ಭೂವಿಜ್ಞಾನ ಸಚಿವಾಲಯ
ನೈಋತ್ಯ ಮುಂಗಾರು ದಕ್ಷಿಣ ಅರಬ್ಬಿ ಸಮುದ್ರದ ಉಳಿದ ಭಾಗಗಳಿಗೆ, ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳಿಗೆ, ಕೇರಳ ಮತ್ತು ಲಕ್ಷದ್ವೀಪದ ಉಳಿದ ಭಾಗಗಳಲ್ಲಿ ಮುಂದುವರಿಯುವ ಸಾಧ್ಯತೆ
Posted On:
04 JUN 2021 12:47PM by PIB Bengaluru
ಭಾರತೀಯ ಹವಾಮಾನ ಇಲಾಖೆ (ಐ.ಎಂ.ಡಿ.)ಯ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ರೀತ್ಯ:
ಅಖಿಲ ಭಾರತ ಹವಾಮಾನ ಸಾರಾಂಶ ಮತ್ತು ಮುನ್ಸೂಚನೆ ವರದಿ
ಗಮನಾರ್ಹ ಹವಾಮಾನ ವೈಶಿಷ್ಟ್ಯಗಳು
ಪ್ರಮುಖ ಹವಾಮಾನ ಅವಲೋಕನ
ಹವಾಮಾನ ವಿಶ್ಲೇಷಣೆ (0530 ಐ.ಎಸ್.ಟಿ. ಆಧಾರಿತ)
ಮುಂದಿನ ಐದು ದಿನಗಳಿಗೆ ಹವಾಮಾನ ಮುನ್ಸೂಚನೆ*9 ಜೂನ್ 2021ರ 0830ಐ.ಎಸ್.ಟಿ.ವರೆಗೆ
2021ರ ಜೂನ್ 9ರಿಂದ 2021ರ ಜೂನ್ 11ರವರೆಗೆ 2 ದಿನಗಳಿಗೆ ಹವಾಮಾನ ಮುನ್ನೋಟ
ಮುಂದಿನ 5 ದಿನಗಳಿಗೆ ಹವಾಮಾನ ಮುನ್ಸೂಚನೆ*
ಮುಂದಿನ 5 ದಿನಗಳವರೆಗೆ ಹವಾಮಾನ ಮುನ್ನೆಚ್ಚರಿಕೆ
04 ಜೂನ್ (ದಿನ 1): ♦ ಪೂರ್ವ ರಾಜಾಸ್ಥಾನ, ಪಶ್ಚಿಮ ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಚದುರಿದಂತೆ ಗುಡುಗು, ಮಿಂಚು ಸಹಿತ ಮಳೆ ಮತ್ತು ರಭಸದ ಗಾಳಿ (ಪ್ರತಿ ಗಂಟೆಗೆ 30-40 ಕಿ.ಮೀ. ವೇಗ) ಬೀಸುವ ಸಾಧ್ಯತೆ ಇದೆ ಮತ್ತು ಜಮ್ಮು ಹಾಗೂ ಕಾಶ್ಮೀರ, ಲಡಾಖ್, ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಮುಜಾಫರ್ ಬಾದ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪೂರ್ವ ಮಧ್ಯಪ್ರದೇಶ, ವಿದರ್ಭಾ, ಛತ್ತೀಸಗಢ, ಒಡಿಶಾ, ಗುಜರಾತ್ ರಾಜ್ಯ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಕೊಂಕಣ ಮತ್ತು ಗೋವಾ, ಕರಾವಳಿ ಆಂಧ್ರಪ್ರದೇಶ ಮತ್ತು ಯಮನ್, ರಾಯಲಸೀಮಾ, ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡು, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಕೇರಳ ಹಾಗೂ ಮಾಹೆಯಲ್ಲಿ ಚದುರಿದಂತೆ ಮಿಂಚಿನ ಸಹಿತ ಮಳೆ ನಿರೀಕ್ಷೆ.
♦ ಪಶ್ಚಿಮ ರಾಜಾಸ್ಥಾನದಲ್ಲಿ ಚದುರಿದಂತೆ ಗುಡುಗು/ಧೂಳಿನಿಂದ ಕೂಡಿದ ಗಾಳಿ, ಮಿಂಚು ಸಹಿತ ಮಳೆ ಮತ್ತು ರಭಸದ ಗಾಳಿ (ಪ್ರತಿ ಗಂಟೆಗೆ 30-40 ಕಿ.ಮೀ. ವೇಗ) ಬೀಸುವ ಸಾಧ್ಯತೆ
♦ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ಮಧ್ಯ ಮಹಾರಾಷ್ಟ್ರ, ಕೊಂಕಣ ಮತ್ತು ಗೋವಾ, ಕರಾವಳಿ ಆಂಧ್ರಪ್ರದೇಶ ಮತ್ತು ಯಮನ್, ತೆಲಂಗಾಣ, ರಾಯಲಸೀಮಾ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಕೇರಳ ಹಾಗೂ ಮಾಹೆಯಲ್ಲಿ ಭಾರೀ ಮಳೆ ಸಾಧ್ಯತೆ.
♦ನೈಋತ್ಯ ಮತ್ತು ಪಶ್ಚಿಮ ಕೇಂದ್ರ ಅರಬ್ಬಿ ಸಮುದ್ರದಲ್ಲಿ ಬಲವಾದ ಗಾಳಿ ( ಪ್ರತಿ ಗಂಟೆಗೆ 40-50ರಿಂದ 60 ಕಿ.ಮೀ. ವೇಗ) ಬೀಸುವ ಸಾಧ್ಯತೆ ಮತ್ತು ಲಕ್ಷದ್ವೀಪ ಪ್ರದೇಶ, ಕೇರಳ ಕರಾವಳಿಯ ಆಗ್ನೇಯ ಅರಬ್ಬಿ ಸಮುದ್ರದ ಪ್ರದೇಶದಲ್ಲಿ ಪ್ರತಿ ಗಂಟೆಗೆ 40-50ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ ಮಳೆ ಸಾಧ್ಯತೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನಚ್ಚರಿಕೆ ನೀಡಲಾಗಿದೆ.
05 ಜೂನ್ (ದಿನ 2): ♦ ರಾಜಾಸ್ಥಾನದಲ್ಲಿ ಚದುರಿದಂತೆ ಗುಡುಗು, ಮಿಂಚು ಸಹಿತ ಮಳೆ ಮತ್ತು ರಭಸದ ಗಾಳಿ (ಪ್ರತಿ ಗಂಟೆಗೆ 30-40 ಕಿ.ಮೀ. ವೇಗ) ಬೀಸುವ ಸಾಧ್ಯತೆ ಇದೆ ಮತ್ತು ಮಧ್ಯಪ್ರದೇಶ, ವಿದರ್ಭಾ, ಛತ್ತೀಸಗಢ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಮ್ ಮತ್ತು ತ್ರಿಪುರಾ, ಗುಜರಾತ್ ರಾಜ್ಯ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಕೊಂಕಣ ಮತ್ತು ಗೋವಾ, ಕರಾವಳಿ ಆಂಧ್ರಪ್ರದೇಶ ಮತ್ತು ಯಮನ್, ತೆಲಂಗಾಣ, ರಾಯಲಸೀಮಾ, ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡು, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಕೇರಳ ಹಾಗೂ ಮಾಹೆಯಲ್ಲಿ ಚದುರಿದಂತೆ ಮಿಂಚಿನ ಸಹಿತ ಮಳೆ ನಿರೀಕ್ಷೆ.
♦ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ, ಕೊಂಕಣ ಮತ್ತು ಗೋವಾ, ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡು, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಕೇರಳ ಹಾಗೂ ಮಾಹೆಯಲ್ಲಿ ಭಾರೀ ಮಳೆ ಸಾಧ್ಯತೆ.
♦ ನೈಋತ್ಯ ಮತ್ತು ಪಶ್ಚಿಮ ಕೇಂದ್ರ ಅರಬ್ಬಿ ಸಮುದ್ರದಲ್ಲಿ ಬಲವಾದ ಗಾಳಿ ( ಪ್ರತಿ ಗಂಟೆಗೆ 40-50ರಿಂದ 60 ಕಿ.ಮೀ. ವೇಗ) ಬೀಸುವ ಸಾಧ್ಯತೆ ಮತ್ತು ಲಕ್ಷದ್ವೀಪ ಪ್ರದೇಶ, ಕೇರಳ ಕರಾವಳಿಯ ಆಗ್ನೇಯ ಅರಬ್ಬಿ ಸಮುದ್ರದ ಪ್ರದೇಶದಲ್ಲಿ ಪ್ರತಿ ಗಂಟೆಗೆ 40-50ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ ಮಳೆ ಸಾಧ್ಯತೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನಚ್ಚರಿಕೆ ನೀಡಲಾಗಿದೆ.
06 ಜೂನ್ (ದಿನ 3): ♦ ಮಧ್ಯಪ್ರದೇಶ, ವಿದರ್ಭಾ, ಛತ್ತೀಸಗಢ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ, ಗುಜರಾತ್ ರಾಜ್ಯ, ತೆಲಂಗಾಣ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಹಾಗೂ ಕೇರಳ ಮತ್ತು ಮಾಹೆಯಲ್ಲಿ ಚದುರಿದಂತೆ ಗುಡುಗು ಮಿಂಚಿನ ಸಹಿತ ಮಳೆ ನಿರೀಕ್ಷೆ.
♦ ಅರುಣಾಚಲ ಪ್ರದೇಶ, ಅಸ್ಸಾಂ, ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಚದುರಿದಂತೆ ಭಾರಿ ಮಳೆ ಸಾಧ್ಯತೆ.
♦ ನೈಋತ್ಯ ಮತ್ತು ಪಶ್ಚಿಮ ಕೇಂದ್ರ ಅರಬ್ಬಿ ಸಮುದ್ರದಲ್ಲಿ ಬಲವಾದ ಗಾಳಿ ( ಪ್ರತಿ ಗಂಟೆಗೆ 40-50ರಿಂದ 60 ಕಿ.ಮೀ. ವೇಗ) ಬೀಸುವ ಸಾಧ್ಯತೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನಚ್ಚರಿಕೆ ನೀಡಲಾಗಿದೆ.
07 ಜೂನ್ (ದಿನ 4):♦ ಉತ್ತರಾಖಂಡ್, ಮಧ್ಯಪ್ರದೇಶ, ವಿದರ್ಭಾ, ಛತ್ತೀಸಗಢ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗುಜರಾತ್ ರಾಜ್ಯ, ತೆಲಂಗಾಣ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಹಾಗೂ ಕೇರಳ ಮತ್ತು ಮಾಹೆಯಲ್ಲಿ ಚದುರಿದಂತೆ ಗುಡುಗು ಮಿಂಚಿನ ಸಹಿತ ಮಳೆ ನಿರೀಕ್ಷೆ
♦ ಉಪ ಹಿಮಾಲಯ ಪ್ರದೇಶ, ಪಶ್ಚಿಮ ಬಂಗಾಳ, ಮತ್ತು ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮತ್ತು ಅಸ್ಸಾಂ ಹಾಗೂ ಮೇಘಾಲಯದಲ್ಲಿ ಚದುರಿದಂತೆ ಭಾರೀ ಮಳೆ ಸಂಭವ.
♦ ನೈಋತ್ಯ ಮತ್ತು ಪಶ್ಚಿಮ ಕೇಂದ್ರ ಅರಬ್ಬಿ ಸಮುದ್ರದಲ್ಲಿ ಬಲವಾದ ಗಾಳಿ ( ಪ್ರತಿ ಗಂಟೆಗೆ 40-50ರಿಂದ 60 ಕಿ.ಮೀ. ವೇಗ) ಬೀಸುವ ಸಾಧ್ಯತೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನಚ್ಚರಿಕೆ ನೀಡಲಾಗಿದೆ.
08 ಜೂನ್ (ದಿನ 5): ♦ ಛತ್ತೀಸಗಢ, ಪಶ್ಚಿಮ ಬಂಗಾಳ, ಮತ್ತು ಸಿಕ್ಕಿಂ, ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗುಳು, ಗುಜರಾತ್ ರಾಜ್ಯ, ತೆಲಂಗಾಣ, ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಕೋರಳ ಹಾಗೂ ಮಾಹೆಯಲ್ಲಿ ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ
♦ ಉಪ ಹಿಮಾಲಯ ಪ್ರದೇಶ, ಪಶ್ಚಿಮ ಬಂಗಾಳ, ಮತ್ತು ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮತ್ತು ಅಸ್ಸಾಂ ಹಾಗೂ ಮೇಘಾಲಯದಲ್ಲಿ ಚದುರಿದಂತೆ ಭಾರೀ ಮಳೆ ಸಂಭವ.
♦ ನೈಋತ್ಯ ಮತ್ತು ಪಶ್ಚಿಮ ಕೇಂದ್ರ ಅರಬ್ಬಿ ಸಮುದ್ರದಲ್ಲಿ ಬಲವಾದ ಗಾಳಿ ( ಪ್ರತಿ ಗಂಟೆಗೆ 40-50ರಿಂದ 60 ಕಿ.ಮೀ. ವೇಗ) ಬೀಸುವ ಸಾಧ್ಯತೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನಚ್ಚರಿಕೆ ನೀಡಲಾಗಿದೆ.
(ವಿವರ ಮತ್ತು ನಕ್ಷೆಗಾಗಿ ಇಲ್ಲಿ ಕ್ಲಿಕ್ ಮಾಡಿ)
***
(Release ID: 1724451)
Visitor Counter : 192