ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ವೇಗ ಪಡೆಯುತ್ತಿರುವ ‘ಇಂಡಿಯಾ ಸೈಕಲ್ 4 ಚೇಂಜ್‘ ಸ್ಪರ್ಧೆ


ದೇಶಾದ್ಯಂತ ನಗರಗಳಲ್ಲಿ ‘ಇಂಡಿಯಾ ಸೈಕಲ್ 4 ಚೇಂಜ್’ ಸ್ಪರ್ಧೆ  ಆಂದೋಲನ ಆರಂಭ

41 ನಗರಗಳಲ್ಲಿ  ಸೈಕಲ್ ಸ್ನೇಹಿ ಉಪಕ್ರಮಗಳ ಪರೀಕ್ಷೆ 

Posted On: 02 JUN 2021 7:16PM by PIB Bengaluru

ಭಾರತೀಯ ನಗರಗಳಲ್ಲಿ ಇಂಡಿಯಾ ಸೈಕಲ್ 4 ಚೇಂಜ್ ಸ್ಪರ್ಧೆ ದಿನೇ ದಿನೇ ಚುರುಕುಗೊಳ್ಳುತ್ತಿದೆ. ಸ್ಪರ್ಧೆಯನ್ನು ಕಳೆದ ವರ್ಷ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2020 ಜೂನ್ 25ರಂದು ಸ್ಮಾರ್ಟ್ ಸಿಟಿ ಯೋಜನೆಯಡಿ ಆರಂಭಿಸಿದ್ದು, ಇದು ದೇಶಾದ್ಯಂತ ಸದ್ಯ ಎದುರಾಗಿರುವ ಕೋವಿಡ್-19 ಸಾಂಕ್ರಾಮಿಕಕ್ಕೆ ವಿರುದ್ಧದ ಹೋರಾಟಕ್ಕೆ ಸ್ಪಂದಿಸುವ ಸಲುವಾಗಿ ಆಯೋಜಿಸಲಾಗಿದೆ. ಕಳೆದ ಒಂದು ವರ್ಷದಿಂದೀಚೆಗೆ ಭಾರತದಲ್ಲಿ ಸೈಕ್ಲಿಂಗ್ ಕ್ರಾಂತಿ ನಡೆದಿದ್ದು, ಸೈಕ್ಲಿಂಗ್ ಸಾಮಾಜಿಕ ಅಂತರ ಖಾತ್ರಿಪಡಿಸುವ ಜೊತೆಗೆ ಅತ್ಯಂತ ಪ್ರಮುಖ ಸುರಕ್ಷಿತ ಹಾಗೂ ಆರೋಗ್ಯಕರ ವೈಯಕ್ತಿಕ ಸಾರಿಗೆ ವಿಧಾನವಾಗಿ ನೋಡಲಾಗುತ್ತಿದ್ದು, ಇದು ಪರಿಸರದ ದೃಷ್ಟಿಯಿಂದ ಅತ್ಯಂತ ಸುಸ್ಥಿರವಾದುದಾಗಿದೆ.

ಕೋವಿಡ್-19 ಸಾಂಕ್ರಾಮಿಕ ದೇಶಾದ್ಯಂತ ಹರಡಿರುವ ಹಿನ್ನೆಲೆಯಲ್ಲಿ ಸೈಕ್ಲಿಂಗ್ ಗೆ ಭಾರೀ ಬೇಡಿಕೆ ಎದುರಾಗಿದೆ. ಲಾಕ್ ಡೌನ್ ನಿರ್ಬಂಧಗಳಿಂದಾಗಿ ಸಾರ್ವಜನಿಕ ಸಾರಿಗೆಗಳಲ್ಲಿ ಸಂಚರಿಸುವವರಿಗೆ ಗಂಭೀರ ತೊಂದರೆಯಾಗಿದೆ. ಅವರು ಅಲ್ಪ ಮತ್ತು ಮಧ್ಯಮ ದೂರವನ್ನು ಕ್ರಮಿಸಲು ಸೈಕ್ಲಿಂಗ್ ಅನ್ನು ವೈಯಕ್ತಿಕ ಮತ್ತು ಕೋವಿಡ್ ಸುರಕ್ಷತಾ ಪರ್ಯಾಯ ವಿಧಾನವನ್ನಾಗಿ ಕಂಡುಕೊಂಡಿದ್ದಾರೆ. ಅಲ್ಲದೆ ಮನೆಗಳಿಗೆ ಸೀಮಿತವಾಗಿದ್ದ ಜನರಿಗೆ ಸೈಕ್ಲಿಂಗ್ ದೈಹಿಕವಾಗಿ, ಆರೋಗ್ಯವಂತರಾಗಿ ಮತ್ತು ಮಾನಸಿಕವಾಗಿ ಸದೃಢತೆಯನ್ನು ಕಾಯ್ದುಕೊಳ್ಳಲು ನೆರವಾಗಿದೆ.  

ಹಿನ್ನೆಲೆಯಲ್ಲಿ ಇಂಡಿಯಾ ಸೈಕಲ್ 4 ಚೇಂಜ್ ಸ್ಪರ್ಧೆಯನ್ನು ಆರಂಭಿಸಲಾಗಿದ್ದು, ಸೈಕ್ಲಿಂಗ್ ಕ್ರಾಂತಿಯ ಭಾಗವಾಗಿ 107 ನಗರಗಳು ನೋಂದಾಯಿಸಲ್ಪಟ್ಟಿವೆ ಮತ್ತು 41 ನಗರಗಳಲ್ಲಿ ಸೈಕಲ್ ಸ್ನೇಹಿ ನಗರಗಳ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಸಮೀಕ್ಷೆಗಳು, ಚರ್ಚೆಗಳು, ಪಾಪ-ಅಪ್ ಸೈಕಲ್ ಲೇನ್ ಗಳು, ಸುರಕ್ಷಿತ ನೆರೆಹೊರೆ, ಮುಕ್ತ ಬೀದಿ ಕಾರ್ಯಕ್ರಮಗಳು, ಸೈಕಲ್ ಜಾಥಾಗಳು ಅಥವಾ ಆನ್ ಲೈನ್ ಅಭಿಯಾನಗಳು ನಡೆಯುತ್ತಿವೆ. ನಗರಗಳಲ್ಲಿ ಅಭಿಯಾನದ ಭಾಗವಾಗಿ ಸುಮಾರು 400 ಕಿ.ಮೀ. ಸಣ್ಣ ರಸ್ತೆಗಳು ಹಾಗೂ 3500ಕ್ಕೂ ಅಧಿಕ ನೆರೆಹೊರೆ ರಸ್ತೆಗಳನ್ನು ಸೈಕಲ್ ಸ್ನೇಹಿಯನ್ನಾಗಿ ಮಾಡುವ ಕ್ರಮಕ್ಕೆ ಚಾಲನೆ ನೀಡಲಾಗಿದೆ. ಸ್ಮಾರ್ಟ್ ಸಿಟಿ ಮಿಷನ್ ಅಡಿ ಸಾರಿಗೆ ಮತ್ತು ಅಭಿವೃದ್ಧಿ ನೀತಿ ಸಂಸ್ಥೆ(ಐಟಿಡಿಪಿ) ಸಹಕಾರದೊಂದಿಗೆ 107 ನಗರಗಳಲ್ಲಿ ನಾನಾ ರೀತಿಯ ಸೈಕ್ಲಿಂಗ್ ಚಟುವಟಿಕೆಗಳನ್ನು ಕೈಗೊಳ್ಳಲು ಮಾರ್ಗದರ್ಶನಕ್ಕೆ ತರಬೇತಿ ಮಾದರಿಗಳನ್ನು ಮತ್ತು ಇತರೆ ಸಾಮರ್ಥ್ಯವೃದ್ಧಿ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

ಸ್ಪರ್ಧೆ ಆರಂಭವಾದ ನಂತರದ ಪ್ರಗತಿ:

  ಸ್ಪರ್ಧೆಯಲ್ಲಿ ಪರೀಕ್ಷೆ ಕಲಿಕೆ ಮತ್ತು ಅಳವಡಿಕೆ(ಟಿಎಲ್ಎಸ್) ಮನೋಭಾವವಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿರುವ ಹಲವು ನಗರಗಳು  ಅದನ್ನು ಅಳವಡಿಸಿಕೊಂಡಿದ್ದು, ಹಲವು ಉಪಕ್ರಮಗಳ ಮೂಲಕ ಪರೀಕ್ಷೆ ನಡೆಸಲಾಗುತ್ತಿದ್ದು, ಸ್ಪರ್ಧೆಯ ಮೊದಲ ಹಂತದಲ್ಲಿ ತ್ವರಿತವಾಗಿ ಕಡಿಮೆ ವೆಚ್ಚದ ಮಧ್ಯ ಪ್ರವೇಶಗಳನ್ನು ಮಾಡಲಾಗುತ್ತಿದ್ದು, ನಂತರ ಅವುಗಳಿಂದ ಪಾಠ ಕಲಿತು, ಎರಡನೇ ಹಂತಕ್ಕೆ ತಮ್ಮ ಸಾಮರ್ಥ್ಯವೃದ್ಧಿಗೆ ಸಿದ್ಧತೆ ನಡೆಸುತ್ತಿವೆ. ಪರಿಹಾರಗಳನ್ನು ಕಂಡುಕೊಳ್ಳಲು ಪ್ರಮುಖವಾಗಿ ಗುರುತಿಸಲ್ಪಟ್ಟಿರುವ ಮಧ್ಯಪ್ರವೇಶ ವಲಯಗಳು ಕೆಳಗಿನಂತಿವೆ

1. ಜನರ ಅನಿಸಿಕೆ, ಅಭಿಪ್ರಾಯಗಳನ್ನು ಆಲಿಸುವ ಮೂಲಕ ಸೈಕ್ಲಿಂಗ್ ಗೆ ಇರುವ ಅಡೆತಡೆಗಳನ್ನು ಗುರುತಿಸುವುದು.

  • ಸೈಕ್ಲಿಂಗ್ ಗೆ ಸಂಬಂಧಿಸಿದಂತೆ ಪ್ರಜೆಗಳ ಅಗತ್ಯವನ್ನು ಅರ್ಥಮಾಡಿಕೊಳ್ಳಲು ನಗರಗಳಲ್ಲಿ ಸಮೀಕ್ಷೆಗಳನ್ನು ನಡೆಸಲಾಯಿತು. ಹಲವು ನಾಯಕರು ತಾವೇ ಸ್ವತಃ ಸೈಕಲ್ ತುಳಿದು ಮುಂದಾಳತ್ವ ವಹಿಸಿ ಸೈಕಲ್ ಬಳಕೆದಾರರು ಮತ್ತು ಇತರೆ ಪ್ರಜೆಗಳೊಂದಿಗೆ ಬೆರೆತು ಅವರನ್ನು  ಅರ್ಥಮಾಡಿಕೊಂಡರು.
  • ಸೈಕ್ಲಿಂಗ್ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ನಗರಗಳಲ್ಲಿ ಸಮೀಕ್ಷೆಗಳು ಮತ್ತು ಸಂದರ್ಶನಗಳನ್ನು ನಡೆಸಲಾಯಿತು ಹಾಗೂ ದೇಶಾದ್ಯಂತ ಸುಮಾರು 60,000ಕ್ಕೂ ಅಧಿಕ ಮಂದಿ ಇವುಗಳಲ್ಲಿ ಪಾಲ್ಗೊಂಡರು.
  • ಇದರಲ್ಲಿ ವೈವಿಧ್ಯಮಯ ಬಳಕೆದಾರರ ಗುಂಪುಗಳು ಸೇರಿದಂತೆ ಹಲವು ರೀತಿಯ ಉಪಕ್ರಮಗಳು ಒಳಗೊಂಡಿವೆ; ತಂಡ ರಾಜ್ ಕೋಟ್ ನಲ್ಲಿ ಅಂಚೆಪೇದೆಯನ್ನು ಸಂದರ್ಶನ ಮಾಡಿತು; ಹುಬ್ಬಳ್ಳಿ, ಧಾರವಾಡ ಮತ್ತು ಕಾಕಿನಾಡಗಳಲ್ಲಿ ಮಹಿಳೆಯರೊಂದಿಗೆ ದುಂಡುಮೇಜಿನ ಸಂವಾದಗಳನ್ನು ನಡೆಸಲಾಯಿತು ಹಾಗೂ ಐಜ್ವಾಲ್ ನಲ್ಲಿ ಮಕ್ಕಳನ್ನು ಒಳಗೊಂಡಂತೆ ಸೈಕಲ್ ಸವಾರಿ ನಡೆಸಿ ಅವರ ಸಮಸ್ಯೆಗಳನ್ನು ಅರಿಯಲಾಯಿತು.

2. ಬೀದಿಗಳು ಮತ್ತು ನೆರೆಹೊರೆಯನ್ನು ಸೈಕ್ಲಿಂಗ್ ಗೆ ಸುರಕ್ಷಿತ ಮತ್ತು ವಿನೋದಮಯಗೊಳಿಸುವುದು   

  • ಸೈಕಲ್ ಸವಾರರು ಸುರಕ್ಷಿತವಾಗಿ ಸೈಕಲ್ ನಡೆಸಲು ಸಹಾಯಕವಾಗುವಂತೆ ನಿರ್ದಿಷ್ಟ ಸೈಕಲ್ ಪಥಗಳನ್ನು ನಗರಗಳಲ್ಲಿ ಸೃಷ್ಟಿಸಲಾಯಿತು.
  • ಭುವನೇಶ್ವರ, ಸೂರತ್, ಕೊಚ್ಚಿ, ಗ್ರೇಟರ್ ವಾರಂಗಲ್ ನಂತಹ ನಗರಗಳಲ್ಲಿ ಮಧ್ಯಸ್ಥಿಕೆಗಳನ್ನು ಪರೀಕ್ಷಿಸಲು ಟ್ರಾಫಿಕ್ ಕೋನ್, ಬೊಲ್ಲಾರ್ಡ್ಸ್ ಮತ್ತು ಪೇಂಟ್ ಗಳನ್ನು ಬಳಸಿದವು. ಔರಂಗಾಬಾದ್ ನಲ್ಲಿ ಮರುಬಳಕೆ ಮಾಡಲಾದ ಟೈರ್ ಗಳನ್ನು ಬಳಸಿ ಸೈಕಲ್ ಪಥಗಳು ಮತ್ತು ಮೋಟಾರು ವಾಹನ ಸಂಚಾರವನ್ನು ಪ್ರತ್ಯೇಕಗೊಳಿಸಲಾಯಿತು.
  • ವಡೋದರಾ ಮತ್ತು ಗುರುಗ್ರಾಮದಂತಹ ಹಲವು ನಗರಗಳಲ್ಲಿ ಸೈಕಲ್ ಸವಾರರಿಗೆ ಮತ್ತು ಪಾದಚಾರಿಗಳಿಗೆ ಪ್ರತ್ಯೇಕ ಪಥ ನಿರ್ಮಿಸಿ, ಬಣ್ಣದ ಕ್ರಾಸ್ ವಾಕ್ ಗಳನ್ನು ರಚಿಸಲಾಯಿತು. ಚಂಡಿಗಢದಲ್ಲಿ ಜಂಕ್ಷನ್ ಗಳಲ್ಲಿ ಸೈಕಲ್ ಸವಾರರಿಗೆ ಆದ್ಯತೆ ನೀಡಲು ಸೈಕಲ್ ಸಿಗ್ನಲ್ ಗಳನ್ನು ಅಳವಡಿಸಲಾಯಿತು.
  • ನೆರೆಹೊರೆಯ ಬೀದಿಗಳನ್ನು ಪ್ರತಿಯೊಬ್ಬರಿಗೂ ಸುರಕ್ಷಿತವಾಗಿಸಲು ಬೆಂಗಳೂರು ಮತ್ತು ಜಬಲ್ಪುರದಂತಹ ನಗರಗಳಲ್ಲಿ ನಿಯೋಜಿತ ಸ್ಲೋ ಜೋನ್ಗಳನ್ನು ಸೃಷ್ಟಿಸಲಾಯಿತು. ಮೂಲಕ ಮೋಟಾರು ವಾಹನಗಳ ವೇಗ ತಡೆಗೆ ಸ್ಪೀಡ್ ಬ್ರೇಕರ್, ಚಿಕೇನ್ ಗಳು ಮತ್ತು ರಸ್ತೆ ಸಂಕೇತಗಳನ್ನು ಬಳಸಲಾಯಿತು.
  • ನವದೆಹಲಿಯಲ್ಲಿ ವಾಹನ ದಟ್ಟಣೆ ಮರು ಹೊಂದಿಸುವ ಮೂಲಕ ಲೋಧಿ ಗಾರ್ಡನ್ ಕಾಲೋನಿಯಲ್ಲಿ ಮಕ್ಕಳಿಗೆ ಸೈಕಲ್ ಪ್ಲಾಜಾ ನಿರ್ಮಿಸಲಾಯಿತು.

3.ಸೈಕ್ಲಿಂಗ್ ಸಮುದಾಯವನ್ನು ಸೃಷ್ಟಿಸುವುದು

  • ದೊಡ್ಡ ಪ್ರಮಾಣದಲ್ಲಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸಲು ಸ್ಥಳೀಯ ನಾಗರಿಕ ಸೇವಾ ಸಂಘಟನೆಗಳನ್ನು ತೊಡಗಿಸಿಕೊಳ್ಳಲಾಯಿತು ಮತ್ತು ನೆರೆಹೊರೆ ಮಟ್ಟದಲ್ಲಿ ಸೈಕ್ಲಿಂಗ್ ಸಮುದಾಯಗಳನ್ನು ಒಗ್ಗೂಡಿಸಲಾಯಿತು.
  • ಪಿಪಂರಿ ಚಿಂಚ್ವಾಡ್, ಕೊಹಿಮಾ, ಗ್ರೇಟ್ ವಾರಂಗಲ್, ನಾಗ್ಪುರ, ಪಣಜಿ ಮತ್ತು ಹಲವು ಇತರ ನಗರಗಳಲ್ಲಿ ಸೈಕಲ್ ಜಾಥಾಗಳು ಮತ್ತು ಸೈಕ್ಲಥಾನ್ ಗಳ ಮೂಲಕ ಸಾವಿರಾರು ಸೈಕಲ್ ಸವಾರರನ್ನು ಬೀದಿಗೆ ಇಳಿಸಲಾಯಿತು
  • ನೆರೆಹೊರೆಗಳಲ್ಲಿ ಮುಕ್ತ ಬೀದಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಅಲ್ಲಿ ಬೀದಿಗಳಲ್ಲಿ ಕಾರು ಮತ್ತು ಮೋಟಾರು ವಾಹನಗಳ ಸಂಚಾರವನ್ನು ನಿಷೇಧಿಸಿ ಜನರಿಗೆ ವಾಯು ವಿಹಾರ, ಆಟ ಮತ್ತು ಸೈಕಲ್ ಸವಾರಿ ಮಾಡಲು ಅನುವು ಮಾಡಿಕೊಟ್ಟು, ಮೂಲಕ ಮಹಿಳೆಯರು, ಮಕ್ಕಳು ಮತ್ತು ಹೊಸ ಸೈಕಲ್ ಸವಾರರಲ್ಲಿ ವಿಶ್ವಾಸ ತುಂಬಲಾಯಿತು.
  • ಜಬಲ್ಪುರ, ನ್ಯೂಟೌನ್ ಕೋಲ್ಕತ್ತಾದಂತಹ ನಗರಗಳಲ್ಲಿ ಸೈಕಲ್ ದುರಸ್ಥಿ ಕ್ಲಿನಿಕ್ ಗಳನ್ನು ಆರಂಭಿಸಲಾಯಿತು ಮತ್ತು ಸೈಕಲ್ ಸೇವೆಗಳು ಲಭ್ಯವಾಗುವಂತೆ ಮತ್ತು ಕೈಗೆಟಕುವಂತೆ ಮಾಡಲಾಯಿತು. ಹೆಚ್ಚು ಹೆಚ್ಚು ಜನರು ಬೀದಿಗಳಿಗೆ ಬರುವುದನ್ನು ಉತ್ತೇಜಿಸಲಾಯಿತು.
  • ಎಲ್ಲಾ ಪ್ರಾಯೋಗಿಕ ಕ್ರಮಗಳ ನೇರ ಪರಿಣಾಮ ಹಲವು ನಾಗರಿಕ ಕಲ್ಯಾಣ ಸಂಘಗಳು ತಮ್ಮ ನಗರಗಳ ಪ್ರಾಧಿಕಾರಗಳಲ್ಲಿ ಸೈಕಲ್ ಸ್ನೇಹಿ ನೆರೆಹೊರೆಗಳನ್ನು ಸೃಷ್ಟಿಸುವಂತೆ ಬೇಡಿಕೆ ಒಡ್ಡಿದವು.

4.  ಸೈಕಲ್ ಸವಾರಿಗೆ ಮಹಿಳೆಯರನ್ನು ಸಶಕ್ತಿಗೊಳಿಸುವುದು

  • ನಾಸಿಕ್, ನ್ಯೂಟೌನ್ ಕೋಲ್ಕತ್ತಾ ಮತ್ತು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಹಿರಿಯ ಮಹಿಳೆಯರಿಗೆ ಸೈಕಲ್ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಅವರಲ್ಲಿ ಸೈಕಲ್ ಸವಾರಿಗೆ ವಿಶ್ವಾಸವನ್ನು ವೃದ್ಧಿಸಲಾಯಿತು.
  • ಸೈಕಲ್ ಲಭ್ಯತೆಯನ್ನು ಹೆಚ್ಚಿಸಲು ಕೊಹಿಮಾ, ರಾಜ್ ಕೋಟ್ ಮತ್ತು ಚಂಡಿಗಢದಲ್ಲಿ ಸಹಕಾರಿ ತತ್ವದಡಿ ಬಾಡಿಗೆ ಸೈಕಲ್ ಯೋಜನೆಗಳನ್ನು ಆರಂಭಿಸಲಾಯಿತು ಮತ್ತು ನೆರೆಹೊರೆಗಳಲ್ಲಿ ಸಾರ್ವಜನಿಕ ಬೈಸಿಕಲ್ ಹಂಚಿಕೆ ವ್ಯವಸ್ಥೆಗಳು ಆರಂಭವಾದವು.
  • ಎಲ್ಲ ಉಪಕ್ರಮಗಳು ವಿಶೇಷವಾಗಿ ಮಹಿಳೆಯರ ಸಬಲೀಕರಣಗೊಳಿಸುವುದಕ್ಕಾಗಿ ಜಾರಿಗೊಳಿಸಲಾಗಿದ್ದು, ಅವರು ನಗರಗಳಲ್ಲಿ ಮುಕ್ತವಾಗಿ ಸಂಚರಿಸಲು ಕೈಗೆಟಕಬಹುದಾದ ಸಾರಿಗೆ ವಿಧಾನವಾಗಿದೆ.

5. ಅಭಿಯಾನಗಳ ಮೂಲಕ ಪ್ರತಿ ದಿನದ ನಡವಳಿಕೆ ಬದಲಾವಣೆ

  • ರಾಜ್ ಕೋಟ್ ಮತ್ತು ಜಬಲ್ಪುರದಂತಹ ನಗರಗಳಲ್ಲಿ ಸೈಕಲ್2 ವರ್ಕ್ ಅಭಿಯಾನಗಳನ್ನು ಆರಂಭಿಸಲಾಯಿತು. ಅಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು, ಪ್ರಜೆಗಳು ಸೈಕಲ್ ಬಳಕೆ ಮಾಡುವುದನ್ನು ಉತ್ತೇಜಿಸಲು ತಾವೇ ಸೈಕಲ್ ಸವಾರಿ ಮೂಲಕ ಕಚೇರಿಗಳಿಗೆ ಹೋದರು.
  • ರಾಜ್ ಕೋಟ್ ನಲ್ಲಿ ಸಿಬ್ಬಂದಿಗೆ ಸೈಕಲ್ ಗಳನ್ನು ವಿತರಿಸಲಾಯಿತು ಮತ್ತು ಅವರ ಪ್ರಯತ್ನಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು ಮತ್ತು ಸೈಕ್ಲಿಂಗ್ ಮೂಲಕ ಅವರು ಸಾಧಿಸಿದ ಕಡಿಮೆ ಇಂಗಾಲವನ್ನು ನಿರಂತರವಾಗಿ ಪ್ರದರ್ಶಿಸಲಾಯಿತು. ಇತರೆ ವಾಣಿಜ್ಯ ಸಂಸ್ಥೆಗಳೂ ಸಹ ಸೈಕಲ್2 ವರ್ಕ್ ಅಭಿಯಾನವನ್ನು ಪೋಷಿಸಲು ಮುಂದಾದವು. ಅವು ಸಿಬ್ಬಂದಿಗಳು ಸೈಕಲ್ ಸವಾರಿಗೆ ಪರಿವರ್ತನೆಯಾದರೆ ಪ್ರೋತ್ಸಾಹಕ ಕ್ರಮಗಳ ಕೊಡುಗೆಯನ್ನು ಪ್ರಕಟಿಸಿದವು.

ನಿಟ್ಟಿನಲ್ಲಿ ಸುಸ್ಥಿರ ಪ್ರಯತ್ನಗಳನ್ನು ಖಾತ್ರಿಪಡಿಸಲು ನಗರಗಳಲ್ಲಿ ಸಾರಿಗೆ ತಜ್ಞರು ಮತ್ತು ಸರ್ಕಾರಿ ಪಾಲುದಾರರಿಗೆ ನೆರವಾಗಲು ಸೈಕ್ಲಿಂಗ್ ಗೆ ಆದ್ಯತೆ ನೀಡುವ ಇಲಾಖೆಗಳನ್ನು ರಚಿಸಲಾಯಿತು. ಸುಮಾರು 30 ನಗರಗಳಲ್ಲಿ ಹೆಲ್ತಿ ಸ್ಟ್ರೀಟ್ಸ್ ನೀತಿಯನ್ನು ಅಳವಡಿಸಿಕೊಳ್ಳಲು ಕಾರ್ಯ ಆರಂಭಿಸಿದವು. ಅದರಲ್ಲಿ ನಗರಗಳನ್ನು ನಡೆದಾಡಲು ಮತ್ತು ಸೈಕ್ಲಿಂಗ್ ಗೆ ಸುರಕ್ಷಿತ, ಆಕರ್ಷಕ ಮತ್ತು ಆರಾಮದಾಯಕ ಬೀದಿಗಳನ್ನಾಗಿ ಮಾಡಲು ಕ್ರಮಗಳನ್ನು ಕೈಗೊಳ್ಳುವ ಗುರಿಗಳನ್ನು ಹೊಂದಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳಿಂದ ಅನುಭವ ಪಡೆದ ನಂತರ ನಗರಗಳಲ್ಲಿ ಇದೀಗ ಸೈಕ್ಲಿಂಗ್ ಯೋಜನೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಮತ್ತು ನೀತಿಯಲ್ಲಿ ನಿಗದಿಪಡಿಸಲಾಗಿರುವ ಗುರಿಗಳ ಸಾಧನೆಗೆ ನಗರಗಳಲ್ಲಿ ಉಪಕ್ರಮಗಳ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಹಲವು ಸರ್ಕಾರಿ ಇಲಾಖೆಗಳು ಮತ್ತು ನಾಗರಿಕರು ಒಟ್ಟಾಗಿ ಕೈಜೋಡಿಸಿ ನಡೆದಾಡುವ ಮತ್ತು ಸೈಕ್ಲಿಂಗ್ ಸ್ನೇಹಿ ರಾಷ್ಟ್ರ ನಿರ್ಮಾಣ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಮುಂದಿನ ದಾರಿ

ಕೋವಿಡ್ ನಂತರದ ಚೇತರಿಕೆ ಯೋಜನೆಗಳ ಭಾಗವಾಗಿ ಜಗತ್ತಿನಾದ್ಯಂತ ನಗರಗಳಲ್ಲಿ ಸೈಕ್ಲಿಂಗ್ ಮೂಲಸೌಕರ್ಯದ ತ್ವರಿತ ಪರೀಕ್ಷೆ ನಡೆಸಲಾಗುತ್ತಿದೆ ಮತ್ತು ಅವುಗಳನ್ನು ಮರು ನಿರ್ಮಾಣಗೊಳಿಸಿ ಕಾಯಂ ಮಾಡಲಾಗುತ್ತಿದೆ. ಕೋವಿಡ್-19 ನಂತರದ ಆರ್ಥಿಕತೆಯಲ್ಲಿ ಸ್ಪರ್ಧಿಸಲು ಮಹಿಳೆಯರ ಸಂಚಾರಕ್ಕೆ ಸುಸ್ಥಿರ ಮತ್ತು ಕೈಗೆಟಕಬಹುದಾದ ಅಗತ್ಯತೆಗಳನ್ನು ಸಾಂಕ್ರಾಮಿಕವು ಎತ್ತಿ ತೋರಿಸಿದೆ. ಇದನ್ನು ಸುಸ್ಥಿರ ಮತ್ತು ಸಮಾನ ತೆರಿಗೆ ವಿಧಾನವಾಗಿ ಪರಿಹರಿಸಲು ಸೈಕ್ಲಿಂಗ್ ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದೆ. ಅಲ್ಲದೆ ಭವಿಷ್ಯದಲ್ಲಿ ನಗರಗಳು ಇನ್ನೂ ಹೆಚ್ಚು ಸಂಕೀರ್ಣವಾಗುವುದಲ್ಲದೆ, ಎಲ್ಲ ನಿವಾಸಿಗಳ ಅಗತ್ಯಗಳು 15 ನಿಮಿಷಗಳಲ್ಲಿ  ನಡಿಗೆ, ಸೈಕಲ್ ಮತ್ತು ಸಾರ್ವಜನಿಕ ಸಾರಿಗೆ ಮೂಲಕ ಪೂರೈಸಬೇಕುಇದರಿಂದ ಇಂಗಾಲ ಹೊರ ಉಗುಳುವ ಪ್ರಮಾಣ ತಗ್ಗುವುದಲ್ಲದೆ, ಸುರಕ್ಷತೆ ಹೆಚ್ಚಾಗಲಿದೆ ಹಾಗೂ ಜೀವನದ ಮಟ್ಟ ವೃದ್ಧಿಯಾಗಲಿದೆ.

ಸಾಂಕ್ರಾಮಿಕ ನಗರಗಳಿಗೆ ತಮ್ಮನ್ನು ತಾವು ಮರು ಸಂಶೋಧಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ. ತ್ವರಿತ ಮತ್ತು ಸುಲಭ ಮಧ್ಯ ಪ್ರವೇಶಗಳ ಮೂಲಕ ಹೆಚ್ಚಿನ ಭಾರತದ ನಗರಗಳು ಬಿಕ್ಕಟ್ಟಿನ ಸಂದರ್ಭದಲ್ಲಿ ಸೂಕ್ಷ್ಮ ಜನಸಂಖ್ಯೆಗೆ ಬೆಂಬಲ ನೀಡಬಹುದು. ಜೊತೆಗೆ ಸಾಮಾಜಿಕ, ಆರ್ಥಿಕ ಮತ್ತು ಪರಿಸರಾತ್ಮಕ ಅಭಿವೃದ್ಧಿಗಳನ್ನು ಬಲವರ್ಧನೆಗೊಳಿಸಬಹುದು. ಐಟಿಡಿಪಿ ವರದಿಗಳ ಪ್ರಕಾರ ಸೈಕ್ಲಿಂಗ್ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವುದು, ಆರಂಭದಲ್ಲಿ ಹೂಡಿಕೆ ಮಾಡುವ ಹಣಕ್ಕಿಂತ 5.5 ಪಟ್ಟು ಹೆಚ್ಚು ಆರ್ಥಿಕವಾಗಿ ಲಾಭವಾಗಲಿದೆ. ಅತ್ಯಲ್ಪ ದೂರಕ್ಕೆ ಸೈಕ್ಲಿಂಗ್ ಮಾಡುವುದರಿಂದ ಭಾರತೀಯ ಆರ್ಥಿಕತೆಗೆ ವಾರ್ಷಿಕ 1.8 ಟ್ರಿಲಿಯನ್ ಅನುಕೂಲವಾಗಲಿದೆ. ಭಾರತೀಯ ನಗರಗಳು ಸೈಕ್ಲಿಂಗ್ ಮತ್ತು ನಡಿಗೆಗೆ ಆದ್ಯತೆ ನೀಡಬೇಕು ಮತ್ತು ಭವಿಷ್ಯದ ಸಾಂಕ್ರಾಮಿಕಗಳನ್ನು ಎದುರಿಸಲು ಸಾರ್ವಜನಿಕ ಸಾರಿಗೆ ಮರುಸ್ಥಿತಿ ಸ್ಥಾಪಕತ್ವ ಅಭಿವೃದ್ಧಿಪಡಿಸಬೇಕು ಹಾಗೂ ಹವಾಮಾನ ವೈಪರೀತ್ಯವನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಬಹುದಾಗಿದೆ.

2020 ಭಾರತದಲ್ಲಿ ಸೈಕ್ಲಿಂಗ್ ಕ್ರಾಂತಿಯ ಕಿಡಿ ಹೊತ್ತಿದೆ. ಇದೇ ಮೊದಲ ಬಾರಿಗೆ ನಗರಗಳು ಮತ್ತು ಪ್ರಜೆಗಳು ಜಂಟಿಯಾಗಿ  ಕೈಜೋಡಿಸಿ, ನಗರಗಳನ್ನು ಸೈಕ್ಲಿಂಗ್ ಸ್ವರ್ಗಗಳನ್ನಾಗಿ ರೂಪಿಸಲು ಪರೀಕ್ಷೆಗಳನ್ನು ನಡೆಸಿ, ಕಲಿತು ತಮ್ಮ ಚಿಂತನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಅದರ ಫಲಿತಾಂಶಗಳು ಸಾಕಷ್ಟು ಕಂಡುಬರುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚಿನ ಜನ ಸೈಕ್ಲಿಂಗ್ ನತ್ತ ಸಾಗುತ್ತಿದ್ದಾರೆ. ನಗರಗಳ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಮಾದರಿಯಾಗಿ ಮುನ್ನಡೆಯುತ್ತಿದ್ದಾರೆ- ಸೈಕ್ಲಿಂಗ್ ನಿಂದ ಕೆಲಸಕ್ಕೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯಗಳೂ ಸಹ ಇದಕ್ಕೆ ಹೆಚ್ಚಿನ ಹಣ ಹೂಡಿಕೆಯೊಂದಿಗೆ ಬೆಂಬಲ ನೀಡುತ್ತಿವೆ. ನಗರಗಳು ಮತ್ತು ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿ, ಅಭಿಯಾನಕ್ಕೆ ಸೇರ್ಪಡೆಯಾಗಲು ಇನ್ನಷ್ಟು ಜನರಿಗೆ ಸ್ಪೂರ್ತಿ ನೀಡುವುದನ್ನು ನಾನು ಉತ್ತೇಜಿಸುತ್ತೇನೆ’’

- ದುರ್ಗಾ ಶಂಕರ್ ಮಿಶ್ರಾ, ಕಾರ್ಯದರ್ಶಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ

41 ನಗರಗಳು ಮತ್ತು ಫೋಟೋಗಳ ಪಟ್ಟಿಗಾಗಿ, ಇಲ್ಲಿ ಕ್ಲಿಕ್ ಮಾಡಿ

***


(Release ID: 1723976) Visitor Counter : 292