ರೈಲ್ವೇ ಸಚಿವಾಲಯ

ದೇಶದ ದಕ್ಷಿಣ ರಾಜ್ಯಗಳಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ 17700 ಕ್ಕೂ ಹೆಚ್ಚು ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕ -ಎಲ್.ಎಂ.ಒ ಪೂರೈಕೆ

ಆಕ್ಸಿಜನ್ ಎಕ್ಸ್ ಪ್ರೆಸ್ ಗಳ ರಾಷ್ಟ್ರ ಸೇವೆಯಲ್ಲಿ 32,000 ಮೆಟ್ರಿಕ್ ಟನ್ ಗಿಂತ ಹೆಚ್ಚು ಎಲ್.ಎಂ.ಒ ಅನ್ನು ಲೋಡ್ ಮಾಡಿವೆ

ದೇಶಾದ್ಯಂತ 444 ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಆಮ್ಲಜನಕ ಪೂರೈಕೆ

ಈವರೆಗೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ 1834 ಟ್ಯಾಂಕರ್ ಗಳ ಸಾಗಾಟ ಮತ್ತು 15 ರಾಜ್ಯಗಳಿಗೆ ನೆರವು

ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ 3200, 4000, 4200 ಮತ್ತು 5600 ಮೆಟ್ರಿಕ್ ಟನ್ ಎಲ್.ಎಂ.ಒ ಅನ್ನು ಕ್ರಮವಾಗಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಪೂರೈಕೆ

ಮಹಾರಾಷ್ಟ್ರಕ್ಕೆ 614 ಮೆಟ್ರಿಕ್ ಟನ್, ಉತ್ತರ ಪ್ರದೇಶಕ್ಕೆ ಸುಮಾರು 3797 ಮೆಟ್ರಿಕ್ ಟನ್, ಮಧ್ಯ ಪ್ರದೇಶ 656 ಮೆಟ್ರಿಕ್ ಟನ್, ದೆಹಲಿ 5722, ಹರ್ಯಾಣ ಮೆಟ್ರಿಕ್ ಟನ್ 2354 ಮೆಟ್ರಿಕ್ ಟನ್, ರಾಜಸ್ಥಾನ 98 ಮೆಟ್ರಿಕ್ ಟನ್, 4227 ಮೆಟ್ರಿಕ್ ಟನ್ ಕರ್ನಾಟಕ, ಆಂಧ್ರಪ್ರದೇಶ 4037 ಮೆಟ್ರಿಕ್ ಟನ್, 225 ಮೆಟ್ರಿಕ್ ಟನ್ ಪಂಜಾಬ್, 513 ಮೆಟ್ರಿಕ್ ಟನ್ ಕೇರಳ, 3255 ಮೆಟ್ರಿಕ್ ಟನ್ ತೆಲಂಗಾಣ. 38 ಮೆಟ್ರಿಕ್ ಟನ್ ಜಾರ್ಖಂಡ್ ಮತ್ತು 560 ಮೆಟ್ರಿಕ್ ಟನ್ ಅಸ್ಸಾಂಗೆ 560 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ

Posted On: 18 JUN 2021 3:01PM by PIB Bengaluru

ಭಾರತೀಯ ರೈಲ್ವೆ ಎಲ್ಲಾ ಅಡೆತಡೆಗಳನ್ನು ದಾಟಿ ಹೊಸ ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ತನ್ನ ಯಾನ ಮುಂದುವರೆಸಿದ್ದು, ದೇಶದ ವಿವಿಧ ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ ಪೂರೈಸುತ್ತಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ದೇಶಕ್ಕೆ 32,000 ಕ್ಕೂ ಹೆಚ್ಚು ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕ ಪೂರೈಸಿವೆ.

ಈವರೆಗೆ ಭಾರತೀಯ ರೈಲ್ವೆ 1834 ಟ್ಯಾಂಕರ್ ಗಳ ಮೂಲಕ ಸುಮಾರು 32,095 ಮೆಟ್ರಿಕ್ ಟನ್ ಎಲ್.ಎಂ. ವಿತರಿಸಿದೆ. 444 ಆಕ್ಸಿಜನ್ ಎಕ್ಸ್ ಪ್ರೆಸ್ ತನ್ನ ಯಾನ ಪೂರ್ಣಗೊಳಿಸಿರುವುದು ದಾಖಲಾರ್ಹ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರ ದೊರಕಿಸಿಕೊಟ್ಟಿದೆ.

ದೇಶದ ದಕ್ಷಿಣ ರಾಜ್ಯಗಳಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ 17700 ಕ್ಕೂ ಹೆಚ್ಚು ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕ -ಎಲ್.ಎಂ. ಪೂರೈಕೆ ಮಾಡಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ 3200, 4000, 4200 ಮತ್ತು 5600 ಮೆಟ್ರಿಕ್ ಟನ್ ಎಲ್.ಎಂ. ಅನ್ನು ಕ್ರಮವಾಗಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಪೂರೈಸಲಾಗಿದೆ.

ಹೇಳಿಕೆ ಬಿಡುಗಡೆ ಮಾಡುವ ವೇಳೆಗೆ 3 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ತನ್ನ ಯಾನ ಆರಂಭಿಸಿದ್ದು, 14 ಟ್ಯಾಂಕರ್ ಗಳಲ್ಲಿ 258 ಮೆಟ್ರಿಕ್ ಟನ್ ಎಲ್.ಎಂ. ಹೊತ್ತು ಸಾಗುತ್ತಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ 55 ‍ದಿನಗಳ ಹಿಂದೆ ಮಹಾರಾಷ್ಟ್ರದಿಂದ 126 ಮೆಟ್ರಿಕ್ ಟನ್ ಸಾಗಾಟ ಆರಂಭಿಸಿದ್ದು, ದಾಖಲಾರ್ಹ ಸಂಗತಿಯಾಗಿದೆ. ಬೇಡಿಕೆ ಸಲ್ಲಿಸುವ ರಾಜ್ಯಗಳಿಗೆ ಭಾರತೀಯ ರೈಲ್ವೆ ಅತಿ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಎಲ್.ಎಂ. ಅನ್ನು ತಲುಪಿಸಿದೆ

ಆಕ್ಸಿಜನ್ ಎಕ್ಸ್ ಪ್ರೆಸ್ 15 ರಾಜ್ಯಗಳನ್ನು ತಲುಪಿದೆ. ಅವುಗಳೆಂದರೆ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರ್ಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಅಸ್ಸಾಂ.

ಹೇಳಿಕೆ ಬಿಡುಗಡೆಯಾಗುವ ವೇಳೆಗೆ ವೇಳೆಗೆ ಮಹಾರಾಷ್ಟ್ರಕ್ಕೆ 614 ಮೆಟ್ರಿಕ್ ಟನ್, ಉತ್ತರ ಪ್ರದೇಶಕ್ಕೆ ಸುಮಾರು 3797 ಮೆಟ್ರಿಕ್ ಟನ್, ಮಧ್ಯ ಪ್ರದೇಶ 656 ಮೆಟ್ರಿಕ್ ಟನ್, ದೆಹಲಿ 5722, ಹರ್ಯಾಣ 2354 ಮೆಟ್ರಿಕ್ ಟನ್, ರಾಜಸ್ಥಾನ 98 ಮೆಟ್ರಿಕ್ ಟನ್, 4227 ಮೆಟ್ರಿಕ್ ಟನ್ ಕರ್ನಾಟಕ, ಆಂಧ್ರಪ್ರದೇಶ 4037 ಮೆಟ್ರಿಕ್ ಟನ್, 225 ಪಂಜಾಬ್, 513 ಮೆಟ್ರಿಕ್ ಟನ್ ಕೇರಳ, 3255 ಮೆಟ್ರಿಕ್ ಟನ್ ತೆಲಂಗಾಣ. 38 ಮೆಟ್ರಿಕ್ ಟನ್ ಜಾರ್ಖಂಡ್ ಮತ್ತು 560 ಮೆಟ್ರಿಕ್ ಟನ್ ಅಸ್ಸಾಂಗೆ 560 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆಯಾಗಿದೆ.

ದೇಶದ ವಿವಿಧ 15 ರಾಜ್ಯಗಳ 39 ನಗರ/ ಪಟ್ಟಣಗಳಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ಪೂರೈಸಲಾಗಿದೆ. ಅವುಗಳೆಂದರೆ ಉತ್ತರ ಪ್ರದೇಶದ ಲಖನೌ, ವಾರಣಸಿ, ಕಾನ್ಪುರ, ಬರೈಲಿ, ಗೋರಖ್ಪುರ್ ಮತ್ತು  ಆಗ್ರಾ, ಮಧ್ಯಪ್ರದೇಶದ ಸಾಗರ್, ಜಬಲ್ಪುರ್, ಕತ್ನಿ ಮತ್ತು ಭೂಪಾಲ್, ಮಹಾರಾಷ್ಟ್ರದ ನಾಗ್ಪುರ್, ನಾಸಿಕ್, ಪುಣೆ, ಮುಂಬೈ ಮತ್ತು ಸೋಲಾಪುರ, ಹೈದರಾಬಾದ್ ತೆಲಂಗಾಣ, ಫರೀದಾಬಾದ್, ಹರ್ಯಾಣದ ಗುರುಗ್ರಾಮ್, ದೆಹಲಿಯ ತುಘಲಕಬಾದ್, ದೆಹಲಿ ಕಂಟೋನ್ಮೆಂಟ್ ಮತ್ತು ಓಕ್ಲಾ, ರಾಜಸ್ದಾನದ ಕೋಟಾ ಮತ್ತು ಕನಕ್ಪರ, ಕರ್ನಾಟಕದ ಬೆಂಗಳೂರು, ಉತ್ತರಾಖಂಡದ ಡೆಹ್ರಾಡೂನ್, ಆಂಧ್ರಪ್ರದೇಶದ ನೆಲ್ಲೂರು, ಗುಂಟೂರು, ತಡಪತ್ರಿ ಮತ್ತು ವಿಶಾಖಪಟ್ಟಣಂ, ಕೇರಳದ ಎರ್ನಾಕುಲಂ, ತಮಿಳುನಾಡಿನ ತಿರುನಲ್ಲೂರು, ಚೆನ್ನೈ, ತುತೂಕುಡಿ, ಕೊಯಂಬತ್ತೂರು  ಮತ್ತು ಮಧುರೈ, ಪಂಜಾಬ್ ಭಟಿಂಡ ಮತ್ತು ಫಿಲ್ಲವೂರು, ಅಸ್ಸಾಂನ ಕಾಮ್ರೂಪ್ ಮತ್ತು ಜಾರ್ಖಂಡ್ ರಾಂಚಿ ನಗರಗಳಿಗೆ ಸೌಲಭ್ಯ ದೊರೆತಿದೆ

ಆಕ್ಸಿಜನ್ ಎಕ್ಸ್ ಪ್ರೆಸ್ ಗಾಗಿ ಭಾರತೀಯ ರೈಲ್ವೆ ವಿವಿಧ ಮಾರ್ಗಗಳನ್ನು ರೂಪಿಸಿದೆ ಮತ್ತು ರಾಜ್ಯಗಳಿಗೆ ಅಗತ್ಯವಾಗಿರುವ ಯಾವುದೇ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ತನ್ನನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ,. ಎಲ್.ಎಂ. ಗಾಗಿ ರಾಜ್ಯಗಳು ಟ್ಯಾಂಕರ್ ಗಳನ್ನು ಒದಗಿಸಬೇಕಾಗಿದೆ.

ದೇಶದಲ್ಲಿನ ಬಿಕ್ಕಟ್ಟು ದಾಟಲು ಭಾರತೀಯ ರೈಲ್ವೆ ಪಶ್ವಿಮ ಭಾಗದ ಹಪ, ಬರೋಡಾ, ಮುಂದ್ರಾ, ಪೂರ್ವದ ರೌರ್ಕೇಲಾ, ದುರ್ಗಾಪುರ್, ಟಾಟಾ ನಗರ್, ಅಂಗುಲ್ ಮತ್ತು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರ್ಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಿಗೆ ಸನ್ನಿವೇಶಕ್ಕೆ ಅನುಗುಣವಾಗಿ ಸಂಕಿರ್ಣ ಕಾರ್ಯಾಚರಣೆಯ ಮಾರ್ಗ ಯೋಜನೆ ರೂಪಿಸಿದೆ

ರಾಜ್ಯಗಳಿಗೆ ಆಮ್ಲಜನಕದ ಪರಿಹಾರ ತ್ವರಿತವಾಗಿ ದೊರೆಯುವಂತೆ ಮಾಡಲು ರೈಲ್ವೆ ಹೊಸ ಮಾನದಂಡಗಳನ್ನು ಸೃಷ್ಟಿಸಿದೆ ಮತ್ತು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಚಾಲನೆಯಲ್ಲಿ ಅಭೂತಪೂರ್ವ ಮಾನದಂಡಗಳನ್ನು ಅನುಸರಿಸುತ್ತಿದೆ. ಬಹುತೇಕ ದೂರ ಪ್ರದೇಶದ ಸಂಕಿರ್ಣದಾಯಕ ಸರಕು ಸಾಗಾಣೆ ರೈಲುಗಳ ಸರಾಸರಿ ವೇಗ 55 ಕಿಲೋಮೀಟರ್ ಆಗಿದೆಹಸಿರು ಕಾರಿಡಾರ್ ನಲ್ಲಿ ಅತಿಯಾದ ತುರ್ತು ಪ್ರಜ್ಞೆಯೊಂದಿಗೆ ಸಂಚರಿಸಲು ಹೆಚ್ಚು ಆದ್ಯತೆ ನೀಡಲಾಗಿದೆ. ಸಾಧ್ಯತೆಯ ಕಾಲಮಿತಿಯೊಳಗೆ ಆಮ್ಲಜನಕವನ್ನು ತಲುಪಿಸಲು ಸವಾಲಿನ ಪರಿಸ್ಥಿತಿಯಲ್ಲಿ ಹಲವಾರು ವಲಯಗಳಲ್ಲಿ ಕಾರ್ಯಾಚರಣೆ ತಂಡಗಳು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿವೆವಿವಿಧ ವಲಯಗಳಲ್ಲಿ ಸಿಬ್ಬಂದಿ ಬದಲಾವಣೆಗೆ ತಾಂತ್ರಿಕ ನಿಲುಗಡೆ ಸಮಯವನ್ನು ಒಂದು ನಿಮಿಷಕ್ಕೆ ತಗ್ಗಿಸಲಾಗಿದೆ.

ಟ್ರಾಕ್ ಗಳನ್ನು ಮುಕ್ತವಾಗಿಡಲಾಗುತ್ತದೆ ಮತ್ತು ಆಕ್ಸಿಜನ್ ಎಕ್ಸ್ ಪ್ರೆಸ್ ಜಿಪ್ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಜಾಗರೂಕತೆಯನ್ನು ಕಾಪಾಡಿಕೊಳ್ಳಲಾಗಿದೆ.

ಇತರೆ ಸರಕು ಸಾಗಾಣೆ ಕಾರ್ಯಾಚರಣೆ ವೇಗ ಕಡಿಮೆಯಾಗದಂತೆ ಇದನ್ನು ರೂಪಿಸಲಾಗಿದೆ.

ಹೊಸ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಯಾನ ಒಂದು ಕ್ರಿಯಾತ್ಮಕ ಕಸರತ್ತು ಮತ್ತು ಅಂಕಿ ಅಂಶಗಳು ಸದಾ ಕಾಲ ನವೀಕರಿಸಲ್ಪಡುತ್ತವೆ. ಹೆಚ್ಚು ಲೋಡ್ ಮಾಡಿದ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ರಾತ್ರಿ ನಂತರ ತನ್ನ ಯಾನ ಆರಂಭಿಸುವ ನಿರೀಕ್ಷೆಯಿದೆ

***(Release ID: 1728335) Visitor Counter : 111