ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ತಾಜಾ ಮಾಹಿತಿ


ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 24,60 ಕೋಟಿ ಡೋಸ್ ಗಳಿಗೂ ಹೆಚ್ಚು ಲಸಿಕೆ ಪೂರೈಕೆ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 1.49 ಕೋಟಿ ಡೋಸ್ ಗಳಿಗೂ ಹೆಚ್ಚು ಲಸಿಕೆ ಲಭ್ಯ

Posted On: 07 JUN 2021 11:03AM by PIB Bengaluru

ರಾಷ್ಟ್ರೀಯ ಲಸಿಕಾ ಅಭಿಯಾನದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬೆಂಬಲದೊಂದಿಗೆ ಭಾರತ ಸರ್ಕಾರ ಉಚಿತವಾಗಿ ಲಸಿಕೆ ವಿತರಿಸುತ್ತಿದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಇದರ ಜತೆಗೆ ಹೆಚ್ಚುವರಿಯಾಗಿ ಲಸಿಕೆ ಖರೀದಿಸಲು ಭಾರತ ಸರ್ಕಾರ ವ್ಯವಸ್ಥೆ ಕಲ್ಪಿಸಿದೆ. ಕೋವಿಡ್ ಸಾಂಕ್ರಾಮಿಕ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಸೋಂಕು ಪತ್ತೆ, ಪರೀಕ್ಷೆ, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ವರ್ತನೆಯ ಜತೆಗೆ ಲಸಿಕೆ ಕೂಡ ಅವಿಭಾಜ್ಯ ಸ್ಥಂಭವಾಗಿದೆ.

ಕೋವಿಡ್-19 3 ನೇ ಹಂತದ ಉದಾರೀಕೃತ ಮತ್ತು ತ್ವರಿತ ಲಸಿಕೆ ಅಭಿಯಾನ 2021 ಮೇ 1 ರಿಂದ ಅನುಷ್ಠಾನಗೊಂಡಿದೆ.

ಲಸಿಕಾ ಕಾರ್ಯತಂತ್ರದಡಿ ಉತ್ಪಾದಕರಿಂದ ಪ್ರತಿ ತಿಂಗಳು ಕೇಂದ್ರ ಸರ್ಕಾರ ಖರೀದಿಸುವ ಲಸಿಕೆಯ ಡೋಸ್ ಗಳನ್ನು ಕೇಂದ್ರೀಯ ಔಷಧ ಪ್ರಯೋಗಾಲಯ [ಸಿ.ಡಿ.ಎಲ್] ಶೇ 50 ರಷ್ಟು ಡೋಸ್ ಗಳಿಗೆ ಅನುಮತಿ ನೀಡುತ್ತದೆ ಹಿಂದೆ ನಿಗದಿ ಮಾಡಿರುವ ಪ್ರಮಾಣದಷ್ಟು ಡೋಸ್ ಗಳನ್ನು ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲು ಇದರಿಂದ ಸಾಧ್ಯವಾಗುತ್ತದೆ.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 24 ಕೋಟಿ ಗೂ ಹೆಚ್ಚು (24,60,80,900) ಡೋಸ್ ಗಳನ್ನು ಭಾರತ ಸರ್ಕಾರ [ಉಚಿತ ದರದ ಮೂಲಕ] ಮತ್ತು ರಾಜ್ಯಗಳ ನೇರ ಖರೀದಿ ಕಾರ್ಯತಂತ್ರದಡಿ ಒದಗಿಸಲಾಗಿದೆ

ಇದರಿಂದ ವ್ಯರ್ಥವಾದದ್ದು ಸೇರಿ ಒಟ್ಟು 23,11,69,251  ಡೋಸ್ ಗಳ ಲಸಿಕೆ ಬಳಕೆಯಾಗಿದೆ [ಇಂದು ಬೆಳಿಗ್ಗೆ 8 ಗಂಟೆವರೆಗೆ ದೊರೆತ ದತ್ತಾಂಶದಂತೆ].

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ 1.49 ಕೋಟಿ ಗೂ (1,49,11,649)  ಹೆಚ್ಚು ಡೋಸ್ ಗಳ ಲಸಿಕೆ ಲಭ್ಯವಿದೆ.

***



(Release ID: 1725037) Visitor Counter : 190