ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕಾ ಅಭಿಯಾನದ ತಾಜಾ ಮಾಹಿತಿ


28.50ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಬಳಿ ಸದ್ಯ 2.87ಕೋಟಿ ಡೋಸ್ ಗೂ ಅಧಿಕ ಲಸಿಕೆ ನೀಡಲು ಲಭ್ಯ

Posted On: 19 JUN 2021 10:54AM by PIB Bengaluru

ದೇಶಾದ್ಯಂತ ನಡೆಯುತ್ತಿರುವ ಲಸಿಕಾ ಕಾರ್ಯಕ್ರಮದ ಭಾಗವಾಗಿ, ಭಾರತ ಸರ್ಕಾರ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪೂರ್ಣ ನೆರವು ನೀಡುತ್ತಿದೆ. ಅಲ್ಲದೆ, ಭಾರತ ಸರ್ಕಾರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೇರವಾಗಿ ಲಸಿಕೆಯನ್ನು ಖರೀದಿಸಲು ಅನುವು ಮಾಡಿಕೊಟ್ಟಿದೆ.  ಸಾಂಕ್ರಾಮಿಕ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ನಡವಳಿಕೆ ಮಾತ್ರವಲ್ಲದೆ, ಲಸಿಕೆ ನೀಡಿಕೆ ಕೂಡ ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದ ಭಾಗವಾಗಿದೆ.

2021ರ ಮೇ 1ರಿಂದ 3ನೇ ಹಂತದ ಉದಾರೀಕೃತ ಮತ್ತು ವೇಗವರ್ಧಕ ಕೋವಿಡ್ -19 ಲಸಿಕಾ ಅಭಿಯಾನ ಜಾರಿಗೊಳಿಸಲಾಗುತ್ತಿದೆ.

ಈ ಕಾರ್ಯತಂತ್ರದಡಿ, ಭಾರತ ಸರ್ಕಾರ ಎಲ್ಲ ಉತ್ಪಾದಕರಿಂದ ಕೇಂದ್ರೀಯ ಔಷಧ ಪ್ರಯೋಗಾಲಯ (ಸಿಡಿಎಲ್ ) ಅನುಮೋದಿಸುವ ಶೇ.50ರಷ್ಟು ಲಸಿಕೆಗಳನ್ನು ಪ್ರತಿ ತಿಂಗಳು ತಾನೇ ಖರೀದಿಸುತ್ತದೆ. ಆ ಲಸಿಕೆಗಳನ್ನು ಮೊದಲಿನಂತೆ ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡುವುದನ್ನು ಮುಂದುವರಿಸಿದೆ.

ಈವರೆಗೆ ಭಾರತ ಸರ್ಕಾರದ ಮೂಲಕ (ಉಚಿತವಾಗಿ ನೀಡುವ ಮಾರ್ಗದಲ್ಲಿ) ಮತ್ತು ನೇರವಾಗಿ ರಾಜ್ಯವೇ ಖರೀದಿಸುವ ವರ್ಗದಲ್ಲಿ 28.50 ಕೋಟಿ (28,50,99,130 ) ಲಸಿಕೆಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ.

ಆ ಪೈಕಿ  ಪೋಲಾಗಿರುವುದು ಸೇರಿ ಒಟ್ಟು 25,63,28,045 ಡೋಸ್ ಬಳಕೆಯಾಗಿದೆ  (ಇಂದು ಬೆಳಿಗ್ಗೆ 8ಗಂಟೆವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ)

ಇನ್ನೂ 2.87 ಕೋಟಿ (2,87,71,085) ಕೋವಿಡ್ ಲಸಿಕೆಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಬಳಿ ನೀಡಲು ಲಭ್ಯವಿವೆ.

ಅಲ್ಲದೆ, ಮುಂದಿನ 3 ದಿನಗಳೊಳಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 52,26,460ಕ್ಕೂ  ಅಧಿಕ ಡೋಸ್ ಲಸಿಕೆಗಳನ್ನು ಸ್ವೀಕರಿಸಲಿವೆ.

****


(Release ID: 1728488) Visitor Counter : 187