ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆ ತಾಜಾ ಮಾಹಿತಿ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 27.90 ಕೋಟಿ ಗೂ ಹೆಚ್ಚು ಡೋಸ್ ಲಸಿಕೆ ಒದಗಿಸಲಾಗಿದೆ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ 2.58 ಕೋಟಿ ಡೋಸ್ ಗೂ ಹೆಚ್ಚು ಲಸಿಕೆ ಲಭ್ಯ
Posted On:
18 JUN 2021 11:17AM by PIB Bengaluru
ರಾಷ್ಟ್ರವ್ಯಾಪಿ ನಡೆಯುತ್ತಿರುವ ಲಸಿಕಾ ಅಭಿಯಾನದ ಅಂಗವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತ ಸರ್ಕಾರ ಉಚಿತವಾಗಿ ಕೋವಿಡ್ ಲಸಿಕೆಯನ್ನು ಒದಗಿಸುತ್ತಿದೆ. ಇದರ ಜತೆಗೆ ಹೆಚ್ಚುವರಿಯಾಗಿ ಭಾರತ ಸರ್ಕಾರ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ನೇರವಾಗಿ ಲಸಿಕೆ ಖರೀದಿಸಲು ಸೌಲಭ್ಯ ಕಲ್ಪಿಸಿದೆ. ಸಾಂಕ್ರಾಮಿಕವನ್ನು ನಿಯಂತ್ರಿಸುವ ಮತ್ತು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಪರೀಕ್ಷೆ, ಜಾಡು ಪತ್ತೆ, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ವರ್ತನೆ ಜತೆಗೆ ಸಮಗ್ರ ಕಾರ್ಯತಂತ್ರದಲ್ಲಿ ಲಸಿಕೆ ಕೂಡ ಪ್ರಮುಖ ಆಧಾರ ಸ್ಥಂಭವಾಗಿದೆ.
ಉದಾರೀಕೃತ ಮತ್ತು ತ್ವರಿತ ಕಾರ್ಯತಂತ್ರ ಅನುಷ್ಠಾನದ ಭಾಗವಾಗಿ 2021 ರ ಮೇ 1 ರಿಂದ 3 ನೇ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿದೆ.
ಈ ಕಾರ್ಯತಂತ್ರದಡಿ ಪ್ರತಿ ತಿಂಗಳು ಕೇಂದ್ರ ಸರ್ಕಾರ ಖರೀದಿಸುವ, ಯಾವುದೇ ಉತ್ಪಾದಕರು ಉತ್ಪಾದಿಸುವ ಶೇ 50 ರಷ್ಟು ಲಸಿಕೆಯ ಡೋಸ್ ಗಳಿಗೆ ಕೇಂದ್ರೀಯ ಔಷಧ ಪ್ರಯೋಗಾಲಯ [ಸಿ.ಎಲ್.ಡಿ] ಮಂಜೂರಾತಿ ನೀಡುತ್ತದೆ. ಈ ಪ್ರಮಾಣದ ಲಸಿಕೆಯನ್ನು ಈ ಹಿಂದಿನಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ.
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 27.90 ಕೋಟಿ ಗೂ ಹೆಚ್ಚು (27,90,66,230) ಲಸಿಕೆ ಡೋಸ್ ಗಳನ್ನು ಭಾರತ ಸರ್ಕಾರ [ಉಚಿತ ದರದ ಮೂಲಕ] ಮತ್ತು ನೇರ ಖರೀದಿ ವಲಯದ ಮೂಲಕ ಒದಗಿಸಿದೆ.
ಈ ಪೈಕಿ ವ್ಯರ್ಥವಾದ್ದದ್ದು ಸೇರಿ 25,32,65,825 ಡೋಸ್ ಗಳ ಲಸಿಕೆ ಬಳಕೆಯಾಗಿದೆ [ಇಂದು ಬೆಳಿಗ್ಗೆ 8 ಗಂಟೆವರೆಗೆ ಲಭ್ಯವಾದ ಮಾಹಿತಿ ಪ್ರಕಾರ].
2,58 ಕೋಟಿ ಗೂ ಹೆಚ್ಚು (2,58,00,405) ಡೋಸ್ ಕೋವಿಡ್ ಲಸಿಕೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ.
ಇದರ ಜತೆಗೆ ಇನ್ನೂ 19,95,770 ಡೋಸ್ ಲಸಿಕೆ ಪೂರೈಕೆ ಹಂತದಲ್ಲಿದೆ ಮತ್ತು ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇವುಗಳನ್ನು ಸ್ವೀಕರಿಸಲಿವೆ.
***
(Release ID: 1728175)
Visitor Counter : 227
Read this release in:
Tamil
,
English
,
Urdu
,
Hindi
,
Marathi
,
Bengali
,
Punjabi
,
Gujarati
,
Odia
,
Telugu
,
Malayalam