ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ

ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಎಂಸಿಎ 21 ಆವೃತ್ತಿ 3.0 ರ 1 ನೇ ಹಂತಕ್ಕೆ ಚಾಲನೆ ನೀಡಿದರು 


ಪರಿಷ್ಕರಿಸಿದ ವೆಬ್ ಸೈಟ್, ಇ.ಬುಕ್, ಇ.ಕನ್ಸಲ್ಟೇಶನ್ ಮಾಡ್ಯೂಲ್ ಮತ್ತು ಹೊಸ ಇಮೇಲ್ ಸೇವೆಗಳನ್ನು ಮಧ್ಯಸ್ಥಗಾರರ ಉತ್ತಮ ಅನುಭವಕ್ಕಾಗಿ ಅಳವಡಿಸಲಾಗಿದೆ

Posted On: 24 MAY 2021 3:42PM by PIB Bengaluru

ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ (ಎಂಸಿಎ) ಎಂಸಿಎ 21 ಆವೃತ್ತಿ 3.0 (ವಿ 3.0) ಅನ್ನು ನವೀಕರಿಸಿದ ವೆಬ್ ಸೈಟ್, ಎಂಸಿಎ ಅಧಿಕಾರಿಗಳಿಗೆ ಹೊಸ ಇಮೇಲ್ ಸೇವೆಗಳು ಮತ್ತು ಎರಡು ಹೊಸ ಮಾಡ್ಯೂಲ್ ಗಳಾದ  . ಪುಸ್ತಕ ಮತ್ತು . ಕನ್ಸಲ್ಟೇಶನ್ ಅನ್ನು ಇಂದು ಇಲ್ಲಿ ವರ್ಚುವಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ  ಚಾಲನೆ ನೀಡಿದರು. ಎಂಸಿಎ ಕಾರ್ಯದರ್ಶಿ ಶ್ರೀ ರಾಜೇಶ್ ವರ್ಮಾ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಂದರ್ಭದಲ್ಲಿ, ಶ್ರೀ ಠಾಕೂರ್ ಅವರು, ಭಾರತವು ಆರ್ಥಿಕವಾಗಿ ಶಕ್ತಿಶಾಲಿಯಾಗಬೇಕೆಂಬ ಪ್ರಧಾನ ಮಂತ್ರಿಯವರ ಕನಸನ್ನು ನನಸು ಮಾಡಲು, ನಾವು ಆರ್ಥಿಕ ಚಟುವಟಿಕೆಯನ್ನು ವೇಗಗೊಳಿಸುವುದು ಮಾತ್ರವಲ್ಲ, ಪ್ರಕ್ರಿಯೆಯಲ್ಲಿ ನಮ್ಮ ಪಾಲುದಾರರಾದ ಎಲ್ಲಾ ವ್ಯಾಪಾರ ಮತ್ತು ಸಾಂಸ್ಥಿಕ ಘಟಕಗಳು ಭಾರತ ಸರ್ಕಾರವನ್ನು ಸ್ನೇಹಪರ ಮತ್ತು ಶಕ್ತಗೊಳಿಸುವ ಪಾಲುದಾರನಾಗಿ ನೋಡುತ್ತವೆ. ಎಂದು ಹೇಳಿದರು.

ಪರಿಷ್ಕರಿಸಿದ ವೆಬ್ ಸೈಟ್ ಬಳಕೆದಾರರ ಅನುಭವವನ್ನು ಉತ್ತಮ  ನೋಟ ಮತ್ತು ಭಾವನೆಯೊಂದಿಗೆ  ನವ ಚೈತನ್ಯವನ್ನುಂಟು ಮಾಡುತ್ತದೆ, -ಬುಕ್ ನವೀಕರಿಸಿದ ನಿಯಮಗಳಿಗೆ ಪ್ರವೇಶಾವಕಾಶವನ್ನು ಒದಗಿಸುತ್ತದೆ ಮತ್ತು ಕಾನೂನಿನ ಐತಿಹಾಸಿಕ ಬದಲಾವಣೆಗಳಿಗೆ ಟ್ರ್ಯಾಕಿಂಗ್ ಕಾರ್ಯವಿಧಾನವನ್ನು ನೀಡುತ್ತದೆ ಎಂದು ಶ್ರೀ ಠಾಕೂರ್ ಹೇಳಿದರು.

-ಕನ್ಸಲ್ಟೇಷನ್ ಮಾಡ್ಯೂಲ್  ಉಪಯೋಗಗಳು:

  • ಕಾಲಕಾಲಕ್ಕೆ ಸಚಿವಾಲಯವು ಪರಿಚಯಿಸಲಿರುವ ಪ್ರಸ್ತಾವಿತ ತಿದ್ದುಪಡಿಗಳು ಮತ್ತು ಹೊಸ ಶಾಸನಗಳ ವಾಸ್ತವೋಪಮ ಸಾರ್ವಜನಿಕ ಸಮಾಲೋಚನೆ.
  • ಮಧ್ಯಸ್ಥಗಾರರಿಂದ ಪಡೆದ ಅಭಿಪ್ರಾಯಗಳು / ಒಳಹರಿವುಗಳನ್ನು ಒಟ್ಟುಗೂಡಿಸುವುದು  ಮತ್ತು ವರ್ಗೀಕರಿಸಲು ಕೃತಕ ಬುದ್ಧಿಮತ್ತೆ ಮತ್ತು ತ್ವರಿತ ನೀತಿ ನಿರ್ಧಾರ ತೆಗೆದುಕೊಳ್ಳಲು ವಿಶ್ಲೇಷಣಾತ್ಮಕ ವರದಿಗಳನ್ನು ರಚಿಸುವುದು.
  • ಎಂಸಿಎ ಅಧಿಕಾರಿಗಳಿಗೆ ಹೊಸ ಇಮೇಲ್ ಸೇವೆಯು ಆಂತರಿಕ ಮತ್ತು ಬಾಹ್ಯ ಮಧ್ಯಸ್ಥಗಾರರೊಂದಿಗೆ ಸಂಘಟಿತ ಮತ್ತು ನಿರ್ವಹಿಸಿದ ಸಂವಹನಕ್ಕಾಗಿ ಸುಧಾರಿತ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳನ್ನು ಒದಗಿಸುತ್ತದೆ.

ಎಂಸಿಎ 21 ವಿ 3.0 ಲಗತ್ತುಗಳ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತದೆ, ಫಾರ್ಮ್-ಗಳನ್ನು ವೆಬ್ ಆಧಾರಿತವಾಗಿಸುತ್ತದೆ ಮತ್ತು ಪೂರ್ವ-ಭರ್ತಿ ಕಾರ್ಯವಿಧಾನವನ್ನು ಬಲಪಡಿಸುತ್ತದೆ ಎಂದು ಶ್ರೀ ವರ್ಮಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದತ್ತಾಂಶ ವಿಶ್ಲೇಷಣೆಗಳು ಚಾಲಿತ ಎಂಸಿಎ 21 ವಿ 3.0 ಕಾರ್ಪೊರೇಟ್ ಅನುಸರಣೆ ಸಂಸ್ಕೃತಿಗೆ ಹೊಸ ಅರ್ಥವನ್ನು ನೀಡುತ್ತದೆ ಮತ್ತು ಕಾರ್ಪೊರೇಟ್ ನಿಯಂತ್ರಣ ಮತ್ತು ಆಡಳಿತ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಶ್ರೀ ವರ್ಮಾ ಹೇಳಿದರು.

ಎಂಸಿಎ 21 ಬಗ್ಗೆ

ಎಂಸಿಎ ವಿ 3.0 ಅನ್ನು ಎರಡು ಹಂತಗಳಲ್ಲಿ ಜಾರಿಗೆ ತರಲಾಗುವುದು. ಎರಡನೇ ಮತ್ತು ಅಂತಿಮ ಹಂತವನ್ನು ಅಕ್ಟೋಬರ್ 2021 ರಿಂದ ಪ್ರಾರಂಭಿಸಲಾಗುವುದು. ಇಡೀ ಯೋಜನೆಯನ್ನು ಹಣಕಾಸು ವರ್ಷದೊಳಗೆ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಮತ್ತು ಇದು ದತ್ತಾಂಶ ವಿಶ್ಲೇಷಣೆ ಮತ್ತು ಯಂತ್ರ ಕಲಿಕೆಗೆ ಚಾಲನೆ ನೀಡುತ್ತದೆ. ಎಂಸಿಎ ವಿ 3.0 ಸಂಪೂರ್ಣವಾಗಿ ಅಸ್ತಿತ್ವದಲ್ಲಿರುವ ಸೇವೆಗಳು ಮತ್ತು ಮಾಡ್ಯೂಲ್ಗಳನ್ನು ಸುಧಾರಿಸುವುದಲ್ಲದೆ, -ತೀರ್ಪು, ಅನುಸರಣೆ ನಿರ್ವಹಣಾ ವ್ಯವಸ್ಥೆ, ಸುಧಾರಿತ ಸಹಾಯವಾಣಿ, ಪ್ರತಿಕ್ರಿಯೆ ಸೇವೆಗಳು, ಬಳಕೆದಾರರ ಡ್ಯಾಶ್ ಬೋರ್ಡ್ ಗಳು, ಸ್ವಯಂ-ವರದಿ ಮಾಡುವ ಸಾಧನಗಳು  ಪರಿಷ್ಕರಿಸಿದ ಮಾಸ್ಟರ್ ಡೇಟಾ ಸೇವೆಗಳಂತಹ ಹೊಸ ಕಾರ್ಯಗಳನ್ನು ಸಹ ರಚಿಸುತ್ತದೆ.

ಎಂಸಿಎ 21 ಭಾರತ ಸರ್ಕಾರದ ಮಿಷನ್ ಮೋಡ್ ಯೋಜನೆಗಳ ಭಾಗವಾಗಿದೆ ಹಿಂದೆ ಹಲವಾರು ಪುರಸ್ಕಾರಗಳನ್ನು ಪಡೆದ ಯೋಜನೆಯು ಈಗ ಅದರ 3 ನೇ ಆವೃತ್ತಿಯನ್ನು ತಲುಪಿದೆಎಂಸಿಎ ವಿ 3.0 ವರ್ಷದ ಬಜೆಟ್ ಪ್ರಕಟಣೆಯ ಭಾಗವಾಗಿದೆ ಮತ್ತು ಕಾರ್ಪೊರೇಟ್  ಅನುಸರಣೆ ಮತ್ತು ಮಧ್ಯಸ್ಥಗಾರರ ಅನುಭವವನ್ನು ಇನ್ನಷ್ಟು ಸುಗಮಗೊಳಿಸಲು ಇತ್ತೀಚಿನ ತಂತ್ರಜ್ಞಾನಗಳ ಬಳಕೆಯನ್ನು ಹತೋಟಿಗೆ ತರುತ್ತದೆ.

***(Release ID: 1721379) Visitor Counter : 222