ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಲಸಿಕೆ ಕುರಿತ ಸುಳ್ಳುಗಳ ಬಯಲು


ಆತ್ಮನಿರ್ಭರ ಭಾರತ 3.0 ಕೋವಿಡ್ ಸುರಕ್ಷಾ ಅಭಿಯಾನದ ಅಡಿಯಲ್ಲಿ ಜುಲೈ/ಆಗಸ್ಟ್ ಹೊತ್ತಿಗೆ 6 ಕೋಟಿ ತಲುಪಲಿರುವ  ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆ

ಹೊಸದಾಗಿ ಉತ್ಪಾದನೆಯಾಗಲಿರುವ ಲಸಿಕೆಗಳ ಮೇಲೆ ಕಠಿಣ ಗುಣಮಟ್ಟದ ನಿಯಂತ್ರಣ, ಅವುಗಳ ತಕ್ಷಣದ ವಿತರಣೆಯ ನಿರ್ಬಂಧ

3.11 ಕೋಟಿ ಡೋಸ್ ಗೂ ಅಧಿಕ ಕೋವ್ಯಾಕ್ಸಿನ್ ಪೂರೈಕೆ ಮತ್ತು ಸಾಗಣೆಯ ಪ್ರಕ್ರಿಯೆಯಲ್ಲಿ

ಜೂನ್ ತಿಂಗಳಿಗೆ ಬಹುತೇಕ 90 ಲಕ್ಷ ಕೋವ್ಯಾಕ್ಸಿನ್ ಡೋಸ್  ಬದ್ಧತೆ

Posted On: 28 MAY 2021 8:46PM by PIB Bengaluru

ವರ್ಷದ ಜನವರಿ 16ರಿಂದ ಸಂಪೂರ್ಣ ಸರ್ಕಾರವಿಧಾನದ ಅಡಿಯಲ್ಲಿ ಪರಿಣಾಮಕಾರಿ ಲಸಿಕೆ ಅಭಿಯಾನದ ಅನುಷ್ಠಾನಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಿಗೆ ಭಾರತ ಸರ್ಕಾರ ಬೆಂಬಲ ನೀಡುತ್ತಿದೆ. ಲಸಿಕೆ ಡೋಸ್ ಗಳ ಲಭ್ಯತೆಯನ್ನು ಸುವ್ಯವಸ್ಥಿತಗೊಳಿಸುವ ಸಲುವಾಗಿ, ಕೇಂದ್ರ ಸರ್ಕಾರವು ಲಸಿಕೆ ತಯಾರಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, 2021 ಮೇಯಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿಭಿನ್ನ ಖರೀದಿ ಆಯ್ಕೆಗಳನ್ನು ನೀಡಿದೆ.

ಭಾರತ್ ಬಯೋಟೆಕ್ ಲೆಕ್ಕವಿಲ್ಲದ ಲಸಿಕೆ ಡೋಸ್ ಗಳ ಕುರಿತಂತೆ ಕೆಲವು ಆಧಾರ ರಹಿತ ಮಾಧ್ಯಮ ವರದಿಗಳು ಬಂದಿವೆ. ವರದಿಗಳು ಸರಿಯಾದವುಗಳಲ್ಲ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇದನ್ನು ಬೆಂಬಲಿಸುವುದಿಲ್ಲ. ಭಾರತ್ ಬಯೋಟೆಕ್ 6 ಕೋಟಿ ಡೋಸ್ ಗಳನ್ನು ಹೊಂದಿದೆ ಎಂಬ ಹೇಳಿಕೆ ಕೆಲವು ವಲಯಗಳಲ್ಲಿ ವಿಷಯ ಕುರಿತಂತೆ ವರದಿ ಮಾಡುವಲ್ಲಿ ಗ್ರಹಿಕೆಯ ಲೋಪವಾಗಿದೆ.

ದೇಶೀಯವಾಗಿ ಉತ್ಪಾದಿಸಲಾಗುತ್ತಿರುವ ಕೋವ್ಯಾಕ್ಸಿನ್ ಪ್ರಸಕ್ತ ಉತ್ಪಾದನಾ ಸಾಮರ್ಥ್ಯ 2021 ಮೇ-ಜೂನ್ ಹೊತ್ತಿಗೆ ದುಪ್ಪಟ್ಟಾಗಲಿದೆ ಮತ್ತು ಜುಲೈ- ಆಗಸ್ಟ್ ಹೊತ್ತಿಗೆ 6-7 ಪಟ್ಟು ಹೆಚ್ಚಳವಾಗಲಿದೆ. ಅಂದರೆ 2021 ಏಪ್ರಿಲ್ನಲ್ಲಿದ್ದ ಮಾಸಿಕ 1 ಕೋಟಿ ಲಸಿಕೆ ಡೋಸ್ ನಿಂದ ಜುಲೈ - ಆಗಸ್ಟ್ನಲ್ಲಿ ಮಾಸಿಕ 6-7 ಕೋಟಿ ಲಸಿಕೆ ಡೋಸ್ ಉತ್ಪಾದನೆಗೆ ಹೆಚ್ಚಲಿದೆ.2021 ಸೆಪ್ಟೆಂಬರ್  ವೇಳೆಗೆ ಇದು ತಿಂಗಳಿಗೆ ಸುಮಾರು 10 ಕೋಟಿ ಡೋಸ್ ತಲುಪುವ ನಿರೀಕ್ಷೆಯಿದೆ.

ದೇಶೀಯ ಕೋವಿಡ್ ಲಸಿಕೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ತ್ವರಿತಗೊಳಿಸಲು, ಆತ್ಮನಿರ್ಭರ ಭಾರತ್ 3.0 ಕೋವಿಡ್ ಸುರಕ್ಷಾ ಅಭಿಯಾನ ಅಡಿಯಲ್ಲಿ ಕೈಗೊಂಡ ಕೋವಾಕ್ಸಿನ್ ಸಾಮರ್ಥ್ಯವರ್ಧನೆಯನ್ನು ಭಾರತ ಸರ್ಕಾರ ಘೋಷಿಸಿದ್ದು, ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಜಾರಿಗೆ ತರಲಾಗಿದೆ.

ಲಸಿಕೆ ವೈದ್ಯಕೀಯ ಮಹತ್ವದ ಜೈವಿಕ ಉತ್ಪನ್ನವಾಗಿದ್ದುಇದರ ಸಂಪೂರ್ಣ ಸಂಗ್ರಹಣೆ ಮತ್ತು ಗುಣಮಟ್ಟದ ಪರೀಕ್ಷೆಗೆ ಸಮಯ ತೆಗೆದುಕೊಳ್ಳುತ್ತದೆ. ಸುರಕ್ಷಿತ ಉತ್ಪನ್ನದ ಖಾತ್ರಿಯನ್ನು ದಿನಬೆಳಗಾಗುವುದರಲ್ಲಿ ಮಾಡಲಾಗುವುದಿಲ್ಲ. ಆದ್ದರಿಂದ ಉತ್ಪಾದನಾ ಸಾಮರ್ಥ್ಯದ ಹೆಚ್ಚಳಕ್ಕೆ ಮಾರ್ಗದರ್ಶಿ ಪ್ರಕ್ರಿಯೆಯ ಅಗತ್ಯವಿರುತ್ತದೆ ಮತ್ತು ಒಟ್ಟು ಉತ್ಪಾದನೆಯ ಹೆಚ್ಚಳವು ತಕ್ಷಣದ ಪೂರೈಕೆಯಾಗಿ ಪರಿವರ್ತಿಸಲಾಗುವುದಿಲ್ಲ.

2021 ಮೇ 28ರಂದು ಬೆಳಗ್ಗೆ ಕ್ರೋಡೀಕರಿಸಲಾದ ದತ್ತಾಂಶದ ರೀತ್ಯ, ಭಾರತ್ ಬಯೋಟೆಕ್ 2,76,66,860 ಲಸಿಕೆ ಡೋಸ್ ಗಳನ್ನು ಭಾರತ ಸರ್ಕಾರಕ್ಕೆ ಪೂರೈಕೆ ಮಾಡಿದೆ. ಪೈಕಿ ಲಸಿಕೆ ವ್ಯರ್ಥವಾಗಿರುವುದೂ ಒಳಗೊಂಡಂತೆ ಒಟ್ಟು 2,20,89,880 ಡೋಸ್ ಗಳನ್ನು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರಸಕ್ತ ನಡೆದಿರುವ ಕೋವಿಡ್ -19 ಲಸಿಕಾ ಅಭಿಯಾನದಲ್ಲಿ ಬಳಸಿಕೊಂಡಿವೆ. ಇದರೊಂದಿಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿರುವ ಉಳಿಕೆ ಲಸಿಕೆ 55,76,980 ಡೋಸ್ ಗಳಾಗಿವೆ. ಖಾಸಗಿ ಆಸ್ಪತ್ರೆಗಳು 13,65,760 ಡೋಸ್ ಕೋವ್ಯಾಕ್ಸಿನ್ ಅನ್ನು ಇದೇ ತಿಂಗಳಲ್ಲಿ ಪಡೆದುಕೊಂಡಿದ್ದು, ಇದು ಭಾರತ ಸರ್ಕಾರ ಮತ್ತು ರಾಜ್ಯಗಳಿಗೆ ಪೂರೈಕೆ ಮಾಡಲಾಗಿರುವ ಲಸಿಕೆಗಿಂತ  ಹೆಚ್ಚಾಗಿಯೇ ಇದೆ.

ಮೇ 2021 ಮಾಸದಲ್ಲಿ, ಹೆಚ್ಚುವರಿಯಾಗಿ 21,54,440 ಡೋಸ್ ಕೋವ್ಯಾಕ್ಸಿನ್ ಪೂರೈಸಬೇಕಾಗಿದೆ. ಇದು ಈವರೆಗೆ ಸರಬರಾಜು ಮಾಡಲಾದ ಮತ್ತು ರವಾನೆಯ ಪ್ರಕ್ರಿಯೆಯಲ್ಲಿರುವ ಒಟ್ಟು ಲಸಿಕೆ ಸಂಖ್ಯೆ 3,11,87,060 ಡೋಸ್ ಆಗುತ್ತದೆ. ಉತ್ಪಾದಕರು ಜೂನ್ ತಿಂಗಳಿಗೆ ಸುಮಾರು 90,00,000 ಡೋಸ್ ಪೂರೈಕೆಗೆ ಬದ್ಧವಾಗಿದ್ದಾರೆ.

***


(Release ID: 1722585) Visitor Counter : 253