ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್19 ಲಸಿಕೆ: ಮಿಥ್ಯೆಗಳು ಮತ್ತು ವಾಸ್ತವಗಳು


ರೋಗನಿರೋಧಕತೆ ಹೆಚ್ಚಳದ ನಂತರ ಸಂಭವಿಸುವ ಯಾವುದೇ ಸಾವಿಗೆ ಅಥವಾ ಆಸ್ಪತ್ರೆಗೆ ದಾಖಲಾಗುವಿಕೆಗೆ ಲಸಿಕೆಯೇ ಕಾರಣವೆಂದು ಸ್ವಯಂ ಪ್ರೇರಿತವಾಗಿ ಊಹಿಸುವುದು ಸಲ್ಲದು

"ರೋಗನಿರೋಧಕತೆ ಹೆಚ್ಚಳದಿಂದ ಉಂಟಾಗುವ ಪ್ರತಿಕೂಲ ಘಟನೆ"ಯು ನೇರವಾಗಿ ಲಸಿಕೆಯಿಂದ ಸಂಭವಿಸಿದೆಯೇ ಎಂದು ಅರ್ಥಮಾಡಿಕೊಳ್ಳಲು ಸಾಂದರ್ಭಿಕ ಮೌಲ್ಯಮಾಪನಗಳು ಸಹಾಯ ಮಾಡುತ್ತವೆ. ಇಂತಹ ಪ್ರಕರಣಗಳ ತನಿಖೆಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸಾಂದರ್ಭಿಕ ಮೌಲ್ಯಮಾಪನಗಳನ್ನು ನಡೆಸಲಾಗುತ್ತದೆ

Posted On: 15 JUN 2021 2:51PM by PIB Bengaluru

ಲಸಿಕೆಯಿಂದಾಗಿ ರೋಗನಿರೋಧತೆ ಹೆಚ್ಚಳದ ಬೆನ್ನಲ್ಲೇ ಪ್ರತಿಕೂಲ ಘಟನೆಗಳು ಉಂಟಾಗುವ ಪ್ರಕರಣಗಳು ಹೆಚ್ಚಿದ್ದು, ಪೈಕಿ ಕೆಲವೊಂದು ಪ್ರಕರಣಗಳಲ್ಲಿ ಲಸಿಕೆ ಪಡೆದ ನಂತರ ಸಾವುಗಳೂ ಸಂಭವಿಸಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಮಾಧ್ಯಮಗಳ ವರದಿಗಳ ಪ್ರಕಾರ, ಲಸಿಕೆಯ ನಂತರ 2021 ಜನವರಿ 16 ಮತ್ತು 2021 ಜೂನ್ 7 ಅವಧಿಯಲ್ಲಾದ 488 ಸಾವುಗಳು ಕೋವಿಡ್ ನಂತರದ ಪ್ರತಿಕೂಲ ಪರಿಣಾಮಗಳಿಗೆ ಸಂಬಂಧಿಸಿವಾಗಿವೆ. ಅವಧಿಯಲ್ಲಿ ಒಟ್ಟು 23.5 ಕೋಟಿ. ಲಸಿಕೆ ಡೋಸ್ಗಳನ್ನು ಹಾಕಲಾಗಿದೆ.

ವರದಿಗಳು ಅಪೂರ್ಣ ಮತ್ತು ಸೀಮಿತ ತಿಳುವಳಿಕೆಯನ್ನು ಆಧರಿಸಿವೆ ಎಂದು ಮೂಲಕ ಸ್ಪಷ್ಟಪಡಿಸಲಾಗಿದೆ.  "ಬಲಿಯಾಗಿದ್ದಾರೆ" ಎಂಬ ಪದವು ಲಸಿಕೆಯಿಂದಾಗಿ ಸಾವುಗಳು ಸಂಭವಿಸಿವೆ ಎಂಬುದನ್ನು ಸೂಚಿಸುತ್ತದೆ.

ದೇಶದಲ್ಲಿ ನೀಡಲಾದ ಒಟ್ಟು 23.5 ಕೋಟಿ ಡೋಸ್ಕೋವಿಡ್-19 ಲಸಿಕೆ ಪೈಕಿ ವರದಿಯಾದ ಸಾವಿನ ಸಂಖ್ಯೆ ಕೇವಲ 0.0002% ಮಾತ್ರ. ಪ್ರಮಾಣವು ಯಾವುದೇ ದೇಶದ ಜನಸಂಖ್ಯೆಯಲ್ಲಿ ನಿರೀಕ್ಷಿತ ಸಾವಿನ ಪ್ರಮಾಣದ ಮಟ್ಟಕ್ಕಿಂತಲೂ ಕಡಿಮೆ ಇದೆ. ಯಾವುದೇ ದೇಶದ ಜನಸಂಖ್ಯೆಯಲ್ಲಿ ಒಂದು ನಿರ್ದಿಷ್ಟ ದರದಲ್ಲಿ ಸಾವುಗಳು ಸಂಭವಿಸುತ್ತವೆ. ʻಎಸ್ಆರ್ಎಸ್ʼ ದತ್ತಾಂಶದ ಪ್ರಕಾರ 2017ರಲ್ಲಿ ಸಂಭಿಸಿದ ಸಾವಿನ ಪ್ರಮಾಣವು ವಾರ್ಷಿಕವಾಗಿ ಪ್ರತಿ 1000 ವ್ಯಕ್ತಿಗಳಿಗೆ 6.3 ಆಗಿದೆ (ಮೂಲ: ಎಸ್ಆರ್ಎಸ್, ರಿಜಿಸ್ಟ್ರಾರ್ ಜನರಲ್ & ಜನಗಣತಿ ಆಯುಕ್ತರು https://main.mohfw.gov.in/sites/default/files/HealthandFamilyWelfarestatisticsinIndia201920.pdf).

ಹಾಗೆ ನೋಡಿದರೆ, ಕೋವಿಡ್-19 ಸೋಂಕಿಗೆ ಗುರಿಯಾಗುವವರ ಮರಣ ಪ್ರಮಾಣವು 1% ಕ್ಕಿಂತ ಹೆಚ್ಚಾಗಿದೆ. ಅಲ್ಲದೆ, ಕೋವಿಡ್-19 ಲಸಿಕೆಯಿಂದಾಗಿ ಇಂತಹ ಸಾವುಗಳನ್ನು ತಡೆಯಬಹುದು ಎಂಬುದನ್ನು ಗಮನಿಸುವುದು ಮುಖ್ಯ ಮತ್ತು ಪ್ರಸ್ತುತವೆನಿಸುತ್ತದೆ. ಆದ್ದರಿಂದ, ಕೋವಿಡ್-19 ಸೋಂಕಿನಿಂದ ಸಾಯುವ ಅಪಾಯಕ್ಕೆ ಹೋಲಿಸಿದರೆ ಲಸಿಕೆಯ ನಂತರ ಸಾಯುವ ಅಪಾಯವು ಅತ್ಯಲ್ಪವಾಗಿದೆ.

ʻರೋಗನಿರೋಧಕತೆ ಹೆಚ್ಚಳದ ನಂತರ ಸಂಭವಿಸುವ ಘಟನೆʼ (ಎಇಎಫ್ಐ) ಅನ್ನು 'ರೋಗನಿರೋಧಕತೆ ಹೆಚ್ಚಳದ ಬಳಿಕ ಉಂಟಾಗುವ ಅಹಿತಕರ ವೈದ್ಯಕೀಯ ಘಟನೆ ಹಾಗೂ ಲಸಿಕೆಗೂ ಇದಕ್ಕೂ ಸಂಬಂಧವಿಲ್ಲ. ಇದು ಯಾವುದೇ ಅನನುಕೂಲಕರ ಅಥವಾ ಅನಪೇಕ್ಷಿತ ಚಿಹ್ನೆ, ಅಸಹಜ ಪ್ರಯೋಗಾಲಯ ಶೋಧನೆ, ರೋಗಲಕ್ಷಣ ಅಥವಾ ರೋಗ ಆಗರಿಬಹುದು' ಎಂದು ವ್ಯಾಖ್ಯಾನಿಸಲಾಗಿದೆ. ಲಸಿಕೆ ಪಡೆದ ನಂತರ ಉಂಟಾಗುವ ಸಾವುಗಳು, ಅನಾರೋಗ್ಯ, ಆಸ್ಪತ್ರೆಗೆ ದಾಖಲಾಗುವಿಕೆ ಮುಂತಾದ ಬಗ್ಗೆ ಆರೋಗ್ಯ ಕಾರ್ಯಕರ್ತರು, ವೈದ್ಯರು ಮತ್ತು ಲಸಿಕೆ ಪಡೆದವರು ವರದಿ ಮಾಡುವುದನ್ನು ಭಾರತ ಸರಕಾರ ಹಾಗೂ ರಾಜ್ಯ ಸರಕಾರಗಳು ಯಾವಾಗಲೂ ಪ್ರೋತ್ಸಾಹಿಸುತ್ತವೆ. ಲಸಿಕೆ ಪಡೆದ ನಂತರ ಯಾವುದೇ ಸಂದರ್ಭದಲ್ಲಿ ಉಂಟಾಗಬಹುದಾದ ಅಂಗವೈಕಲ್ಯಕ್ಕೆ ದಾರಿ ಮಾಡುವಂತಹ ಘಟನೆಗಳು, ಸಣ್ಣ ಪುಟ್ಟ ಪ್ರತಿಕೂಲ ಪರಿಣಾಮಗಳನ್ನೂ ವರದಿ ಮಾಡುವಂತೆ ಸೂಚಿಸಲಾಗಿದೆ.

ಯಾವುದೇ ಲಸಿಕೆಯ ನಂತರ ಸಂಭವಿಸುವ ಯಾವುದೇ ಸಾವುಗಳು, ಆಸ್ಪತ್ರೆಗೆ ದಾಖಲಾಗುವಿಕೆ ಅಥವಾ ಅಂಗವೈಕಲ್ಯ ಅಥವಾ ಕಳವಳಕ್ಕೆ ಕಾರಣವಾಗುವ ಘಟನೆಗಳನ್ನು ಗಂಭೀರ ಅಥವಾ ತೀವ್ರ ಪ್ರಕರಣಗಳೆಂದು ವರ್ಗೀಕರಿಸಲಾಗಿದೆ ಮತ್ತು ಅಂತಹ ಪ್ರಕರಣಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ತನಿಖೆ ನಡೆಸಲಾಗುವುದು. ಸಾಂದರ್ಭಿಕತೆಯ ಮೌಲ್ಯಮಾಪನಗಳು ಘಟನೆಯು ಲಸಿಕೆಯಿಂದಾಗಿ ಸಂಭವಿಸಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಮೌಲ್ಯಮಾಪನಗಳನ್ನು  ನಡೆಸಲಾಗುತ್ತದೆ. ಆದ್ದರಿಂದ, ಲಸಿಕೆಯ ನಂತರ ಯಾವುದೇ ಸಾವು ಅಥವಾ ಆಸ್ಪತ್ರೆಗೆ ದಾಖಲಾಗುವಿಕೆ ಕಂಡುಬಂದಲ್ಲಿ, ಅದನ್ನು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ʻಎಇಎಫ್ಐʼ ಸಮಿತಿಗಳಿಂದ ತನಿಖೆ ನಡೆಸಿ, ಅದಕ್ಕೆ ಲಸಿಕೆಯೇ ಕಾರಣ ಎಂದು ದೃಢಪಡಿಸದ ಹೊರತು ಅದು ಲಸಿಕೆಯಿಂದ ಉಂಟಾದ ಸಾವು ಸ್ವಯಂ ಪ್ರೇರಿತವಾಗಿ ಊಹಿಸಬಾರದು.

ಜಿಲ್ಲೆಯಿಂದ ರಾಜ್ಯದ ವರೆಗೆ ಪ್ರತಿ ಹಂತದಲ್ಲೂ ʻಎಇಎಫ್ ಕಣ್ಗಾವಲಿನ ದೃಢವಾದ ವ್ಯವಸ್ಥೆ ಇದೆ. ತನಿಖೆ ಪೂರ್ಣಗೊಂಡ ನಂತರ, ಕೋವಿಡ್ ಲಸಿಕೆ ಸಂಬಂಧಿತ ಮಾಹಿತಿಯನ್ನು ಪಾರದರ್ಶಕವಾಗಿ ಹಂಚಿಕೊಂಡ ನಂತರ, ಸಂಬಂಧ ವರದಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯದ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

***



(Release ID: 1727230) Visitor Counter : 230