವಲ್ ಮೂಲಕ ಮಾತನಾಡಿದ ಸಚಿವರು ಕೇಂದ್ರ ಸರಕಾರವು 2808 ಫಲಾನುಭವಿಗಳಿಗಾಗಿ ವಿದ್ಯಾರ್ಥಿ ವೇತನ ಯೋಜನೆ ಅಡಿಯಲ್ಲಿ ಗುಜರಾತಿಗೆ 8.06 ಕೋ.ರೂ.ಗಳನ್ನು ಬಿಡುಗಡೆ ಮಾಡಿದೆ ಎಂದರು. 709 ರೈಲ್ವೇ ನಿಲ್ದಾಣಗಳು, 10,175 ಬಸ್ ನಿಲ್ದಾಣಗಳು, ಮತ್ತು 683 ಜಾಲತಾಣಗಳನ್ನು ಸುಗಮ್ಯ ಭಾರತ್ ಅಭಿಯಾನದ ವ್ಯಾಪ್ತಿಗೆ ತರಲಾಗಿದೆ ಎಂದ ಅವರು ಮಧ್ಯಪ್ರದೇಶದ ಸೀಹೋರ್ ನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರದ ಕಾಮಗಾರಿಯನ್ನು ಸಿ.ಪಿ.ಡಬ್ಲ್ಯು.ಡಿ. ಆರಂಭಿಸಿದೆ ಎಂದೂ ತಿಳಿಸಿದರು.

ಸಮಾರಂಭದಲ್ಲಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಅವರು ದಿವ್ಯಾಂಗರ ಬಗ್ಗೆ ಕಾಳಜಿ ತೋರದ ಸಮಾಜ ತಾನೇ ಅಂಗವೈಕಲ್ಯದಿಂದ ಬಳಲುತ್ತಿರುವ ಸಮಾಜವಾಗಿರುತ್ತದೆ ಎಂದರು. 2016ರಲ್ಲಿ ಅಂಗವೈಕಲ್ಯ ಇರುವ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ಜಾರಿಗೆ ಬಂದಿದೆ. ಇದು ಹೆಚ್ಚು ಭದ್ರತೆ ನೀಡುವುದು ಮಾತ್ರವಲ್ಲದೆ ದೇಶಾದ್ಯಂತ ಅಂಗವೈಕಲ್ಯ ಇರುವ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಖಾತ್ರಿಪಡಿಸುತ್ತದೆ ಮತ್ತು ರಕ್ಷಿಸುತ್ತದೆ ಎಂದರು. ಮುಖ್ಯಮಂತ್ರಿಗಳು ದಿವ್ಯಾಂಗರ ಸಶಕ್ತೀಕರಣದ ಅಗತ್ಯವನ್ನು ಪ್ರತಿಪಾದಿಸಿದರಲ್ಲದೆ ದೇಶದ ಸಮಗ್ರ ಅಭಿವೃದ್ಧಿಗಾಗಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದೂ ಹೇಳಿದರು.

ಶಿಬಿರವನ್ನು ಅಂಗವೈಕಲ್ಯ ಇರುವ ವ್ಯಕ್ತಿಗಳ ಸಶಕ್ತೀಕರಣ ಇಲಾಖೆ (ಡಿ.ಪಿ.ಪಿ.ಡಬ್ಲ್ಯು.ಡಿ.) ಯು .ಎಲ್..ಎಂ.ಸಿ.. ಮತ್ತು ಜಾಮ್ ನಗರ ಜಿಲ್ಲಾಡಳಿತಗಳ ಸಹಕಾರದಲ್ಲಿ ಆಯೋಜಿಸಿತ್ತು. ಒಟ್ಟು 3,57 ಕೋ.ರೂ. ಮೌಲ್ಯದ 6225 ಸಲಕರಣೆಗಳನ್ನು ಮತ್ತು ಸಹಾಯಕ ಉಪಕರಣಗಳನ್ನು ಉಚಿತವಾಗಿ 3805 ದಿವ್ಯಾಂಗರಿಗೆ ಬ್ಲಾಕ್/ಪಂಚಾಯತ್ ಮಟ್ಟದಲ್ಲಿ ವಿತರಿಸಲಾಗುತ್ತದೆ . ಕೋವಿಡ್ -19 ಹಿನ್ನೆಲೆಯಲ್ಲಿ ಮೊದಲೇ ಗುರುತಿಸಲಾದ ಒಟ್ಟು 3805 ದಿವ್ಯಾಂಗ ಫಲಾನುಭವಿಗಳಲ್ಲಿ ಜಾಮ್ ನಗರದ ನಗರ ಬ್ಲಾಕಿನ ಸುಮಾರು 50 ಫಲಾನುಭವಿಗಳಿಗೆ ನೆರವು ವಿತರಣಾ ಕಾರ್ಯಕ್ರಮದ ಉದ್ಘಾಟನಾ  ಸಮಾರಂಭದಲ್ಲಿ ಸವಲತ್ತುಗಳನ್ನು ವಿತರಿಸಲಾಯಿತು. ಗುರುತಿಸಲಾದ ಉಳಿದ ಫಲಾನುಭವಿಗಳಿಗೆ ಅವರಿಗೆ ಸೂಚಿಸಲಾದ ನೆರವಿನ  ಉಪಕರಣಗಳನ್ನು ಅವರಿಗೆ ಹತ್ತಿರದ ಯಾ ಬ್ಲಾಕ್ ಗಳ ಪರಿಸರದಲ್ಲಿ ಸರಣಿ ವಿತರಣಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿತರಿಸಲಾಗುವುದು. ಜಾಮ್ ನಗರ, ದೇವಭೂಮಿ, ದ್ವಾರಕಾ ಜಿಲ್ಲೆಗಳಲ್ಲಿ ವಿತರಣಾ ಶಿಬಿರಗಳನ್ನು ನಡೆಸಲಾಗುವುದು.

ದಿವ್ಯಾಂಗ ಫಲಾನುಭವಿಗಳನ್ನು ಗುರುತಿಸುವ ಮೌಲ್ಯಮಾಪನ ಶಿಬಿರಗಳನ್ನು ಗುಜರಾತಿನ ಜಾಮ್ ನಗರ  ಮತ್ತು ದೇವಭೂಮಿ ದ್ವಾರಕಾಗಳಲ್ಲಿ ಜಿಲ್ಲಾಡಳಿತಗಳ ನೆರವಿನೊಂದಿಗೆ  ಆರು ಸ್ಥಳಗಳಲ್ಲಿ (ಧ್ರೋಲ್, ಲಾಲ್ಪುರ, ಜಾಮ್ ನಗರ ನಗರ , ಜಾಮ್ಖಂಭಾಲಿಯಾ ಮತ್ತು ದ್ವಾರಕಾ) .ಎಲ್..ಎಂ.ಸಿ..ದಿಂದ .ಡಿ..ಪಿ. ಯೋಜನೆ ಅಡಿಯಲ್ಲಿ ಆಯೋಜಿಸಲಾಗಿತ್ತು. ಜಾಮ್ ನಗರ ಸಂಸದೀಯ ಕ್ಷೇತ್ರದ ಜಾಮ್ ನಗರ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಮತ್ತು ದೇವಭೂಮಿ ದ್ವಾರಕಾ ಜಿಲ್ಲೆಯ ಎರಡು ಸ್ಥಳಗಳಲ್ಲಿ 2019 ಫೆಬ್ರವರಿ 6 ರಿಂದ 11 ರವರೆಗೆ ಶಿಬಿರಗಳನ್ನು ನಡೆಸಲಾಗಿತ್ತು.

ಬ್ಲಾಕ್ ಮಟ್ಟದಲ್ಲಿ ನಡೆದ ಮೌಲ್ಯಮಾಪನ ಶಿಬಿರಗಳಲ್ಲಿ ನೊಂದಾಯಿಸಲ್ಪಟ್ಟ ಗುರುತಿಸಲಾದ ದಿವ್ಯಾಂಗರಿಗೆ ವಿತರಿಸಲಾಗುವ  ವಿವಿಧ ರೀತಿಯ ಸಹಾಯಕ ಉಪಕರಣಗಳಲ್ಲಿ 220 ಮೋಟಾರೀಕೃತ ತ್ರಿಚಕ್ರ ವಾಹನಗಳು, 665 ತ್ರಿಚಕ್ರ ವಾಹನಗಳು, 385 ವೀಲ್ ಚೇರ್ ಗಳು, 998 ಕ್ರಚ್ ಗಳು, ನಡೆದಾಡಲು ಅನುಕೂಲತೆ ಒದಗಿಸುವ  621 ವಾಕಿಂಗ್ ಸ್ಟಿಕ್ ಗಳು, 60 ರೊಲೇಟರ್ ಗಳು , 185 ಸ್ಮಾರ್ಟ್ ಫೋನ್ ಗಳು, 437 ಸ್ಮಾರ್ಟ್ ಬೆತ್ತಗಳು, ದೃಷ್ಟಿಹೀನರಿಗೆ ಓದಲು ಸಹಾಯ ಮಾಡುವ 40 ಡೈಸಿ ಪ್ಲೇಯರುಗಳು, 24 ಬ್ರೈಲ್ ಕಿಟ್ ಗಳು, 6 ಬ್ರೈಲ್ ಬೆತ್ತಗಳು, 163 ಸಿ.ಪಿ. ಕುರ್ಚಿಗಳು, 856 ಎಂ.ಎಸ್..ಡಿ ಕಿಟ್ ಗಳು, 60 ಸೆಲ್ ಫೋನ್ ಗಳೊಂದಿಗೆ 165 .ಡಿ.ಎಲ್. ಕಿಟ್ ಗಳು (ಕುಷ್ಟ ರೋಗಿಗಳಿಗೆ ), 606 ಶ್ರವಣ ಸಾಧನಗಳು, 765 ಕೃತಕ ಅವಯವಗಳು ಮತ್ತು ಕ್ಯಾಲಿಪರ್ ಗಳು ಇತ್ಯಾದಿ ಸೇರಿವೆ.

ಅವಶ್ಯ ಸಲಕರಣೆಗಳನ್ನು, ಜೋಡಣೆಗಳನ್ನು ಖರೀದಿಸುವ ಮತ್ತು ಅಂಗವೈಕಲ್ಯ ಇರುವ ವ್ಯಕ್ತಿಗಳಿಗೆ ನೆರವು ನೀಡುವ ಯೋಜನೆ (.ಡಿ..ಪಿ.)  ಅನ್ವಯ  ಶಿಬಿರಗಳನ್ನು ಸಂಘಟಿಸಲಾಗಿತ್ತು. .ಡಿ..ಪಿ.ಯು ದಿವ್ಯಾಂಗರಿಗೆ ಸಹಾಯಕ ಸಲಕರಣೆಗಳನ್ನು ನೀಡುವ ಮತ್ತು ನೆರವು ನೀಡುವ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಮತ್ತು ಇದನ್ನು ಭಾರತೀಯ ಕೃತಕ ಅವಯವ ತಯಾರಿಕಾ ನಿಗಮ (.ಎಲ್..ಎಂ.ಸಿ..) ವು ಆಯೋಜಿಸುತ್ತದೆ. ಇದು ಸಾಮಾಜಿಕ ನ್ಯಾಯ ಮತ್ತು ಉದ್ಯೋಗ ಸಚಿವಾಲಯದಡಿಯ ಒಂದು ಉದ್ಯಮವಾಗಿದೆ.

***



(Release ID: 1728888) Visitor Counter : 201