ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19ಅಪ್ಡೇಟ್

Posted On: 06 JUN 2021 9:29AM by PIB Bengaluru

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದೈನಿಕ 1.14 ಲಕ್ಷ  ಹೊಸ ಪ್ರಕರಣಗಳು ವರದಿಯಾಗಿವೆ, ಇದು ಕಳೆದ 60 ದಿನಗಳಲ್ಲಿ ಅತ್ಯಂತ ಕನಿಷ್ಠ.

ಪ್ರಕರಣಗಳ ಇಳಿಕೆ ಪ್ರವೃತ್ತಿ ಮುಂದುವರಿದಿದೆ;  ಕಳೆದ ಸತತ 10 ದಿನಗಳಿಂದ ದೈನಿಕ 2 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು

ಭಾರತದ ಸಕ್ರಿಯ ಪ್ರಕರಣಗಳ ಹೊರೆ 15 ಲಕ್ಷಕ್ಕಿಂತ ಕೆಳಗಿದೆ;  ಅದು ಇಂದು  14,77,799 ರಲ್ಲಿದೆ.

ಸಕ್ರಿಯ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ 77,449 ರಷ್ಟು ಕಡಿಮೆಯಾಗಿವೆ.
ಇದುವರೆಗೆ ದೇಶದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 2.69 ಕೋಟಿಗೂ ಅಧಿಕ.
ಕಳೆದ 24 ಗಂಟೆಗಳಲ್ಲಿ 1,89,232 ರೋಗಿಗಳು ಗುಣಮುಖರಾಗಿದ್ದಾರೆ.
ಸತತ 24 ನೇ ದಿನವೂ ದೈನಿಕ ಚೇತರಿಕೆ/ಗುಣಮುಖರಾದವರ ಸಂಖ್ಯೆ ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ.
ರಾಷ್ಟ್ರೀಯ ಗುಣಮುಖ/ಚೇತರಿಕೆ ದರದಲ್ಲಿ ಸತತ ಹೆಚ್ಚಳ ಕಾಯ್ದುಕೊಳ್ಳಲಾಗಿದೆ, ಇಂದು ಈ ಪ್ರಮಾಣ 93.67% ರಲ್ಲಿದೆ.

ಸಾಪ್ತಾಹಿಕ  ಪಾಸಿಟಿವ್ ದರ ಪ್ರಸ್ತುತ 6.54%ರಲ್ಲಿದೆ.
ದೈನಿಕ ಪಾಸಿಟಿವ್ ದರ ಕುಸಿತ ಮುಂದುವರಿದಿದೆ ಮತ್ತು ಅದು  5.62% ತಲುಪಿದೆ, ಇದು  ಸತತ 13 ನೇ ದಿನವೂ 10 % ಗಿಂತ ಕಡಿಮೆ ಇದೆ.

ಪರೀಕ್ಷಾ ಸಾಮರ್ಥ್ಯವನ್ನು ವ್ಯಾಪಕವಾಗಿ ಹೆಚ್ಚಿಸಲಾಗಿದ್ದು- ಇದುವರೆಗೆ ಒಟ್ಟು 36.4 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

ಭಾರತವು 23 ಕೋಟಿ ಲಸಿಕೆ ನೀಡಿಕೆ ವ್ಯಾಪ್ತಿಯ ಮೈಲಿಗಲ್ಲನ್ನು ದಾಟಿದೆ; ಇದುವರೆಗೆ ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಅಂಗವಾಗಿ 23.13 ಕೋಟಿ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.

****


(Release ID: 1724912) Visitor Counter : 159