ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್ ಸುರಕ್ಷಾ ಅಭಿಯಾನದ ಅಡಿಯಲ್ಲಿ ಕೋವಾಕ್ಸಿನ್‌ ಗೆ  ಔಷಧ ಪದಾರ್ಥಗಳ ಉತ್ಪಾದನೆ ಪ್ರಾರಂಭಿಸಲಿರುವ ಭಾರತೀಯ ರೋಗನಿರೋಧಕ  ನಿಯಮಿತ

Posted On: 28 MAY 2021 4:37PM by PIB Bengaluru

ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಸರ್ಕಾರ, ಕೋವಿಡ್ ಸುರಕ್ಷಾ ಅಭಿಯಾನದ ಅಡಿಯಲ್ಲಿ ಅನುದಾನ ನೀಡುವ ಮೂಲಕ ಕೆಲವು ಸಾರ್ವಜನಿಕ ವಲಯದ ಕಂಪನಿಗಳಿಗೆ ಬೆಂಬಲ ನೀಡಲು ನಿರ್ಧರಿಸಿದೆ. ಅಂತಹ ಒಂದು ಕಂಪನಿಗಳಲ್ಲಿ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ, ಪಿ.ಎಸ್.ಯು. ಅಡಿಯಲ್ಲಿನ ಸೌಲಭ್ಯವಾದ ಹೈದ್ರಾಬಾದ್ ಮೂಲದ ಭಾರತೀಯ ರೋಗನಿರೋಧಕ ನಿಯಮಿತ (ಐಐಎಲ್) ಸಹ ಒಂದಾಗಿದೆ.

ಐಐಎಲ್ ಮತ್ತು ಭಾರತ್ ಬಯೋಟೆಕ್ ನಡುವೆ ತಾಂತ್ರಿಕ ಸಹಯೋಗದ ಒಪ್ಪಂದ ಏರ್ಪಟ್ಟಿದ್ದುಭಾರತ್ ಬಯೋಟೆಕ್ಗೆ ಕೊವಾಕ್ಸಿನ್ ಲಸಿಕೆ ತಯಾರಿಸಲು ಅಗತ್ಯವಾದ ಔಷಧ ಪದಾರ್ಥವನ್ನು ಐಐಎಲ್ಪೂರೈಸಲಿದೆ. ಮುಂದಿನ ತಿಂಗಳು ಜೂನ್ 15ರಿಂದ ಕೋವಾಕ್ಸಿನ್ಗೆ ಔಷಧ ಪದಾರ್ಥಗಳ ಉತ್ಪಾದನೆಯನ್ನು ಪ್ರಾರಂಭಿಸಲು ಐಐಎಲ್ ಯೋಜಿಸುತ್ತಿದೆ ಮತ್ತು ಜುಲೈ ವೇಳೆಗೆ ಸೀಮಿತವಾದ ಮೊದಲ ಬ್ಯಾಚ್ ಅನ್ನು ಭಾರತ್ ಬಯೋಟೆಕ್ಗೆ ಕಳುಹಿಸಲು ಐಐಎಲ್ ಯೋಜಿಸುತ್ತಿದೆ ಎಂದು ಭಾರತೀಯ ರೋಗನಿರೋಧಕ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಆನಂದ್ ಕುಮಾರ್ ತಿಳಿಸಿದ್ದಾರೆ.

ಭಾರತೀಯ ರೋಗ ನಿರೋಧಕ ನಿಯಮಿತ ತಿಂಗಳಿಗೆ ಸುಮಾರು 10-15 ದಶಲಕ್ಷ ಡೋಸ್ಗಳಿಗೆ ಸಾಕಾಗುವಷ್ಟು ಔಷಧ ಪದಾರ್ಥಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಹೇಳಿದ ಡಾ. ಆನಂದ್ ಕುಮಾರ್, ಇದು ಆರಂಭದಲ್ಲಿ 2-3 ದಶಲಕ್ಷ ಡೋಸ್ ಆಗಿರುತ್ತದೆ ಮತ್ತು ಇದೇ ವರ್ಷಾಂತ್ಯದಲ್ಲಿ ತಿಂಗಳಿಗೆ 6-7 ದಶಲಕ್ಷದವರೆಗೆ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಔಷಧ ಪದಾರ್ಥಗಳ ಉತ್ಪಾದನೆಗಾಗಿ ..ಎಲ್. ಹೈದ್ರಾಬಾದ್ ಬಳಿಯ ಕರ್ಕಪತಲಾ ಉತ್ಪಾದನಾ ಘಟಕವನ್ನು ಜೈವಿಕ ಸುರಕ್ಷತೆ ಹಂತ-3 (ಬಿ.ಎಸ್.ಎಲ್.-3)ರಸೌಲಭ್ಯವಾಗಿ ಪರಿವರ್ತಿಸಲಾಗುವುದು ಮತ್ತು ಮತ್ತೊಂದು ವಿಭಾಗದ ನಿರ್ಮಾಣವನ್ನೂ ಕೈಗೊಳ್ಳಲಾಗುವುದು ಎಂಬ ಮಾಹಿತಿಯನ್ನೂ  ಡಾ. ಕುಮಾರ್ ಹಂಚಿಕೊಂಡಿದ್ದಾರೆ. ಐಐಎಲ್ ಮತ್ತೊಂದು ಕೋವಿಡ್ 19 ಲಸಿಕೆಯ ಅಭಿವೃದ್ಧಿ ಮಾಡುತ್ತಿದ್ದು, ಪ್ರಾಣಿಗಳ ಮೇಲಿನ ಪ್ರಯೋಗ ನಡೆಯುತ್ತಿದೆ ಮತ್ತು ಮನುಷ್ಯರಿಗೆ ನೀಡುವ ಲಸಿಕೆ ಮುಂದಿನ ವರ್ಷದ ಹೊತ್ತಿಗೆ ಬರುವ ನಿರೀಕ್ಷೆ ಇದೆ

ದೇಶೀಯ ಕೋವಿಡ್ ಲಸಿಕೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು  ಭಾರತ ಸರ್ಕಾರ ಆತ್ಮನಿರ್ಭರ ಭಾರತ 3.0 ಅಭಿಯಾನದಡಿ ಕೋವಿಡ್ ಸುರಕ್ಷಾ ಅಭಿಯಾನವನ್ನು ಘೋಷಿಸಿದೆ. ಇದನ್ನು ಜೈವಿಕ ತಂತ್ರಜ್ಞಾನ ಇಲಾಖೆ ಅನುಷ್ಠಾನಗೊಳಿಸುತ್ತಿದೆ. ಉತ್ಪಾದನೆಯ ಸಾಮರ್ಥ್ಯವರ್ಧನೆಗಾಗಿ ಹೈದ್ರಾಬಾದ್ ಭಾರತೀಯ ರೋಗ ನಿರೋಧಕ ನಿಯಮಿತ (ಐಐಎಲ್)ಕ್ಕೆ 60 ಕೋಟಿ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಲಾಗಿದೆ.

***



(Release ID: 1722547) Visitor Counter : 234