ಪ್ರವಾಸೋದ್ಯಮ ಸಚಿವಾಲಯ
ಭಾರತದಲ್ಲಿ ವೈದ್ಯಕೀಯ ಮತ್ತು ಕ್ಷೇಮ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕರಡು ರಾಷ್ಟ್ರೀಯ ಕಾರ್ಯತಂತ್ರ ಮತ್ತು ಮಾರ್ಗಸೂಚಿಗಳ ಕುರಿತು ಪ್ರವಾಸೋದ್ಯಮ ಸಚಿವಾಲಯದಿಂದ ಹಿಮ್ಮಾಹಿತಿ/ಸಲಹೆಗಳ ಆಹ್ವಾನ
ಸಲಹೆಗಳನ್ನು ಸಚಿವಾಲಯಕ್ಕೆ 2021ರ ಜೂನ್ 30ರೊಳಗೆ ಕಳುಹಿಸಬಹುದು
Posted On:
18 JUN 2021 5:03PM by PIB Bengaluru
ವೈದ್ಯಕೀಯ ಪ್ರವಾಸೋದ್ಯಮ ( ವೈದ್ಯಕೀಯ ಪ್ರವಾಸ, ಆರೋಗ್ಯ ಪ್ರವಾಸೋದ್ಯಮ ಅಥವಾ ಜಾಗತಿಕ ಆರೋಗ್ಯ ರಕ್ಷಣೆ ಎಂದೂ ಕರೆಯಲಾಗುತ್ತದೆ) ಎಂಬ ಶಬ್ದವನ್ನು ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಆರೋಗ್ಯ ರಕ್ಷಣಾ ಸೇವೆಗಳನ್ನು ಪಡೆಯಲು ಅಂತಾರಾಷ್ಟ್ರೀಯ ಗಡಿಗಳಲ್ಲಿ ಪ್ರಯಾಣಿಸುವ ಪದ್ಧತಿಗೆ ಬಳಸಲಾಗುತ್ತಿದೆ. ಪ್ರವಾಸಿಗಳು ತಾವು ಆಯ್ಕೆ ಮಾಡಿದ ಚಿಕಿತ್ಸಾ ಪ್ರಕ್ರಿಯೆಗಳನ್ನು ಅಪೇಕ್ಷಿಸಬಹುದು ಅಥವಾ ಮೊಣಕಾಲು ಗಂಟು ಬದಲಾವಣೆಯಂತಹ, ಹೃದಯ ಶಸ್ತ್ರಚಿಕಿತ್ಸೆ, ದಂತ ಚಿಕಿತ್ಸೆ, ಮತ್ತು ಸೌಂದರ್ಯವರ್ಧಕ ಶಸ್ತ್ರ ಚಿಕಿತ್ಸೆಗಳಂತಹ ಸಂಕೀರ್ಣ, ವಿಶೇಷ ಚಿಕಿತ್ಸೆಗಳನ್ನೂ ಅಪೇಕ್ಷಿಸಬಹುದು. ಅದಲ್ಲದೆ ಪ್ರತಿಯೊಂದು ರೀತಿಯ ಆರೋಗ್ಯ ರಕ್ಷಾ ಸೇವೆಗಳನ್ನು, ಮಾನಸಿಕ ರೋಗ ಚಿಕಿತ್ಸೆ, ಪರ್ಯಾಯ ಚಿಕಿತ್ಸೆಗಳು ಮತ್ತು ಚೇತರಿಸಿಕೊಳ್ಳುವ ಚಿಕಿತ್ಸೆ ಕೂಡಾ ವರ್ಚುವಲ್ ಮೂಲಕ ಭಾರತದಲ್ಲಿ ಲಭ್ಯವಿದೆ. ವೈದ್ಯಕೀಯ ಪ್ರವಾಸೋದ್ಯಮದ ಬೆಳವಣಿಗೆ ಮತ್ತು ಕ್ಷೇಮ ಪ್ರವಾಸೋದ್ಯಮದ ಮುಖ್ಯ ಚಾಲಕ ಶಕ್ತಿಗಳೆಂದರೆ ಮುಖ್ಯವಾಗಿ ಅವು ಕೈಗೆಟಕುವ ದರದಲ್ಲಿ ಲಭ್ಯವಾಗುವುದು ಮತ್ತು ಉತ್ತಮ ಆರೋಗ್ಯ ಸೇವೆಗಳ ಲಭ್ಯತೆ ಇರುವುದು, ಆತಿಥ್ಯ ಸೇವೆಗಳ ಸೌಕರ್ಯ, ಅತ್ಯಂತ ಕಡಿಮೆ ಕಾಯುವ ಅವಧಿ, ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳು ಮತ್ತು ಮಾನ್ಯತೆಗಳು.
ಆರೋಗ್ಯ ರಕ್ಷಣೆ ಮತ್ತು ಪ್ರವಾಸೋದ್ಯಮಗಳು ಜಗತ್ತಿನಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಉದ್ಯಮಗಳು. ವೈದ್ಯಕೀಯ ಮೌಲ್ಯ ಪ್ರವಾಸ (ಎಂ.ವಿ.ಟಿ.)ಯನ್ನು ಈ ಉದ್ಯಮಗಳ ಸಂಯೋಜಿತ ಉತ್ಪನ್ನವಾಗಿ ಉತ್ತೇಜಿಸಲಾಗುತ್ತಿದೆ. ಹಲವಾರು ವರ್ಷಗಳಿಂದ ಭಾರತವು ವೈದ್ಯಕೀಯ ಮೌಲ್ಯ ಪ್ರವಾಸಕ್ಕೆ ಪ್ರಮುಖ ತಾಣವಾಗಿ ಮೂಡಿ ಬಂದಿದೆ, ಇದಕ್ಕೆ ಕಾರಣ ಆರೋಗ್ಯ ರಕ್ಷಣೆಯ ಒಟ್ಟು ಗುಣಮಟ್ಟವನ್ನು ನಿರ್ಣಯಿಸುವ ಹಲವಾರು ಅಂಶಗಳಲ್ಲಿ ಅದು ಉತ್ತಮ ಸ್ಥಾನದಲ್ಲಿರುವುದು.
ಪ್ರವಾಸೋದ್ಯಮ ಸಚಿವಾಲಯವು ಎಂ.ವಿ.ಟಿ.ಯಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯವನ್ನು ಮನಗಂಡಿದ್ದು, ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿ ಮಾಡಲು ಸಕ್ರಿಯವಾಗಿ ಕಾರ್ಯನಿರತವಾಗಿದೆ. ಅದರನ್ವಯ ಸಚಿವಾಲಯವು ವೈದ್ಯಕೀಯ ಮತ್ತು ಕ್ಷೇಮ ಪ್ರವಾಸೋದ್ಯಮಕ್ಕೆ ಮಾರ್ಗದರ್ಶಿಗಳು ಮತ್ತು ರಾಷ್ಟ್ರೀಯ ಕಾರ್ಯತಂತ್ರದ ಕರಡನ್ನು ರೂಪಿಸಿದೆ. ಅದನ್ನು ಪ್ರವಾಸೋದ್ಯಮ ಸಚಿವಾಲಯದ ಜಾಲತಾಣ https://tourism.gov.in ದಲ್ಲಿ “ಹೊಸತು ಯಾವುದಿದೆ” ಎಂಬ ವಿಭಾಗದಲ್ಲಿ ನೋಡಬಹುದು.
https://tourism.gov.in/sites/default/files/202106/Draft%20Strategy%20for%20Medical%20and%20Wellness%20Tourism%20June%2012.pdf
ಕರಡು ಕಾರ್ಯತಂತ್ರ ದಾಖಲೆಯನ್ನು ಅಂತಿಮಗೊಳಿಸುವುದಕ್ಕೆ ಮೊದಲು ಮತ್ತು ಕರಡನ್ನು ಹೆಚ್ಚು ಸಮಗ್ರಗೊಳಿಸಲು ಪ್ರವಾಸೋದ್ಯಮ ಸಚಿವಾಲಯ ಕರಡು ರಾಷ್ಟ್ರೀಯ ಕಾರ್ಯತಂತ್ರ ಮತ್ತು ಮಾರ್ಗಸೂಚಿಗಳ ಕುರಿತಂತೆ ಹಿಮ್ಮಾಹಿತಿ/ಪ್ರತಿಕ್ರಿಯೆ/ಸಲಹೆಗಳನ್ನು ಆಹ್ವಾನಿಸಿದೆ. ಪ್ರತಿಕ್ರಿಯೆಗಳನ್ನು 2021 ರ ಜೂನ್ 30ರ ಒಳಗೆ ಪ್ರವಾಸೋದ್ಯಮ ಸಚಿವಾಲಯದ ಮಿಂಚಂಚೆ ಐಡಿ: js.tourism[at]gov[dot]in, bibhuti.dash72[at]gov[dot]in, prakash.om50[at]nic[dot]in ಗಳಿಗೆ ಕಳುಹಿಸಿಕೊಡಬಹುದು.
***
(Release ID: 1728366)
Visitor Counter : 332