ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಜನವರಿಯಿಂದ ಜೂನ್ ವರೆಗೆ ಟೂರ್ನಿಯಲ್ಲಿ ಭಾಗವಹಿಸಲು ಟೆನಿಸ್ ಆಟಗಾರ ರೋಹನ್ ಬೋಪಣ್ಣಗೆ ಅಂದಾಜು 30 ಲಕ್ಷ ರೂ. ಮಂಜೂರು ಮಾಡಿದ ಟಿಒಪಿಎಸ್

Posted On: 24 MAY 2021 5:28PM by PIB Bengaluru

2021 ಜನವರಿಯಿಂದ ಜೂನ್ ವರೆಗೆ ಭಾರತದ ಟೆನಿಸ್ ಪುರುಷರ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ  ತನ್ನ ತರಬೇತುದಾರ ಸ್ಕಾಟ್ ಡೇವಿಡ್ ಆಫ್ ಮತ್ತು ಫಿಜಿಯೋಗೌರಂಗ್ ಶುಕ್ಲಾ ಅವರೊಂದಿಗೆ 12 ಟೂರ್ನಿಗಳಲ್ಲಿ ಆಟವಾಡಲು ಸಲ್ಲಿಸಿದ್ದ ಪ್ರಸ್ತಾವಕ್ಕೆ ಇಂದು ನಡೆದ ಮಿಷನ್ ಒಲಿಂಪಿಕ್ ಘಟಕದ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಬೋಪಣ್ಣ ಸದ್ಯ ಪುರುಷರ ಡಬಲ್ಸ್ ವಿಭಾಗದಲ್ಲಿ ವಿಶ್ವದ 39ನೇ ಶ್ರೇಯಾಂಕದಲ್ಲಿದ್ದಾರೆ ಮತ್ತು 2016 ರಿಯೋ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ತಲುಪಿದ್ದರು. ಬೋಪಣ್ಣ ಅವರಿಗೆ ಒಟ್ಟಾರೆ ಟೂರ್ನಿಗಳಲ್ಲಿ ಭಾಗವಹಿಸಲು ಅಂದಾಜು 27.61 ಲಕ್ಷ ರೂ. ಅನುಮೋದನೆ ನೀಡಲಾಗಿದೆ. ಬೋಪಣ್ಣ ಈಗಾಗಲೇ ಸದ್ಯದ ಒಲಿಂಪಿಕ್ ಸೈಕಲ್ ನಲ್ಲಿ ಟಿಒಪಿಎಸ್ ನಿಂದ 1.24 ಕೋಟಿ ರೂ.ಗಳನ್ನು ಸ್ವೀಕರಿಸಿದ್ದಾರೆ.

ಅಲ್ಲದೆ ಸಮಿತಿ ಜನವರಿಯಿಂದ ಜೂನ್ ವರೆಗೆ 14 ಟೂರ್ನಿಗಳಲ್ಲಿ ಆಟವಾಡಲು ಪುರುಷರ ಟೆನಿಸ್ ಡಬಲ್ಸ್ ಆಟಗಾರ ದಿವಿಜ್ ಶರಣ್ ಅವರ ಪ್ರಸ್ತಾವಕ್ಕೂ ಅನುಮೋದನೆ ನೀಡಿದೆ. ಶರಣ್ ಅವರ ಪ್ರಸ್ತಾವವನ್ನು ಒಟ್ಟು ಅಂದಾಜು ವೆಚ್ಚ 30 ಲಕ್ಷ ರೂ.(ವಿಮಾನ ವೆಚ್ಚ ಸೇರಿ)ಗೆ ಸಮಿತಿ ಅನುಮೋದಿಸಿದೆ. ಇದಕ್ಕೂ ಮುನ್ನ ಶರಣ್ ಅವರಿಗೆ ಸದ್ಯದ ಒಲಿಂಪಿಕ್ ಸೈಕಲ್ ನಲ್ಲಿ ಟಿಒಪಿಎಸ್ ನಿಂದ 80.59 ಲಕ್ಷ ರೂ. ನೆರವು ಸ್ವೀಕರಿಸಿದ್ದಾರೆ.

ಏಷ್ಯಾ ಚಾಂಪಿಯನ್ ವಿನೇಶ್ ಫೊಗಾಟ್ ಅವರು ವರ್ಷದ ಜುಲೈನ ಒಲಿಂಪಿಕ್ ಕ್ರೀಡಾಕೂಟದವರೆಗೆ ವಿದೇಶದಲ್ಲೇ ತರಬೇತಿ ಪಡೆಯುವುದು ಮುಂದುವರಿಸಲಿದ್ದಾರೆ. ಅವರ ಪ್ರಸ್ತಾವವನ್ನು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ ಮೂಲಕ ಭಾರತೀಯ ಕುಸ್ತಿ ಒಕ್ಕೂಟ ಅನುಮೋದನೆ ನೀಡಿದ್ದು, ಬಲ್ಗೇರಿಯಾದಲ್ಲಿ ಅವರು ಎತ್ತರದ ಸಾಧನೆ ಪೂರ್ಣಗೊಳಿಸಿದ ನಂತರ ಹಂಗೇರಿ ಮತ್ತು ಪೋಲೆಂಡ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಫೊಗಾಟ್ 2019 ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವ ಚಾಂಪಿಯನ್ಸ್ ನಲ್ಲಿ 53 ಕೆಜಿ ವಿಭಾಗದ ಒಲಿಂಪಿಕ್ ಕೋಟಾದಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಅವರು ಬುಡಪೆಸ್ಟ್ ನಲ್ಲಿ ಜೂನ್ 9 ವರೆಗೆ ತರಬೇತಿ ಪಡೆಯುತ್ತಿದ್ದು, ಆನಂತರ ಪೋಲೆಂಡ್ ಓಪನ್(ಜೂನ್ 9 ರಿಂದ 13) ಪ್ರಯಾಣ ಬೆಳೆಸುವರು ಮತ್ತು ಬುಡಪೆಸ್ಟ್ ಗೆ ವಾಪಸ್ಸಾಗಿ ಜುಲೈ 2 ವರೆಗೆ ಅಲ್ಲೇ ವಾಸ್ತವ್ಯ ಹೂಡುವರು. ಅವರ ತರಬೇತುದಾರ ವೂಲ್ಲರ್ ಅಕೋಸ್ , ಸ್ಪೇರಿಂಗ್  ಪಾಲುದಾರರಾದ ಪ್ರಿಯಾಂಕ ಮತ್ತು ಫಿಜಿಯೋಥೆರಪಿಸ್ಟ್ ಪೂರ್ಣಿಮಾ ರಾಮನ್ ಎನ್ ಗೋಮ್ದಿರ್ ಆಕೆಯ ಜೊತೆಗೆ ಇರುವರು. ಆಕೆಯ ತರಬೇತಿ ಮತ್ತು ಸ್ಪರ್ಧೆಗೆ 20.21 ಲಕ್ಷ ರೂ. ಪ್ರಸ್ತಾವವಿತ್ತು. ಅವರು ಈವರೆಗೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸಮಿತಿಯಿಂದ 1.13 ಕೋಟಿ ಆರ್ಥಿಕ ನೆರವನ್ನು ಪಡೆದುಕೊಂಡಿದ್ದಾರೆ.

ಒಲಿಂಪಿಕ್ ಕ್ರೀಡಾಕೂಟದ ಸಿದ್ಧತೆಗಾಗಿ ರೋವರ್ಸ್ ಗಳಾದ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರಿಗೆ ಜೂನ್ 1 ರಿಂದ ಐದು ವಾರಗಳ ಕಾಲ ಪೋರ್ಚುಗಲ್ ಪೋಸಿನ್ಹೊ ಹೈಪರ್ ಫಾರ್ಮೆನ್ಸ್ ಕೇಂದ್ರದಲ್ಲಿ ತರಬೇತಿ ಪಡೆಯುವ ಪ್ರಸ್ತಾವಕ್ಕೆ ಎಂಒಸಿ ಅನುಮೋದನೆ ನೀಡಿದೆ. ಡಬಲ್ಸ್ ಸ್ಕೂಲರ್ಸ್ ಟೋಕಿಯಾದಲ್ಲಿ ತಿಂಗಳ ಆರಂಭದಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಸಾಧಿಸಿದರು. ಪೋಲೆಂಡ್ ನಲ್ಲಿ ಅವರ ತರಬೇತಿ ಶಿಬಿರಕ್ಕೆ ಸುಮಾರು 21 ಲಕ್ಷ ರೂ. ವೆಚ್ಚ ತಗುಲಲಿದೆ.

ರೋವರ್ಸ್ ಗಳಾದ ಅರ್ಜುನ್ ಲಾಲ್ ಜಾಟ್  ಮತ್ತು ಅರವಿಂದ್ ಸಿಂಗ್ ಅವರು ಅಭಿವೃದ್ಧಿ ಗುಂಪಿನಿಂದ ಪ್ರಮುಖರ ಗುಂಪಿಗೆ ವರ್ಗಾವಣೆಗೊಂಡಿದ್ದು, ಕುಸ್ತಿಪಟುಗಳಾದ ಸೀಮಾ ಬಿಸ್ಲಾ ಮತ್ತು ಸುಮಿತ್ ಮಲಿಕ್ ಅವರು ಇತ್ತೀಚೆಗೆ ವಿಶ್ವ ಒಲಿಂಪಿಕ್ಸ್ ಅರ್ಹತಾ ಕೋಟಾದಲ್ಲಿ ಸ್ಥಾನಪಡೆದಿದ್ದು, ಅವರೂ ಸಹ ಪ್ರಮುಖರ ಗುಂಪಿಗೆ ಸೇರ್ಪಡೆಯಾಗಿದ್ದಾರೆ. ಟೆನಿಸ್ ಆಟಗಾರ ಅಂಕಿತ್ ರೈನಾ ಅವರು ಇತ್ತೀಚೆಗೆ ಮಹಿಳೆಯರ ಡಬಲ್ಸ್ ನಲ್ಲಿ ವಿಶ್ವ ಅಗ್ರ 100 ಸ್ಥಾನಕ್ಕೇರಿದ್ದಾರೆ ಮತ್ತು ಬಿಲ್ಲಿ ಜೀನ್ ಕಿಂಗ್ ಕಪ್ ನಲ್ಲಿ ಸಾನಿಯಾ ಮಿರ್ಜಾ ಜೊತೆ ಪಾಲುದಾರರಾಗಿ ಆಡುವರು ಮತ್ತು ಟಿಒಪಿಎಸ್ ಪ್ರಮುಖ ಗುಂಪು ಸೇರ್ಪಡೆಯಾಗುವರು

***



(Release ID: 1721484) Visitor Counter : 132