ರೈಲ್ವೇ ಸಚಿವಾಲಯ

ಚಂಡಮಾರುತದ ಹಿನ್ನೆಲೆಯಲ್ಲಿ ರೈಲ್ವೆಯು ಪೂರ್ವ ರಾಜ್ಯಗಳಿಂದ ಆಕ್ಸಿಜನ್ ಎಕ್ಸ್ ಪ್ರೆಸ್ ಕಾರ್ಯಾಚರಣೆಯನ್ನು ಹೆಚ್ಚಿಸಿದೆ


ರಾಷ್ಟ್ರಕ್ಕೆ ಪರಿಹಾರ ಒದಗಿಸಲು 8 ಆಕ್ಸಿಜನ್ ಎಕ್ಸ್ ಪ್ರೆಸ್ ಗಳಲ್ಲಿ 12 ಗಂಟೆಗಳಲ್ಲಿ 680 ಮೆ.ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕ ಸಾಗಣೆ

ಆಕ್ಸಿಜನ್ ಎಕ್ಸ್ ಪ್ರೆಸ್ ಗಳು 17239 ಮೆ.ಟನ್ ಗೂ ಹೆಚ್ಚು ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ರಾಷ್ಟ್ರಾದ್ಯಂತ ತಲುಪಿಸಿವೆ

1042 ಟ್ಯಾಂಕರ್ ಗಳನ್ನು ಹೊಂದಿರುವ 263 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಈವರೆಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿದ್ದು 14 ರಾಜ್ಯಗಳಿಗೆ ಪರಿಹಾರ ಒದಗಿಸಿವೆ

ಮಹಾರಾಷ್ಟ್ರಕ್ಕೆ 614 ಮೆ.ಟನ್, ಉತ್ತರ ಪ್ರದೇಶಕ್ಕೆ ಸುಮಾರು 3649 ಮೆ.ಟನ್, ಮಧ್ಯಪ್ರದೇಶಕ್ಕೆ 633 ಮೆ.ಟನ್, ದೆಹಲಿಗೆ 4820 ಮೆ.ಟನ್, ಹರಿಯಾಣಕ್ಕೆ 1911 ಮೆ.ಟನ್, ರಾಜಸ್ಥಾನದಲ್ಲಿ 98 ಮೆ.ಟನ್, ಕರ್ನಾಟಕದಲ್ಲಿ 1421 ಮೆ.ಟನ್, ಉತ್ತರಾಖಂಡಕ್ಕೆ 320 ಮೆ.ಟನ್, ತಮಿಳುನಾಡಿಗೆ 1099 ಮೆ.ಟನ್, ಆಂಧ್ರಪ್ರದೇಶಕ್ಕೆ 886 ಮೆ.ಟನ್, ಪಂಜಾಬ್ ಗೆ 225 ಮೆ.ಟನ್, ಕೇರಳಕ್ಕೆ 246 ಮೆ.ಟನ್, ತೆಲಂಗಾಣಕ್ಕೆ  1029 ಮೆ.ಟನ್ ಮತ್ತು ಅಸ್ಸಾಂಗೆ 80 ಮೆ.ಟನ್ ಆಮ್ಲಜನಕ ತಲುಪಿಸಲಾಗಿದೆ

Posted On: 25 MAY 2021 6:35PM by PIB Bengaluru

ಎಲ್ಲಾ ಅಡೆತಡೆಗಳನ್ನು ಎದುರಿಸಿ ಹೊಸ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವ ಭಾರತೀಯ ರೈಲ್ವೆಯು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ತಲುಪಿಸುವ ಮೂಲಕ ತನ್ನ ನೆರವಿನ ಪ್ರಯಾಣವನ್ನು ಮುಂದುವರಿಸಿದೆ. ಇಲ್ಲಿಯವರೆಗೆ, ಭಾರತೀಯ ರೈಲ್ವೆಯು 1042 ಕ್ಕೂ ಹೆಚ್ಚು ಟ್ಯಾಂಕರ್ ಗಳಲ್ಲಿ 17239 ಮೆಟ್ರಿಕ್ ಟನ್ಗೂ ಹೆಚ್ಚಿನ ಎಲ್ಎಂಒವನ್ನು ದೇಶದ ವಿವಿಧ ರಾಜ್ಯಗಳಿಗೆ ತಲುಪಿಸಿದೆ.

263 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಈವರೆಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ನೆರವಿನ ಪರಿಹಾರವನ್ನು ಒದಗಿಸಿವೆ.

ಪತ್ರಿಕಾ ಹೇಳೀಕೆ ಬಿಡುಗಡೆಯ ಸಮಯದವರೆಗೆ, 2 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು 8 ಟ್ಯಾಂಕರ್ಗಳಲ್ಲಿ 134 ಮೆ.ಟನ್ ಗಿಂತ ಹೆಚ್ಚಿನ ಎಲ್ಎಂಒನೊಂದಿಗೆ ಸಾಗಣೆಯ ಹಾದಿಯಲ್ಲಿವೆ.

ಚಂಡಮಾರುತ ಬಲಗೊಳ್ಳುವ ಮೊದಲು ಕಳೆದ 12 ಗಂಟೆಗಳಲ್ಲಿ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ನಿಂದ 680 ಮೆ.ಟನ್ ಆಮ್ಲಜನಕವನ್ನು ಸಾಗಿಸಿವೆ. 8 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಪ್ರದೇಶದಿಂದ ಸಂಚರಿಸಿವೆ.

ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣಕ್ಕೆ ಎಲ್ಎಂಒ ವಿತರಣೆ ತಲಾ 1000 ಮೆ.ಟನ್ ದಾಟಿದೆ.

ಬೇಡಿಕೆ ಸಲ್ಲಿಸುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಎಲ್ಎಂಒ ತಲುಪಿಸಲು ಭಾರತೀಯ ರೈಲ್ವೆ ಪ್ರಯತ್ನಿಸುತ್ತಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಆಮ್ಲಜನಕದೊಂದಿಗೆ 14 ರಾಜ್ಯಗಳಿಗೆ - ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಅಸ್ಸಾಂ - ತಲುಪಿವೆ.

ಪತ್ರಿಕಾ ಹೇಳಿಕೆ ಬಿಡುಗಡೆಯ ಸಮಯದವರೆಗೆ, ಮಹಾರಾಷ್ಟ್ರಕ್ಕೆ 614 ಮೆ.ಟನ್, ಉತ್ತರಪ್ರದೇಶಕ್ಕೆ ಸುಮಾರು 3649 ಮೆ.ಟನ್, ಮಧ್ಯಪ್ರದೇಶಕ್ಕೆ 633 ಮೆ.ಟನ್, ದೆಹಲಿಗೆ 4820 ಮೆ.ಟನ್, ಹರಿಯಾಣಕ್ಕೆ 1911 ಮೆ.ಟನ್, ರಾಜಸ್ಥಾನದಲ್ಲಿ 98 ಮೆ.ಟನ್, ಕರ್ನಾಟಕದಲ್ಲಿ 1421 ಮೆ.ಟನ್, ಉತ್ತರಾಖಂಡಕ್ಕೆ 320 ಮೆ.ಟನ್, ತಮಿಳುನಾಡಿಗೆ 1099 ಮೆ.ಟನ್, ಆಂಧ್ರಪ್ರದೇಶಕ್ಕೆ 886 ಮೆ.ಟನ್, ಪಂಜಾಬ್ ಗೆ 225 ಮೆ.ಟನ್, ಕೇರಳಕ್ಕೆ 246 ಮೆ.ಟನ್, ತೆಲಂಗಾಣಕ್ಕೆ  1029 ಮೆ.ಟನ್ ಮತ್ತು ಅಸ್ಸಾಂಗೆ 80 ಮೆ.ಟನ್ ಆಮ್ಲಜನಕ ತಲುಪಿಸಲಾಗಿದೆ.

ರೈಲ್ವೆಯು ಆಮ್ಲಜನಕ ಪೂರೈಕೆ ಸ್ಥಳಗಳೊಂದಿಗೆ ವಿವಿಧ ಮಾರ್ಗಗಳನ್ನು ಮ್ಯಾಪ್ ಮಾಡಿದೆ ಮತ್ತು ರಾಜ್ಯಗಳಲ್ಲಿ ಉದ್ಭವಿಸುವ ಯಾವುದೇ ಅಗತ್ಯಗಳನ್ನು ಪೂರೈಸಲು ಸಿದ್ಧವಾಗಿದೆ. ಎಲ್ಎಂಒ ತರಲು ರಾಜ್ಯಗಳು ಭಾರತೀಯ ರೈಲ್ವೆಗೆ ಟ್ಯಾಂಕರ್ ಗಳನ್ನು ಒದಗಿಸುತ್ತವೆ.

ಏಪ್ರಿಲ್ 24 ರಂದು ಮಹಾರಾಷ್ಟ್ರದಲ್ಲಿ 126 ಮೆ.ಟನ್ ಆಮ್ಲಜನಕದೊಂದಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ತನ್ನ  ವಿತರಣೆಯನ್ನು 31 ದಿನಗಳ ಹಿಂದೆಯೇ ಪ್ರಾರಂಭಿಸಿದ್ದನ್ನು ಗಮನಿಸಬಹುದು.

ಭಾರತೀಯ ರೈಲ್ವೆ ಪಶ್ಚಿಮದಲ್ಲಿ ಹಪಾ, ಬರೋಡಾ, ಮುಂಡ್ರಾ ಮತ್ತು ಪೂರ್ವದ ರೂರ್ಕೆಲಾ, ದುರ್ಗಾಪುರ, ಟಾಟನಗರ, ಅಂಗುಲ್ ಮುಂತಾದ ಸ್ಥಳಗಳಿಂದ ಆಮ್ಲಜನಕವನ್ನು ತೆಗೆದುಕೊಂಡು ಅದನ್ನು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಿಗೆ ಸಂಕೀರ್ಣ ಕಾರ್ಯಾಚರಣೆಯ ಸನ್ನಿವೇಶಗಳಲ್ಲಿ ತಲುಪಿಸುತ್ತಿದೆ.

ಆಮ್ಲಜನಕವನ್ನು ಸಾಧ್ಯವಾದಷ್ಟು ವೇಗವಾಗಿ ತಲುಪಿಸಲು ರೈಲ್ವೆಯು ಆಕ್ಸಿಜನ್ ಎಕ್ಸ್ ಪ್ರೆಸ್ ಸರಕು ರೈಲುಗಳ ಚಾಲನೆಯಲ್ಲಿ ಹೊಸ ಮತ್ತು ಅಭೂತಪೂರ್ವ ಮಾನದಂಡಗಳನ್ನು ಸೃಷ್ಟಿಸುತ್ತಿದೆ. ನಿರ್ಣಾಯಕ ಸರಕು ರೈಲುಗಳ ಸರಾಸರಿ ವೇಗವು ಹೆಚ್ಚಿನ ಸಂದರ್ಭಗಳಲ್ಲಿ 55 ಕಿ.ಮೀ.ಗಿಂತ ಹೆಚ್ಚಿನದಾಗಿದೆ. ಹೆಚ್ಚಿನ ಆದ್ಯತೆಯ ಗ್ರೀನ್ ಕಾರಿಡಾರ್ ನಲ್ಲಿ ಚಾಲನೆಯಲ್ಲಿರುವ, ವಲಯಗಳ ಕಾರ್ಯಾಚರಣಾ ತಂಡಗಳು ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದು, ಆಮ್ಲಜನಕವನ್ನು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ತಲುಪಿಸಲು ಶ್ರಮಿಸುತ್ತಿವೆ. ವಿವಿಧ ವಿಭಾಗಗಳಲ್ಲಿನ ಸಿಬ್ಬಂದಿ ಬದಲಾವಣೆಗಳಿಗಾಗಿ ತಾಂತ್ರಿಕ ನಿಲುಗಡೆಗಳನ್ನು 1 ನಿಮಿಷಕ್ಕೆ ಕಡಿತಗೊಳಿಸಲಾಗಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ಸರಾಗವಾಗಿ ಓಡಲು ಹಳಿಯ ಮಾರ್ಗಗಳನ್ನು ಮುಕ್ತವಾಗಿ ಇಡಲಾಗುತ್ತದೆ ಮತ್ತು ಹೆಚ್ಚಿನ ಜಾಗರೂಕತೆಯನ್ನು ಕಾಪಾಡಿಕೊಳ್ಳಲಾಗುತ್ತದೆ.

ಇತರ ಸರಕು ಕಾರ್ಯಾಚರಣೆಯ ವೇಗವು ಕಡಿಮೆಯಾಗದಂತೆ ಇದನ್ನು ನಿರ್ವಹಿಸಲಾಗುತ್ತಿದೆ.

ಆಮ್ಲಜನಕವನ್ನು ಸಾಗಿಸುವುದು ಬಹಳ ಕ್ರಿಯಾತ್ಮಕ ಕೆಲಸವಾಗಿದೆ ಮತ್ತು ಅಂಕಿಅಂಶಗಳನ್ನು ಸದಾ ನವೀಕರಿಸಲಾಗುತ್ತದೆ. ಲೋಡ್ ಮಾಡಲಾದ ಇನ್ನೂ ಹೆಚ್ಚಿನ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ತಡರಾತ್ರಿಯ ನಂತರ ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

***



(Release ID: 1721737) Visitor Counter : 139