ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 23 ಕೋಟಿಗೂ ಹೆಚ್ಚು ಲಸಿಕೆ ಡೋಸುಗಳನ್ನು ನೀಡಲಾಗಿದೆ


ಲಸಿಕೆ ನೀಡಲು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1.64 ಕೋಟಿಗಿಂತ ಹೆಚ್ಚಿನ ಡೋಸೇಜುಗಳು ಲಭ್ಯವಿವೆ

ಪ್ರಕಟಣಾ ದಿನಾಂಕ: 02 JUN 2021 12:41PM by PIB Bengaluru

ರಾಷ್ಟ್ರವ್ಯಾಪಿ  ಲಸಿಕಾ ಅಭಿಯಾನದ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡುವ ಮೂಲಕ ಬೆಂಬಲಿಸುತ್ತಿದೆಇದರ ಜೊತೆಗೆ, ಸರ್ಕಾರ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಲಸಿಕೆಗಳನ್ನು ನೇರವಾಗಿ ಖರೀದಿಸಲು ಸಹಕರಿಸುತ್ತಿದೆ. ಲಸಿಕೆ ಹಾಕುವುದು ಸಾಂಕ್ರಾಮಿಕ ರೋಗದ ನಿಯಂತ್ರಣ ಮತ್ತು ನಿರ್ವಹಣೆಗಾಗಿ, ಜೊತೆಗೆ ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಕೋವಿಡ್ ಸೂಕ್ತ ವರ್ತನೆಯು ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದ ಅವಿಭಾಜ್ಯ ಭಾಗವಾಗಿದೆ.

ಕೋವಿಡ್ -19  ಲಸಿಕೆ ನೀಡಿಕೆಯ ಉದಾರೀಕೃತ ಮತ್ತು ವೇಗವರ್ಧಿತ ಹಂತ -3 ಲಸಿಕಾ ಕಾರ್ಯತಂತ್ರ ಮೇ 1, 2021 ರಿಂದ ಪ್ರಾರಂಭಿಸಲಾಗಿದೆ,

ಕಾರ್ಯತಂತ್ರದಲ್ಲಿ, ಪ್ರತಿ ತಿಂಗಳು ಒಟ್ಟು  ಕೇಂದ್ರೀಯ ಔಷಧ ಪ್ರಯೋಗಾಲಯ (ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ -ಸಿಡಿಎಲ್) ಅನುಮತಿಸಿದ ಯಾವುದೇ ಉತ್ಪಾದಕರ ಲಸಿಕೆ ಡೋಸುಗಳನ್ನು ಭಾರತ ಸರ್ಕಾರದ ವತಿಯಿಂದ ಸಂಗ್ರಹಿಸಲಾಗುತ್ತದೆ. ಡೋಸುಗಳನ್ನು ಹಿಂದೆ ಮಾಡಿದಂತೆ ರಾಜ್ಯ ಸರ್ಕಾರಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಭಾರತ ಸರ್ಕಾರವು ಇಲ್ಲಿಯವರೆಗೆ ಉಚಿತ ವಿಭಾಗದ ಮೂಲಕ ಮತ್ತು ನೇರ ರಾಜ್ಯ ಖರೀದಿ ವಿಭಾಗದ ಮೂಲಕ ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ 23 ಕೋಟಿಗೂ ಹೆಚ್ಚು ಲಸಿಕೆ ಪ್ರಮಾಣವನ್ನು (23,35,86,960) ಒದಗಿಸಿದೆ.

ಇದರಲ್ಲಿ, ವ್ಯರ್ಥವಾದವುಗಳು ಸೇರಿದಂತೆ ಒಟ್ಟು ಬಳಕೆಯು 21,71,44,022  ಡೋಸುಗಳು (ಪ್ರಮಾಣಗಳುಆಗಿವೆ (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ).

ನೀಡಲು ಇನ್ನೂ 1.64 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸುಗಳು (1,64,42,938) ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿವೆ.

***


(ಪ್ರಕಟಣೆ ಐ.ಡಿ.: 1723674) ವಿಸಿಟರ್ ಕೌಂಟರ್ : 237
ಪ್ರಕಟಣೆಯನ್ನು ಇದರಲ್ಲಿ ಓದಿ: Tamil , English , Urdu , Marathi , हिन्दी , Bengali , Punjabi , Gujarati , Odia , Telugu , Malayalam