ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಪರಿಹಾರ ನೆರವಿನ ನವೀಕೃತ ಮಾಹಿತಿ


ಈವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 17,831 ಆಮ್ಲಜನಕ ಸಾಂಧ್ರಕಗಳು; 18,111 ಆಮ್ಲಜನಕ ಸಿಲಿಂಡರ್ ಗಳು; 19 ಆಮ್ಲಜನಕ ಉತ್ಪಾದನಾ ಸ್ಥಾವರಗಳು; 13,489 ವೆಂಟಿಲೇಟರ್ ಗಳು/ಬಿಐಪಿಎಪಿ; ~6.9 ಎಲ್ ರೆಮಿಡಿಸಿವೀರ್ ವಯಲ್ಸ್, ~12L ಫವಿಪಿರವಿರ್ ಗುಳಿಗೆಗಳ  ವಿತರಣೆ/ ರವಾನೆ

Posted On: 26 MAY 2021 3:36PM by PIB Bengaluru

ಭಾರತ ಸರ್ಕಾರ ಅಂತಾರಾಷ್ಟ್ರೀಯ ಸಹಕಾರವಾಗಿ ಕೋವಿಡ್ -19 ಪರಿಹಾರಕ್ಕಾಗಿ ವೈದ್ಯಕೀಯ ಪೂರೈಕೆಗಳು ಮತ್ತು ಸಾಧನಗಳನ್ನು ವಿವಿಧ ದೇಶಗಳು/ಸಂಸ್ಥೆಗಳಿಂದ 2021 ಏಪ್ರಿಲ್ 27ರಿಂದಲೂ ಸ್ವೀಕರಿಸುತ್ತಿದೆ. ಅವುಗಳನ್ನು ಪ್ರಾಮಾಣಿಕವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗಿದೆ/ರವಾನಿಸಲಾಗಿದೆ

ಒಟ್ಟಾರೆಯಾಗಿ 17,831 ಆಮ್ಲಜನಕ ಸಾಂಧ್ರಕಗಳು; 18,111 ಆಮ್ಲಜನಕ ಸಿಲಿಂಡರ್ ಗಳು; 19 ಆಮ್ಲಜನಕ ಉತ್ಪಾದನಾ ಸ್ಥಾವರಗಳು; 13,489 ವೆಂಟಿಲೇಟರ್ ಗಳು/ಬಿಐಪಿಎಪಿ; ~6.9 ಎಲ್ ರೆಮಿಡಿಸಿವೀರ್ ವಯಲ್ಸ್, ~12L ಫವಿಪಿರವಿರ್ ಗುಳಿಗೆಗಳನ್ನು 2021 ಏಪ್ರಿಲ್ 27ರಿಂದ 2021 ಮೇ 25ರವರೆಗೆ ವಾಯು ಮತ್ತು ರಸ್ತೆ ಮಾರ್ಗವಾಗಿ ತಲುಪಿಸಲಾಗಿದೆ/ರವಾನಿಸಲಾಗಿದೆ.  

ವೋಲ್ಫ್ಸ್ಬರ್ಗ್ (ಜರ್ಮನಿ), ಕುವೈತ್ (ಭಾರತೀಯ ಸಮುದಾಯ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ), ಬ್ರಿಟಿಷ್ ಆಕ್ಸಿಜನ್ ಕಂ (ಯುಕೆ), ಯು.ಎಸ್‌..ಎಸ್.ಪಿ.ಎಫ್, ಸಿಐಐ ಇಂಡಿಯಾ ವಾಣಿಜ್ಯ ವೇದಿಕೆ (ದಕ್ಷಿಣ ಆಫ್ರಿಕಾ), ವರ್ಲ್ಡ್ ಇನ್ ಹಾರ್ಮನಿ ಎನ್‌.ಜಿ. (ಸ್ಪೇನ್ ) ಮತ್ತು ಭಾರತದ ರಾಯಭಾರ ಕಚೇರಿ (ಮ್ಯಾಡ್ರಿಡ್) ನಿಂದ ಮೇ 24/25 ರಂದು ಸ್ವೀಕರಿಸಲಾದ ಪ್ರಮುಖ ಸರಕುಗಳು

ಸರಕುಗಳು

ಪ್ರಮಾಣ

ಆಮ್ಲಜನಕ ಸಾಂಧ್ರಕಗಳು

76

ಆಮ್ಲಜನಕ ಸಿಲಿಂಡರ್ ಗಳು

1,810

ವೆಂಟಿಲೇಟರ್ ಗಳು/ಬಿಐ-ಫಿಎಪಿ/ಸಿಪಿಎಪಿ

40

 

 

 

 

 

 

ಸ್ವೀಕರಿಸುವ ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳಿಗೆ ಪರಿಣಾಮಕಾರಿಯಾಗಿ ತಕ್ಷಣವೇ ಹಂಚಿಕೆ ಮತ್ತು ಸಂಸ್ಥೆಗಳಿಗೆ ಸುವ್ಯವಸ್ಥಿತ ವಿತರಣೆಯನ್ನು ಮಾಡಲಾಗುತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಸಮಗ್ರವಾಗಿ  ನಿಯಮಿತವಾಗಿ ಇದರ ನಿಗಾ ವಹಿಸಿದೆ. ಅನುದಾನ, ನೆರವು ಮತ್ತು ದೇಣಿಗೆಗಳ ರೂಪದಲ್ಲಿ ಅಂತಾರಾಷ್ಟ್ರೀಯ ಸಹಕಾರವಾಗಿ ವಿದೇಶಗಳಿಂದ ಬರುತ್ತಿರುವ ಕೋವಿಡ್ ಪರಿಹಾರ ಸಾಮಗ್ರಿಗಳ ಸ್ವೀಕೃತಿ ಮತ್ತು ಹಂಚಿಕೆಯ ಸಮನ್ವಯಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಸಮರ್ಪಿತ ಸಮನ್ವಯ ಕೋಶವನ್ನು ರಚಿಸಲಾಗಿದೆ. ಕೋಶವು 2021 ಏಪ್ರಿಲ್ 26 ರಿಂದ ಕಾರ್ಯನಿರ್ವಹಿಸುತ್ತಿದೆ. 2021 ಮೇ 2 ರಿಂದ ಆರೋಗ್ಯ ಸಚಿವಾಲಯವು ಪ್ರಮಾಣಿತ ಕಾರ್ಯಾಚರಣಾ ವಿಧಾನ(ಎಸ್..ಪಿ.)ವನ್ನು ರೂಪಿಸಿ ಜಾರಿಗೆ ತರಲಾಗಿದೆ.

***


(Release ID: 1721953) Visitor Counter : 256