ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೋವಿಡ್ ಲಸಿಕಾಅಭಿಯಾನದ ಪ್ರಗತಿ ಮತ್ತು ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯ ಬಗ್ಗೆ ಕೇಂದ್ರದ ಅವಲೋಕನ


ಆರೋಗ್ಯ ಕಾರ್ಯಕರ್ತರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಎರಡನೇ ಡೋಸ್  ನೀಡುವ ಬಗ್ಗೆ ಗಮನಹರಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ

Posted On: 10 JUN 2021 5:23PM by PIB Bengaluru

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರು ಇಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕೋವಿಡ್ ಲಸಿಕಾ ಕಾರ್ಯಕ್ರಮ ಮತ್ತು ತಜ್ಞರ ಇತ್ತೀಚಿನ ಪರಿಷ್ಕೃತ ಮಾರ್ಗಸೂಚಿಗಳ  ಅನುಷ್ಠಾನಕ್ಕಾಗಿ ಲಸಿಕಾ ಅಭಿಯಾನದ  ಪ್ರಗತಿಯನ್ನು ಪರಿಶೀಲಿಸಲಾಯಿತುದೇಶಾದ್ಯಂತದ ಲಸಿಕಾ ಅಭಿಯಾನಕ್ಕೆ ನಿರ್ವಹಣಾ ಸಾಧನವಾಗಿ ಹೆಚ್ಚು ಪರಿಣಾಮಕಾರಿಯಾಗುವ ಉದ್ದೇಶದಿಂದ ಕೋವಿನ್ ಪ್ಲಾಟ್ಫಾರ್ಮ್ ಮಾರ್ಪಾಡುಗಳ ಬಗ್ಗೆ ರಾಜ್ಯಗಳಿಗೆ ತಿಳಿಸಲಾಯಿತು.

ಆರೋಗ್ಯ ಕಾರ್ಯಕರ್ತರಿಗೆ (ಎಚ್ಸಿಡಬ್ಲ್ಯು) ಮತ್ತು ಮುಂಚೂಣಿ ಕಾರ್ಯಕರ್ತರಿಗೆ  (ಎಫ್ಎಲ್ಡಬ್ಲ್ಯು) ಇನ್ನೂ ಸಂಪೂರ್ಣವಾಗಿ ನೀಡದಿರುವುದನ್ನು ಕೇಂದ್ರ ಆರೋಗ್ಯ ಕಾರ್ಯದರ್ಶಿ ಎತ್ತಿ ತೋರಿಸಿದರುವಿಶೇಷವಾಗಿ ಎರಡೂ ಆದ್ಯತೆಯ ಗುಂಪುಗಳಿಗೆ ಎರಡನೇ ಡೋಸ್ ಅನ್ನು, ಇದು ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

•           ಎಚ್ಸಿ ಡಬ್ಲ್ಯುಗಳಲ್ಲಿ 1 ನೇ ಡೋಸ್ ನೀಡುವಿಕೆಯು ದೇಶದಲ್ಲಿ ಸರಾಸರಿ 82% ಆಗಿದ್ದರೆ, ಎಚ್ಸಿಡಬ್ಲ್ಯೂಗಳಲ್ಲಿ 2 ನೇ ಡೋಸ್ದೇಶದಲ್ಲಿ ಸರಾಸರಿ 56% ಮಾತ್ರ ಆಗಿದೆ. ಪಂಜಾಬ್, ಮಹಾರಾಷ್ಟ್ರ, ಹರಿಯಾಣ, ತಮಿಳುನಾಡು, ದೆಹಲಿ ಮತ್ತು ಅಸ್ಸಾಂ ಸೇರಿದಂತೆ 18 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಅಂಶದಲ್ಲಿ ದೇಶದ ಸರಾಸರಿಗಿಂತ ಕಡಿಮೆಯಾಗಿವೆ

•           ಮುಂಚೂಣಿ ಕಾರ್ಯಕರ್ತರುಗಳಿಗೆ, 1 ನೇ ಡೋಸ್  ದೇಶದ ಸರಾಸರಿ 85% ರಷ್ಟಾದರೆ,   ಎರಡನೇ ಡೋಸ್ ದೇಶದ ಸರಾಸರಿ 47% ಮಾತ್ರ ಇದೆ. 19 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಎಫ್ಎಲ್ಡಬ್ಲ್ಯೂಗಳ 2 ನೇ ಡೋಸ್ ದೇಶದ ಸರಾಸರಿಗಿಂತ ಕಡಿಮೆ ಎಂದು ವರದಿ ಮಾಡಿವೆ. ಅವುಗಳಲ್ಲಿ ಬಿಹಾರ, ಹರಿಯಾಣ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ, ತೆಲಂಗಾಣ, ಕರ್ನಾಟಕ, ಮತ್ತು ಪಂಜಾಬ್ ಸೇರಿವೆ.

ಸಾಂಕ್ರಾಮಿಕ ರೋಗಗಳ ವಿರುದ್ಧ ಆರೋಗ್ಯ ರಕ್ಷಣೆಯ ವ್ಯವಸ್ಥೆಯನ್ನು ರಕ್ಷಿಸಲು ಸಂಪೂರ್ಣ ಕಾರ್ಯಕರ್ತರಿಗೆ  ಪೂರ್ಣ ರಕ್ಷಣೆ ನೀಡುವುದು ನಿರ್ಣಾಯಕವಾಗಿದೆ ಮತ್ತು ಫಲಾನುಭವಿಗಳಿಗೆ ಸಂಪೂರ್ಣ ರಕ್ಷಣೆ ನೀಡಲು ಲಸಿಕೆ ವೇಳಾಪಟ್ಟಿಯನ್ನು ಸಮಯೋಚಿತವಾಗಿ ಪೂರ್ಣಗೊಳಿಸುವುದು ಮುಖ್ಯ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುನರುಚ್ಚರಿಸಿದರು. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತಮ್ಮ ಗಮನವನ್ನು ತೀವ್ರಗೊಳಿಸಲು ಮತ್ತು ಎಚ್ಸಿಡಬ್ಲ್ಯುಗಳು ಮತ್ತು ಎಫ್ಎಲ್ಡಬ್ಲ್ಯೂಗಳಿಗೆ ಎರಡನೇ ಡೋಸ್ ನೀಡುವುದನ್ನು ತ್ವರಿತಗೊಳಿಸಲು ಪರಿಣಾಮಕಾರಿ ಯೋಜನೆಗಳನ್ನು ಸಿದ್ಧಪಡಿಸುವಂತೆ ಕೇಳಲಾಯಿತುಲಸಿಕೆ ನೀಡುವುದಕ್ಕಾಗಿ ವಿಶೇಷ ಸಮಯ ಸ್ಥಳಗಳನ್ನು ಅಥವಾ ಸೆಷನ್ಗಳನ್ನು ಮೀಸಲಿಡಲು ರಾಜ್ಯಗಳನ್ನು ಕೇಳಲಾಯಿತು.

ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳಲ್ಲಿ  ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯು ಅಗತ್ಯಕ್ಕಿಂತ ಕಡಿಮೆ ಇದೆ ಎಂದು ಕಾರ್ಯದರ್ಶಿ ಎತ್ತಿ ತೋರಿಸಿದರು. ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಲಸಿಕೆ ಸಂಗ್ರಹದ 25% ಅನ್ನು ಖಾಸಗಿ ಆಸ್ಪತ್ರೆಗಳು ಖರೀದಿಸಬಹುದು, ಇದು ಲಸಿಕೆ ಅಭಿಯಾನವನ್ನು  ಮತ್ತಷ್ಟು ಸಾರ್ವತ್ರಿಕಗೊಳಿಸುವಲ್ಲಿ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಖಾಸಗಿ ಸಿವಿಸಿಗಳನ್ನು ಸ್ಥಾಪಿಸಬಹುದು. ಖಾಸಗಿ ಆಸ್ಪತ್ರೆಗಳ ಸೀಮಿತ ಉಪಸ್ಥಿತಿ ಮತ್ತು ಅವುಗಳ ಅಸಮಾನ ವಿತರಣೆಯನ್ನು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ ಇತ್ಯಾದಿಗಳಿಗೆ ಎತ್ತಿ ತೋರಿಸಲಾಯಿತು.

ಹೊಸ ಲಸಿಕಾ ಮಾರ್ಗಸೂಚಿಗಳ ಪ್ರಕಾರ ಸಂಯೋಜಿಸಲ್ಪಟ್ಟ ಕೋ-ವಿನ್ ಪೋರ್ಟಲ್ ನಲ್ಲಿನ ಹೊಸ ವೈಶಿಷ್ಟ್ಯಗಳ ಬಗ್ಗೆ ರಾಜ್ಯಗಳಿಗೆ ತಿಳಿಸಲಾಯಿತು.

•           ಉಲ್ಲೇಖಿಸಿದ ನಾಲ್ಕರಲ್ಲಿ ಎರಡು ಕ್ಷೇತ್ರಗಳಲ್ಲಿ ಯಾವುದಾದರೂ ಎರಡು ಜಾಗಗಳಲ್ಲಿ ಮಾತ್ರ ಬದಲಾವಣೆಗಳನ್ನು ಕೋರುವ ನಾಗರಿಕರು ವೈಯಕ್ತಿಕ ಮಾಹಿತಿಗಳಲ್ಲಿ (ಹೆಸರು, ಹುಟ್ಟಿದ ವರ್ಷ, ಲಿಂಗ ಮತ್ತು ಬಳಸಿದ ಕಾರ್ಡ್ ಫೋಟೋ ಐಡಿ ಸಂಖ್ಯೆ) ತಿದ್ದುಪಡಿಗಳನ್ನು ಮಾಡಬಹುದು. ಬದಲಾವಣೆಗಳನ್ನು ಒಮ್ಮೆ ಮಾತ್ರ ಅನುಮತಿಸಲಾಗಿದೆ. ನವೀಕರಿಸಿದ ನಂತರ ಹಳೆಯ ಪ್ರಮಾಣಪತ್ರವನ್ನು ತೆಗೆಯಲಾಗುತ್ತದೆ ಮತ್ತು ಬದಲಾವಣೆಗಳನ್ನು ಮತ್ತೆ ಮೊದಲಿನಂತೆ ಮಾಡಲಾಗುವುದಿಲ್ಲ.

•           ಲಸಿಕೆ ಪ್ರಕಾರದಲ್ಲಿನ ಬದಲಾವಣೆ, ಲಸಿಕೆ ನೀಡಿದ ದಿನಾಂಕ, ಕೋ-ವಿನ್ನಲ್ಲಿ ನಿರ್ದಿಷ್ಟವಾಗಿ ದಾಖಲಾಗದ ವಿವರಗಳನ್ನು ಜಿಲ್ಲಾ ರೋಗನಿರೋಧಕ ಅಧಿಕಾರಿಗಳ (ಡಿಐಒ) ಸಹಾಯದಿಂದ ಮಾಡಬಹುದು. ಬದಲಾವಣೆಗಳನ್ನು ಬಳಕೆದಾರರಿಂದ ಸ್ವತಃ ಮಾಡಲಾಗುವುದಿಲ್ಲ ಆದರೆ ಬಳಕೆದಾರರು ಡಿಐಒ ಅವರಿಗೆ ವಿನಂತಿಸಬೇಕು.

•           ಅಸ್ತಿತ್ವದಲ್ಲಿರುವ ಸಿವಿಸಿಗಳನ್ನು ನಗರ ಮತ್ತು ಗ್ರಾಮೀಣ ಎಂದು ಟ್ಯಾಗ್ ಮಾಡುವ ವೈಶಿಷ್ಟ್ಯವನ್ನು ಸಹ ಒದಗಿಸಲಾಗುತ್ತಿದೆ.

ಲಸಿಕೆ ಬಳಕೆಯ ವೈಶಿಷ್ಟ್ಯದ ಬಗ್ಗೆ ರಾಜ್ಯಗಳಿಗೆ ತಿಳಿಸಲಾಯಿತು. ವ್ಯಾಕ್ಸಿನೇಟರ್ಗಳು ಸಲ್ಲಿಸಿದ ಲಸಿಕೆ ಬಳಕೆಯ ವರದಿಗಳನ್ನು (ವಿಯುಆರ್) ಸಂಪಾದಿಸಲು / ನವೀಕರಿಸಲು ಮತ್ತು ಅಗತ್ಯವಿದ್ದರೆ ತಿದ್ದುಪಡಿಗಳನ್ನು ಮಾಡಲು ಡಿಐಒಗಳಿಗೆ ಅವಕಾಶವಿದೆ. ಡೇಟಾ ಎಂಟ್ರಿ ದೋಷಗಳನ್ನು ತಡೆಗಟ್ಟಲು ವ್ಯಾಕ್ಸಿನೇಟರ್ಗಳು ಮತ್ತು ಡಿಐಒಗಳಿಗೆ ಸಂಪೂರ್ಣ ತರಬೇತಿ ನೀಡಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಲಾಯಿತು.

ಕೋವಿನ್ ಪ್ಲಾಟ್ಫಾರ್ಮ್ ಈಗ 12 ಭಾಷೆಗಳಲ್ಲಿ ಲಭ್ಯವಿದೆ ಎಂದು ರಾಜ್ಯಗಳಿಗೆ ತಿಳಿಸಲಾಯಿತು. ಯುಡಿಐಡಿ ವಿಶೇಷ ಚೇತನರ ಗುರುತಿನ ಚೀಟಿಯನ್ನು ನೋಂದಾಯಿಸಲು ಕೋವಿನ್ ಸಜ್ಜುಗೊಂಡಿದೆ. ತಲಾ 15 ನಿಮಿಷಗಳ 50 ಲಾಗಿನ್ ಸೆಷನ್ಗಳಲ್ಲಿ 1000 ಕ್ಕೂ ಹೆಚ್ಚು ಹುಡುಕಾಟಗಳನ್ನು ಮಾಡಿದರೆ ಈಗ ಖಾತೆಗಳನ್ನು 24 ಗಂಟೆಗಳ ಕಾಲ ನಿರ್ಬಂಧಿಸಬಹುದು ಎಂದು ಸಹ ಸೂಚಿಸಲಾಯಿತು.

ಆನ್ಸೈಟ್ ಸಾಮರ್ಥ್ಯ 0ಗಿಂತ ಹೆಚ್ಚಿದ್ದರೆ ರಾಜ್ಯಗಳು 45+ ಸೆಷನ್ಗಳಿಗೆ ನೇರವಾಗಿ ಭೇಟಿ ನೀಡುವವರಿಗೆ (ವಾಕ್-ಇನ್ ಸೆಷನ್‌) ನೋಂದಣಿಗಳನ್ನು ನೀಡಬಹುದು. ಆನ್ಸೈಟ್-ಡೋಸ್ 2ಸಾಮರ್ಥ್ಯವು 0 ಕ್ಕಿಂತ ಹೆಚ್ಚಿದ್ದರೆ 18-44 ಗುಂಪಿನ ವಾಕ್-ಇನ್ ಸೆಷನ್ಗಳನ್ನು ಸಹ ಆಯೋಜಿಸಬಹುದು. ಸಿವಿಸಿಗಳಲ್ಲಿ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಲು ಸಲಹೆ ನೀಡಲಾಗಿದೆ.

***


(Release ID: 1726164) Visitor Counter : 224


Read this release in: English , Urdu , Hindi , Malayalam