ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕಾಗದ ಮೂಲದಿಂದ ಕಾಗದ ರಹಿತದವರೆಗೆ - ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌.ಎಚ್‌.ಎ) ಐಟಿ ವೇದಿಕೆಯ ಪ್ರಮುಖ ಆರೋಗ್ಯ ಯೋಜನೆಗಳ ಡಿಜಿಟಲೀಕೃತ ಆವೃತ್ತಿಗಳಿಗೆ ಚಾಲನೆ ನೀಡಿದ ಡಾ. ಹರ್ಷವರ್ಧನ್


ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್ಎಸ್), ರಾಷ್ಟ್ರೀಯ ಆರೋಗ್ಯ ನಿಧಿ (ಆರ್.ಎ.ಎನ್.)ಯ ಅಂಬ್ರೆಲಾ ಯೋಜನೆಗಳು ಮತ್ತು ಆರೋಗ್ಯ ಸಚಿವರ ವಿವೇಚನೆಯ ಧನ ಸಹಾಯ (ಎಚ್.ಎಂ.ಡಿ.ಜಿ.) ಈಗ ನಗದು ರಹಿತ, ಕಾಗದ ರಹಿತ ಮತ್ತು ನಾಗರಿಕ ಕೇಂದ್ರಿತವಾಗಿದೆ

“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಾದ್ಯಂತ ಆಕಾಂಕ್ಷೆಯ ಡಿಜಿಟಲ್ ಇಂಡಿಯಾ ಆಂದೋಲನ”: ಡಾ. ಹರ್ಷವರ್ಧನ್

Posted On: 01 JUN 2021 8:04PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರಿಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರ ಸಮ್ಮುಖದಲ್ಲಿ ಪುನರ್ ನವೀಕೃತ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿ.ಜಿ.ಎಚ್‌.ಎಸ್.) ಮತ್ತು ಅಂಬ್ರೆಲಾ ಯೋಜನೆ ರಾಷ್ಟ್ರೀಯ ಆರೋಗ್ಯ ನಿಧಿ (ಆರ್..ಎನ್) ಹಾಗೂ ಆರೋಗ್ಯ ಸಚಿವರ ವಿವೇಚನಾ ಧನ ಸಹಾಯ (ಎಚ್‌.ಎಂ.ಡಿ.ಜಿಕುರಿತ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌.ಎಚ್‌..) .ಟಿ. ವೇದಿಕೆಗೆ ಚಾಲನೆ ನೀಡಿದರು.

ಆರೋಗ್ಯ ಸೇವೆಗಳ ಡಿಜಿಟಲೀಕರಣದತ್ತ ಇದು ಒಂದು ದಿಟ್ಟ ಹೆಜ್ಜೆಯಾಗಿದೆ ಎಂದು ಹಾಜರಿದ್ದ ಎಲ್ಲರಿಗೂ ತಿಳಿಸಲು ಕೇಂದ್ರ ಆರೋಗ್ಯ ಸಚಿವರು ಹರ್ಷಿಸಿದರು: ಇದು ನನ್ನ ಕನಸಿನ ಉಪಕ್ರಮಗಳಲ್ಲಿ ಒಂದಾಗಿದೆ ಮತ್ತು ಯೋಜನೆಗಳನ್ನು ಎನ್.ಎಚ್.. ಐಟಿ ವೇದಿಕೆಯಲ್ಲಿ ಪ್ರಾರಂಭಿಸಲು ನಾನು ಕಾಯುತ್ತಿದ್ದೇನೆ. ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಆರೋಗ್ಯ ಸೇವೆಗಳನ್ನು ತಡೆರಹಿತವಾಗಿ ತಲುಪಿಸಲು ಇದು ಸಂಪೂರ್ಣ ಪ್ರಕ್ರಿಯೆಯನ್ನು ಕಾಗದರಹಿತವಾಗಿ ಮಾಡುತ್ತದೆ.ಎಂದರು.

ತಮ್ಮ 28 ವರ್ಷಗಳ ಸಾರ್ವಜನಿಕ ಸೇವೆಯಲ್ಲಿ, ತಾವು ಸದಾ ಚಿಕಿತ್ಸೆಯ ಅಗತ್ಯ ಇರುವ ದುರ್ಬಲರನ್ನು ನೋಡಿರುವುದಾಗಿ ಹೇಳಿದರು. ಜೇಬಿಗೆ ಬೀಳುತ್ತಿದ್ದ ಹೆಚ್ಚಿನ ಹೊರೆಯ ಕಾರಣದಿಂದಾಗಿ ಹಣದ ಕೊರತೆ ಚಿಕಿತ್ಸೆಯನ್ನು ಮುಂದೂಡುವಂತೆ ಮಾಡುತ್ತಿತ್ತು, ಇದು ಕ್ಯಾನ್ಸರ್ ನಂತಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ನಿರ್ಣಾಯಕ ಘಟ್ಟಗಳಲ್ಲಿ ಮಾರಕವಾಗಿ ಸಾಬೀತಾಗಿತ್ತು.

ಉತ್ತಮ ಉದ್ದೇಶಿತ ಸರ್ಕಾರಿ ಯೋಜನೆಗಳು ಇದ್ದರೂ ಅರ್ಹ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗದ ಅನೇಕ ಜನರನ್ನು ತಾವು ವೈಯಕ್ತಿಕವಾಗಿ ನೋಡಿರುವುದಾಗಿ ಡಾ. ಹರ್ಷವರ್ಧನ್ ತಿಳಿಸಿದರು. ಇಂತಹ ಪ್ರಕರಣಗಳಲ್ಲಿನ ಯೋಜನೆಗಳ ಮೂಲಕ ಸಮಯೋಚಿತ ಮಧ್ಯಪ್ರವೇಶದ ಕೊರತೆ, ವಿಳಂಬ ಸ್ಪಂದನೆ ಮತ್ತು ಅಡಚಣೆಯಿಂದಾಗಿ ಬಡ ಮತ್ತು ದುರ್ಬಲ ಜನರಿಗೆ ಆರೋಗ್ಯ ಯೋಜನೆಗಳ ಪ್ರಯೋಜನಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಶ್ರೀ ದೀನದಯಾಳ್ ಉಪಾಧ್ಯಾಯರು ಸಮರ್ಥಿಸಿದ ಅಂತ್ಯೋದಯದ ತತ್ವಗಳಿಗೆ ಅಧಿಕಾರಶಾಹಿ ಧೋರಣೆ ಅಡ್ಡಿಯಾಗಿ ನಿಂತಿವೆ ಎಂದು ಡಾ. ಹರ್ಷವರ್ಧನ್ ಉಲ್ಲೇಖಿಸಿದರು.

ಡಿಜಿಟಲ್ ಇಂಡಿಯಾ ಅಡಿಯಲ್ಲಿ ನಾಗರಿಕರಿಗೆ ಕಲ್ಪಿಸಲಾಗಿರುವ ಕಲ್ಯಾಣ ವಿತರಣೆಗೆ ತಂತ್ರಜ್ಞಾನವನ್ನು ಬಳಸುತ್ತಿರುವುದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದರ್ಶಿ ನಾಯಕತ್ವವನ್ನು ಅವರು ಶ್ಲಾಘಿಸಿದರು: ಬ್ಯಾಂಕ್ ಖಾತೆಗಳನ್ನು ತೆರೆಯುವಲ್ಲಿ ತಾಂತ್ರಿಕ ಮಧ್ಯಸ್ಥಿಕೆಗಳಂತೆಯೇ, ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿ.ಎಫ್‌.ಎಂ.ಎಸ್.), ನೇರ ಸವಲತ್ತು ವರ್ಗಾವಣೆ ಮೂಲಕ ಸಬ್ಸಿಡಿಗಳು (ಡಿಬಿಟಿ), ರೋಗಿಗಳ ಕಾಗದರಹಿತ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಯೋಜನೆ, ಸಿ.ಜಿ.ಎಚ್.ಎಸ್., ಆರ್..ಎನ್. ಮತ್ತು ಎಚ್‌.ಎಮ್‌.ಡಿ.ಜಿ.ಯನ್ನು ಎನ್‌.ಎಚ್‌.. ವೇದಿಕೆಯೊಂದಿಗೆ ಒಗ್ಗೂಡಿಸುವ ಇಂದಿನ ಉಪಕ್ರಮವು ಆರೋಗ್ಯ ಸೇವೆಗಳನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ಅಗತ್ಯವಿರುವ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ.ಎನ್.ಎಚ್.. ಮಾಜಿ ಸಿ... ಶ್ರೀ ಇಂದು ಭೂಷಣ್ ಅವರ ಕೊಡುಗೆಯನ್ನು ಅವರು ಶ್ಲಾಘಿಸಿ, ಅವರ ಕಾರ್ಯ ಮತ್ತು ಶಿಫಾರಸುಗಳು ಇಂದಿನ ಬೆಳವಣಿಗೆಗೆ ಬುನಾದಿ ಹಾಕಿದವು ಎಂದರು.

ಸೇವಾನಿರತ ನೌಕರರು, ಪಿಂಚಣಿದಾರರು, ಸಂಸದರು, ಮಾಜಿ ಸಂಸದರು ಮೊದಲಾದವರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಸಮಗ್ರ ಆರೋಗ್ಯ ಯೋಜನೆಯಾದ ಸಿ.ಜಿ.ಎಚ್.ಎಸ್. ಅನ್ನು ಕಳೆದ 7 ವರ್ಷಗಳಲ್ಲಿ 38 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಹೊಂದಿರುವ 72 ನಗರಗಳಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದರು. ಸಿ.ಜಿ.ಎಚ್.ಎಸ್. 1954ರಲ್ಲಿ ನವದೆಹಲಿಯಲ್ಲಿ ಪ್ರಾರಂಭವಾದರೂ, 2014ರವರೆಗೆ ಕೇವಲ 25 ನಗರಗಳನ್ನು ಮಾತ್ರ ತಲುಪಿತ್ತು. ಸಿ.ಜಿ.ಎಚ್.ಎಸ್. ನಿವೃತ್ತ ಪಿಂಚಣಿದಾರರಿಗೆ ಪಟ್ಟಿಯಾಗಿರುವ ಚಿಕಿತ್ಸಾ ಕೇಂದ್ರಗಳಲ್ಲಿ ನಗದುರಹಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ, ಇದನ್ನು ಈಗ ಹೊಸ ವೇದಿಕೆಯಲ್ಲಿ ತಡೆರಹಿತವಾಗಿ ಮಾಡಲಾಗುವುದು. ಪ್ರಸ್ತುತ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ, ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವೀಸಸ್ ಲಿಮಿಟೆಡ್ (ಯುಟಿಐ-ಐಟಿಎಸ್ಎಲ್) ಬಿಲ್ ಕ್ಲಿಯರಿಂಗ್ ವೇದಿಕೆ ಸಿ.ಜಿ.ಎಚ್.ಎಸ್. ಪಿಂಚಣಿದಾರ ಫಲಾನುಭವಿಗಳಿಗೆ ಯಾವುದೇ ಅನಾನುಕೂಲತೆಯನ್ನು ಎದುರಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು 10/11 ಜೂನ್ 2021 ಮಧ್ಯರಾತ್ರಿಯವರೆಗೆ ಏಕಕಾಲದಲ್ಲಿ ನಡೆಸಲಾಗುತ್ತದೆ.

ಎನ್..ಸಿ. ಅಭಿವೃದ್ಧಿಪಡಿಸಿರುವ -ರೆಫರಲ್ ವಿಧಾನ ಸಿ.ಜಿ.ಎಚ್.ಎಸ್. ಚಿಕಿತ್ಸಾಲಯಗಳನ್ನು ಮತ್ತು ಕ್ಷೇಮ ಕೇಂದ್ರಗಳಿಗೆ ಆನ್ ಲೈನ್ ಮೂಲಕ ಪಟ್ಟಿಯಲ್ಲಿರುವ ಆಸ್ಪತ್ರೆಗಳಿಗೆ ಶಿಫಾರಸು ಮಾಡಲು ಶಕ್ತಗೊಳಿಸುತ್ತದೆ ಎಂದು ಡಾ. ಹರ್ಷವರ್ಧನ್ ಉಲ್ಲೇಖಿಸಿದರು. ಆಸ್ಪತ್ರೆಯ ಅರ್ಜಿಯ ಪ್ರಕ್ರಿಯೆ, ಹಕ್ಕುಗಳ ಸಲ್ಲಿಕೆ, ಸಿ.ಜಿ.ಎಚ್.ಎಸ್. ತಂಡದ ಅನುಮೋದನೆ, ಪಾವತಿ ಬಿಡುಗಡೆ ಇನ್ನು ಮುಂದೆ ವೇದಿಕೆಯಲ್ಲಿ ಆನ್ಲೈನ್ನಲ್ಲಿ ಮಾಡಲಾಗುತ್ತದೆ. ಆರ್..ಎನ್. ಅಡಿಯಲ್ಲಿ, ಗಂಭೀರ ಸ್ವರೂಪದ ಜೀವ ಭೀತಿ ಒಡ್ಡುವ ಕಾಯಿಲೆಗಳು/ಕ್ಯಾನ್ಸರ್/ಅಪರೂಪದ ಕಾಯಿಲೆಗಳಿಗೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಬಡ ರೋಗಿಗಳಿಗೆ 15 ಲಕ್ಷ ರೂ.ವರೆಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ ಡಾ. ಹರ್ಷವರ್ಧನ್ ತಿಳಿಸಿದರು.

ಆರ್..ಎನ್. ಅಡಿಯಲ್ಲಿ ಸೇವೆಗಳನ್ನು ಪಡೆಯುವ ಅರ್ಹತಾ ಮಾನದಂಡಗಳು ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು- ಬಿಪಿಎಲ್ ಮಿತಿಯನ್ನು ಆಧರಿಸಿರುತ್ತದೆ. ಆದರೆ ಸಮರ್ಥ ಪ್ರಾಧಿಕಾರದಿಂದ ರಾಜ್ಯ ನಿರ್ದಿಷ್ಟ ಬಿಪಿಎಲ್ ಪ್ರಮಾಣಪತ್ರವನ್ನು ಪಡೆಯುವುದು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿ ಉಳಿದಿದೆ. ಅದೇ ರೀತಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಆಸ್ಪತ್ರೆಗೆ/ ಚಿಕಿತ್ಸೆಯ ವೆಚ್ಚದ ಒಂದು ಭಾಗವನ್ನು ತಪ್ಪಿಸಲು. ಎಚ್.ಎಂ.ಡಿ.ಜಿ. ಅಡಿಯಲ್ಲಿ ಗರಿಷ್ಠ 1,25,000/-ಗಳನ್ನು ಯಾರ ವಾರ್ಷಿಕ ಆದಾಯ 1,25,000/- ಮೀರಿಲ್ಲವೋ ಅಂತಹ ರೋಗಿಗಳಿಗೆ ಒದಗಿಸಲಾಗುವುದುಫಲಾನುಭವಿಗಳು ಎರಡೂ ಯೋಜನೆಗಳ ಅಡಿಯಲ್ಲಿ ಆರ್ಥಿಕ ನೆರವು ಪಡೆದುಕೊಳ್ಳಲು, ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಒದಗಿಸುವ ಮೂಲಕ ಮತ್ತು ಪಟ್ಟಿಯಲ್ಲಿರುವ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಫಲಾನುಭವಿ ಪರಿಶೀಲನೆ ಪ್ರಕ್ರಿಯೆಗೆ ಒಳಪಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅವರ ಅರ್ಜಿಗಳನ್ನು ಆಯಾ ಆಸ್ಪತ್ರೆಯೊಳಗೇ ಪ್ರಕ್ರಿಯೆಗೊಳಿಸಬಹುದು ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ಚಿಕಿತ್ಸೆಯ ವಿವರಗಳನ್ನು ಆಯಾ ಆಸ್ಪತ್ರೆಯಿಂದ ಸಲ್ಲಿಸಿದಾಗ, ಕ್ಲೇಮುಗಳ ಪ್ರಕ್ರಿಯೆನಡೆಸಲಾಗುತ್ತದೆ ಮತ್ತು ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರು ಮಹತ್ವಾಕಾಂಕ್ಷೆ ಯೋಜನೆಯ ಡಿಜಿಟಲೀಕೃತ ಆವೃತ್ತಿ ಪಥವನ್ನೇ ಬದಲಿಸುವಂತದ್ದು ಎಂದು ಹೇಳಿದರು, ಮತ್ತು "ಇಂದಿನಿಂದ ಆರ್..ಎನ್./ಎಚ್.ಎಂ.ಡಿ.ಜಿ. ಮತ್ತು ಸಿ.ಜಿ.ಎಚ್.ಎಸ್.ನಿಂದಾಗಿ ಹಾಲಿ ಫಲಾನುಭವಿಗಳು ಕಂಬ ಕಂಬಕ್ಕೆ ಅಲೆಯುವ ಅಗತ್ಯ ಇರುವುದಿಲ್ಲ ಎಂಬುದು ಮಹತ್ವವಾಗುತ್ತದೆ. ಕಳೆದ ಮೂರು ವರ್ಷಗಳಿಂದ, ನಾನು ಆರ್..ಎನ್. ಕಡತಗಳನ್ನು ನೋಡುವಾಗಲೆಲ್ಲಾ ನೋವು ಅನುಭವಿಸುತ್ತಿದ್ದೆ ಮತ್ತು ಅರ್ಹ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಸಹಾಯವನ್ನು ಒದಗಿಸಲಾಗುತ್ತಿರಲಿಲ್ಲ ಮತ್ತು ಇದು ಅಗತ್ಯವಿರುವ ಜನರಿಗೆ ಯೋಜನೆಯಡಿಯಲ್ಲಿ ಚಿಕಿತ್ಸೆಯ ವಿಳಂಬ/ನಿರಾಕರಣೆಗೆ ಕಾರಣವಾಗುತ್ತಿತ್ತು”. ಎಬಿ ಪಿಎಂ-ಜೆ..ವೈ. ಫಲಾನುಭವಿಗಳು ಯೋಜನೆಯ ವ್ಯಾಪ್ತಿಗೆ ಒಳಪಡದ ಐದು ಲಕ್ಷಗಳನ್ನು ಮೀರಿದ ಚಿಕಿತ್ಸೆಗಾಗಿ ಆರ್..ಎನ್. ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಮ್ಮ ಸಂತಸ ವ್ಯಕ್ತಪಡಿಸಿದರು. ಇದೇ ರೀತಿ, ಇತರ ಯೋಜನೆಗಳನ್ನು ಎನ್‌.ಎಚ್‌.. ಐಟಿ ವೇದಿಕೆಯಲ್ಲಿ ನಡೆಸಲು ಯೋಜಿಸಲಾಗುತ್ತಿದೆ ಮತ್ತು ಸಂಪನ್ಮೂಲಗಳ ಉತ್ತಮ ಬಳಕೆ, ಫಲಾನುಭವಿಗಳ ನಕಲು ತಪ್ಪಿಸಿ, ಪ್ರಮಾಣೀಕೃತ ಸೇವಾ ವಿತರಣೆಗೆ ಸಹಾಯ ಮಾಡುತ್ತದೆ ಮತ್ತು ಇದು ಆರ್ಥಿಕತೆಯ ಮಟ್ಟಕ್ಕೂ ಕಾರಣವಾಗುತ್ತದೆ ಎಂದು ಅವರು ಉಲ್ಲೇಖಿಸಿದರು.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿ... ಡಾ. ಆರ್.ಎಸ್. ಶರ್ಮಾ, ಫಲಾನುಭವಿಗಳ ಗುರುತು, ಪೂರ್ವ ಪ್ರಮಾಣೀಕರಣದ ಪರಿಶೀಲನೆ ಮತ್ತು ಅವರ ಕ್ಲೇಮ್ ಗಳ ಇತ್ಯರ್ಥವನ್ನು ನಮ್ಮ .ಟಿ. ವ್ಯವಸ್ಥೆಯಡಿ ಈಗ ಯಾವುದೇ ಭೌತಿಕ ಕಡತಗಳ ಓಡಾಟವಿಲ್ಲದೆ ನಡೆಸಲಾಗುವುದು ಎಂದರು

ಕೇಂದ್ರ ಆರೋಗ್ಯ ಕಾರ್ಯದರ್ಶಿ, ಶ್ರೀ ರಾಜೇಶ್ ಭೂಷಣ್ ಡಿಜಿಟಲ್ ಮೂಲಕವೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸೇವೆಗಳ ಡಿಜಿಟಲೀಕರಣದ ದಿಟ್ಟ ಹೆಜ್ಜೆಗಾಗಿ ಅವರು ಎನ್.ಎಚ್..ಯನ್ನು ಅಭಿನಂದಿಸಿದರು.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್.ಎಚ್..) ಸಿಇಓ, ಡಾ.ಆರ್.ಎಸ್. ಶರ್ಮಾ, ಹೆಚ್ಚುವರಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ (ಆರೋಗ್ಯ) ಡಾ. ಧರ್ಮೇಂದ್ರ ಸಿಂಗ್ ಗಂಗ್ವಾರ್, ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಶ್ರೀ ಅಲೋಕ್ ಸಕ್ಸೇನಾ, ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ಡಾ. ಸುನೀಲ್ ಕುಮಾರ್, ಎನ್.ಎಚ್.. ಉಪ ಸಿಇಓ ಡಾ. ವಿಫುಲ್ ಅಗರ್ವಾಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಖುದ್ದು ಭಾಗಿಯಾಗಿದ್ದರು.

***



(Release ID: 1723903) Visitor Counter : 265